ಒಂದು ಚೂರು ಬಿಡದೆ ರೈಲ್ವೆಸ್ಟೇಷನ್ನನ್ನೇ ಕದ್ದೊಯ್ದ ಕಳ್ಳರು..

Date:

ಮನೆ ದರೋಡೆ ಬಗ್ಗೆ ಕೇಳಿರ್ಬೋದು, ಬ್ಯಾಂಕ್ ದರೋಡೆ ಬಗ್ಗೆ ಕೇಳಿರ್ಬೊದು ಅದ್ರೆ ಇಲ್ಲಿ ರೈಲ್ವೆ ನಿಲ್ದಾಣವೇ ದರೋಡೆ ಆಗಿದೆ ಅಂದ್ರೆ ನಂಬ್ತೀರಾ? ಹೌದು! ಹೀಗೊಂದು ಪ್ರಕರಣ ನಡೆದಿದ್ದು ಝಾರ್ಖಂಡ್ ರಾಜ್ಯದ ಧನ್ ಬದ್-ಜರಿಯಾ-ಸಿಂದ್ರಿ ಮಾರ್ಗದಲ್ಲಿರೊ ರೈಲ್ವೆ ನಿಲ್ದಾಣದಲ್ಲಿ. ನಿಲ್ದಾಣಕ್ಕೆ ಪೂರಾ ನಿಲ್ದಾಣವೇ ದರೋಡೆಯಾಗಿದೆ. ಇಲ್ಲಿ ರೈಲ್ವೆ ಹಳಿಗಳನ್ನು ಮಾರಲಾಗಿದ್ದು, ಕಾಂಕ್ರೀಟ್ ನ ಕ್ಯಾಬಿನ್ ಗಳನ್ನು ಕಟ್ಟಲಾಗಿದೆ. ಸಂಪೂರ್ಣ ರೈಲ್ವೆ ನಿಲ್ದಾಣವು ಒಂದು ಕೋಳಿ ಸಾಕಣೆ ಕೇಂದ್ರ ವಾಗಿ ಪರಿವರ್ತನೆಯಾಗಿದೆ. ಇವುಗಳ ವ್ಯವಹಾರ ಬಿರುಸಿನಿಂದ ನಡೆಯುತ್ತಿದೆ. ಕೆಲವೇ ಕೆಲವು ದಿನಗಳಲ್ಲಿ ಸ್ಟೇಷನ್ ಮಂಗ ಮಾಯ.

rr

10 ವರ್ಷಗಳ ಹಿಂದೆ ಈ ಮಾರ್ಗವಾಗಿ ಅನೇಕ ರೈಲುಗಳ ಓಡಾಟ ನಡೆಯುತ್ತಿತ್ತು, ಯಾವಾಗ ಬೆಂಕಿ ಪೀಡಿತ ಪ್ರದೇಶ ಅಂತ ಸರಕಾರದಿಂದ ಘೋಷಿಸಲ್ಪಟ್ಟಿತೊ, ಆವಾಗಿನಿಂದ ರೈಲು ಮಾರ್ಗವನ್ನು ಮುಚ್ಚಲಾಗಿತ್ತು. “ಕಳ್ಳನಿಗೆ ಪಿಳ್ಳೆ ನೆವ ಸಾಲದೇ” ಎಂಬಂತೆ ಕ್ರಮೇಣ ಒಂದರ ಹಿಂದೆ ಒಂದರಂತೆ ದರೋಡೆ ನಡೆಯಲಾರಂಭಿಸಿತು. ರೈಲ್ವೇ ಅಧಿಕಾರಿಗಳಾಗಲೀ ಸಂಬಂಧ ಪಟ್ಟ ಯಾವ ಇತರ ಅಧಿಕಾರಿಗಳಾಗಲೀ ಇದರ ಸುರಕ್ಷತೆಯ ಕಡೆಗೆ ಹೆಚ್ಚಿನ ಗಮನ ಕೊಡದ ಕಾರಣ ನಿಲ್ದಾಣಕ್ಕೆ ನಿಲ್ದಾಣವೇ ಕಳ್ಳತನವಾಗಿ ಹೋಯಿತು. ಅತ್ಯಂತ ಬುದ್ದಿವಂತಿಕೆಯಿಂದ ಕೋಟಿಗಟ್ಟಲೆ ವಸ್ತುಗಳನ್ನು ಕದಿಯಲಾಯಿತು.

This-Railway-Station-Got-Robbed-In-No-Time-1 This-Railway-Station-Got-Robbed-In-No-Time-4

ಕೆಲವರು ಸಿಗ್ನಲ್ ಲೈಟ್ ಗಳನ್ನೂ,ಕಂಬ ಹಾಗೂ ಇನ್ನಿತರ ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ. ದರೋಡೆಯಾದ ವಸ್ತುಗಳು ಸರಿ ಸುಮಾರು ೫೦ ಕೊಟಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ. ಇದೀಗ ರೈಲು ನಿಲ್ದಾಣವು ಖಾಲಿ ಹೊಡೆಯುತ್ತಿರುವ ಪಶು & ಕೋಳಿ ಸಾಕಣೆ ಕೇಂದ್ರ ವಾಗಿ ಪರಿವರ್ತನೆಗೊಂಡಿದೆ.

  • ಸ್ವರ್ಣ ಭಟ್

POPULAR  STORIES :

ಹಗಲು ರಾತ್ರಿ ಟೆಸ್ಟ್ ಪಂದ್ಯದಲ್ಲಿ ಕೆಂಪು ಹಾಗು ಬಿಳಿ ಬಣ್ಣದ ಬದಲಾಗಿ ಗುಲಾಬಿ ಬಣ್ಣದ ಬಾಲ್ ಉಪಯೊಗಿಸುವುದರ ಉದ್ದೇಶವೇನು?

ಏಡುಕೊಂಡಲವಾಡ ಗೋವಿಂದಾ ಗೋವಿಂದ… ತಿಮ್ಮಪ್ಪನ ಚಿನ್ನವೆಲ್ಲಾ ಮೋದಿ ಯೋಜನೆಗೆ

5 ಸ್ಟಾರ್ ಹೋಟೆಲ್ … ಉಗ್ರವಾದಿಗಳಿಗೆ ಮಾತ್ರ..!

ಮದ್ವೆಗೂ ಮುನ್ನವೇ ಮಕ್ಕಳನ್ನು ಹೆತ್ತರು..!? ಮೊದಲು ಅಮ್ಮ ಆಗ್ತೀನಿ, ಆಮೇಲೆ ಮದ್ವೆ ಎಂದಳು ಶೃತಿ..!

ಯೂಟ್ಯೂಬ್ ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ ಸಿಂಹದ ರಿಯಲ್ ಸ್ಟೋರಿ..!

ಒಸಾಮಾ ಬಿನ್ ಲಾಡೆನ್ ಸತ್ತಿಲ್ಲ..!? ಅಮೆರಿಕಾ ಮುಚ್ಚಿಟ್ಟ ಘೋರ ಸತ್ಯವೇನು..?

ಲವ್ ಇನ್ ಫೇಸ್ ಬುಕ್.. ಫ್ರಾನ್ಸ್ ಹುಡುಗಿ ಪುಣೆಯ ಹುಡುಗನ ರೋಮಾಂಚಕ ಸ್ಟೋರಿ

Share post:

Subscribe

spot_imgspot_img

Popular

More like this
Related

ಚಳಿಗೆ ನಲುಗಿದ ಉತ್ತರ ಕರ್ನಾಟಕ; 5 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ

ಚಳಿಗೆ ನಲುಗಿದ ಉತ್ತರ ಕರ್ನಾಟಕ; 5 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಬೆಂಗಳೂರು:...

ಡಿ.26ರಿಂದ ರೈಲು ಟಿಕೆಟ್ ದರ ಏರಿಕೆ: ದೀರ್ಘದೂರ ಪ್ರಯಾಣ ದುಬಾರಿ

ಡಿ.26ರಿಂದ ರೈಲು ಟಿಕೆಟ್ ದರ ಏರಿಕೆ: ದೀರ್ಘದೂರ ಪ್ರಯಾಣ ದುಬಾರಿನವದೆಹಲಿ: ಡಿಸೆಂಬರ್...

ಹಾನಗಲ್ ಗ್ಯಾಂಗ್ ರೇಪ್ ಆರೋಪಿಗಳ ಗಡಿಪಾರು

ಹಾನಗಲ್ ಗ್ಯಾಂಗ್ ರೇಪ್ ಆರೋಪಿಗಳ ಗಡಿಪಾರು 2024ರ ಜನವರಿಯಲ್ಲಿ ಹಾವೇರಿ ಜಿಲ್ಲೆಯ ಹಾನಗಲ್...

ರಾಜ್ಯದಲ್ಲಿ ಸೀಸನಲ್ ಫ್ಲೂ ಭೀತಿ – ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ

ರಾಜ್ಯದಲ್ಲಿ ಸೀಸನಲ್ ಫ್ಲೂ ಭೀತಿ – ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ ಕರ್ನಾಟಕದಲ್ಲಿ...