ಷೇರು ಮಾರುಕಟ್ಟೆ ಕುರಿತ ಕುತೂಹಲಕಾರಿ ವಿಷಯಗಳು ..!

Date:

ಷೇರು ಮಾರುಕಟ್ಟೆ ಕುರಿತ ಕುತೂಹಲಕಾರಿ ವಿಷಯಗಳು ..!

ಸ್ಟಾಕ್ ಮಾರುಕಟ್ಟೆಯ ಹೆಸರು ಬಂದಿದ್ದು ಬಾಸ್ಟನ್ ದೇಶದ ಪ್ರಜೆ ಪಿಜೆ ಸ್ಟಾಕ್ ಎನ್ನುವನ ಮುತ್ತಾತ ಒಂದು ಕಂಪನಿ ಮಾರಲು ಹೊರಟಿದ್ದನಂತೆ. ಅದರ ಹೆಸರು ಸ್ಟಾಕ್. ಆದರೆ ಸ್ವಾರಸ್ಯಕರ ಸಂಗತಿ ಏನಂದರೆ ಈ ಕಂಪನಿ ಮೂಲತಃ ಇರಲೇ ಇಲ್ಲ. ಇದು ಅವನ ಕನಸ್ಸಾಗಿತ್ತು.
ಟೊರೆಂಟೋ ಷೇರು ಮಾರುಕಟ್ಟೆ ಸಂಪೂರ್ಣ ಎಲೆಕ್ಟ್ರಾನಿಕ್‍ಮಯ ಯಾಕೆ ಗೊತ್ತೆ? ಅಲ್ಲಿನ ಜನ ಟ್ರೇಡಿಂಗ್ ಫ್ಲೋರ್ ನ ಮೇಲೆ ನಿಂತು ಕಿರುಚಲು ಧ್ವನಿ ಇಲ್ಲವಂತೆ.
ಮೈಕ್ರೋಸಾಫ್ಟ್ ನ ಕಂಪನಿ 2006 ರಲ್ಲಿ ತನ್ನ ಪ್ರತೀ ಪಾಲುದಾರರಿಗೆ ಹಣದ ಬದಲಾಗಿ ಒಂದು ಜ್ಯೂನ್ ಕಂಪನಿಯ ಮ್ಯೂಸಿಕ್ ಪ್ಲೇಯರ್ ಕೊಡಲು ಸಿದ್ದರಾಗಿದ್ದರಂತೆ. ಆ ದಿನ ಷೇರಿನ ಬೆಲೆ ನೆಲಕಚ್ಚಿ ಶೇ. 99.97ರಷ್ಟಾಗಿತ್ತು. ಆದರೆ ಸರಿಯಾಗಿ 18ನಿಮಿಷಗಳ ನಂತರ ಆ ಯೋಜನೆಯನ್ನು ರದ್ದುಗೊಳಿಸಿದರು. ಆ ಸಂದರ್ಭವನ್ನು ಫ್ಲಾಷ್ ಕ್ರ್ಯಾಷ್ ಎಂದು ಕರೆಯಲಾಗುತ್ತದೆ.
ಸ್ಟಾಕ್ ಮಾರುಕಟ್ಟೆ ಹುಡುಗಿಯಾಗಿದ್ದರೆ ಅದರ ಹೆಸರು ಸ್ಯಾಲಿ ಅಥವಾ ಸಾರಾ ಎಂದು ಹೆಸರಿಡುತ್ತಿದ್ದರಂತೆ. ಅಥವಾ ಎಸ್ ಪದದಿಂದಲೇ ಇರುವ ಯಾವುದಾದರೂ ಹುಡುಗಿಯ ಹೆಸರು ಇಡುತ್ತಿದ್ದರು.
ಯಾವುದೇ ದೇಶದ ಸ್ಟಾಕ್ ಮಾರುಕಟ್ಟೆಯ ಸಮಯವನ್ನು ಪರಿಗಣಿಸಿ, ಅದರ ಕೆಲಸದವಧಿ ಬೆಳಗ್ಗೆ 9.30 ಪ್ರಾರಂಭಗೊಂಡು 4ಗಂಟೆಗೆ ಮುಕ್ತಾಯಗೊಳ್ಳುತ್ತದೆ.
ಕೆಲವೊಮ್ಮೆ ಷೇರುಗಳು ಅತಿಯಾಗಿ ಬೆಲೆಬಾಳುತ್ತವೆ ಅದನ್ನು ಬಬಲ್(ಗುಳ್ಳೆ) ಎಂದು ಕರೆಯುತ್ತಾರೆ. ಯಾಕಂದರೆ ಗುಳ್ಳೆ ಬೇಗ ಒಡೆದು ಹೋಗುತ್ತದೆ. ಅದೇ ರೀತಿ ಷೇರುಗಳ ಬೆಲೆ ಕೂಡ ಸ್ಥಿರವಾಗಿರುವುದಿಲ್ಲ.
ಕೇವಲ ಶೇ.2ರಷ್ಟು ಭಾರತೀಯರು ಮಾತ್ರ ತಮ್ಮ ಹೂಡಿಕೆಯನ್ನು ಷೇರುಗಳ ಮೇಲೆ ಹೂಡುತ್ತಾರೆ. ಇನ್ನು ಮಿಕ್ಕಿದವರು ತಮ್ಮ ಹಣವನ್ನು ಚಿನ್ನ ಖರೀದಿಗೆ, ರಿಯಲ್ ಎಸ್ಟೇಟ್ ಬಿಸಿನೆಸ್‍ಗೆ ಅಥವಾ ಬ್ಯಾಂಕಿನಲ್ಲಿ ಹಣ ಇಡುತ್ತಾರೆ.
ನಮ್ಮಲ್ಲಿರುವ ಎರಡೂ ಷೇರುಮಾರುಕಟ್ಟೆಯಲ್ಲಿನ ಕಂಪನಿ ಲಿಸ್ಟಿಂಗ್ಸ್ ನ ಸಂಖ್ಯೆ ಇತರೆ ದೇಶಗಳಿಗಿಂತಲೂ ಹೆಚ್ಚು. ಅಂದರೆ ನಮ್ಮಲ್ಲಿರುವ ಲಿಸ್ಟಿಂಗ್ಸ್‍ನ ಸಂಖ್ಯೆ ಸುಮಾರು ಒಂಬತ್ತು ಸಾವಿರ ದಾಟಿದೆ.
ಸುಮಾರು 6000 ಕಂಪನಿಗಳ ಷೇರುಗಳು ಟ್ರೇಡ್ ಆಗಿಲ್ಲ ಅಥವಾ ತೆಳುವಾಗಿ ಟ್ರೇಡ್ ಆಗಿವೆ. ಹೀಗಾಗಿ ನಮ್ಮಲ್ಲಿನ ಷೇರು ಮಾರುಕಟ್ಟೆಯ ವಹಿವಾಟುಗಳು ಕೇವಲ 3000 ಲಿಸ್ಟಡ್ ಕಂಪನಿಗಳಿಗಷ್ಟೇ ಸೀಮಿತವಾಗಿವೆ.
ಈ ಮೂರು ವರ್ಷಗಳಲ್ಲಿ ಸ್ಟಾಕ್ ವಿನಿಮಯಗಳ ಪಟ್ಟಿಯಲ್ಲಿ ದಾಖಲಾದ ಕಂಪನಿಗಳ ಮೌಲ್ಯ ತಕ್ಕ ಮಟ್ಟಿಗೆ ಏರಿಕೆಯಾಗಿದೆ. ಮಾರುಕಟ್ಟೆ ಕ್ಯಾಪಿನ ಬೆಲೆ ಸುಮಾರು 93 ಲಕ್ಷ ಕೋಟಿ ಅಥವಾ ಶೇ.86 ಜಿಡಿಪಿ.
2014ರಲ್ಲಿ ಭಾರತೀಯ ಷೇರುಮಾರುಕಟ್ಟೆ ಬೆಸ್ಟ್ ಪರ್‍ಫಾರ್ಮಿಂಗ್ ಸ್ಟಾಕ್ ಮಾರ್ಕೆಟ್ಸ್ ಕೀರ್ತಿಗೆ ಭಾಜನಾಗಿತ್ತು. ಆ ವರ್ಷದ ಹೂಡಿಕೆಯ ಲಾಭ ದುಪ್ಪಾಟಾಗಿದ್ದು, ಹೂಡಿಕೆದಾರರಿಗೆ ಅತೀವ ಸಂತಸವನ್ನುಂಟು ಮಾಡಿತ್ತು.
ಭಾರತದಲ್ಲಿ 17 ಷೇರು ವಿನಿಮಯ ಕೇಂದ್ರಗಳಿವೆ ಎಂದರೆ ನೀವು ನಂಬಲೇಬೇಕು. ಆದರೆ, ಅದರಲ್ಲಿ ಬರೀ 7 ಶಾಶ್ವತವಾದದ್ದು. ಇನ್ನುಳಿದ 10 ಕೇಂದ್ರಗಳ ಲೈಸೆನ್ಸ್ ಆಗಾಗ ಮರುನವೀಕರಣ ಮಾಡಿಸಬೇಕು.
ಇಲ್ಲಿಯವರೆಗೂ ಅತೀ ಕಡಿಮೆ ಸೆನ್ಸೆಕ್ಸ್ ನ ದಾಖಲಾತಿ 113.28 ಆಗಿದ್ದು, ಇದು ಡಿಸೆಂಬರ್ 1979ರಲ್ಲಿ ಜರುಗಿತ್ತು. ಸ್ವಾರಸ್ಯಕರ ವಿಷಯವೇನಂದರೆ ಇದಾದ 35 ವರ್ಷಗಳ ಬಳಿಕ 28822.37 ಅತೀ ಹೆಚ್ಚಿನ ಸೆನ್ಸೆಕ್ಸ್ ದಾಖಲಾತಿ ಆಗಿದೆ.
ಅಮೆರಿಕದ ಎಸ್‍ಆ್ಯಂಡ್ ಪಿ 500 ಮತ್ತು ಡೋ ಜೋನ್ಸ್ ಇಂಡಸ್ಟ್ರಿಯಲ್ ಎವರೇಜ್ ಮಾರುಕಟ್ಟೆಗಳ ಕಾಂಟ್ರಾಕ್ಟ್ ಗಳನ್ನು ನಮ್ಮ ಎನ್‍ಎಸ್‍ಈ ಅಲ್ಲಿ ಟ್ರೇಡ್ ಮಾಡಬಹುದು. ಈ ಸೌಲಭ್ಯ 2011ರಲ್ಲಿ ಜಾರಿಗೆಬಂದಿದ್ದು, ಮೊದಲನೇ ಬಾರಿಗೆ ಎಸ್‍ಆ್ಯಂಡ್ ಪಿ 500ನ ವಿನಿಮಯ ಅಮೆರಿಕದಿಂದಾಚೆ ನಡೆದಿದ್ದು.
ಭಾರತದ ಕ್ಯಾಪಿಟಲೈಜೇಷನ್ ಟಾಪ್ 10ರಲ್ಲಿ ಸ್ಥಾನ ಪಡೆದಿದೆ. ಇದರ ಮೌಲ್ಯ ಸುಮಾರು 1.6 ತ್ರಿಶತಕಕೋಟಿ. ಮತ್ತು ಈ ಮೌಲ್ಯ ಸ್ವಿಟ್ಜರ್‍ಲ್ಯಾಂಡ್ ಮತ್ತು ಆಸ್ಟ್ರೇಲಿಯ ಮಾರುಕಟ್ಟೆ ಕ್ಯಾಪ್‍ಗಿಂತಲೂ ಜಾಸ್ತಿ.
ಭಾರತದ ಜನಸಂಖ್ಯೆ ಸುಮಾರು 1.2 ಶತಕೋಟಿಯಾದರೂ ಅದರಲ್ಲಿನ ಕೇವಲ 20 ಮಿಲಿಯನ್ ಡಿಮ್ಯಾಟ್ ಅಕೌಂಟ್‍ಗಳು ಮಾತ್ರ ಹೊಂದಿವೆ. ದುಖಃದ ವಿಚಾರವೇನಂದರೆ ಇದರಲ್ಲಿನ ಕೆಲವೇ ಕೆಲವು ಮಾತ್ರ ಆ್ಯಕ್ಟಿವ್ ಅಕೌಂಟ್‍ಗಳು.

Share post:

Subscribe

spot_imgspot_img

Popular

More like this
Related

ನಿಮ್ಮ ದಿನಚರಿಯಲ್ಲಿ ಸಾಸಿವೆಯನ್ನು ಬಳಸುವುದರಿಂದ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ?

ನಿಮ್ಮ ದಿನಚರಿಯಲ್ಲಿ ಸಾಸಿವೆಯನ್ನು ಬಳಸುವುದರಿಂದ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ? ಸಾಸಿವೆ ಎಂದಾಕ್ಷಣ ಮನಸ್ಸಿನಲ್ಲಿ...

ನವರಾತ್ರಿಯ ಮೂರನೇ ದಿನ ದೇವಿ ಚಂದ್ರಘಂಟಾ !

ನವರಾತ್ರಿಯ ಮೂರನೇ ದಿನದಲ್ಲಿ ಪೂಜಿಸುವ ದೇವಿ ಚಂದ್ರಘಂಟಾ. ದೇವಿ ಚಂದ್ರಘಂಟಾ ಹೇಗಿದ್ದಾಳೆ...

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..!

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..! ಬೆಂಗಳೂರು: ಮಲ್ಟಿಪ್ಲೆಕ್ಸ್...

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು ಮಂಗಳೂರು: ರಾಷ್ಟ್ರೀಯ ಹಿಂದೂ ಜಾಗರಣ...