ಅದ್ಯಾಕೋ ಐಪಿಎಲ್‌ನಲ್ಲಿ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅದೃಷ್ಟ ಚೆನ್ನಾಗಿದ್ದಂತಿಲ್ಲ. ಆಡಿದ ಬಹತೇಕ ಪಂದ್ಯಗಳಲ್ಲಿ ಪುಣೆ ಸೂಪರ್ ಜೇಯಂಟ್ಸ್ ತಂಡ ಅನುಭವಿಸಿದ್ದು ಸೋಲೇ. ಇದಕ್ಕೆ ಕಾರಣ ತಂಡವನ್ನ ಇನ್ನಿಲ್ಲದಂತೆ ಕಾಡ್ತಿರೋ ಆಟಗಾರರ ಗಾಯದ ಸಮಸ್ಯೆ.
ಪುಣೆ ತಂಡದ ಸ್ಟಾರ್ ಬ್ಯಾಟ್ಸ್ ಮನ್‌ಗಳಾದ ಕೆವಿನ್ ಪೀಟರ್ಸ್‌ನ್, ಫಾಫ್ ಡು ಪ್ಲೆಸಿಸ್ ಹಾಗೂ ಮಿಚೆಲ್ ಮಾರ್ಶ್ ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿದ್ದಾರೆ. ಈಗಾಗ್ಲೇ ಈ ಸ್ಟಾರ್ ಆಟಗಾರರ ನಿರ್ಗಮನದಿಂದ ಕಂಗಾಲಾಗಿದ್ದ ಧೋನಿಗೆ, ಸ್ಟೀವ್ ಸ್ಮಿತ್ ಕೂಡ ಗಾಯದ ಸಮಸ್ಯೆಯಿಂದ ಟೂರ್ನಿಯಿಂದ ಹೊರಗುಳಿಯುತ್ತಿರುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ ಧೋನಿ ಟೀಂಗೆ ಅದೃಷ್ಟ ಕೈ ಕೊಡ್ತಾ ಅನ್ನೋ ಪ್ರಶ್ನೆ ಮೂಡಿದೆ.
ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಸ್ಟೀವ್ ಸ್ಮಿತ್ ಮೊದಲ ಶತಕ ಬಾರಿಸುವ ಮೂಲಕ ಭರ್ಜರಿ ಫಾರ್ಮ್‌ನಲ್ಲಿದ್ದರು. ಸ್ಮಿತ್ ನಿರ್ಗಮನ ಪುಣೆ ತಂಡಕ್ಕೆ ದೊಡ್ಡ ನಷ್ಟ ಅನ್ನೋದು ಕ್ರಿಕೆಟ್ ವಿಶ್ಲೇಷಕರ ಮಾತು.
ಸ್ಮಿತ್ ಮಣಿಕಟ್ಟಿನ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು ಕಳೆದ ಒಂದು ವಾರದಿಂದ ಬಲ ಮಣಿಕಟ್ಟಿನ ನೋವು ಅವರನ್ನು ಭಾದಿಸುತ್ತಿದೆ. ಹಾಗಾಗಿ ಸ್ಮಿತ್ ತವರಿಗೆ ವಾಪಸ್ಸಾಗಲಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಸ್ಪಷ್ಟಪಡಿಸಿದೆ.
- ಶ್ರೀ
POPULAR STORIES :
ಏಡುಕೊಂಡಲವಾಡ ಗೋವಿಂದಾ ಗೋವಿಂದ… ತಿಮ್ಮಪ್ಪನ ಚಿನ್ನವೆಲ್ಲಾ ಮೋದಿ ಯೋಜನೆಗೆ
5 ಸ್ಟಾರ್ ಹೋಟೆಲ್ … ಉಗ್ರವಾದಿಗಳಿಗೆ ಮಾತ್ರ..!
ಮದ್ವೆಗೂ ಮುನ್ನವೇ ಮಕ್ಕಳನ್ನು ಹೆತ್ತರು..!? ಮೊದಲು ಅಮ್ಮ ಆಗ್ತೀನಿ, ಆಮೇಲೆ ಮದ್ವೆ ಎಂದಳು ಶೃತಿ..!
ಯೂಟ್ಯೂಬ್ ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ ಸಿಂಹದ ರಿಯಲ್ ಸ್ಟೋರಿ..!
ಒಸಾಮಾ ಬಿನ್ ಲಾಡೆನ್ ಸತ್ತಿಲ್ಲ..!? ಅಮೆರಿಕಾ ಮುಚ್ಚಿಟ್ಟ ಘೋರ ಸತ್ಯವೇನು..?
ಲವ್ ಇನ್ ಫೇಸ್ ಬುಕ್.. ಫ್ರಾನ್ಸ್ ಹುಡುಗಿ ಪುಣೆಯ ಹುಡುಗನ ರೋಮಾಂಚಕ ಸ್ಟೋರಿ