ರಾಜಧಾನಿಯಲ್ಲಿ ನಕಲಿ ಭಿಕ್ಷುಕರು..! ( ಭಾಗ- 1 ) ದಿ ನ್ಯೂ ಇಂಡಿಯನ್ ಟೈಮ್ಸ್ ಇನ್ವೆಸ್ಟಿಗೇಶನ್ ರಿಪೋರ್ಟ್..!

Date:

raaaಭಾರತ ನಮ್ಮ ದೇಶ. ಹೆಮ್ಮೆಯೂ ಇದೆ. ನಮ್ಮ ದೇಶ ವಿಶ್ವಮಟ್ಟದಲ್ಲಿ ಪರಿಣಾಮಕಾರಿಯಾಗಿಯೂ ಬೆಳೆಯುತ್ತಿದೆ. ಆದರೆ ದೂರದ ಬೆಟ್ಟ ನುಣ್ಣಗೆ ಎನ್ನುವ ಹಾಗೆ ಈ ದೇಶದಲ್ಲಿ ದಾರಿದ್ರ್ಯ ಸಂಪೂರ್ಣ ನಾಶವಾಗಿಲ್ಲ. ಅಫಿಶಿಯಲ್ ಎಂಬ ಶಬ್ದ ಇಲ್ಲಿ ನಿರಂತರ ಹುಡುಕಾಟ ಮತ್ತು ಅನಿವಾರ್ಯ. ಯಾಕಂದ್ರೆ ಇಲ್ಲಿ ಅನ್ ಅಫಿಶಿಯಲ್ ಕಲ್ಚರ್ ಅಳಿದು ಹೋಗಿಲ್ಲ. ಅರ್ಥಾತ್ ಮೂಢನಂಬಿಕೆಗಳು ಇನ್ನೂ ಉಳಿದುಕೊಂಡಿದೆ. ಒಮ್ಮೊಮ್ಮೆ ಅನಿಸಿಬಿಡುತ್ತೆ ಕಣ್ರೀ, ನಾವಿನ್ನೂ ಕ್ರಿಸ್ತಪೂರ್ವದಲ್ಲಿ ಲಾಗಪಲ್ಟಿ ಹೊಡೀತಾ ಇದೀವಾ ಅಂತ. ಅದ್ ಬಿಡ್ರಿ, ಇವ್ರೇನು ಸಂಬಂಧವೇ ಇಲ್ಲದ ವಿಚಾರ ಮಾತಾಡುತ್ತಿದ್ದಾರೆ ಅಂದ್ಕೋಬೇಡಿ. ಸಿನಿಮಾ ಶುರುವಾಗುವ ಮುಂಚೆ ಹೆಸ್ರು ತೋರಿಸೋದು ಕಮರ್ಷಿಯಲ್ ಸಂಪ್ರದಾಯ. ನಮ್ಮ ಜನಕ್ಕೆ ಬಿಡಿಸಿ ಹೇಳದಿದ್ರೆ ಅಷ್ಟು ಸುಲಭಕ್ಕೆ ತಲೆಗೆ ಹೋಗೋದಿಲ್ಲ. ಅತೀ ಬುದ್ದಿವಂತ ಜನರಿರೋ ಶುದ್ದ ದಡ್ಡ ದೇಶ ನಮ್ದು. ಸ್ಟೋರಿ ಶುರುವಾಗೋ ಮುನ್ನ ಮೂಢನಂಬಿಕೆಯ ಬಗ್ಗೆ ಹೇಳೋದಿಕ್ಕೆ ಕಾರಣ, ನಮ್ ಜನರ ನಾನ್ ಸೆನ್ಸ್ ಗುಣಗಳು ಕಣ್ರಿ. ದೇವರ ಬಗ್ಗೆಯೇ ವಿಜ್ಞಾನ ಡೌಟ್ ಪಡ್ತಾ ಇರೋವಾಗ, ದೆವ್ವ, ಮಾಟ-ಮಂತ್ರ ಅಂತ ದುಡಿಯೋ ಮೂರು ಕಾಸನ್ನು ದೇವರ ಅವತಾರ ತಾಳೋ ವಂಚಕರ ಜೇಬಿಗೆ ಹಾಕೋ ಜನರ ಅಮಾಯಕತೆ ಹಾಗೂ ದಡ್ಡತನಕ್ಕೆ ಏನ್ ಹೇಳೋಣ ಹೇಳಿ. ವಿಮರ್ಶೆ ಬುದ್ಧಿವಂತರ ತರ್ಕಕ್ಕೆ ಬಿಟ್ಟ ವಿಚಾರ.

ಬೇರೆಲ್ಲಾ ದೇಶಕ್ಕಿಂತ ಈ ದೇಶದಲ್ಲಿ ಇರೋ ನಾವು ಕಣ್ರೀ ನಿಜಕ್ಕೂ ಪುಣ್ಯವಂತರು. ನಮ್ಗಿರೋಷ್ಟು ಸ್ವತಂತ್ರ ಬೇರೆ ಯಾವ ದೇಶದ ಜನ್ರಿಗೂ ಇಲ್ಲ. ಸೋಂಬೇರಿಗಳಾಗಿ, ಹರಟೆ ಹೊಡೆಯುತ್ತಾ, ಸಿಗರೆಟ್ ಸೇದ್ತಾ ಜೀವನ ಕಳೆಯೋ ಎಷ್ಟು ಮಂದಿ ಇಲ್ಲಿಲ್ಲ ಹೇಳಿ. ಹೇಗೋ ಜೀವನ ಸಾಗುತ್ತೆ ಅನ್ನೋ ಜಾಯಮಾನ. ಅದಕ್ಕೆ ನಾವು ಅವತ್ತಿಗೂ ಇವತ್ತಿಗೂ ಒಂದೇ ಥರಾ ಇದ್ದೀವಿ. ಸ್ವಲ್ಪ ಇಂಪ್ರೂವ್ ಆಗಿದ್ದೀವಿ ಅಂದ್ಕೊಂಡ್ರೆ ಅದು ನಮ್ಮ ಮೂರ್ಖತನ. ಗೊಡ್ಡು ಸಂಪ್ರದಾಯದ ಜೊತೆ ಅಮಾಯಕತೆಯೂ ನಮ್ಮ ವೀಕ್ನೆಸ್. ಅದನ್ನ ಬಂಡವಾಳ ಮಾಡಿಕೊಂಡವರೇ ನಕಲಿ ಭಿಕ್ಷುಕರು. ಈ ದೇಶದ ಮುಗಿಯದ ಸಮಸೈಗಳ ಪೈಕಿ ಪ್ರಮುಖವಾದ ಸಮಸ್ಯೆ ಭಿಕ್ಷುಕರು. ಎಲ್ಲಿ ನೋಡಿದರಲ್ಲಿ, ಫುಟ್ ಪಾತ್, ಟ್ರಾಫಿಕ್ ಸಿಗ್ನಲ್, ಅಂಗಡಿ ಹೋಟೆಲ್ ಕಣ್ಣು ಹಾಯಿಸಿದ ಕಡೆಯಲ್ಲೆಲ್ಲಾ ಭಿಕ್ಷುಕರ ಹಿಂಡು. ಇವರ್ಯಾರು, ಯಾವೂರು, ದುಡಿಯೋಕ್ಕೇನು ದಾಡಿ- ಅದೆಲ್ಲಾ ಯೋಚಿಸೋ ವ್ಯವಧಾನ ನಮಗೆಲ್ಲಿರುತ್ತೆ ಹೇಳಿ. ಸಾಲಾ ಮಾಡಿ ಕಾಕಾ ಅಂಗಡಿ ಟೀ, ಗೋಲ್ಡ್ ಫ್ಲೇಕ್ ಕಿಂಗ್ ಸೇದ್ಕೊಂಡು ಬಿಲ್ಡಪ್ ಕೊಡೋ ಒಂದಷ್ಟು ಮಂದಿ ಮಾತ್ರ ಭಿಕ್ಷೆ ಬೇಡೋರಿಗೆ ದುಡ್ಕೊಂಡು ತಿನ್ನೋಕಾಗಲ್ವ ಅಂತ ಒಂದೆರಡು ಡೈಲಾಗ್ ಹೇಳಿ ದೊಡ್ಡ ಮನುಷ್ಯರೆನಿಸಿಕೊಂಡ್ರೆ ಅದೇ ಹೆಚ್ಚು.

ನಮ್ಮ ದೇಶವನ್ನ ಭಿಕ್ಷುಕ ಮುಕ್ತ ಸಾಮ್ರಾಜ್ಯ ಮಾಡಲು ಹೊರಟ ಸರ್ಕಾರಗಳು ಮಗ್ಗಲು ಬದಲಾಯಿಸಿತೆ ವಿನಃ ಪ್ರಯೋಜನ ಮಾತ್ರ ದೊಡ್ಡ ಸೊನ್ನೆ. ನಮ್ಮ ಬೆಂಗಳೂರನ್ನು ಕಾಂಗ್ರೆಸ್ ಸರ್ಕಾರ ಭಿಕ್ಷುಕ ಮುಕ್ತ ಸಾಮ್ರಾಜ್ಯ ಮಾಡಲು ಸಜ್ಜಾಗಿಬಿಟ್ಟಿತ್ತು. ಈ ಹಿಂದಿನ ಸರ್ಕಾರಗಳು ಸೇಮ್ ಟು ಸೇಮ್ ಡೈಲಾಗ್ ಹೇಳಿ ಬೆಳಗಾಗುವಷ್ಟರಲ್ಲಿ ಮರೆತುಹೋಗಿದ್ದು ಇತಿಹಾಸ. ಈಗಿನ ಸರ್ಕಾರದ ಆದೇಶ ಕೂಡ ಇತಿಹಾಸದ ಸರಕಾಗಿಬಿಟ್ರೆ ಶೇಮ್ ಪಪ್ಪಿ ಶೇಮ್ ಅನ್ನದೆ ವಿಧಿಯಿಲ್ಲ ಬಿಡಿ. ಪರ್ಟಿಕ್ಯೂಲರ್ ಆಗಿ ಭಿಕ್ಷಕರು ಇಂಥದ್ದೆ ಪ್ಲೇಸಲ್ಲಿ ಇರ್ತಾರೆ ಅಂದ್ರೆ, ಅದು ನಮ್ಮ ದೇಶದ ಮಟ್ಟಿಗೆ ಶುದ್ದ ತಮಾಷೆ. ಯಾಕಂದ್ರೆ ಈ ದೇಶ, ಈ ನಾಡಿನಲ್ಲಿ ಎಲ್ಲೆಂದರಲ್ಲಿ ಭಿಕ್ಷುಕರದ್ದೇ ಹಿಂಡು. ಸುಮ್ನೆ ದಾರೀಲಿ ಹೋಗ್ತಾ ಇದ್ರೇ ಸಾಕು ಭಿಕ್ಷುಕರು ಕಾಣಿಸಿಬಿಡ್ತಾರೆ. ನೀವು ನಂಬಿಬಿಡಿ ತಿಂಗಳ ಭಿಕ್ಷಾ ಆದಾಯ ಲೆಕ್ಕ ಹಾಕಿಬಿಟ್ರೆ, ನಾವು ಕೂಡ ಬುರ್ಖಾ ಹಾಕಿಕೊಂಡು ಭಿಕ್ಷಾಟನೆ ಮಾಡಿಬಿಡೋಣ ಅಂತ ಅನಿಸಿಬಿಡುತ್ತೆ. ಲಕ್ಷಗಳ ಲೆಕ್ಕಾಚಾರ ಕಣ್ರೀ ಅದು. ಆ ವಿಚಾರಕ್ಕೆ ಆಮೇಲೆ ಬರ್ತೀವಿ.

ಒಂದು ಕಾಲವಿತ್ತು. ಕೊಟ್ಟಿದ್ದನ್ನು ಇಸ್ಕೊಂಡು ಭಿಕ್ಷುಕರು ಜಾಗ ಖಾಲಿ ಮಾಡ್ತಾ ಇದ್ರು. ಆದ್ರೆ ಈಗ ಒಂದೆರಡು ರೂಪಾಯಿಯನ್ನು ಅಯ್ಯೋ ಪಾಪ ಅಂತ ಕೊಟ್ಟುಬಿಟ್ರೆ ಮುಖ ಗಂಟು ಹಾಕಿಕೊಂಡುಬಿಡ್ತಾರೆ. ಕಾಲಕ್ಕೆ ತಕ್ಕಂತೆ ಭಿಕ್ಷುಕರ ನಿರೀಕ್ಷೆ ಕೂಡ ಹೆಚ್ಚಾಗಿದೆ. ಭಿಕ್ಷುಕರು ಇದ್ದಲ್ಲಿ ಅಡ್ಡಾಡಿದ ನಮ್ಮ ತಂಡಕ್ಕೆ ಸಿಕ್ಕಿಬಿದ್ದವರಲ್ಲಿ ಒಬ್ಬರಲ್ಲೂ ಭಿಕ್ಷುಕರ ಕಳೆ ಇರಲಿಲ್ಲ ಬಿಡಿ. ಸುಮ್ನೆ ಸುಮ್ನೆ ಕುಂಟುಹಾಕುತ್ತ ಕಿತ್ತು ತಿನ್ನುತ್ತಿದ್ದ ಭಿಕ್ಷುಕರು ಇವ್ರು ಅನ್ನೋದು ನಮ್ಮ ಅಭಿಪ್ರಾಯ. ನಮ್ಮ ತಂಡಕ್ಕೆ ಮೊದಲು ಕಾಣಿಸಿದ್ದು ಸ್ಮಾಲ್ ಅಂಡ್ ಸ್ಮಾರ್ಟ್ ಭಿಕ್ಷುಕರ ಗುಂಪು. ಸರ್ಚ್ ಮಾಡೋ ಅಗತ್ಯ ಏನಿದೆ ಹೇಳಿ. ಕಣ್ಣಿಗೆ ಕಂಡವರನ್ನ ಮಾತನಾಡಿಸಿದ್ವಿ. ಅವರಲ್ಲಿ ಇಬ್ರು ಕುಂಟುತ್ತಿದ್ರೆ, ಇನ್ನಿಬ್ರು ಮಗೂನಾ ಎತ್ತಿಕೊಂಡಿದ್ರು. ಆ ಪಾಪದ ಕೂಸುಗಳ ಬಗ್ಗೆ ಹೇಳಲೇಬೇಕು ಕಣ್ರೀ.. ಹೃದಯ ಕಿತ್ತು ಬರದಿದ್ದರೇ ನಾವ್ ಮನುಷ್ಯರು ಅನಿಸಿಕೊಳ್ಳೋದೇ ಇಲ್ಲ. ಅವರ ಕಣ್ಣುಗಳಲ್ಲಿ ಆಸೆ, ಆತಂಕ, ಗೊಂದಲ. ಪುಟ್ಟ ಬಾಲಕಿಯರ ಪುಟ್ಟ ಹೃದಯಕ್ಕೆ ಈ ಸಮಾಜದ ಪಿತೂರಿಯ ಅರಿವಿಲ್ಲ. ಅರಿವಾಗೋದೂ ಇಲ್ಲ. ಯಾಕಂದ್ರೆ ಅವ್ರು ಪುಟ್ಟ ಮಕ್ಕಳು. ಕೈಯಲ್ಲಿ ತಟ್ಟೆ, ಕಣ್ಣಲ್ಲಿ ಆಸೆ, ಚಿಲ್ರೆ ಕಾಸು ಹಾಕೋ ಮಂದಿಯ ಬೆದರಿಕೆಯ ನೋಟಕ್ಕೆ ಅಂಜುತ್ತಲೇ ಕೈ ಚಾಚೋ ಮಕ್ಕಳು ಈ ದೇಶದಲ್ಲಿ ಎಲ್ಲಿಲ್ಲ ಹೇಳಿ..? ಫುಟ್ ಪಾತ್, ಬೀದಿ, ಟ್ರಾಫಿಕ್ ಸಿಗ್ನಲ್ ಗಳಲ್ಲಿ ಭಿಕ್ಷೆ ಬೇಡೋ ಮಕ್ಕಳು ಕಾಣಿಸುತ್ತಾರೆ. ಬಾಲಿವುಡ್ನಲ್ಲಿ ತೆರೆಕಂಡ ಟ್ರಾಫಿಕ್ ಸಿಗ್ನಲ್ ಚಿತ್ರದಲ್ಲಿ, ಟ್ರಾಫಿಕ್ಸಿಗ್ನಲ್ಗಳಲ್ಲಿ ಭಿಕ್ಷೆ ಬೇಡೋ ಮಕ್ಕಳ ವಾಸ್ತವ ಚಿತ್ರಣವನ್ನು ಅತ್ಯುತ್ತಮವಾಗಿ ಕಟ್ಟಿಕೊಟ್ಟಿದ್ದ ನಿರ್ದೇಶಕನ ಅಂತರಂಗಕ್ಕೆ ಪೂರಕವಾಗಿದ್ದವು ಆ ಮಕ್ಕಳು. ಅದೇ ರೀತಿ ತಮಿಳಿನಲ್ಲಿ ನಾನ್ ಕಡವುಳ್ ಅನ್ನೋ ಸಿನಿಮಾ ತೆರೆ ಕಂಡಿತ್ತು. ಅಗೋರಿ ಬೇಸ್ಡ್ ಚಿತ್ರವಾದ್ರೂ, ಆ ಸಿನಿಮಾದಲ್ಲಿ ಮಕ್ಕಳನ್ನ ಭಿಕ್ಷಾಟನೆಗೆ ತಳ್ಳಿ ಹಣ ಸಂಪಾದನೆ ಮಾಡೋ ವೈಕರಿಯನ್ನು ಅದ್ಭುತವಾಗಿ ಹೆಣೆಯಲಾಗಿತ್ತು.

ನಾನ್ ಕಡವುಳ್ ಚಿತ್ರದ ರೀತಿಯಲ್ಲೇ ಮಕ್ಕಳನ್ನು ಭಿಕ್ಷಾಟನೆಗೆ ತಳ್ಳೋ ಜಾಲ ಬೆಂಗಳೂರಿನಲ್ಲಿದೆ. ನಮಗೆ ಬಂದ ಮಾಹಿತಿಯ ಪ್ರಕಾರ ಯಶವಂತಪುರದ ರೈಲ್ವೆ ಟ್ರಾಕ್ ಸಮೀಪ ಇರೋ ಸ್ಲಂ ಒಂದರಲ್ಲಿ ಮಕ್ಕಳ ಮಾರಾಟವಾಗುತ್ತೆ ಅರ್ಥಾತ್ ಹಸುಗೂಸುಗಳು ಬಾಡಿಗೆಗೆ ಸಿಗುತ್ತೆ. ದಿನಕ್ಕೆ ಇಷ್ಟು ಅಂತ ಹಸುಗೂಸುಗಳನ್ನು ಭಿಕ್ಷೆ ಬೆಡೋರ ಜೊತೆ ಕಳಿಸೋ ಬೆಗ್ಗರ್ ಮಾಫಿಯಾದ ಖತರ್ನಾಕ್ ಮಂದಿ, ಆ ಕಂದಮ್ಮಗಳಿಗೆ ಹಾಲಿನಲ್ಲಿ ನಿದ್ರೆ ಮಾತ್ರೆ ಬೆರೆಸುತ್ತಾರಂತೆ. ನೀವೇ ಮಗುವನ್ನು ಎತ್ತಿಕೊಂಡು ಬರೋ ಭಿಕ್ಷುಕರನ್ನು ಅಬ್ಸರ್ವ್ ಮಾಡಿ ನೋಡಿ, ಎಂಥಾ ಬಿಸಿಲು, ಇರಿಟೆಟಿಂಗ್ ಸಂದರ್ಭದಲ್ಲೂ ಆ ಕಂದಮ್ಮಗಳು ಅಳೋದಿಲ್ಲ. ಯಾವಾಗಲೂ ನಿದ್ರೆ ಮಾಡುತ್ತಿರುತ್ತವೆ. ಪಿಳಿಪಿಳಿ ಕಣ್ಣುಬಿಟ್ಟರೂ ಅಲ್ಲಿ ಆಯಾಸ ಕಂಡು ಬರುತ್ತೆ, ಆದ್ರೆ ಆ ಕಂದಮ್ಮ ಅಳೋದಿಲ್ಲ.

ಸಂಪಾದನೆಗೆ ಹಲವಾರು ದಾರಿ, ಆದ್ರೆ ಬೆಗ್ಗರ್ ಮಾಫಿಯಾದ ಮಂದಿ ಭಿಕ್ಷಾಟನೆ ಅನ್ನೋದನ್ನ ಸಂಪಾದನೆಯ ಅಸ್ತ್ರ ಮಾಡಿಕೊಂಡಿದ್ದಾರೆ. ಗಂಡಸರು, ಹೆಂಗಸರು, ಮಕ್ಕಳು, ಹಸುಗೂಸು.. ಊಹುಂ ಕವಳಕ್ಕಾಗಿ ಯಾರನ್ನು ಬೇಕಾದ್ರೂ ದಂಧೆಗೆ ಇಳಿಸಿಬಿಡ್ತಾರೆ, ಅಂದ್ರೆ ಭಿಕ್ಷೆ ಬೇಡಲು ಕಳಿಸಿಬಿಡ್ತಾರೆ. ಅಂಥದ್ದೊಂದು ಮಹತ್ವವಾದ, ಬೆಚ್ಚಿ ಬೀಳಿಸುವ ವಿಚಾರಗಳು ನಮಗೆ ಗೊತ್ತಾಗಿತ್ತು. ಕುಂಟರು, ಕುರುಡರು, ಕಾಯಿಲೆ ಪೀಡಿತರು, ಕಾಲಿಲ್ಲದವರು, ಅಂಗವಿಕಲರು, ಮನೆಯಿಂದ ಹೊರ ದಬ್ಬಲ್ಪಟ್ಟ ವಯೋವೃದ್ದರು…ಹೀಗೆ ಭಿಕ್ಷುಕರು ತರೇವಾರಿ ಪ್ರಕಾರಗಳಲ್ಲಿ ಕಾಣಿಸಿಕೊಳುತ್ತಾರೆ ಮಗಳಿಗೆ ಮದ್ವೆ ಮಾಡ್ಬೇಕು, ಗಂಡನಿಗೆ ಹುಷಾರಿಲ್ಲಾ, ಊಟ ಮಾಡ್ದೆ ವಾರವಾಗಿದೆ, ಮಗುವಿನ ಹಾಲಿಗೆ ಕಾಸು ಕೊಡಿ- ಇತ್ಯಾದಿ ಭಿಕ್ಷೆ ಬೇಡುವವರ ವೈಕರಿಗಳಿವು. ಕೆಲವರು ಮಾತೇ ಆಡೋದಿಲ್ಲಾ, ಕೈಸನ್ನೆ, ಬಾಯಿಸನ್ನೆ ಮೂಲಕ ದೈನೇಸಿಯಾಗಿ ಬೇಡುತ್ತಾರೆ. ಇನ್ನು ಕೆಲವರದ್ದು ಕೊಡಲೇಬೇಕೆನ್ನುವ ಧೋರಣೆ. ನಾವು ಅಷ್ಟೇ ಕಣ್ರೀ…. ಒಂಥರಾ ಯಾಂತ್ರಿಕ ಜೀವನಕ್ಕೆ ಅಡ್ಜೆಸ್ಟ್ ಆಗಬಿಟ್ಟಿದ್ದೇವೆ. ಅವ್ರು ಕೈ ಚಾಚ್ತಾರೆ ನಾವು ಕೊಡ್ತೀವಿ. ಇಲ್ಲಾ ಅಂದ್ರೆ ಉಗಿದು ಅಟ್ತೀವಿ. ಏನೇ ಆದ್ರೂ ಭಿಕ್ಷುಕರ ಕಲೆಕ್ಷನ್ಗಂತೂ ಮೋಸವಿಲ್ಲ ಬಿಡಿ.

ಆರ್ ಟಿ ನಗರದ ರಸ್ತೆ ಬದಿಯಲ್ಲಿ ಮೂರು ಮಂದಿ ಭಿಕ್ಷುಕರು ಕಾಣಿಸಿದ್ದೆ ಅವರನ್ನು ಮಾತನಾಡಿಸಿದ್ವಿ. ಮೂರು ಮಂದಿ ಮಹಿಳೆಯರು, ಅವರಲ್ಲಿ ಇಬ್ಬರ ಕಂಕುಳಲ್ಲಿ ಎಳೆಗೂಸುಗಳು. ಏನು ಅರಿಯದ ಕೂಸುಗಳು ಪ್ರಜ್ಞೆತಪ್ಪಿ ಮಲಗಿಬಿಟ್ಟಿದ್ದವು. ಭಿಕ್ಷೆ ಬೇಡುತ್ತಿದ್ದವಳ ಕಂಕುಳಲ್ಲಿ ಮರದ ತುಂಡಿನಂತೆ ಮಲಗಿತ್ತು ಪುಟ್ಟಮಗು. ಗಾಡಿ ಬಳಿ ಬಂದವಳಿಗೆ ನಮ್ಮ ಉದ್ದೇಶ ಅರ್ಥವಾಗಿತ್ತು. ಕೂಗಳತೆಯಲ್ಲಿ ಕುಂತಿದ್ದ ಇನ್ನಿಬ್ಬರು ಬುರ್ಖಾಧಾರಿ ಹೆಂಗಸರ ಬಳಿ, ಕೈಸನ್ನೆ ಮಾಡುತ್ತಾ ಏನೋ ಹೇಳಿ ಕೊಂಚ ದೂರದಲ್ಲಿ ಕುಂಟುತ್ತಾ ಭಿಕ್ಷೆ ಬೇಡುತ್ತಿದ್ದ ಗಡ್ಡದಾರಿಯನ್ನ ಕೈ ಸನ್ನೆ ಮಾಡಿ ಕರೆದಿದ್ದರು. ಕುಂಟುತ್ತಾ ಅವರತ್ತ ಹೋಗಿದ್ದ ಗಡ್ಡದಾರಿ. ನೋಡ-ನೋಡುತ್ತಿದ್ದಂತೆ ಗಲ್ಲಿಯೊಳಗೆ ನುಗ್ಗಿ ಮರೆಯಾದವರ ಬೆನ್ನುಬಿದ್ದೆವು. ನಾವು ಅವರ ಬೆನ್ನು ಬೀಳುತ್ತಿದ್ದಂತೆ ಕಳ್ಳರಂತೆ ಓಡತೊಡಗಿದ್ರು. ಬಿಡ್ತೀವಾ…? ಹಿಂಬಾಲಿಸಿ ಗಡ್ಡದಾರಿಯನ್ನ ಮಾತಿಗೆಳೆದ್ವಿ.

ಇಲ್ಲೆ ನೋಡ್ರಿ, ನಮ್ಮ ಅನುಮಾನಕ್ಕೆ ಕರೆಕ್ಟಾದ ಗ್ರಿಪ್ಪ್ ಸಿಕ್ಕಿದ್ದು. ಗಡ್ಡದಾರಿ ಗಡವ, ತಾನು ಪೋಲಿಯೋ ಪೀಡಿತ, ಆ ಮೂವರು ಬುರ್ಖಾಧಾರಿ ಹೆಂಗಸರು ತನ್ನ ಸಹೋದರಿಯರು ಎಂದಿದ್ದ. ಆಯ್ತಪ್ಪಾ ತಂದೆ, ನಿನ್ನ ಸಹೋದರಿಯರ ಹೆಸ್ರೇನು ಅಂತ ಕೇಳಿದ್ರೆ, ಒಬ್ಬಳ ಹೆಸ್ರು ರೇಷ್ಮ ಅಂದಿದ್ದ. ಇನ್ನಿಬ್ಬರ ಹೆಸ್ರು ಕೇಳಿದ್ರೇ ತಡವರಿಸಿದ್ದ. ನಮಗೊಂದು ಅಚ್ಚರಿ ಕಾಡಿತ್ತು. ನಮ್ಮಿಂದ ತಪ್ಪಿಸಿಕೊಂಡು ಹೋದ ಹೆಂಗಸರು ಸೀದಾ ಕಟ್ಟಡವೊಂದರ ಮೊದಲ ಮಹಡಿಯನ್ನು ಹತ್ತಿಬಿಟ್ಟಿದ್ದರು. ಭಿಕ್ಷುಕರು ಸುಮ್ ಸುಮ್ನೆ ಯಾರದ್ದೋ ಮನೆ ಮೇಲೇರ್ತಾರೆ ಅಂದ್ರೆ ಯಾರ್ ನಂಬ್ತಾರೆ ಹೇಳಿ. ಸುತ್ತಿ ಬಳಸಿ ಮಾತಾಡೋದ್ಯಾಕೆ..? ನಮಗೆ ಕಾಡಿದ ಅನುಮಾನ, ರೋಡ್ ಬದಿಯಲ್ಲಿ ಅಬ್ಬೇಪಾರಿಗಳಂತೆ ಭಿಕ್ಷೆ ಬೇಡುತ್ತಿದ್ದ ಇವ್ರು ಬಾಡಿಗೆ ಮನೆ ಮಾಡಿಕೊಂಡು ವಾಸಮಾಡ್ತಾರೆ. ಅವರನ್ನು ಗದರಿ ಮಾತಾಡಿಸಿದಾಗ `ನಾವು ಮೂಲತಃ ರಾಮನಗರದವ್ರು, ಯಾರೋ ಕೆಂಗೇರಿಯವನೊಬ್ಬ ಭಿಕ್ಷೆ ಬೇಡಿ ಅಂತ ಕಳಿಸಿದ್ದ. ಗಾರೆ ಕೆಲಸ ಮಾಡ್ಕೊಂಡು ನೆಮ್ಮದಿಯಿಂದ ಬದುಕುತ್ತಿದ್ವಿ. ನಾವು ಭಿಕ್ಷುಕರಲ್ಲಾ’ ಅಂತ ಹೆಂಗಸೊಬ್ಬಳು ಗೊಳೋ ಅಂತ ಒಂದೇ ಕಣ್ಣಲ್ಲಿ ಅಳ್ತಾ ಇದ್ರೆ ಮಿಕ್ಕವ್ರಿಬ್ಬರು ಜಾಗ ಖಾಲಿ ಮಾಡೋದಕ್ಕೆ ಟ್ರೈ ಮಾಡ್ತಾ ಇದ್ರು.

ಬೆಗ್ಗರ್ಸ್ ಮಾಫಿಯಾ ಇಂದು ನಿನ್ನೆಯ ಕತೆಯಲ್ಲ. ಈ ಬಗ್ಗೆ ಈ ಹಿಂದೆಯೇ ಕೆಲವು ಪ್ರಕರಣಗಳು ದಾಖಲಾಗಿವೆ. ಆದ್ರೆ ಬುರ್ಖಾ ಹಾಕ್ಕೊಂಡ ಜಾಲ ಈ ಪರಿ ಹಾವಳಿಯಿಡ್ತಾ ಇದೆ ಅಂದ್ರೆ ಸೂಕ್ತವಾದ ಕ್ರಮ ಕೈಗೊಳ್ಳಲೇಬೇಕು ಅಂತ ಹೇಳಿದ್ದು ನಿವೃತ್ತ ಪೊಲೀಸ್ ಅಧಿಕಾರಿ ಜಿ ಎ ಬಾವಾ. ನಕಲಿ ಭಿಕ್ಷುಕರ ಕತೆ ಇಲ್ಲಿಗೆ ಮುಗಿದಿಲ್ಲ. ಬಾಡಿಗೆಗೆ ಮಕ್ಕಳನ್ನು ಭಿಕ್ಷಾಟನೆಗೆ ಕಳಿಸೋ ಜಾಲದ ಬಗ್ಗೆಯೂ ತಿಳಿದುಕೊಳ್ಳೋದಿದೆ. ಪಾಪದ ಎಳೆ ಕಂದಮ್ಮಗಳು ಕಣ್ರೀ, ಎನೂ ಮಾಡದ ತಪ್ಪಿಗೆ, ಪ್ರತಿನಿತ್ಯ ಹಾಲಿನ ಜೊತೆ ನಿದ್ರೆ ಮಾತ್ರೆಯ ಸಮೇತ ಕುಡಿಯುತ್ತಿವೆ. ಬೆಗ್ಗರ್ಸ್ ಮಾಫಿಯಾ ಬಲೆಗೆ ಬಲಿಯಾಗ್ತಿವೆ. ಅದನ್ನು ಮುಂದಿನ ಇನ್ವೆಸ್ಟಿಗೇಶನ್ ರಿಪೋರ್ಟ್ ನಲ್ಲಿ ಹೇಳ್ತೀವಿ. ಕುತೂಹಲ ತಟಸ್ತವಾಗಿರಲಿ.

Like us on Facebook  The New India Times

POPULAR  STORIES :

ನಕಲಿ ಉತ್ಪನ್ನ ಮಾರಾಟದಲ್ಲಿ ಚೀನಾ ನಂ.1 ಆದ್ರೆ ಭಾರತ ನಂ 5.

ಒಂದು ಚೂರು ಬಿಡದೆ ರೈಲ್ವೆಸ್ಟೇಷನ್ನನ್ನೇ ಕದ್ದೊಯ್ದ ಕಳ್ಳರು..

ಹಗಲು ರಾತ್ರಿ ಟೆಸ್ಟ್ ಪಂದ್ಯದಲ್ಲಿ ಕೆಂಪು ಹಾಗು ಬಿಳಿ ಬಣ್ಣದ ಬದಲಾಗಿ ಗುಲಾಬಿ ಬಣ್ಣದ ಬಾಲ್ ಉಪಯೊಗಿಸುವುದರ ಉದ್ದೇಶವೇನು?

ಏಡುಕೊಂಡಲವಾಡ ಗೋವಿಂದಾ ಗೋವಿಂದ… ತಿಮ್ಮಪ್ಪನ ಚಿನ್ನವೆಲ್ಲಾ ಮೋದಿ ಯೋಜನೆಗೆ

5 ಸ್ಟಾರ್ ಹೋಟೆಲ್ … ಉಗ್ರವಾದಿಗಳಿಗೆ ಮಾತ್ರ..!

ಮದ್ವೆಗೂ ಮುನ್ನವೇ ಮಕ್ಕಳನ್ನು ಹೆತ್ತರು..!? ಮೊದಲು ಅಮ್ಮ ಆಗ್ತೀನಿ, ಆಮೇಲೆ ಮದ್ವೆ ಎಂದಳು ಶೃತಿ..!

ಯೂಟ್ಯೂಬ್ ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ ಸಿಂಹದ ರಿಯಲ್ ಸ್ಟೋರಿ..!

ಒಬಾಮ ಅಮೆರಿಕಾ ಕಂಡ ಅತ್ಯಂತ ಕೆಟ್ಟ ಅಧ್ಯಕ್ಷ..! ರೋನಾಲ್ಡ್ ರೇಗನ್ಗೆ ಫುಲ್ ಫಿದಾ..!

Share post:

Subscribe

spot_imgspot_img

Popular

More like this
Related

ಎಸ್.ಎಲ್. ಭೈರಪ್ಪನವರಿಗೆ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ: ಸಿಎಂ ಸಿದ್ದರಾಮಯ್ಯ ಘೋಷಣೆ

ಎಸ್.ಎಲ್. ಭೈರಪ್ಪನವರಿಗೆ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ: ಸಿಎಂ ಸಿದ್ದರಾಮಯ್ಯ ಘೋಷಣೆ ಬೆಂಗಳೂರು: ನಾಡಿನ...

ಚಿನ್ನ ಖರೀದಿದಾರರಿಗೆ ಶುಭ ಸುದ್ದಿ: ಇಳಿಕೆ ಕಂಡ ಹಳದಿ ಲೋಹದ ಬೆಲೆ

ಚಿನ್ನ ಖರೀದಿದಾರರಿಗೆ ಶುಭ ಸುದ್ದಿ: ಇಳಿಕೆ ಕಂಡ ಹಳದಿ ಲೋಹದ ಬೆಲೆ ಆಭರಣ...

ನಾಳೆ ಮೈಸೂರಿನಲ್ಲಿ ಎಸ್​ಎಲ್​ ಭೈರಪ್ಪ ಅಂತ್ಯಕ್ರಿಯೆ

ನಾಳೆ ಮೈಸೂರಿನಲ್ಲಿ ಎಸ್​ಎಲ್​ ಭೈರಪ್ಪ ಅಂತ್ಯಕ್ರಿಯೆ ಹಿರಿಯ ಸಾಹಿತಿ, ಪದ್ಮಭೂಷಣ ಪುರಸ್ಕೃತ ಎಸ್​.ಎಲ್...

ಬಿಳಿಕೂದಲು ಕಪ್ಪಾಗಬೇಕಾ? ಹಾಗಿದ್ರೆ ಈ ತರಕಾರಿ ತಿನ್ನಿ ಹತ್ತೇ ನಿಮಿಷದಲ್ಲಿ ರಿಸಲ್ಟ್ ಬರುತ್ತೆ!

ಬಿಳಿಕೂದಲು ಕಪ್ಪಾಗಬೇಕಾ? ಹಾಗಿದ್ರೆ ಈ ತರಕಾರಿ ತಿನ್ನಿ ಹತ್ತೇ ನಿಮಿಷದಲ್ಲಿ ರಿಸಲ್ಟ್...