ಡಾ.ರಾಜ್ ರವರ ಬಂಗಾರದ ಮನುಷ್ಯ ಚಿತ್ರ ನೋಡಿ ಅದೆಷ್ಟೋ ಜನ ಮರಳಿ ಮಣ್ಣಿಗೆ ಎನ್ನುವ ಹಾಗೇ ಕೃಷಿ ಮಾಡಲು ಆರಂಭಿಸಿದ್ದು ಎಲ್ಲರಿಗೂ ಗೊತ್ತು. ಆದರೆ ಇಲ್ಲೊಬ್ಬ ರೈತ ಡಾ. ರಾಜ್ ಕುಮಾರ್ ರವರ ಊರಾದ ಸಿಂಗನಲ್ಲೂರು ಗ್ರಾಮಕ್ಕೆ ಹೊಂದಿಕೊಂಡಂತೆ ಇರುವ ಚಿಕ್ಕಲ್ಲೂರು ಗ್ರಾಮದ ರೈತ ಚಿನ್ನಾಳು ಎಂಬುವವರು ಸುಮಾರು 240 ಎಕರೆ ವಿಸ್ತೀರ್ಣದಲ್ಲಿ ಸುಮಾರು 40ಕೋಟಿ ಲೀಟರ್ ನೀರು ಸಂಗ್ರಹವಾಗುವ ಕೆರೆ ನಿರ್ಮಿಸಿದ್ದಾರೇ..
1ಕೋಟಿ ಲೀಟರ್ ನೀರು ಸಂಗ್ರಹವಾಗುವ ಗುರುತ್ವ ಕಾಂಕ್ರೀಟ್ ತೊಟ್ಟಿಯು ಸಹ ಇದೆ.
10600 ಶ್ರೀಗಂಧದ ಮರ.
11850 ಹೆಬ್ಬೇವಿನ ಮರ..
1850 ಸಪೋಟ ಸಸಿ
11600 ದಾಳಿಂಬೆ.
ಜಮ್ಮು ನೇರಳೆ 800
ಮಾವು 600 ,
14 ಬೋರ್ ವೆಲ್ ಸಮೇತ ಕೃಷಿಯನ್ನು ನಡೆಸುತ್ತಿರುವ ಇವರ ವಾರ್ಷಿಕ ಆದಯ ಎಷ್ಟು ಎಂದರೇ ದಾಳಿಂಬೆಯಿಂದಲೇ 2 ಕೋಟಿಗೂ ಹೆಚ್ಚಿದೆ ಎಂದು ನಗುವ ಅವರ ಮೊಗದಲ್ಲಿ! ನನಗೆ ಕಂಡಿದ್ದು ಅದರ ಹಿಂದಿನ 10 ವರ್ಷದ ಪರಿಶ್ರಮ! ಹಾಗೇ ಇವರ ಜಮೀನಿನಲ್ಲಿ ರಸ್ತೆಗಾಗಿಯೇ ಸುಮಾರು 40ಎಕರೆ ರಸ್ತೆಗಾಗಿಯೇ ಮೀಸಲಿಟ್ಟಿರುವ ಇವರ ಕೃಷಿಯ ಬಗ್ಗೆಯ ಕಾಳಜಿ ಆದರಣೀಯ!
ಸೊಲರ್ ಬೇಲಿಯನ್ನು ಪೂರ್ಣವಾಗಿ ಜಮೀನಿನ ಸುತ್ತ ಮಾಡಿ ಆನೆ ಹಾಗೂ ಇತರ ವನ್ಯ ಪ್ರಾಣಿಗಳ ಉಪಟಳದಿಂದ ಪಾರಗಿರುವ ಇವರು. ವಾಣಿಜ್ಯ ಬೆಳೆಗಳನ್ನು ಬಿಟ್ಟು ಸಹ ನೂರಾರು ತಳಿಯ ಹೂವು ಹಣ್ಣುಗಳುನ್ನು ಬೆಳೆಸಿರುವ ಇವರು ಈ ಜಾಗದ ಸಂಪೂರ್ಣ ಕೃಷಿಯಲ್ಲಿ ಹನಿ ನೀರಾವರಿ ಪದ್ಧತಿ ಅಳವಡಿಸಿ ಮಿತ ವ್ಯಯಿ ಕೃಷಿಕನಾಗಿದ್ದಾರೇ..
( ಕೇವಲ ಎರಡು ಮೂರು ಎಕರೆ ಜಮೀನನಲ್ಲಿ ಕೃಷಿ ಮಾಡಿ ರಾಜ್ಯ -ರಾಷ್ಟ್ರ ಪ್ರಶಸ್ತಿಗೆ ಹಾತೊರೆಯುವ ಯುವ ಕೃಷಿಕರು ಇವರ ಸಾಧನೆಯನ್ನು ನೋಡಿದರೆ ಅವರಿಗೂ ಅನಿಸ ಬಹುದು ಸಾಧಿಸಿದ್ದು ಸಾಸಿವೇ , ಸಾಧಿಸ ಬೇಕಾದ್ದು ಸಾಗರ ಎಂದು..)
ಏನಾದರು ಆಗಲಿ ಕೃಷಿಗೇ ವಿದ್ಯಾವಂತರು ಅಕ್ಷರಸ್ಥರು ಕೃಷಿಯನ್ನು ಮುಖ್ಯ ಕಸುಬಾಗಿ ಆರಿಸಿಕೊಂಡಾಗ ಮಾತ್ರ ಏನಾದರೂ ಈ ಭೂಮಿಗೇ ಓಂದಷ್ಟು ಪೂರಕವಾದ ವಾತಾವರಣ ಸೃಷ್ಟಿ ಯಾಗಬಹುದು..
ಈ ದಿನ ನಡೆದಾಡುವ ಕೃಷಿ ವಿಶ್ವ ವಿದ್ಯಾಲಯದೊಡನೆ ಇದ್ದ ಅನುಭವವಾಯಿತು.. ಕೃಷಿ ವಿದ್ಯಾರ್ಥಿಗಳು, ಹಾಗೂ ಭವಿಷ್ಯದ ಕೃಷಿಕರು ಇವರಿಂದ ಕಲಿಯುವುದು ಸಾಕಷ್ಟಿದೆ
- ಚೇತನ್ ದಾಸರಹಳ್ಳಿ
POPULAR STORIES :
ಹುಡುಗಿರಿಗೆ ಈ ಮಾತನ್ನು ಕೇಳಿದ್ರೆ ಬಿಲ್ಕುಲ್ ಇಷ್ಟ ಆಗಲ್ಲ.!!
ರಾಜಧಾನಿಯಲ್ಲಿ ನಕಲಿ ಭಿಕ್ಷುಕರು..! ( ಭಾಗ- 1 ) ದಿ ನ್ಯೂ ಇಂಡಿಯನ್ ಟೈಮ್ಸ್ ಇನ್ವೆಸ್ಟಿಗೇಶನ್ ರಿಪೋರ್ಟ್..!
ಒಂದು ಚೂರು ಬಿಡದೆ ರೈಲ್ವೆಸ್ಟೇಷನ್ನನ್ನೇ ಕದ್ದೊಯ್ದ ಕಳ್ಳರು..
ಏಡುಕೊಂಡಲವಾಡ ಗೋವಿಂದಾ ಗೋವಿಂದ… ತಿಮ್ಮಪ್ಪನ ಚಿನ್ನವೆಲ್ಲಾ ಮೋದಿ ಯೋಜನೆಗೆ
5 ಸ್ಟಾರ್ ಹೋಟೆಲ್ … ಉಗ್ರವಾದಿಗಳಿಗೆ ಮಾತ್ರ..!
ಮದ್ವೆಗೂ ಮುನ್ನವೇ ಮಕ್ಕಳನ್ನು ಹೆತ್ತರು..!? ಮೊದಲು ಅಮ್ಮ ಆಗ್ತೀನಿ, ಆಮೇಲೆ ಮದ್ವೆ ಎಂದಳು ಶೃತಿ..!
ಯೂಟ್ಯೂಬ್ ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ ಸಿಂಹದ ರಿಯಲ್ ಸ್ಟೋರಿ..!