ಡಾ.ರಾಜ್, ದೇವರಾಜ್ ಅರಸು ಅವರಿಗೂ ವೈದ್ಯಕೀಯ ಸೇವೆ ನೀಡಿದ್ದ  ಡಾಕ್ಟರ್ …ಇವ್ರು ಬಡವರ ದೇವರು‌…!

Date:

 

ಡಾ.ರಾಜ್, ದೇವರಾಜ್ ಅರಸು ಅವರಿಗೂ ವೈದ್ಯಕೀಯ ಸೇವೆ ನೀಡಿದ್ದ  ಡಾಕ್ಟರ್ …ಇವ್ರು ಬಡವರ ದೇವರು‌…!

ಡಾ. ಬಿ. ರಮಣರಾವ್, ನಮ್ಮ ಬೆಂಗಳೂರಿನ ಹೆಸರಾಂತ ವೈದ್ಯರು. ವರನಟ ಡಾ. ರಾಜ್ ಕುಮಾರ್ ಅವರ ವೈದ್ಯರು. ಅಣ್ಣಾವ್ರು ಸೇರಿದಂತೆ ಮೈಸೂರು ಮಹಾರಾಜರು, ದೇವರಾಜ ಅರಸು, ವೀರೇಂದ್ರ ಪಾಟೀಲ್ ಎಸ್ಎಂ ಕೃಷ್ಣ, ವೀರೇಂದ್ರ ಪಾಟೀಲ್ ಅಂತಹ ಘಟಾನುಘಟಿಗಳಿಗೆ ವೈದ್ಯಕೀಯ ಸೇವೆ ನೀಡಿದ್ದಾರೆ.
ಮಹಾನ್ ವ್ಯಕ್ತಿಗಳಿಗೆ ಅಷ್ಟೇ ಅಲ್ಲ, ಬಡವರ ಪಾಲಿಗಂತೂ ಆಧುನಿಕ ದೇವರು ಎನಿಸಿದ್ದಾರೆ. ತಂದೆ ತಾಯಿಗಳ ಆಸೆಯಂತೆ ಡಾ. ರಮಣರಾವ್ ಅವರು ಬೆಂಗಳೂರು – ತುಮಕೂರು ರಸ್ತೆಯ ಟಿ.ಬೇಗೂರು ಸುತ್ತಮುತ್ತಲ 350 ಹಳ್ಳಿಗಳಿಂದ ದಿನಕ್ಕೆ ಸಾವಿರಾರು ಜನರಿಗೆ ಉಚಿತ ಚಿಕಿತ್ಸೆ ನೀಡುತ್ತಿರುವುದಲ್ಲದೆ,ಇಲ್ಲಿಗೆ ಬಂದಂತಹ ರೋಗಿಗಳಿಗೆ ಊಟದ ವ್ಯವಸ್ಥೆಯನ್ನು ಮಾಡಿಕೊಂಡು ಬರುತ್ತಿದ್ದಾರೆ.
ಡಾ. ರಮಣರಾವ್ ಅವರು, 1973 ಆಗಸ್ಟ್ 15ರಂದು ಹಳ್ಳಿಯ ಜನಕ್ಕೆ ಅಂದರೆ ಬಡವರಿಗಾಗೇ ಒಂದು ಉಚಿತ ಚಿಕಿತ್ಸೆಯನ್ನು ಕೊಡುವಂತಹ ಕ್ಲಿನಿಕ್ ಅನ್ನು ಆರಂಭಿಸಿದ್ರು. ಅಲ್ಲಿಂದ ಇಲ್ಲಿಂದು ಸರಿಸುಮಾರು 45 ವರ್ಷಗಳ ಕಾಲ ಬಡ ಜನರಿಗಾಗಿ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದಾರೆ.


ಪ್ರತಿ ಭಾನುವಾರ ಡಾ. ರಮಣರಾವ್ ಅವರು ರೋಗಿಗಳಿಗೆ ಉಚಿತ ಟ್ರೆಟ್ಮೆಂಟ್ ಕೊಡುತ್ತಾರೆ. ದಿನಕ್ಕೆ 900ರಿಂದ 1100ಕ್ಕೂ ಹೆಚ್ಚು ರೋಗಿಗಳು ಬರುತ್ತಾರೆ. ಈ ಕ್ಲಿನಿಕ್ ಇರೋದು ಬೆಂಗಳೂರಿನ ಬೇಗೂರಿನಲ್ಲಿ . ಇಲ್ಲಿ ಬಡವರಿಗಾಗಿಯೇ ಪ್ರತ್ಯೇಕವಾದ ಕ್ಲಿನಿಕ್ ತೆರೆದಿದ್ದು, ಇಲ್ಲಿ ಬರುವ ಬಡವರು, ಹಳ್ಳಿಯ ಜನರಿಗೆ ಊಟೋಪಚಾರದ ವ್ಯವಸ್ಥೆ ಮಾಡಿಕೊಂಡು ಬರಲಾಗುತ್ತಿದೆ.
ನೋಡಿ, ಈ ವೈದ್ಯರು, ಉಚಿತ ಚಿಕಿತ್ಸೆಯನ್ನು ನೀಡಲು ವಾರಕ್ಕೆ 2 ಲಕ್ಷ ರೂಪಾಯಿಗೂ ಹೆಚ್ಚು ಖರ್ಚು ಮಾಡುತ್ತಾರೆ. ಡಾ. ರಮಣರಾವ್ ಅಷ್ಟೇ ಅಲ್ಲ, ಅವರ ಮಕ್ಕಳಾದ ಡಾ. ಚರಿತ್ ಅವರು, ಪತ್ನಿ ಅವರ ಡಾ. ಶಾಂತಿ, ಮತ್ತೊರ್ವ ಪುತ್ರ ಡಾ. ಅಭಿಜಿತ್ ಕೂಡ ಗ್ರಾಮೀಣ ಜನರಿಗೆ ವೈದ್ಯಕೀಯ ಸೇವೆ ನೀಡುತ್ತಾ ಬರುತ್ತಿದ್ದಾರೆ. ಈ ಉಚಿತ ಕ್ಲಿನಿಕ್ ನಲ್ಲಿ 10 ಜನ ಡೆಂಟಿಸ್ಟ್, ಚರ್ಮ ರೋಗ ತಜ್ಞರು ಸೇರಿದಂತೆ ಒಟ್ಟು 25 ಜನ ಸಿಬ್ಬಂದಿಯಿದ್ದಾರೆ.


ಬಡವರಿಗೆ ಉಚಿತ ಚಿಕಿತ್ಸೆಯನ್ನು ನೀಡೋದು ಅಷ್ಟೇ ಅಲ್ಲ, ಇನ್ನು ಹಲವು ಜನಪರ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ತಮ್ಮ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಆರೋಗ್ಯದ ಕಾಳಜಿ ವಹಿಸಿ ಬಡವರಿಗಾಗಿ 7 ಸಾವಿರಕ್ಕೂ ಹೆಚ್ಚು ಶೌಚಾಲಯ ನಿರ್ಮಿಸಿಕೊಟ್ಟಿದ್ದಾರೆ. ಕುಡಿಯುವ ನೀರಿನ ತೊಂದರೆ ಆಗದಿರಲಿ ಅನ್ನೋ ಕಾರಣಕ್ಕೆ ಐದಾರು ಬೋರ್ ವೆಲ್ ಗಳನ್ನು ಕೊರೆಸಿದ್ದಾರೆ.


ಅಷ್ಟೇ ಅಲ್ಲದೆ, 50ಕ್ಕೂ ಹೆಚ್ಚು ಶಾಲೆಗಳನ್ನು ದತ್ತು ಪಡೆದು ಮಕ್ಕಳಿಗೆ ಯುನಿಫಾರ್ಮ್ , ಬುಕ್ಸ್ ಮುಂತಾದ ಶೈಕ್ಷಣಿಕ ಸೇವೆಗಳನ್ನು ನೀಡುತ್ತಾ ಬರುತ್ತಿದ್ದಾರೆ. ಇದಕ್ಕೆಲ್ಲ, ಬೆನ್ನಲುಬು, ಡಾ. ಹೇಮಾ ಅವರು. ಇವರು ಡಾ. ರಮಣರಾವ್ ಅವರ ಪತ್ನಿ. ವೈದ್ಯರ ಈ ಜನಪರ, ಸಮಾಜಮುಖಿ ಕಾರ್ಯಗಳಿಗಾಗಿ ಕೇಂದ್ರ ಸರ್ಕಾರ 2010ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ರಾಜ್ಯ ಸರ್ಕಾರ ಕೂಡ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಅಭಿನಂದಿಸಿದೆ.
ಅದೇನೆ ಇರಲಿ. ಹೆಣ ಮುಂದೆ ಇಟ್ಟುಕೊಂಡು ಹಣ ವಸೂಲಿ ಮಾಡುವಂತಹ ವೈದ್ಯರ ಮುಂದೆ ಇಂತಹ ನಿಸ್ವಾರ್ಥ ಮನೋಭಾವದ ವೈದ್ಯರನ್ನು ಕಾಣುವುದು ನಿಜಕ್ಕೂ ಹೆಮ್ಮೆ ಅನಿಸುತ್ತಿದೆ. ಇವರ ಕಾರ್ಯ ವೈಖರಿ ಇತರರಿಗೂ ಸ್ಫೂರ್ತಿ.

Share post:

Subscribe

spot_imgspot_img

Popular

More like this
Related

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ ಇತ್ತೀಚಿನ ದಿನಗಳಲ್ಲಿ ಮೌತ್‌ವಾಶ್...

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...