ಅಜ್ಜಿಯ ಲಾಠಿ ಕತ್ತಿ ವರಸೆ ವಿಡಿಯೋ ವೈರಲ್.. ವಯೋವೃದ್ಧೆಗೆ ನೆರವಿನ ಹಸ್ತ ಚಾಚಿದ ಬಾಲಿವುಡ್ ಸ್ಟಾರ್..

Date:

ನಮ್ಮಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ. ಆದರೆ‌ ಅವರನ್ನು ಗುರುತಿಸಿ‌ವ ಮಂದಿ ವಿರಳ. ಈಗಲೂ ಸಹ ಅದೆಷ್ಟೋ ಪ್ರತಿಭೆಗಳು ಎಲೆ‌ಮರೆಕಾಯಿಯಂತಿವೆ. ತಮ್ಮ‌ ಕಲೆಯನ್ನು ಗಲ್ಲಿಗಳಲ್ಲಿ‌ ಪ್ರದರ್ಶಿಸುತ್ತಾ ಜೀವನ‌ ನಿರ್ವಹಣೆ ‌ಮಾಡುತ್ತಿದ್ದಾರೆ. ಪುಣೆಯ ಗಲ್ಲಿಗಳಲ್ಲಿ‌‌ ಅಜ್ಜಿಯೊಬ್ಬರೂ ಲಾಠಿ ಕತ್ತಿ ಎಂಬ ಕಲೆ ಪ್ರದರ್ಶಿಸುತ್ತಾ ಬದುಕಿನ‌ ಬಂಡಿ‌ ಸಾಗಿಸುತ್ತಿದ್ದಾರೆ.‌  ಇಳಿ ಹರೆಯದ‌ ವೃದ್ಧೆಯ ಈ ಲಾಠಿ ಕಲೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಜೊತೆಗೆ ಬಾಲಿವುಡ್‌ ಮಂದಿಯ ಮನಗೆದ್ದಿದೆ.

 ಪ್ರತಿಭೆಗೆ ಯಾವ ಪರಿಧಿಯೂ ಇಲ್ಲ. ಹಿರಿಯರು ಕಿರಿಯರು ಎಂಬ ಪರಿಮಿತಿಯೂ ಇಲ್ಲ. ಇದಕ್ಕೆ ಸಾಕ್ಷಿ‌ ಈ ಅಜ್ಜಿ. ಹೀಗೆ‌ ಕೈಯಲ್ಲಿ ಲಾಠಿ ಹಿಡಿದು ನಾನ್ಯಾರಿಗೂ ಕಡಿಮೆ‌ ಇಲ್ಲ ಅನ್ನೋ ಹಾಗೆ ಫೋಸ್ ಕೊಡುತ್ತಿರುವ ಹೆಸರು ಶಾಂತಾ ಬಾಯಿ ಪವಾರ್. ಇನ್ನೂ ಈಕೆಯ ವಯಸ್ಸು ೯೫,, ಒಂದು ಸಾರಿ ಅಜ್ಜಿ‌ ಲಾಠಿ ಹಿಡಿದು ತಿರುಗಿಸೋಕೆ ನಿಂತರೆ ಹದಿಹರೆಯಸವರು ಗರಗರನೇ ಸುತ್ತಿ ಸುಸ್ತಾಗುತ್ತಾರೆ.

ಹೌದು, ೯೫ ವರ್ಷದ ಶಾಂತಬಾಯಿ ಪುಣೆಯ ನಿಮ್ರತಿ‌ ಎಂಬ ಪ್ರದೇಶದ ಜೋಪಡಿಯಲ್ಲಿ ವಾಸವಾಗಿದ್ದಾರೆ. ಶಾಂತಮ್ಮ ಅವರು ಎಂಟು ವರ್ಷದವರಿದ್ದಾಗ ಆಕೆಯ ತಂದೆ‌‌ ಈ‌ ಲಾಠಿ ಕತ್ತಿ ಕಲೆಯನ್ನು ಕಲಿಸಿದ್ದರಂತೆ. ಅಂದಿನಿಂದೂ‌ ಪುಣೆಯ ಗಲ್ಲಿಗಳಲ್ಲಿ‌‌ ಶಾಂತಬಾಯಿ ಲಾಠಿ ತಿರುಗಿಸುವ ಕಲೆ ಪ್ರದರ್ಶನ ‌ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. ಹೀಗೆ ಲಾಠಿ ವರಸೆ‌‌ ಪ್ರದರ್ಶನದಿಂದ ಬಂದ ಹಣದಿಂದಲೇ ತನ್ನ ಮೊಮ್ಮಕ್ಕಳನ್ನು ಸಾಕುತ್ತಿದ್ದಾರೆ. ಜೊತೆಗೆ ಅವರನ್ನು ಶಾಲೆಗೆ ಸೇರಿಸಿ ಉತ್ತಮ ವಿದ್ಯಾಭ್ಯಾಸ ‌ಕೊಡಿಸುತ್ತಿದ್ದಾರೆ.

ಲಾಕ್ ಡೌನ್ ನ ಸಂಕಷ್ಟದ ಸಮಯದಲ್ಲೂ ಸಹ ಶಾಂತಬಾಯಿ ಗಲ್ಲಿಗಲ್ಲಿಗಳಲ್ಲಿ‌ ಲಾಠಿ ಕಲೆ ಪ್ರದರ್ಶಿಸುತ್ತಿದ್ದಾರೆ. ಯಾಕೆಂದರೆ ‌ಇದೇ ಅವರ ಆದಾಯ ಮೂಲ. ಇನ್ನೂ ಇತ್ತೀಚಿಗೆ ಗಲ್ಲಿಯೊಂದರಲ್ಲಿ ಶಾಂತಬಾಯಿ ಲಾಠಿ ತಿರುಗಿಸುತ್ತಿರುವುದನ್ನು ಕಂಡ‌ ಸ್ಥಳೀಯ ಹತಿಂದರ್ ಎಂಬಾತ ವಿಡಿಯೋ‌ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಒಬ್ಬರಿಂದ ಒಬ್ಬರಿಗೆ ಶೇರ್ ಆಗಿದೆ.

ಇನ್ನೂ ‘ಸಾಂಡ್ ಕಿ ಆಂಕ್’ ಸಿನಿಮಾಗೆ ಪ್ರೇರಣೆಯಾಗಿರುವ ಹರಿಯಾಣದ ಖ್ಯಾತ ಶೂಟರ್ ಅಜ್ಜಿ ಚಂದ್ರೂ ತೋಮರ್ ಸಹ ಅಜ್ಜಿಯ ಲಾಠಿ‌ ಕಲೆಗೆ ಮೆಚ್ಚಿದ್ದು, ಈಕೆ ಲಾಠಿ ತಿರುಗಿಸುತ್ತಾ ಯಾರ‌ ನೀರಾದರೂ ಇಳಿಸಬಳ್ಳಲು ಎಂದು ಟ್ವೀಟ್ ‌ಮಾಡಿದ್ದಾರೆ.

 

 

ಅಜ್ಜಿಯ ಲಾಠಿ ಕತ್ತಿ‌ ವರಸೆಗೆ ಬಾಲಿವುಡ್ ಮಂದಿ ಫಿದಾ ಆಗಿದ್ದಾರೆ. ಜೊತೆಗೆ ಶಾಂತಬಾಯಿ ಅವರಿಗೆ ನೆರವು ನೀಡಲು ಮುಂದಾಗಿದ್ದಾರೆ. ಸದಾ ಕೂಲಿ‌ ಕಾರ್ಮಿಕರು, ದೀನರ‌‌ ಸಹಾಯಕ್ಕೆ‌ ನಿಲ್ಲುವ ಸೋನು ಸೂದ್ ಮೊದಲು‌ ಈ ವಿಡಿಯೋಗೆ‌ ಪ್ರತಿಕ್ರಿಯಿಸಿದ್ದು, ಈಕೆಯ ವಿಳಾಸ‌ ಇದ್ದರೆ ಕೊಡಿ, ನಾನು ಅಜ್ಜಿಯೊಂದಿಗೆ ಸೇರಿ ಮಹಿಳೆಯರ‌ ಸೆಲ್ಪ್ ಡಿಫೆನ್ಸ್ ತರಬೇತಿ ಶಾಲೆ ತೆರೆಯುವೆ ಎಂದು ಟ್ವೀಟ್ ಮಾಡಿದ್ದಾರೆ.ಕೇವಲ ಸೋನು ಸೂದ್ ಮಾತ್ರವಲ್ಲ, ಬಾಲಿವುಡ್‌ನ ಮತ್ತೊಬ್ಬ ಸ್ಟಾರ್ ನಟ ರಿತೇಶ್‌ ದೇಶಮುಖ್ ಸಹ ಅಜ್ಜಿಗೆ ನೆರವು ನೀಡುವುದಾಗಿ‌ ಟ್ವೀಟ್ ‌ಮಾಡಿದ್ದಾರೆ.

ಒಟ್ನಲ್ಲಿ ಶಾಂತಾಬಾಯಿ ಅವರು ತಮ್ಮ ಲಾಠಿ ಕತ್ತಿ ಕಲೆಯಿಂದ ಖ್ಯಾತಿ‌ ಗಳಿಸುತ್ತಿದ್ದಾರೆ.

Share post:

Subscribe

spot_imgspot_img

Popular

More like this
Related

ನಟಿ ರನ್ಯಾ ರಾವ್ ಅಪ್ಪ ಐಜಿಪಿ ರಾಮಚಂದ್ರರಾವ್ ರಾಸಲೀಲೆ ಬಹಿರಂಗ!

ನಟಿ ರನ್ಯಾ ರಾವ್ ಅಪ್ಪ ಐಜಿಪಿ ರಾಮಚಂದ್ರರಾವ್ ರಾಸಲೀಲೆ ಬಹಿರಂಗ! ಬೆಂಗಳೂರು: ಡಿಜಿಪಿ...

ಬೆಳೆ ವಿಮೆ ಯೋಜನೆ ಯಶಸ್ಸು: ಕೇಂದ್ರದಿಂದ ಕರ್ನಾಟಕ ಸರ್ಕಾರಕ್ಕೆ ಪ್ರಶಸ್ತಿ

ಬೆಳೆ ವಿಮೆ ಯೋಜನೆ ಯಶಸ್ಸು: ಕೇಂದ್ರದಿಂದ ಕರ್ನಾಟಕ ಸರ್ಕಾರಕ್ಕೆ ಪ್ರಶಸ್ತಿ ಬೆಂಗಳೂರು: ಪ್ರಧಾನಮಂತ್ರಿ...

ಸಿಬಿಐ ತನಿಖೆ ವಿಚಾರ: ಬಳ್ಳಾರಿ ಪ್ರಕರಣದಲ್ಲಿ ದ್ವಂದ್ವ ನೀತಿ – ಜನಾರ್ಧನ ರೆಡ್ಡಿ ಆರೋಪ

ಸಿಬಿಐ ತನಿಖೆ ವಿಚಾರ: ಬಳ್ಳಾರಿ ಪ್ರಕರಣದಲ್ಲಿ ದ್ವಂದ್ವ ನೀತಿ – ಜನಾರ್ಧನ...

ಉಗುರು ಕಚ್ಚುವ ಅಭ್ಯಾಸ ಇರುವವರು ಈ ವಿಷಯಗಳ ಬಗ್ಗೆ ತಿಳಿದಿರಬೇಕು!

ಉಗುರು ಕಚ್ಚುವ ಅಭ್ಯಾಸ ಇರುವವರು ಈ ವಿಷಯಗಳ ಬಗ್ಗೆ ತಿಳಿದಿರಬೇಕು! ಉಗುರು ಕಚ್ಚುವುದು...