ಇದು ‘ವಾಷಿಂಗ್ ಪೌಡರ್ ನಿರ್ಮಾ’ ಹಿಂದಿನ ಕಥೆ…! ನಿರ್ಮಾ ನಿರ್ಮಾತೃ ಯಾರ್ ಗೊತ್ತಾ? 

Date:

ಇವರೇ ನೋಡಿ ‘ವಾಷಿಂಗ ಪೌಡರ್ ನಿರ್ಮಾ’ ಹಿಂದಿನ ಕಥೆ…! ನಿರ್ಮಾ ನಿರ್ಮಾತೃ ಯಾರ್ ಗೊತ್ತಾ? 

ಕರ್ಸನ್ಭಾಯಿ ಖೋಡಿದಾಸ ಪಟೇಲ್. ಗುಜರಾತಿನ ರಪ್ಪರ್ ಗ್ರಾಮ ಪಟೇಲ್ ಹುಟ್ಟೂರು. ತಂದೆ ಕೃಷಿಕರು. ರೈತನ ಮಗ ಅಂದ ಮೇಲೆ ವಿವರಿಸಬೇಕಿಲ್ಲ ತಾನೆ? 1945ರಲ್ಲಿ ಜನಿಸಿದ ಕರ್ಸನ್ಭಾಯಿ ಪಟೇಲ್, ಬಡತನದ ಹಲವು ಮುಖಗಳನ್ನು ನೋಡಿಕೊಂಡೇ ಬೆಳೆದ್ರು.
ಕೃಷಿಯನ್ನೇ ನಂಬಿಕೊಂಡರೆ ಜೀವನ ನಿರ್ವಹಣೆ ಕಷ್ಟವಾಗುತ್ತದೆ ಅನಿಸಿದ್ದರಿಂದ ಕರ್ಸನ್ ಭಾಯಿ, ಸರ್ಕಾರಿ ನೌಕರಿ ಸೇರಬೇಕೆಂಬ ಆಸೆಯಿಂದಲೇ ಬಿ.ಎಸ್ಸಿ ಪದವಿ ಪಡೆದ್ರು. ಮೊದಲು ಅಹಮದಾಬಾದ್ನಲ್ಲಿದ್ದ ಲಾಲ್ಭಾಯ್ ಗ್ರೂಪ್ನ ಬಟ್ಟೆ ಗಿರಣಿಯಲ್ಲಿ, ನಂತರ ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಲ್ಯಾಬ್ ಟೆಕ್ನೀಷಿಯನ್ ಹುದ್ದೆಗೆ ಸೇರಿಕೊಂಡ್ರು.
ಲ್ಯಾಬ್ ಟೆಕ್ನೀಷಿಯನ್ ಅಂದ ಮೇಲೆ ವಿವರಿಸಿಹೇಳಬೇಕಿಲ್ಲ ತಾನೆ? ಬೆಳಗಿನಿಂದ ಸಂಜೆಯವರೆಗೂ ಲ್ಯಾಬ್ನಲ್ಲಿ, ಹಲವು ರಾಸಾಯನಿಕಗಳ ಘಾಟು ವಾಸನೆಯ ಮಧ್ಯೆಯೇ ಬದುಕಬೇಕಿತ್ತು. ಯಾವುದೇ ಮೇಲು ಸಂಪಾದನೆಯೂ ಇರಲಿಲ್ಲವಾದ್ದರಿಂದ, ಸಂಬಳದ ಹಣದಿಂದಲೇ ಕುಟುಂಬವನ್ನು ಸಾಕುವುದು ಕಷ್ಟವಾಯಿತು. ಈ ವೇಳೆ ತಿಂಗಳಿಗೆ ಬಟ್ಟೆ ಒಗೆಯುವ ಪೌಡರನ್ನು ಮನೆಯಲ್ಲಿಯೇ ತಯಾರಿಸಿ, ಅದನ್ನು ಮಾರಾಟ ಮಾಡಿದರೆ, ಸ್ವಲ್ಪ ಕಾಸು ಸಿಗುತ್ತದೆಂದು ಲೆಕ್ಕ ಹಾಕಿದ್ರು.


ಆನಂತರದಲ್ಲಿ ಕರ್ಸನ್ಭಾಯಿ ಪಟೇಲ್ ತಡಮಾಡಲಿಲ್ಲ. ಅಪ್ಪ, ಅಮ್ಮ ಹಾಗೂ ಹೆಂಡತಿಯನ್ನು ಎದುರು ಕೂರಿಸಿಕೊಂಡು-‘ ಡಿಟರ್ಜೆಂಟ್ ಪೌಡರ್ ತಯಾರಿಸುವುದು ಹೇಗೆ ’ಎಂದು ಹೇಳಿಕೊಟ್ರು. ಮನೆಯ ಮೂಲೆಯಲ್ಲಿದ್ದ ಪುಟ್ಟ ಗ್ಯಾರೇಜ್ನಲ್ಲಿ ಡಿಟರ್ಜೆಂಟ್ ಪೌಡರ್ನ ತಯಾರಿಕೆ ಆರಂಭವಾಯಿತು. ಇದಿಷ್ಟೂ ನಡೆದದ್ದು 1980ರಲ್ಲಿ.
ತಾವು ತಯಾರಿಸುವ ಉತ್ಪನ್ನಕ್ಕೆ ಹೆಸರು ಬೇಕು ಅನ್ನಿಸಿದಾಗ ಕರ್ಸನ್ ಭಾಯಿ ಪಟೇಲ್ಗೆ ನೆನಪಾಗಿದ್ದು ಮಗಳು ನಿರುಪಮಾ. ಅವಳ ಹೆಸರಿನ ಮೊದಲ ಮೂರು ಹಾಗೂ ಕೊನೆಯ ಎರಡು ಅಕ್ಷರಗಳನ್ನು ತೆಗೆದುಕೊಂಡ ಪಟೇಲ್ ನಿರ್ಮಾ ಎಂಬ ಹೆಸರನ್ನು ಡಿಟರ್ಜೆಂಟ್ ಪೌಡರ್ಗೆ ಇಟ್ರು. ಮನೆ ಮನೆಗೆ ಹೋಗಿ 3 ರೂಪಾಯಿಗೆ ಪ್ರತಿ ಕೆಜಿಯಂತೆ ಮಾರಾಟ ಮಾಡ್ತಾ ಇದ್ರು. ಆಗ ಉಳಿದ ಬ್ರಾಂಡ್ಗಳ ಬೆಲೆ ಕೆಜಿಗೆ 13 ರೂಪಾಯಿ ಇತ್ತು.
ಆಗ ಬುದ್ಧಿವಂತಿಕೆಯಿಂದ ಬಾಕಿ ವಸೂಲಿ ಮಾಡಿದವರು ಇದೇ ಕರ್ಸನ್ಭಾಯಿ. ಅಷ್ಟೇ ಅಲ್ಲ ತಮ್ಮ ಪುತ್ರಿ ನಿರ್ಮಾಳನ್ನೇ ಹಾಕಿಕೊಂಡು ಜಾಹೀರಾತೊಂದನ್ನು ನಿರ್ಮಾಣ ಮಾಡಿದ್ರು. ಕರ್ಸನ್ಭಾಯಿ ಅವರ ಐಡಿಯಾ ಮ್ಯಾಜಿಕ್ ಮಾಡಿತ್ತು. ನಿರ್ಮಾ ಬ್ರಾಂಡ್ಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಸೃಷ್ಟಿಯಾಯ್ತು. ಆ ವರ್ಷ ನಿರ್ಮಾದ ಮಾರಾಟ ಎಷ್ಟಿತ್ತಂದ್ರೆ ಅತಿ ಹೆಚ್ಚು ಮಾರಾಟವಾದ ಡಿಟರ್ಜೆಂಟ್ ಎಂಬ ಖ್ಯಾತಿಯನ್ನೂ ಗಳಿಸಿತ್ತು. ಎದುರಾಳಿ ಬ್ರಾಂಡ್ ಸರ್ಫ್ ಆಫ್ ಹಿಂದುಸ್ಥಾನ್ ಯುನಿಲಿವರ್ ಅನ್ನು ಹಿಂದಿಕ್ಕಿತ್ತು.


2017ರ ವೇಳೆಗೆ ಕರ್ಸನ್ಭಾಯಿ ಸಿಮೆಂಟ್ ಬ್ಯುಸಿನೆಸ್ ಅನ್ನು 1.4 ಬಿಲಿಯನ್ಗೆ ಕೊಂಡುಕೊಳ್ಳುವ ಮೂಲಕ ಮತ್ತೊಮ್ಮೆ ತಾವೊಬ್ಬ ಶ್ರೇಷ್ಠ ಉದ್ಯಮಿ ಅನ್ನೋದನ್ನ ಸಾಬೀತು ಮಾಡಿದ್ರು. ಈ ಒಪ್ಪಂದದಿಂದ ರಾಜಸ್ತಾನ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ನಿರ್ಮಾ ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿದೆ. ಉದ್ಯಮಿ ಅನ್ನೋ ಪದಕ್ಕೆ ಮತ್ತೊಂದು ಅರ್ಥ ಕರ್ಸನ್ಭಾಯಿ ಅಂದ್ರೆ ತಪ್ಪಿಲ್ಲ.
ದೇಶದ ಅಭಿವೃದ್ಧಿ ಬಗೆಗೂ ವಿಶಾಲ ದೃಷ್ಟಿಕೋನ ಹೊಂದಿದ್ದಾರೆ. 1995ರಲ್ಲಿ ನಿರ್ಮಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, 2003ರಲ್ಲಿ ನಿರ್ಮಾ ಯೂನಿವರ್ಸಿಟಿ ಆಫ್ ಸೈನ್ಸ್ & ಟೆಕ್ನಾಲಜಿ, ಮತ್ತು ನಿರ್ಮಾ ಎಜುಕೇಶನ್ & ರಿಸರ್ಚ್ ಫೌಂಡೇಶನ್ ಸ್ಥಾಪಿಸಿದ್ದಾರೆ. ಭಾರತದ ಯುವ ಉದ್ಯಮಿಗಳನ್ನು ಪ್ರೋತ್ಸಾಹಿಸಲು ಮತ್ತು ಅವರಿಗೆ ತರಬೇತಿ ನೀಡಲು 2004ರಲ್ಲಿ ನಿರ್ಮಾ ಲ್ಯಾಬ್ಸ್ ಎಜುಕೇಶನ್ ಪ್ರಾಜೆಕ್ಟನ್ನೂ ಆರಂಭಿಸಿದ್ದಾರೆ.
ಈ ಮಹಾನ್ ಸಾಧಕನಿಗೆ ಪದ್ಮಶ್ರೀ, ಅಮೆರಿಕದ ವಿ.ವಿ.ಯ ಗೌರವ ಡಾಕ್ಟರೇಟ್ ಸೇರಿದಂತೆ ನೂರಾರು ಪ್ರಶಸ್ತಿಗಳು ಲಭಿಸಿವೆ. ನಿರ್ಮಾ ಕಂಪನಿಯ ಯಶೋಗಾಥೆ , ದೇಶ-ವಿದೇಶಗಳಲ್ಲಿ ವಿದ್ಯಾರ್ಥಿಗಳಿಗೆ ಪಠ್ಯವಾಗಿದೆ. ಒಬ್ಬ ವ್ಯಕ್ತಿ ಎಷ್ಟೊಂದು ದೊಡ್ಡ ಹಂತಕ್ಕೆ ಬೆಳೆಯಬಹುದಲ್ಲವೆ ಎಂದುಕೊಂಡಾಗಲೇ ಅದೇ ಹಳೆಯ ಹಾಡು ನೆನಪಾಗುತ್ತದೆ; ವಾಷಿಂಗ್ ಪೌಡರ್ ನಿರ್ಮಾ, ವಾಷಿಂಗ್ ಪೌಡರ್ ನಿರ್ಮಾ.

Share post:

Subscribe

spot_imgspot_img

Popular

More like this
Related

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ ಇತ್ತೀಚಿನ ದಿನಗಳಲ್ಲಿ ಮೌತ್‌ವಾಶ್...

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...