ಅಭಿಮಾನಿಗಳ ಅಭಿಯಾನಕ್ಕೆ ತಲೆಬಾಗಿದ BCCI ; VIVOಗೆ ಬಿಗ್ ಶಾಕ್..!
ನವದೆಹಲಿ : ಭಾರತೀಯ ಕ್ರಿಕೆಟ್ ಮಂಡಳಿ ಬಿಸಿಸಿಐ ಅಭಿಮಾನಿಗಳ ಅಭಿಯಾನಕ್ಕೆ ತಲೆಬಾಗಿದೆ.. ಅಭಿಮಾನಿಗಳ ಹಠ, ಅವರ ಒತ್ತಡ, ಒತ್ತಾಯಕ್ಕೆ ಮಣಿದು ತನ್ನ ನಿರ್ಧಾರವನ್ನು ಬದಲಿಸಿದೆ. ಬಿಸಿಸಿಐ ನಿರ್ಧಾರ ಚೀನಾ ಮೂಲದ VIVO ಕಂಪನಿಗೆ ಶಾಕ್ ನೀಡಿದೆ .
ಮಾರ್ಚ್ 29ರಿಂದಲೇ ಶುರುವಾಗಬೇಕಿದ್ದ ಐಪಿಎಲ್ ಕೊರೋನಾ ಕಾರಣದಿಂದ ಮುಂದೂಡಲ್ಪಟ್ಟಿತ್ತು. ಕೊರೋನಾ ಎಂಬ ಮಹಾಮಾರಿ ವಕ್ಕರಿಸದೇ ಇದ್ದಿದ್ದರೆ ಇಷ್ಟೊತ್ತಿಗೆ 13ನೇ ಆವೃತ್ತಿ ಐಪಿಎಲ್ ಮುಗಿದಿರುತ್ತಿತ್ತು. ಟಿ20 ವರ್ಲ್ಡ್ಕಪ್ ಹಬಕ್ಕೆ ಕಾಯುತ್ತಿರುತ್ತಿದ್ದರು ಅಭಿಮಾನಿಗಳು.
ಕೊರೋನಾ ಕಾರಣದಿಂದ ಈ ಬಾರಿ ಟಿ20 ವರ್ಲ್ಡ್ಕಪ್ ನಡೆಸದಿರಲು ಐಸಿಸಿ ನಿರ್ಧರಿಸಿದೆ. ವರ್ಲ್ಡ್ಕಪ್ ಮುಂದಿನ ವರ್ಷಕ್ಕೆ ಮುಂದೂಡಲ್ಪಟ್ಟಿದ್ದು, ಇಂಡಿಯನ್ ಪ್ರೀಮಿಯರ್ ಲೀಗ್ ಗೆ ಸುಗಮ ದಾರಿ ಮಾಡಿಕೊಟ್ಟಂತಾಗಿದೆ. ಆದ್ದರಿಂದ ಬಿ ಸಿ ಸಿ ಐ ಕೂಡಲೇ ಐಪಿಎಲ್ ಆಯೋಜಿಸಲು ಯೋಜನೆ ರೂಪಿಸಿದೆ. ಯು ಎ ಇನಲ್ಲಿ ಈ ಬಾರಿ ಐ ಪಿ ಎಲ್ ಧಮಾಕ ನಡೆಯಲಿದೆ. ಸೆಪ್ಟೆಂಬರ್ 19ರಿಂದ ನವೆಂಬರ್ 10ರವರೆಗೆ ಐಪಿಎಲ್ ಸಡಗರ.
ಆದರೆ I P L ಡೇಟ್ ಪಕ್ಕಾ ಆಗುತ್ತಿದ್ದಂತೆ, ಅಷ್ಟು ದಿನ ಯಾವಗಪ್ಪಾ ಐಪಿಎಲ್ ಶುರುವಾಗುತ್ತೆ ಅಂತ ಕಾಯುತ್ತಿದ್ದ ಅಭಿಮಾನಿಗಳು ಉಲ್ಟಾ ಹೊಡೆದು ಬಿಟ್ಟರು! ಐಪಿಎಲ್ ಬಹಿಷ್ಕಾರ ಅಭಿಯಾನವನ್ನು ಶುರುಮಾಡಿದ್ದರು! ಅದಕ್ಕೆ ಕಾರಣ ಚೀನಾ ಮೂಲದ ಸಂಸ್ಥೆ VIVOದ ಪ್ರಾಯೋಜಕತ್ವ.
ಹೌದು ಐಪಿಎಲ್ ನಡೆಯುವುದು ಪಕ್ಕಾ ಆದಮೇಲೆ ಶೀರ್ಷಿಕೆ ಪ್ರಾಯೋಜಕತ್ವವನ್ನು ವಿವೋ ದ್ದೇ ಮುಂದುವರೆಸುವ ಯೋಚನೆಯನ್ನು ಬಿಸಿಸಿಐ ಮಾಡಿತ್ತು. ವಿವೋ ಕೂಡ ಮುಂದುವರೆಯುವುದಾಗಿ ಹೇಳಿತ್ತು. ಆದರೆ, ಚೀನಾದ ಸಂಸ್ಥೆಯ ಪ್ರಾಯೋಜಕತ್ವ ಮುಂದುವರೆಸಿದರೆ ನಾವು ಐಪಿಎಲ್ ಅನ್ನೇ ಬಹಿಷ್ಕರಿಸುತ್ತೇವೆ. ನೀವು ವಿವೋ ಬಹಿಷ್ಕರಿಸಿ, ಇಲ್ಲದಿದ್ದರೆ ನಾವು ಐಪಿಎಲ್ ಬಹಿಷ್ಕರಿಸಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದ್ದರು. ಅದರ ಬೆನ್ನಲ್ಲೇ ಬಿಸಿಸಿಐ ವಿವೋಗೆ ಶಾಕ್ ನೀಡಿದ್ದು, ಅಭಿಮಾನಿಗಳಿಗೆ ಖುಷಿ ನೀಡಿದೆ.
ಯೆಸ್ .. ಬಿಸಿಸಿಐ ಐಪಿಎಲ್ ವಿವೋ ಶೀರ್ಷಿಕೆ ಪ್ರಾಯೋಜಕತ್ವವನ್ನು ರದ್ದು ಮಾಡಿರುವುದಾಗಿ ಸ್ಪಷ್ಟಪಡಿಸಿದೆ. ಅಭಿಮಾನಿಗಳ ಭಾವನೆ ಮತ್ತು ರಾಷ್ಟ್ರದ ಹಿತಾಸಕ್ತಿ ಮುಖ್ಯವಾಗುತ್ತದೆ. ಆದ್ದರಿಂದ ಐಪಿಎಲ್ ವಿವೋ ಶೀರ್ಷಿಕೆಯನ್ನು ರದ್ದು ಮಾಡಿದ್ದೇವೆ ಎಂದು ಖಚಿತಪಡಿಸಿದೆ.
IPL ಶೀರ್ಷಿಕೆ ಪ್ರಾಯೋಜಕತ್ವ ಪಡೆದಿದ್ದ ಚೀನಾ ಮೂಲದ VIVO ಮೊಬೈಲ್ ಕಂಪನಿ ಬಿಸಿಸಿಐನೊಂದಿಗೆ 5 ವರ್ಷಗಳಿಗೆ 2,199 ಕೋಟಿ ರೂಗಳ ಒಪ್ಪಂದ ಮಾಡಿಕೊಂಡಿತ್ತು. ಈಗಾಗಲೇ ಎರಡು ವರ್ಷಗಳ ಒಪ್ಪಂದ ಮುಗಿದಿದೆ.
ಬಿಸಿಸಿಐ ಮತ್ತು ವಿವೋ ನಡುವೆ ಇನ್ನು 1,320 ಕೋಟಿ ರೂಗಳ ಒಪ್ಪಂದವಿದೆ. 2021ರಿಂದ 2023ರ ಆವೃತ್ತಿಗೆ ವಿವೋ ಐಪಿಎಲ್ಗೆ ಮರಳುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಅದೇನೇ ಇರಲಿ ಒಟ್ಟಿನಲ್ಲಿ ಬಿಸಿಸಿಐ ಚೀನಾದ ವಿವೋ ಪ್ರಾಯೋಜಕತ್ವವನ್ನು ರದ್ದು ಮಾಡಿ ಐಪಿಎಲ್ ನಡೆಸಲು ಮುಂದಾಗಿರುವುದಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.