ಗಣೇಶ ಚತುರ್ಥಿಯಂದು ಯಾವ ರಾಶಿಯವರು ಹೇಗೆ ಗಣೇಶನನ್ನು ಪೂಜಿಸಬೇಕು?

Date:

ಮೇಷ: ಈ  ರಾಶಿಯವರು ಗಣೇಶ ಹಬ್ಬದಂದು ವಕ್ರತುಂಡ ಗಣೇಶನನ್ನು ಪೂಜಿಸಬೇಕು. ಇದರಿಂದ ಎಲ್ಲಾ ಸಮಸ್ಯೆಗಳಿಂದ ಮುಕ್ತಿಯನ್ನು ಪಡೆಯುತ್ತೀರಿ . ಈ ದಿನ ‘ಓಂ ಗಂ ಗಣಪತಯೇ ನಮಃ’ ಮಂತ್ರವನ್ನು 108 ಬಾರಿ ಪಠಿಸಬೇಕು.  ಗುಲಾಬಿ ಅಥವಾ ಕೆಂಪು ಬಣ್ಣದ ಗಣೇಶನನ್ನು ಮನೆಗೆ ತರಬೇಕು. ಗಣೇಶನಿಗೆ ಲಡ್ಡುಗಳನ್ನು ಅರ್ಪಿಸಿ ಸ್ವೀಕರಿಸಬೇಕು.

ವೃಷಭ :   ಗಣೇಶ ಚತುರ್ಥಿಯಂದು ಮನೆಗೆ ತಿಳಿ ಹಳದಿ ವಿನಾಶಕ ಗಣೇಶನ ವಿಗ್ರಹವನ್ನು ತರಬೇಕು. ನಂತರ ಗಣಪತಿಗೆ ಪ್ರಿಯವಾದ ತೆಂಗಿನಕಾಯಿ ಲಡ್ಡು ಮತ್ತು ಮೋದಕವನ್ನು ಅರ್ಪಿಸಬೇಕು. ‘ಓಂ ಹ್ರೀಂ ಗ್ರೀಂ ಹರಿ’ ಮಂತ್ರವನ್ನು 108 ಬಾರಿ ಪಠಿಸದರೆ ವೃಷಭ ರಾಶಿಯವರಿಗೆ ಉಳಿತಾಗುತ್ತದೆ .

ಮಿಥುನ :  ಈ ರಾಶಿಯವರು ಗಣೇಶ ಚತುರ್ಥಿಯಂದು ತಿಳಿ ಹಸಿರು ಬಣ್ಣದ ಗಣೇಶನ ವಿಗ್ರಹವನ್ನು ಮನೆಗೆ ತಂದು ಪೂಜಿಸಬೇಕು. ಬಳಿಕ  ಗಣೇಶನಿಗೆ ಮೋದಕವನ್ನು ಅರ್ಪಿಸಬೇಕು.  ಗಣೇಶನಿಗೆ ಪ್ರತಿದಿನ ಹೆಸರು ಬೇಳೆಯ ಲಡ್ಡುಗಳನ್ನು ಅರ್ಪಿಸಿ ನಂತರ ಅದನ್ನು ಪ್ರಸಾದದ ರೂಪದಲ್ಲಿ ವಿತರಿಸಬೇಕು. ಈ ದಿನ  ಶ್ರೀ ಸುಕ್ತವನ್ನು ಪಠಿಸಬೇಕು ಮತ್್ತು 108 ಬಾರಿ ‘ಓಂ ಶ್ರೀ ಶ್ರೀಯಾಯ ನಮಃ’ ಮಂತ್ರವನ್ನು ಜಪಿಸಬೇಕು.

ಕಟಕ: ಈ ರಾಶಿಯವರು ಗಣೇಶ ಹಬ್ಬದಂದು ಬಿಳಿ ಬಣ್ಣದ ಗಣಪತಿ ವಿಗ್ರಹವನ್ನು ಪೂಜಿಸಬೇಕು. ಈ ದಿನ ನೀವು ಗಣೇಶನಿಗೆ ಮೋತಿಚೂರ್‌ ಲಡ್ಡುಗಳನ್ನು ಮತ್ತು ಮೋದಕವನ್ನು ಅರ್ಪಿಸಬೇಕು.  ಲಕ್ಷ್ಮಿ ಮತ್ತು ಗಣೇಶ ಇಬ್ಬರನ್ನು ಪೂಜಿಸುವುದು ಅತ್ಯಂತ ಶುಭದಾಯಕ. ನಂತರ ‘ಓಂ ಏಕಾದಂತಾಯ’ ಮಂತ್ರವನ್ನು 108 ಬಾರಿ ಪಠಿಸಿ.

ಸಿಂಹ : ಈ ರಾಶಿಯವರು ಶಕ್ತಿ ವಿನಾಯಕ ಗಣೇಶನನ್ನು ಪೂಜಿಸಬೇಕು. ಕಲ್ಲು ಸಕ್ಕರೆಯಿಂದ ತಯಾರಿಸಿದ ಲಡ್ಡುಗಳನ್ನು  ಗಣೇಶನಿಗೆ ಅರ್ಪಿಸಿ. ‘ಶಕ್ತಿವಿನಾಯಕ ಗಣೇಶ ಗಣೇಶ ಓಂ ಏಕಾದಂತಾಯ ನಮಃ’ ಮಂತ್ರವನ್ನು 108 ಬಾರಿ ಜಪಿಸಬೇಕು.  ಸಾಧ್ಯವಾದರೆ ಸ್ವಲ್ಪ ಗೋಧಿಯನ್ನು ಅಗತ್ಯವಿರುವ ಭಕ್ತರಿಗೆ ನೀಡಬೇಕು.

ಕನ್ಯಾ: ಈ ರಾಶಿಯವರು ಗಣೇಶ ಹಬ್ಬದಂದು ಹರಿದ್ರಾ ಗಣೇಶನನ್ನು ಪೂಜಿಸಿ, ವಿವಿಧ ಬಗೆಯ ಹಣ್ಣುಗಳನ್ನು, ಕಿತ್ತಳೆ ಬಣ್ಣದ ಲಡ್ಡುಗಳನ್ನು ಹಾಗೂ ಪಾಯಸವನ್ನು ಅರ್ಪಿಸಬೇಕು. ಗಣೇಶನಿಗೆ ಪಾಯಸವನ್ನು ಅರ್ಪಿಸಿದ ನಂತರ ಅದನ್ನು ಪ್ರಸಾದದ ರೂಪದಲ್ಲಿ ಮೊದಲು ಮನೆಯ ಹಿರಿಯ ವ್ಯಕ್ತಿಗೆ ನೀಡಬೇಕು.

ತುಲಾ :  ಗಣೇಶ ಚತುರ್ಥಿಯಂದು ಬಿಳಿ ಬಣ್ಣದ ಗಣೇಶನನ್ನು ಅಥವಾ ತನ್ನ ಕೈಗಳಿಂದ ಶುಭ ಹಾರೈಸುತ್ತಿರುವ ಗಣೇಶನ ವಿಗ್ರಹವನ್ನು ಪೂಜಿಸಬೇಕು. ಮತ್ತು  ಲಡ್ಡು ಅರ್ಪಿಸಬೇಕು. ‘ವಶಮಾನಯ ಸ್ವಾಹಾ’ ಮಂತ್ರವನ್ನನು 108 ಬಾರಿ ಪಠಿಸಿ ಪೂಜೆಯ ನಂತರ ಹಸಿರು ಹುಲ್ಲನ್ನು ಹಸುವಿಗೆ ನೀಡಬೇಕು.

ವೃಶ್ಚಿಕ : ಈ ರಾಶಿಯವರು ಕಡು ಕೆಂಪು ಬಣ್ಣದ ಗಣಪತಿಯ ವಿಗ್ರಹವನ್ನು ಅಥವಾ ಲಂಬೋದರ ಗಣೇಶನ ವಿಗ್ರಹವನ್ನು ಪೂಜಿಸಬೇಕು. ಗಣೇಶನಿಗೆ ಈ ದಿನ ಒಣದ್ರಾಕ್ಷಿ ಮತ್ತು ಎಳ್ಳಿನಿಂದ ತಯಾರಿಸಿದ ಲಡ್ಡುಗಳನ್ನು, ಮೋದಕವನ್ನು ಅರ್ಪಿಸಬೇಕು. ಬಡ ಮಕ್ಕಳಿಗೆ ಪುಸ್ತಕ ಮತ್ತು ಪೆನ್ಸಿಲ್‌ ಸೇರಿದಂತೆ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಇನ್ನಿತರ ವಸ್ತುಗಳನ್ನು ದಾನ ಮಾಡಬೇಕು.

ಧನು : ಈ ರಾಶಿಯವರು ಗಣೇಶ ಹಬ್ಬದಂದು ಹಳದಿ ಬಣ್ಣದ ಗಣೇಶನನ್ನು ಹಳದಿ ಬಣ್ಣದ ಹೂವುಗಳಿಂದ ಪೂಜಿಸಬೇಕು. ಅಥವಾ ವಿನಾಶಕ ರೂಪದ ಗಣೇಶನನ್ನು ಪೂಜಿಸಬೇಕು. ಹೆಸರು ಬೇಳೆ ಲಡ್ಡುಗಳನ್ನು ಗಣೇಶನಿಗೆ ಅರ್ಪಿಸಿ.

ಮಕರ : ಈ ರಾಶಿಯವರು ಗಣೇಶ ಹಬ್ಬಬ ಈ ದಿನ  ತಿಳಿ ನೀಲಿ ಬಣ್ಣದ ಗಣೇಶನನ್ನು ಪೂಜಿಸಬೇಕು.  ಉಮಾಪುತ್ರಾಯ ಗಣೇಶ ರೂಪವನ್ನು ಪೂಜಿಸಬೇಕು.  ಮೋದಕವನ್ನು ಅಥವಾ ಬೇಸನ್‌ ಲಡ್ಡುಗಳನ್ನು ಅರ್ಪಿಸಬೇಕು. 108 ಬಾರಿ ‘ಓಂ ವಿಕಟಾಯ ನಮಃ’ ಮಂತ್ರವನ್ನು ಜಪಿಸಬೇಕು.

ಕುಂಭ : ಈ ರಾಶಿಯವರು  ಕಡು ನೀಲಿ ಗಣಪತಿಯ ವಿಗ್ರಹವನ್ನು ಪೂಜಿಸಬೇಕು. ಅಥವಾ ಸರ್ವೇಶ್ವರಾಯ ರೂಪದ ಗಣೇಶನ ವಿಗ್ರಹವನ್ನು ಪೂಜಿಸಬೇಕು.  ಎಳ್ಳುಂಡೆಯನ್ನು ಗಣೇಶನಿಗೆ ಅರ್ಪಿಸಿ,  ಪ್ರಸಾದವಾಗಿ ವಿತರಿಸಬೇಕು. 108 ಬಾರಿ ‘ಓಂ ಸರ್ವೇಶ್ವರಾಯ ನಮಃ’ ಮಂತ್ರವನ್ನು ಪಠಿಸಬೇಕು.

ಮೀನ :  ಹರಿದ್ರಾ ಗಣೇಶನ ವಿಗ್ರಹವನ್ನು ಅಥವಾ ಹಳದಿ ಬಣ್ಣದ ಗಣಪತಿ ವಿಗ್ರಹವನ್ನು ಪೂಜಿಸಬೇಕು. ಕೆಂಪು ಬಣ್ಣದ ಹೂವುಗಳಿಂದ ಗಣೇಶನನ್ನು ಪೂಜಿಸಿ, ಮೋದಕವನ್ನು ಅರ್ಪಿಸಬೇಕು. ಅದನ್ನು ಪ್ರಸಾದವಾಗಿ ಮಕ್ಕಳಿಗೆ ನೀಡಬೇಕು.

Share post:

Subscribe

spot_imgspot_img

Popular

More like this
Related

ಬಿಎಂಟಿಸಿ ಚಾಲಕನ ಯಡವಟ್ಟು: 9 ವಾಹನಗಳಿಗೆ ಡಿಕ್ಕಿ

ಬಿಎಂಟಿಸಿ ಚಾಲಕನ ಯಡವಟ್ಟು: 9 ವಾಹನಗಳಿಗೆ ಡಿಕ್ಕಿ ಬೆಂಗಳೂರು: ಬೆಂಗಳೂರಿನಲ್ಲಿ ಬಿಎಂಟಿಸಿ ಚಾಲಕನ...

9 ವರ್ಷದ ಬಾಲಕಿ ಮೇಲೆ ಹರಿದ ಬಸ್: ಬಿಎಂಟಿಸಿ ಬಸ್ಗೆ ಮತ್ತೊಂದು ಬಲಿ

9 ವರ್ಷದ ಬಾಲಕಿ ಮೇಲೆ ಹರಿದ ಬಸ್: ಬಿಎಂಟಿಸಿ ಬಸ್ಗೆ ಮತ್ತೊಂದು...

ವ್ಯಾಪಕ ಮಳೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡುತ್ತಿದ್ದಾರೆ: ಡಿ.ಕೆ.ಶಿವಕುಮಾರ್

ವ್ಯಾಪಕ ಮಳೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡುತ್ತಿದ್ದಾರೆ: ಡಿ.ಕೆ.ಶಿವಕುಮಾರ್ ಬೆಂಗಳೂರು: ರಸ್ತೆ...

ಮಧುಮೇಹಿಗಳಿಗೆ ಲವಂಗದ ನೀರು ವರದಾನ

ಮಧುಮೇಹಿಗಳಿಗೆ ಲವಂಗದ ನೀರು ವರದಾನ: ಬೆಳಿಗ್ಗೆ ಈ ನೀರು ಕುಡಿಯುವುದರಿಂದ ಬ್ಲಡ್...