ಕಾರ್ ರೇಸಿಂಗ್ ನಲ್ಲಿ ಮಿಂಚುತ್ತಿರುವ ಚೆಲುವೆ ಲೈಫ್ ಕಹಾನಿ ..!

Date:

ರೇಸ್ ಕಾರುಗಳನ್ನು ಓಡಿಸುವುದನ್ನು ನೋಡುವಾಗಲೇ ಮೈ ಜುಂ ಅನ್ನುತ್ತೆ. ಇನ್ನು ಆ ಕಾರುಗಳನ್ನು ಓಡಿಸುವ ಡ್ರೈವರ್ಗಳು ಎಷ್ಟು ಕಾರ್ಯಕ್ಷಮತೆ ಹೊಂದಿರಬೇಕು ಅನ್ನುವುದನ್ನು ನೀವೇ ಯೋಚಿಸಿ. ಬಹು ಕಠಿಣವಾದ ಕಾರ್ ರೇಸಿಂಗ್ನಲ್ಲಿ ಪುರುಷರದ್ದೇ ಮೇಲುಗೈ. ಆದ್ರೆ ವಡೋದರಾದ ಮಿರಾ ಇರ್ಧಾ ಎಲ್ಲಾ ಮಹಿಳೆಯರಿಗೆ ಸ್ಪೂರ್ತಿಯಾಗಬಲ್ಲ ಸಾಧನೆ ಮಾಡಿದ್ದಾಳೆ.
9ನೇ ವರ್ಷದಲ್ಲಿ ರೇಸ್ ಕಡೆಗೆ ಆಕರ್ಷಿತರಾಗಿದ್ದ ಮಿರಾ ಇರ್ಧಾ ಈಗ 17ನೇ ವರ್ಷದಲ್ಲಿ ಹೊಸ ದಾಖಲೆ ಮಾಡಿದ್ದರು. ಸಖತ್ ಟಫ್ ಕಾಂಪಿಟೇಷನ್ ಇರುವ “ಯುರೋ ಜೆ.ಕೆ. ಸಿರೀಸ್ ರೇಸ್”ನಲ್ಲಿ ಪಾಲ್ಗೊಳ್ಳಲು ಅರ್ಹತೆ ಪಡೆದಿದ್ದರು.

ಮಿರಾ ಇಲ್ಲಿ ತನಕ ಸುಮಾರು 75 ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ರೇಸ್ಗಳಲ್ಲಿ ಪಾಲ್ಗೊಂಡಿದ್ದಾರೆ. “ಯುರೋ ಜೆ.ಕೆ. ಸಿರೀಸ್ ರೇಸ್”ಗೆ ಆಯ್ಕೆಯಾಗಿ, ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳಾ ಡ್ರೈವರ್ ಅನ್ನುವ ಖ್ಯಾತಿಗೆ ಪಾತ್ರರಾಗಿದ್ದಾರೆ.
9ನೇ ವರ್ಷದಲ್ಲೇ ಮಿರಾ ರೇಸಿಂಗ್ ಕಡೆಗೆ ವಾಲಿಬಿಟ್ಟಿದ್ದರು. ಆರಂಭದಲ್ಲಿ ನ್ಯಾಷನಲ್ ಕಾರ್ಟಿಂಗ್ ಮೂಲಕ ರೇಸಿಂಗ್ ಕ್ಷೇತ್ರಕ್ಕೆ ಎಂಟ್ರಿಕೊಟ್ರು. ವಡೋದರಾದಲ್ಲಿ ಮಿರಾ ತಂದೆ ರೇಸಿಂಗ್ ಟ್ರ್ಯಾಕ್ ಒಂದರ ಮಾಲೀಕರಾಗಿರುವುದರಿಂದ ಮಿರಾಗೆ ಅಭ್ಯಾಸ ನಡೆಸಲು ಸುಲಭವಾಗಿತ್ತು.
ಪುಣೆಯಲ್ಲಿ ನಡೆಯುತ್ತಿದ್ದ ಕಾರ್ಟಿಂಗ್ ರೇಸ್ ವೇಳೆ ಮಿರಾ ಅದ್ರಲ್ಲಿ ಪಾಲ್ಗೊಳ್ಳಲು ನಿರ್ಧಾರ ಮಾಡಿದರು. ಆರಂಭದಲ್ಲಿ ತಮಾಷೆಗಾಗಿ ಆರಂಭಿಸಿದ ಕಾರ್ಟಿಂಗ್ ರೇಸ್ ನಿಧಾನವಾಗಿ ಮಿರಾಗೆ ಇಷ್ಟವಾಯಿತು. ಅಷ್ಟೇ ಅಲ್ಲ ತನ್ನ ರೇಸಿಂಗ್ ಜೀವನದ ಮೊದಲ ಹೆಜ್ಜೆಯಾಗಿ ಬದಲಾಯಿತು.


2016ರಲ್ಲಿ ಮಿರಾ ಕೊಲ್ಹಾಪುರ, ಹೈದ್ರಬಾದ್ ಮತ್ತು ಕೊಯಂಬತ್ತೂರ್ ಗಳಲ್ಲಿ ನಡೆದ ಐದು ಸುತ್ತುಗಳ ಜೆ.ಕೆ. ಟೈರ್ ನ್ಯಾಷನಲ್ ರೊಟಕ್ಸ್ ಮ್ಯಾಕ್ಸ್ ಚಾಂಪಿಯನ್ಶಿಪ್ ನಲ್ಲಿ ಪಾಲ್ಗೊಂಡರು. ಇದರಲ್ಲಿ ಮಿರಾ ಉತ್ತಮ ಸಾಧನೆ ಮಾಡಿದ್ರು. ಈ ಹಂತದಲ್ಲಿ ಮಿರಾ ಕಾರ್ಟಿಂಗ್ ನಿಂದ ಫಾರ್ಮುಲಾ ರೇಸಿಂಗ್ ಕಡೆಗೆ ಮನಸ್ಸು ಮಾಡಿದ್ದರು.
“ಯುರೋ ಜೆ.ಕೆ. ಸಿರೀಸ್ ರೇಸ್” ಜೆ.ಕೆ. ಟೈಯರ್ಸ್ ರೇಸಿಂಗ್ಗಳ ಪೈಕಿ ಅತಿ ಪ್ರತಿಷ್ಠಿತ ರೇಸ್ ಆಗಿದೆ. 0.2 ಸಿರೀಸ್ ನ ಕಾರುಗಳ ಜೊತೆ 1.2 ಲೀಟರ್ ಬೈಕ್ ಎಂಜಿನ್ಗಳನ್ನು ಹೊಂದಿದ ಕಾರುಗಳು ಈ ರೇಸ್ನಲ್ಲಿರಲಿವೆ. ಈ ರೇಸಿಂಗ್ನಲ್ಲಿ ಪಾಲ್ಗೊಳ್ಳುವ ಕಾರುಗಳ ಗರಿಷ್ಟ ವೇಗ 240 ಕಿಲೋಮೀಟರ್ಗಳಾಗಿರಲಿದೆ. ಈ ಹಿಂದೆ ಈ ರೇಸ್ಗೆ “ಜೆ.ಕೆ. ರೇಸಿಂಗ್ ಏಷ್ಯಾ ಸಿರೀಸ್” ಅನ್ನುವ ಹೆಸರಿತ್ತು.
ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಚಾಂಪಿಯನ್ ಶಿಪ್, ರ್ಯಾಲಿಗಳು ಸೇರಿದಂತೆ ಇಂಟರ್ ನ್ಯಾಷನಲ್ ಕಾರ್ಟಿಂಗ್ ಕಾಂಪಿಟೇಷನ್ ನಲ್ಲೂ ಪಾಲ್ಗೊಳ್ಳಲು ನಿರ್ಧರಿಸಿದ್ದಾರೆ.


ರೇಸಿಂಗ್ನಲ್ಲಿ ಅದ್ಭುತ ಸಾಧನೆ ಮಾಡಿರುವ ಮಿರಾ ಓದಿನಲ್ಲೂ ಹಿಂದೆ ಬಿದ್ದಿಲ್ಲ. ರೇಸಿಂಗ್ ಟ್ರ್ಯಾಕ್ಗೆ ಪುಸ್ತಕಗಳನ್ನು ತೆಗೆದುಕೊಂಡು ಹೋಗಿ ಕಲಿಕಾ ಅಭ್ಯಾಸ ಮಾಡಿಕೊಳ್ಳುತ್ತಿದ್ದಾರೆ. ಕಲಿಕೆಯಲ್ಲೂ ಉತ್ತಮ ಅಂಕಗಳನ್ನು ಪಡೆದುಕೊಂಡಿರುವ ಮಿರಾಗೆ ಶಾಲೆಯ ಕಡೆಯಿಂದಲೂ ಉತ್ತಮ ಪ್ರೋತ್ಸಾಹ ಸಿಗುತ್ತಿದೆ. ಆದ್ರೆ ಮಿರಾ ಗೆಳತಿಯರ ಜೊತೆ ಸುತ್ತಾಡುವ ಅವಕಾಶವನ್ನು ಕಳೆದುಕೊಂಡ ಬೇಸರದಲ್ಲಿದ್ದಾರೆ.
ಫಾರ್ಮುಲಾ ರೇಸ್ ಕಡೆಗೆ ಗಮನ ಇಟ್ಟಿರುವ ಮಿರಾ ಮುಂದಿನ ದಿನಗಳಲ್ಲಿ ರೇಸಿಂಗ್ ನಲ್ಲಿ ಸಾಕಷ್ಟು ಉತ್ತಮ ಸಾಧನೆಗಳನ್ನು ಮಾಡುವ ಕನಸು ಕಾಣುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಉತ್ತಮ ಸಾಧನೆ ಮಾಡಿರುವ ಮಿರಾ ಭವಿಷ್ಯದಲ್ಲಿ ಉತ್ತಮ ರೇಸ್ ಆಗುವ ಎಲ್ಲಾ ಅರ್ಹತೆಗಳನ್ನು ಹೊಂದಿದ್ದಾರೆ.

Share post:

Subscribe

spot_imgspot_img

Popular

More like this
Related

ಬಿಎಂಟಿಸಿ ಚಾಲಕನ ಯಡವಟ್ಟು: 9 ವಾಹನಗಳಿಗೆ ಡಿಕ್ಕಿ

ಬಿಎಂಟಿಸಿ ಚಾಲಕನ ಯಡವಟ್ಟು: 9 ವಾಹನಗಳಿಗೆ ಡಿಕ್ಕಿ ಬೆಂಗಳೂರು: ಬೆಂಗಳೂರಿನಲ್ಲಿ ಬಿಎಂಟಿಸಿ ಚಾಲಕನ...

9 ವರ್ಷದ ಬಾಲಕಿ ಮೇಲೆ ಹರಿದ ಬಸ್: ಬಿಎಂಟಿಸಿ ಬಸ್ಗೆ ಮತ್ತೊಂದು ಬಲಿ

9 ವರ್ಷದ ಬಾಲಕಿ ಮೇಲೆ ಹರಿದ ಬಸ್: ಬಿಎಂಟಿಸಿ ಬಸ್ಗೆ ಮತ್ತೊಂದು...

ವ್ಯಾಪಕ ಮಳೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡುತ್ತಿದ್ದಾರೆ: ಡಿ.ಕೆ.ಶಿವಕುಮಾರ್

ವ್ಯಾಪಕ ಮಳೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡುತ್ತಿದ್ದಾರೆ: ಡಿ.ಕೆ.ಶಿವಕುಮಾರ್ ಬೆಂಗಳೂರು: ರಸ್ತೆ...

ಮಧುಮೇಹಿಗಳಿಗೆ ಲವಂಗದ ನೀರು ವರದಾನ

ಮಧುಮೇಹಿಗಳಿಗೆ ಲವಂಗದ ನೀರು ವರದಾನ: ಬೆಳಿಗ್ಗೆ ಈ ನೀರು ಕುಡಿಯುವುದರಿಂದ ಬ್ಲಡ್...