ಅವರಿವರು ಅಂತಲ್ಲ. ಪ್ರತಿಯೊಬ್ಬರಲ್ಲೂ ಧನಾತ್ಮಕ ಮತ್ತು ಋಣಾತ್ಮಕ ಗುಣಗಳು ಇರುತ್ತವೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ನಂಬಲಾಗಿರುವಂತೆ ರಾಶಿಗೂ ಮತ್ತು ಗುಣಕ್ಕೂ ಸಂಬಂಧವಿದೆ. ಇಲ್ಲಿ ಎಲ್ಲಾ ರಾಶಿ ಜನರ ಎರಡು ಮುಖಗಳ ದರ್ಶನ ಮಾಡಲಾಗಿದೆ.
ಮೇಷ : ಈ ರಾಶಿಯವರು ಭಾವೋದ್ರಿಕ್ತ ಸ್ವಭಾವದವರು. ಇವರಿದ್ದ ಜಾಗದಲ್ಲಿ ಸಂತೋಷ ಮನೆಮಾಡುತ್ತದೆ. ಇವರಲ್ಲಿ ಹೆಚ್ಚಿನ ಆತ್ಮವಿಶ್ವಾಸ ಇರುತ್ತದೆ. ಸವಾಲುಗಳಿಂದ ದೂರ ಸರಿಯದ ಜಾಯಮಾನ ಇವರದ್ದು.
ಈ ರಾಶಿಯವರ ಇನ್ನೊಂದು ಮುಖ ನೋಡುವುದಾದರೆ, ಅಂದರೆ ಇವರ ನಕಾರಾತ್ಮಕ ಗುಣಗಳನ್ನು ತಿಳಿಯುವುದಾದರೆ ಸಿಟ್ಟು, ಆಕ್ರಮಣಶೀಲತೆ, ಮೂಡಿ.ತಮ್ಮಂತೆ ಇತರರೂ ಕಷ್ಟ ಅನುಭವಿಸಲು ಎನ್ನುವಂತಹವರು.
ವೃಷಭ: ವೃತ್ತಿ ಜೀವನದಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಸಿಕ್ಕಾಪಟ್ಟೆ ಕಷ್ಟಪಟ್ಟು ಕೆಲಸ ಮಾಡ್ತಾರೆ. ಪ್ರೀತಿಪಾತ್ರರಿಗೆ ಹೆಚ್ಚಿನ ಸಮಯವನ್ನು ನೀಡ್ತಾರೆ. ಪ್ರೀತಿಗೆ ನಿಷ್ಠಾವಂತರಾಗಿರ್ತಾರೆ. ಯೋಗ್ಯರು ಮತ್ತು ವಿಶ್ವಾಸಾರ್ಹರು.
ಇವರ ಋಣಾತ್ಮಕ ಗುಣಗಳನ್ನು ನೋಡುವುದಾದರೆ ಮೊಂಡುತನದವರು. ಸುಲಭದಲ್ಲಿ ರಾಜಿ ಆಗದವರು. ಸ್ವಾರ್ಥಿಗಳು.
ಮಿಥುನ : ಸಾಹಸ ಕೆಲಸಗಳಿಗೆ ಮುಂದಾಗುವವರು. ಸ್ನೇಹಜೀವಿಗಳು, ತೆರೆದ ಮನಸ್ಸಿನವರು.
ಇವರ ಇನ್ನೊಂದು ಮುಖ ನೋಡುವುದಾದರೆ, ಇವರು ಸದಾ ವಿಶ್ರಾಂತಿ ಇಷ್ಟಪಡೋರು. ದ್ವಿಮುಖ ವ್ಯಕ್ತಿತ್ವ ಇವರದ್ದು.
ಕರ್ಕ : ಜನರೊಡನೆ ಬೆರೆಯುವುದು, ಕಾಳಜಿ ತೋರುವುದು, ಭಾವಪರವಶತೆ, ನಿಷ್ಠತೆ, ಸೃಜನಶೀಲತೆ , ಕೇಳಿಸಿಕೊಳ್ಳುವಿಕೆ ಇವರ ಪಾಸಿಟೀವ್ ಗುಣ.
ಇವರು ನೆಗಿಟೀವ್ ಅಂಶಗಳೆಂದರೆ ಕೆಟ್ಟವರ ಸಂಘ ಮಾಡೋದು. ಆತಂಕ ಹಾಗೂ ಖಿನ್ನತೆ.
ಸಿಂಹ : ಹುಟ್ಟಿನಿಂದಲೇ ನಾಯತ್ವ ಗುಣ ಮೈಗೂಡಿಸಿಕೊಂಡವರು. ಯಾವುದೇ ಕೆಲಸದಲ್ಲಿಯೂ ನಿಪುಣರು. ಹಾಸ್ಯಪ್ರವೃತ್ತಿ ಉಳ್ಳವರು ಹಾಗೂ ಬುದ್ಧಿವಂತರು.
ಇವರ ಋಣಾತ್ಮಕ ಅಂಶಗಳನ್ನು ನೋಡುವುದಾದರೆ, ಸ್ವಾರ್ಥಿಗಳು ,ತಮ್ಮ ಬಗ್ಗೆ ತಾವೇ ಅತಿಯಾದ ಹೆಮ್ಮೆಪಡುವವರು ,ನಾಟಕೀಯ ಪ್ರವೃತ್ತಿ ಉಳ್ಳವರು.
ಕನ್ಯಾ : ಭಾವನಾತ್ಮಕ ವ್ಯಕ್ತಿಗಳು, ಎಲ್ಲಾ ವಿಷಯಗಳನ್ನು ಕ್ರಮಬದ್ಧವಾದ , ವಿಶ್ಲೇಷಣಾತ್ಮಕವಾದ ಮತ್ತು ತಾರ್ಕಿಕ ರೀತಿಯಲ್ಲಿ ನೋಡುತ್ತಾರೆ.
ಇವರ ಋಣಾತ್ಮಕ ಅಂಶ ಹೆಚ್ಚು ವಿಶ್ಲೇಷಿಸೋದು, ಎಲ್ಲವನ್ನೂ ಗಂಭೀರವಾಗಿ ತೆಗೆದುಕೊಳ್ಳೋದು.
ತುಲಾ : ಇವರು ಗೌರವ ಮತ್ತು ದಯೆಯ ಸ್ವಭಾವದಿಂದ ಕೂಡಿರುತ್ತಾರೆ. ಶಾಂತಿ ಪ್ರಿಯರು. ಮಾನವೀಯತೆ ಇವರ ದೊಡ್ಡ ಗುಣ.
ಇವರ ಇನ್ನೊಂದು ಮುಖದ ಬಗ್ಗೆ ಹೇಳುವುದಾದರೆ ಜೀವನದಲ್ಲಿ ಕೆಲವೊಂದು ಅವಶ್ಯಕತೆಗಳನ್ನು ನಿರ್ಲಕ್ಷಿಸುತ್ತಾರೆ. ಇದರಿಂದ ಇವರು ನಷ್ಟ ಅನುಭವಿಸುವುದಲ್ಲದೆ , ಆಪ್ತರಿಗೂ ಕಷ್ಟ ತಂದೊಡುತ್ತಾರೆ.
ವೃಶ್ಚಿಕ : ಚುರುಕು ಬುದ್ಧಿಯವರು, ಹಾಸ್ಯ ಸ್ವಭಾವದವರು , ಭಾವನಾತ್ಮಕ ಜೀವಿಗಳು ಎನ್ನೋದು ಇವರ ಪ್ಲಸ್ ಪಾಯಿಂಟ್.
ಮೈನಸ್ ಪಾಯಿಂಟ್ಸ್ ಅಂದರೆ, ಪ್ರತಿಕಾರ , ಸೇಡಿನ ಗುಣ. ಸನ್ನಿವೇಶ ದುರ್ಬಳಕೆ, ದ್ವೇಷ , ಹಗೆತನ.
ಧನು : ಆಶಾವಾದಿಗಳು, ಸಾಹಸ ಪ್ರಿಯರು, ವಿನೋಧ ಹಾಗೂ ಸ್ಪೂರ್ತಿದಾಯಕ ವ್ಯಕ್ತಿತ್ವ ಇವರದ್ದು.
ಇವರ ಮತ್ತೊಂದು ಮುಖ, ಗುರಿಯಿಲ್ಲದವರು, ಇದೇ ಕಾರಣಕ್ಕೆ ಬೇಸರ ಅನುಭವಿಸುತ್ತಾರೆ.
ಮಕರ : ಕಠಿಣ ಕೆಲಸಗಾರರು, ಸಂಪತ್ತು, ಯಶಸ್ಸುಗಳಿಸುತ್ತಾರೆ. ಬುದ್ಧಿವಂತರು ಎನ್ನುವುದು ಇವರ ಧನಾತ್ಮಕಗುಣವಾದರೆ , ಮೊಂಡುತನ, ರಾಜಿಯಾಗದ ಗುಣ, ಅಸಹನೆ, ಬೇಗ ಸಿಟ್ಟಾಗೋದು ಇವರ ಋಣಾತ್ಮಕ ಗುಣ.
ಕುಂಭ : ಇವರು ಇತರೆ ಎಲ್ಲಾ ರಾಶಿ ಅವರಿಗಿಂತ ಹೆಚ್ಚು ಆಸಕ್ತಿಯುಳ್ಳು ಗುಣದವರು. ಪ್ರಯಾಣ ಮಾಡೋದು, ಹೊಸಬರನ್ನು ಭೇಟಿ ಆಗೋದು, ಬುದ್ಧಿಗೆ ಸವಾಲಾಗುವ ಕೆಲಸ ಇಷ್ಟಪಡೋರು ಆಗಿರುತ್ತಾರೆ. ವೈವಿದ್ಯಮಯ ಆಸಕ್ತಿ ಹೊಂದಿರುವವರಾಗಿದ್ದಾರೆ. ಮಹಾನ್ ನಾಯಕರಾಗುವ ಗುಣ ಇವರಲ್ಲಿದೆ.
ಇವರ ಇನ್ನೊಂದು ಮುಖದ ಬಗ್ಗೆ ಹೇಳುವುದಾದರೆ ಕೆಲವೊಮ್ಮೆ ಏಕಾಂಗಿಯಾಗಿರಲು ಬಯಸ್ತಾರೆ. ಎಲ್ಲಾ ವಿಷಯಗಳನ್ನು ಪ್ರಾಯೋಗಿಕವಾಗಿ ನೋಡುತ್ತಾರೆ. ಇದು ತಪ್ಪಲ್ಲ, ಆದರೆ ತಮ್ಮ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾಗದೇ ಇದ್ದಲ್ಲಿ ಕಷ್ಟ ಆಗುತ್ತೆ.
ಮೀನ: ಸಹಾನೂಭೂತಿ, ಭಾವನಾತ್ಮಕ ತೆ ,ಸ್ನೇಹಮಯ ವ್ಯಕ್ತಿತ್ವ ಇವರದ್ದು. ಪ್ರೀತಿಪಾತ್ರರಿಗಾಗಿ ಏನು ಬೇಕಾದರೂ ಮಾಡಬಲ್ಲವರು.
ಇವರ ಇನ್ನೊಂದು ಮುಖದ ಬಗ್ಗೆ ನೋಡುವುದಾದರೆ, ಒಂಟಿಯಾಗಿರಲು ಬಯಸುವುದು ಹಾಗೂ ವಾಸ್ತವದಲ್ಲಿ ವ್ಯವಹರಿಸುವುದಕ್ಕೆ ಕಷ್ಟಪಡೋರು ಆಗಿರ್ತಾರೆ.