ಹಸಿರುಕ್ರಾಂತಿಯ ಹರಿಕಾರ ಸ್ವಾಮಿನಾಥನ್ ಬಗ್ಗೆ ನಿಮ್ಗೆ ಗೊತ್ತಿಲ್ಲದ ವಿಷಯಗಳು..!

Date:

ಅವರು ಭಾರತದ ಹಸಿರು ಕ್ರಾಂತಿಯ ಪಿತಾಮಹ ಎಂದೇ ಪ್ರಖ್ಯಾತರು. ನಿಮಗೆ ಈಗಾಗಲೇ ಅವರು ಯಾರು ಎನ್ನುವುದು ಗೊತ್ತಾಗಿರಬೇಕು. ಅವರೇ ಮೊಂಕೊಂಬು ಸಾಂಬಶೀವನ್ ಸ್ವಾಮಿನಾಥನ್ ಅವರು. ಭಾರತದ ಹಸಿರು ಕ್ರಾಂತಿಯ ಹರಿಕಾರರಾದ ಎಂ.ಎಸ್. ಸ್ವಾಮಿನಾಥನ್ ದೇಶದ ಪ್ರಖ್ಯಾತ ಕೃಷಿ ತಳಿ ಶಾಸ್ತ್ರಜ್ಞರಾಗಿಯೂ ಜನಪ್ರಿಯರಾಗಿದ್ದಾರೆ.

ದೇಶದಲ್ಲಿ ಹತ್ತಿ ಮತ್ತು ಭತ್ತದ ಕೃಷಿಯಲ್ಲಿ ಕ್ರಾಂತಿ ತಂದ ಖ್ಯಾತಿ ಡಾ. ಎಂ.ಎಸ್. ಸ್ವಾಮಿನಾಥನ್ ಅವರದು. ಸುಸ್ಧಿರ ಕೃಷಿ, ಸುಸ್ಥಿರ ಆಹಾರ ಭದ್ರತೆ ಮತ್ತು ಜೀವ ವೈವಿಧ್ಯತೆಯಿಂದ ಸುಸ್ಥಿರ ಅಭಿವೃದ್ಧಿ ಸಾಧಿಸಬಹುದು ಎಂದು ನಂಬಿದ್ದರು. ಅಲ್ಲದೇ ಇದನ್ನು ಅವರು ನಿತ್ಯ ಹರಿದ್ವರ್ಣ ಕ್ರಾಂತಿ ಎಂದು ಕರೆದರು. ದೇಶದಲ್ಲಿ ಆಧುನಿಕ ಕೃಷಿಗೆ ಮುನ್ನಡಿ ಕೂಡ ಬರೆದಿದ್ದಾರೆ.
ಕೃಷಿ ತಜ್ಞರಾದ ಎಂ.ಎಸ್. ಸ್ವಾಮಿನಾಥನ್ ಅವರು ಹುಟ್ಟಿದ್ದು 1925ರಲ್ಲಿ, ತಮಿಳುನಾಡಿನ ಕುಂಭಕೋಣಂನಲ್ಲಿ. ಅವರ ತಂದೆ ಎಂ.ಕೆ. ಸಾಂಬಶಿವನ್ ಮತ್ತು ತಾಯಿ ಪಾರ್ವತಿ ತಂಗಮ್ಮಳ್ ಸಾಂಬಶಿವನ್. ಇವರ ತಂದೆ ಶಸ್ತ್ರಚಿಕಿತ್ಸರಾಗಿದ್ದರಲ್ಲದೆ ಮಹಾತ್ಮಗಾಂಧಿಯವರ ಕಟ್ಟಾ ಅನುಯಾಯಿಯಾಗಿದ್ದರು. ಅಸಾಧ್ಯ ಎಂಬ ಶಬ್ಧ ನಮ್ಮ ನಿಘಂಟುವಿನಲ್ಲಿ ಇರಲೇಬಾರದು ಎನ್ನುತ್ತಿದ್ದ ಅವರು ಆ ಕಾಲದಲ್ಲೇ ಸ್ವದೇಶಿ ವಸ್ತು ಬಳಸಿ, ವಿದೇಶಿ ವಸ್ತ್ರನಾಶಗೊಳಿಸಿ ಆಂದೋಲನದಲ್ಲಿ ಪಾಲ್ಗೊಳ್ಳುವ ಮೂಲಕ ಸ್ವದೇಶಿ ಆಂದೋಲನಕ್ಕೆ ಬೆಂಬಲ ನೀಡಿದ್ದರು.


ಅವರು ನಿಧನರಾದಾಗ ಸ್ವಾಮಿನಾಥನ್ ಅವರಿಗೆ ಕೇವಲ 11 ವರ್ಷ. ಅವರ ಚಿಕ್ಕಪ್ಪ ಮತ್ತು ರೇಡಿಯಾಲಜಿಸ್ಟ್ ಆಗಿದ್ದ ಎಂ.ಕೆ. ನಾರಾಯಣಸ್ವಾಮಿ ಅವರ ಮಾರ್ಗದರ್ಶನದಲ್ಲಿ ಪ್ರಾಣಿಶಾಸ್ತ್ರ ಪಡೆದರು. 1943ರಲ್ಲಿ ಕೇರಳ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿ ಅಕ್ಕಿ ಕೊರತೆಯಿಂದಾಗಿ ಬಂಗಾಳದಲ್ಲಿ ಮೂರು ಲಕ್ಷಕ್ಕಿಂತಲೂ ಅಧಿಕ ಜನ ಸಾವನ್ನಪ್ಪಿದ್ದರು. ಈ ಪೈಕಿ ಚಿಕ್ಕ ವಯಸ್ಸಿನವರೇ ಅಧಿಕ ಸಂಖ್ಯೆಯಲ್ಲಿದ್ದರು. ಅಂದೇ ಕೃಷಿ ಕ್ಷೇತ್ರದಲ್ಲೇ ಏನಾದರೂ ಸಾಧನೆ ಮಾಡಿ ಭಾರತದ ಬಡತನ ನಿರ್ಮೂಲನೆ ಮಾಡಲು ನಿರ್ಧರಿಸಿದ ಅವರು ಮದ್ರಾಸ್ ವಿಶ್ವವಿದ್ಯಾಲಯದಿಂದ ಕೃಷಿ ವಿಜ್ಞಾನದಲ್ಲಿ ಪದವಿ ಪಡೆದರು.
ಹಸಿರು ಕ್ರಾಂತಿ ಆಹಾರ ಧಾನ್ಯಗಳನ್ನು ಆಮದು ಮಾಡಿಕೊಳ್ಳುವುದರಿಂದ ವಿದೇಶಿಗರು ಶ್ರೀಮಂತರಾಗುತ್ತಾರೆ ಎಂದು ಬಲವಾಗಿ ನಂಬಿದ್ದ ಅವರು ಭಾರತ ಎಲ್ಲ ರೀತಿಯ ಬೆಳೆಗಳ ಆಮದು ನಿಲ್ಲಿಸಬೇಕೆಂದು ಬಯಸುತ್ತಿದ್ದರು. 1966ರಲ್ಲಿ ನವದೆಹಲಿಯ ಭಾರತೀಯ ಕೃಷಿ ಸಂಶೋಧನಾ ಕೇಂದ್ರದ ನಿರ್ದೇಶಕರಾದರು. ಇವರು ಮಂಡಿಸಿದ ವರದಿ ಮೆಚ್ಚಿ ರಾಕ್ ಫೆಲ್ಲರ್ ಪ್ರತಿಷ್ಠಾನ ಆರ್ಥಿಕ ಬೆಂಬಲ ನೀಡಲು ಮುಂದೆ ಬಂದಿತ್ತು. ಇದನ್ನು ಸದುಪಯೋಗ ಪಡಿಸಿಕೊಂಡ ಅವರು, ಮೆಕ್ಸಿಕೋದ ಗೋಧಿ ಬೀಜವನ್ನು ಪಂಜಾಬ್ ದೇಸಿ ತಳಿಯೊಂದಿಗೆ ಮಿಶ್ರಣಗೊಳಿಸುವ ಮೂಲಕ ಅಧಿಕ ಉತ್ಪಾದನೆಯುಳ್ಳ ಮಿಶ್ರ ತಳಿ ಗೋದಿ ಬೀಜ ವಿಕಸಿತಗೊಳಿಸಿದರು.
ಹಸಿರು ಕ್ರಾಂತಿಯ ಮೂಲಕ ಹೆಚ್ಚು ಬೆಳೆ ಬೆಳೆಯುವ ಅಕ್ಕಿ ಮತ್ತು ಗೋಧಿ ಬೀಜಗಳನ್ನು ಬಡ ರೈತರಿಗೆ ಹಂಚಿ ಅವರ ಜಮೀನಿನಲ್ಲಿ ಹೆಚ್ಚೆಚ್ಚು ಅಕ್ಕಿ ಮತ್ತು ಗೋಧಿ ಉತ್ಪಾದಿಸುವ ಮೂಲಕ ಭಾರತ ತಿನ್ನಲು ಗತಿಯಿಲ್ಲದ ದೇಶ ಎಂಬ ಕಳಂಕವನ್ನು ಹೋಗಲಾಡಿಸಿದ ಹೆಗ್ಗಳಿಕೆ ಇವರದ್ದು. ಭಾರತದ ಕೃಷಿ ಪುನರ್ಜಗರಣ ಸಂಸ್ಥೆ ಸ್ವಾಮಿನಾಥನ್ ಅವರನ್ನು ಕೃಷಿ ವೈಜ್ಞಾನಿಕ ಕ್ಷೇತ್ರದ ನೇತಾರ ಪಟ್ಟ ಕಟ್ಟಿ ಗೌರವಿಸಿತು.


ಭಾರತದ ಅತ್ಯುನ್ನತ ಪ್ರಶಸ್ತಿಗಳಾದ ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಸೇರಿದಂತೆ ಮ್ಯಾಗ್ಸೆಸೆ, ಅಲ್ಬರ್ಟ್ ಐನ್ ಸ್ಟೀನ್ , ಪ್ರಥಮ ವಿಶ್ವ ಆಹಾರ , ಅಮೆರಿಕದ ಟೈಲರ್ ಪುರಸ್ಕಾರ, ಯುನಸ್ಕೋದ ಗಾಂಧಿ ಸ್ವರ್ಣ ಪುರಸ್ಕಾರ ಸೇರಿದಂತೆ ಹಲವಾರು ಪ್ರಶಸ್ತಿಗಳು ಮತ್ತು ಗೌರವ ಸಮ್ಮಾನಕ್ಕೆ ಸ್ವಾಮಿನಾಥನ್ ಪಾತ್ರರಾಗಿದ್ದಾರೆ.
ಏನೇ ಹೇಳಿ, ಚೆನ್ನೈನಲ್ಲಿ ಎಂ.ಎಸ್. ಸ್ವಾಮಿನಾಥನ್ ಸಂಶೋಧನಾ ಪ್ರತಿಷ್ಠಾನ ಸ್ಥಾಪಿಸುವ ಮೂಲಕ ಕೃಷಿ ಕ್ಷೇತ್ರದ ಬೆಳವಣಿಗೆಗೆ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ. ರಾಜ್ಯಸಭೆ ಸದಸ್ಯರಾಗಿಯೂ ದೇಶದ ಕೃಷಿ ನೀತಿ ರೂಪಿಸುವಲ್ಲಿ ತಮ್ಮದೇ ಛಾಪು ಒತ್ತುತ್ತಿದ್ದಾರೆ. ದೇಶದಲ್ಲಿ ಎದುರಾಗುವ ಕೃಷಿ ಬಿಕ್ಕಟ್ಟು ಪರಿಹರಿಸುವಲ್ಲಿಯೂ ಯಶಸ್ವಿಯಾಗಿದ್ದಾರೆ

Share post:

Subscribe

spot_imgspot_img

Popular

More like this
Related

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ ಕೋಲಾರ:- ಜಿಲ್ಲೆ...

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ ಸಿದ್ದರಾ,ಯ್ಯ

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ...

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು?

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು? ಕೆಲವರಿಗೆ ಕೈ ಅಥವಾ...

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...