ಸ್ಪೂನ್ ಬಿಟ್ಟು ಕೈಯಲ್ಲೇ ಊಟ ಮಾಡುವುದ್ರಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ?

Date:

ನಮ್ಮ ಭಾರತೀಯರು ಬಹು ಜನ ಪ್ರಿಯರೂ ಹೌದು,ಭೋಜನ ಪ್ರಿಯರೂ ಹೌದು ಅದಕ್ಕಾಗಿಯೇ ತಿನ್ನುವ ತಿಂಡಿ,ಊಟ ಗಳಲ್ಲಿ ವಿವಿಧತೆಯನ್ನು ಇಷ್ಟಪಡುತ್ತಾರೆ.ದಕ್ಷಿಣ ಭಾರತದಲ್ಲಂತೂ ಪ್ರಸಿದ್ದಿ ಹೊಂದಿರೋ ಬಾಳೆ ಎಲೆಯ ಊಟವನ್ನು ಇಷ್ಟ ಪಡದವರುಂಟೆ?ಆದರೆ ಆಧುನಿಕತೆಯ ಪ್ರಭಾವದಿಂದ ಈಗ ಎಲ್ಲವೂ ಬದಲಾಗುತ್ತಿವೆ,ಸಾವಿರಾರು ಕಾಲದಿಂದ ಆರೋಗ್ಯದ ವಿಚಾರದಲ್ಲಿ ಇತಿಹಾಸವನ್ನು ಸೃಷ್ಟಿಸಿರೋ ಬಾಳೆ ಎಲೆಯ ಪದ್ದತಿಯು ಕ್ರಮೇಣ ಮರೆಯಾಗುತ್ತಿದ್ದು ಈ ಜಾಗವನ್ನು ತಟ್ಟೆ ಸ್ಪೂನ್ ಹಾಗೂ ಫೋರ್ಕ್ ಗಳು ಆಕ್ರಮಣ ಮಾಡಿವೆ.ಬಾಳೆ ಎಲೆಯ ವಿಚಾರ ಹೋಗ್ಲಿ ಆದ್ರೆ ಮನುಷ್ಯ ತನ್ನ ಕೈಯ ಬೆರಳನ್ನೇ ಮರೆತು ಬಿಟ್ಟು ಸ್ಪೂನ್ ಫೋರ್ಕ್ ಗಳ ದಾಸನಾಗುತ್ತಿದ್ದಾನೆ.ಅದೇ ಯಾಕೆ?ಅನ್ನೋ ಪ್ರಶ್ನೆಗೆ ಉತ್ತರ ಸಿಂಪಲ್..ಫ್ಯಾಷನ್..ಟ್ರೆಂಡ್..ಕೈಯಲ್ಲಿ ತಿಂದ್ರೆ ನಮ್ಮನ್ನು ಯಾವುದೋ ಹಳ್ಳಿ ಗಮಾರರು ಅಂದುಕೊಳ್ಳುತ್ತಾರೆ ಅಂತ ತನ್ನನ್ನು ತಾನು ಬದಲಿಸೋ ಪ್ರಯತ್ನದತ್ತ ಸಾಗುತ್ತಿದ್ದಾನೆ.ಆದ್ರೆ ಹೊಸ ಅನ್ವೇಷಣೆಯತ್ತ ಸಾಗೋ ಮೊದಲು ನಾವು ಹಳೆಯ ವಿಚಾರಗಳತ್ತ ಒಮ್ಮೆ ತಿರುಗಿ ನೋಡಬೇಕಲ್ಲವೇ??ಎಷ್ಟೋ ಬಾರಿ ಹಳೆ ಆಚಾರ-ವಿಚಾರ ಸಂಪ್ರದಾಯಗಳಿಗೂ ಇಂದಿನ ವಿಜ್ಝ್ನಾನಕ್ಕೂ ನಿಖರವಾದ ಸಂಬಂಧವಿದೆ ಅನ್ನುತ್ತಾರೆ ಅದು ಹಲವು ಬಾರಿ ಸಾಬೀತಾಗಿರೋ ವಿಚಾರವೂ ಹೌದು.ಹಾಗಿದ್ರೆ ನಾವು ಯಾಕೆ ಆಹಾರವನ್ನು ನಮ್ಮ ಕೈಗಳಿಂದಲೇ ತಿನ್ನಬೇಕು ಎಂಬುದು ನಿಮಗೆ ಗೊತ್ತೆ?

ಕೈಗಳಿಂದ ಆಹಾರ ತಿನ್ನುವುದರಿಂದ ಅನೇಕ ಆರೋಗ್ಯಕರವಾದ ಪ್ರಯೋಜನಗಳು ನಮಗಾಗುತ್ತವೆ.

1.ದೇದ ಎಲ್ಲಾ ಶಕ್ತಿಗಳನ್ನು ನಿರಂತರವಾಗಿ ಬ್ಯಾಲೆನ್ಸ್ ಮಾಡುತ್ತದೆ

ಆಯುರ್ವೇದಿಕ್ ಪದ್ದತಿಯ ಪ್ರಕಾರ ನಮ್ಮ ದೇಹದಲ್ಲಿ 5 ವಿಧದ ಪ್ರಾಣ ವಾಯುಗಳಿದ್ದು,ಇವುಗಳು ನಮ್ಮಕೈಯ ಪ್ರತೀ ಬೆರಳುಗಳಲ್ಲಿ ಒಂದಕ್ಕೊಂದು ಬೆಸೆದಿವೆ.(ನಿಮ್ಮ ಹೆಬ್ಬೆರಳು ಬೆಂಕಿಯನ್ನೂ,ತೋರುಬೆರಳು ಗಾಳಿಯನ್ನು ಪ್ರತಿನಿಧಿಸುತ್ತದೆ,ಮಧ್ಯದ ಬೆರಳು ಆಕಾಶ,ರಿಂಗ್ ಫಿಂಗರ್ ಭೂಮಿ ಹಾಗೂ ಕಿರಿಬೆರಳು ನೀರನ್ನೂ ಪ್ರತಿನಿಧಿಸುತ್ತದೆ)ಇವುಗಳ ನಡುವೆ ಬ್ಯಾಲೆನ್ಸ್ ತಪ್ಪಿದಾಗ ನಮಗೆ ಅನಾರೋಗ್ಯ ಕಟ್ಟಿಟ್ಟ ಬುತ್ತಿ.ನಾವು ಕೈಯಿಂದ ತಿನ್ನುವಾಗ ನಮ್ಮ ಹೆಬ್ಬೆರಳು ಹಾಗೂ ಉಳಿದ ಎಲ್ಲಾ ಬೆರಳುಗಳು ಒಂದಕ್ಕೊಂದು ಬೆಸೆಯಲ್ಪಡುತ್ತದೆ.ಇದು ಮುದ್ರಾ ವಿಜ್ಜ್ನಾನದ ಒಂದು ಮುದ್ರೆಯನ್ನು ಬಿಂಬಿಸುತ್ತದೆ.ಇದು ಆಹಾರದ ಜೊತೆಗೆ ಒಂದು ಶಕ್ತಿಯ ಸಂಚಲನವೂ ಹೌದು.ಆದ ಕಾರಣ ನಾವು ತಿನ್ನುವಾಗ ಈ 5 ಪ್ರಾಣ ಚೈತನ್ಯಗಳು ಜೊತೆ ಸೇರಿ ನಮ್ಮ ದೇಹಕ್ಕೆ ಹೊಸ ಚೈತನ್ಯ ದೊರಕುತ್ತದೆ.ಇದು ನಮಗೆ ಉತ್ತಮ ಆರೋಗ್ಯವಷ್ಟೇ ಅಲ್ಲ ನಮ್ಮ ಪಂಚ ಪ್ರಾಣಗಳ ಸಮತೋಲನವನ್ನೂ ಕಾಪಾಡುತ್ತದೆ.

2.ಜೀರ್ಣಕ್ರಿಯೆ ಉತ್ತಮ ಗೊಳ್ಳುತ್ತದೆ

ಸ್ಪರ್ಶ ಎನ್ನುವುದು ಅತ್ಯಂತ ಶಕ್ತಿಯಾತ್ಮಕ ಹಾಗೂ ದೇಹದಲ್ಲಿ ಅನೇಕ ಬಾರಿ ಬಳಸಲ್ಪಡುವ ಒಂದು ಸಂವೇದನಾತ್ಮಕ ಕ್ರಿಯೆ.ನಾವು ನಮ್ಮ ಆಹಾರವನ್ನು ಕೈಯಿಂದ ಸ್ಪರ್ಶಿಸಿದೊಡನೆ,ನಮ್ಮ ಮಿದುಳು,ನಾವು ಈಗ ತಿನ್ನಲು ಹೊರಟಿದ್ದೇವೆ ಎಂಬ ಸಂದೇಶವನ್ನು ತ್ವರಿತ ಗತಿಯಲ್ಲಿ ನಮ್ಮ ಹೊಟ್ಟೆಗೆ ರವಾನಿಸುತ್ತದೆ.ಬರೋ ಆಹಾರಕ್ಕಾಗಿ ನಮ್ಮ ಹೊಟ್ಟೆಯು ತನ್ನನ್ನು ತಾನು ತಯಾರಿ ನಡೆಸುತ್ತದೆ ಅಂದರೆ ಜೀರ್ಣ ಕ್ರಿಯೆ ಉತ್ತಮ ಗೊಳ್ಳುತ್ತದೆ.

3.ಶಾಂತ ರೀತಿಯಿಂದ ತಿನ್ನಲು ಅವಕಾಶ ನೀಡುತ್ತದೆ

ತಿನ್ನುವ ಸಂದರ್ಭದಲ್ಲಿ ಕೇವಲ ಕೈ ಬಾಯಿಗಷ್ಟೇ ಕೆಲಸಕೊಡಿ,ಮಾತು ಬೇಡ ಅಂತ ಹಿರಿಯರು ಅದೆಷ್ಟೋ ಬಾರಿ ಗದರಿಸುವುದುಂಟು.ಅಂದರೆ ಇದರ ಅರ್ಥ ನಾವು ತಿನ್ನುವ ಸಂದರ್ಭದಲ್ಲಿ ನಮ್ಮ ಗಮನ ಬೇರೆಲ್ಲೆ ಹರಿದರೂ ಅದು ನೆತ್ತಿಗೆ ಹತ್ತಿ ಕೆಲವೊಮ್ಮೆ ಸಣ್ಣ ಪುಟ್ಟ ಅಥವಾ ಗಂಭೀರ ಸಮಸ್ಯೆಗೂ ಎಡೆ ಮಾಡಿ ಕೊಡುತ್ತದೆ,ಅದಕ್ಕಾಗಿ ನಾವು ಕೈಬೆರಳುಗಳಿಂದ ಆಹಾರ ತಿನ್ನುವಾಗ ನಮ್ಮ ಗಮನ ನಾವು ತಿನ್ನೋ ಆಹಾರದ ಕಡೆಗೂ ನಮ್ಮ ಕೈಯಿಂದ ಬಾಯಿಯ ಕಡೆಗೆ ಏನು ಹಾಕುತ್ತಿದ್ದೇವೆ ಎಂಬುದರ ಕಡೆಗೂ ಇರುತ್ತದೆ,ಆದ್ರೆ ಈ ಅಭ್ಯಾಸ ಫೋರ್ಕ್ ಹಾಗೂ ಸ್ಪೂನ್ ಬಳಕೆಯಿಂದ ಸಾಧ್ಯವಿಲ್ಲ ಯಾಕಂದ್ರೆ ಇಲ್ಲಿ ಕೇವಲ ನಮ್ಮ ಅಭ್ಯಾಸ ಯಾಂತಿಕವಾಗಿರುತ್ತಷ್ಟೇ.ಕೈ ಬೆರಳುಗಳು ನಮ್ಮ ತಿನ್ನೋ ಆಹಾರದಲ್ಲಿನ ಎಲ್ಲಾ ನ್ಯೂಟ್ರಿಯೆಂಟ್ಸ್ ನ ಹೊಂದಿಸಿಕೊಂಡು ಉತ್ತಮ ರೀತಿಯಲ್ಲಿ ದೇಹಕ್ಕೆ ಸೇರಿಸುತ್ತದೆ ಹಾಗೂ ಇದರಿಂದ ದೈಹಿಕ ಆರೋಗ್ಯ ಮತ್ತು ಜೀರ್ಣ ಕ್ರಿಯೆ ಇನ್ನೂ ಉತ್ತಮಗೊಳ್ಳುತ್ತದೆ.

4.ನಿಮ್ಮ ಬಾಯಿ ಬಿಸಿಯಾಗುವುದನ್ನು ತಪ್ಪಿಸುತ್ತದೆ

ನಿಮ್ಮ ಕೈಯೊಂದು ಉತ್ತಮ ಉಷ್ಣತಾ ಮಾಪಕವಾಗಿ ಕೆಲಸ ಮಾಡುತ್ತದೆ.ನೀವು ಕೈಯಿಂದ ಆಹಾರವನ್ನು ಮುಟ್ಟಿದ ತಕ್ಷಣ ನಿಮಗೆ ಅದರ ಬಿಸಿಯ ಅರಿವಾಗುತ್ತದೆ,ಇದರಿಂದಾಗಿ ನೀವು ತೀರಾ ಬಿಸಿ ಆಹಾರ ಸೇವನೆಯಿಂದ ನಾಲಗೆ ಹೊತ್ತಿಕೊಳ್ಳುವುದನ್ನು ತಪ್ಪಿಸಿಕೊಂಡಂತಾಗುತ್ತದೆ.ಚಮಚದಲ್ಲನೇಕ ಬಾರಿ ನಾವು ಬಿಸಿ ಬಿಸಿ ಆಹಾರ ಸೇವಿಸಿ ನಾಲಗೆ ಸುಟ್ಟುಕೊಂಡದ್ದಿದೆ.

ಹಾಗಿದ್ರೆ….ಇನ್ಮುಂದೆ ಸ್ಪೂನ್ ಫೋರ್ಕ್ ಬೇಡ ನಮ್ಮ ಖಾಲಿ ಕೈ ಬೆರಳುಗಳೇ ಸಾಕು….

 

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...