ಡ್ರಸ್ ವಿಚಾರದಲ್ಲಿ `ಕಿರಿಕ್’ ; ಕಣ್ಣೀರಿಟ್ಟ ಸಂಯುಕ್ತಾ ಹೆಗ್ಡೆ ..!
ಕಿರಿಕ್ ಬ್ಯೂಟಿ ಸಂಯುಕ್ತ ಹೆಗ್ಡೆ ಕಣ್ಣೀರಿಟ್ಟಿದ್ದಾರೆ..! ಪಾರ್ಕ್ನಲ್ಲಿ ನಡೆದ ಕಿರಿಕ್, `ಕಿರಿಕ್ ಪಾರ್ಟಿ’ ಸುಂದರಿ ಕಣ್ಣೀರಿಗೆ ಕಾರಣ..!
ಹೌದು ನಟಿ ಸಂಯುಕ್ತಾ ಹೆಗ್ಡೆ ಮತ್ತೊಂದು ಕಿರಿಕ್ ಮಾಡಿಕೊಂಡಿದ್ದಾರೆ. ಸಿಲಿಕಾನ್ ಸಿಟಿಯ ಅಗರ ಉದ್ಯನವನದಲ್ಲಿ ಸಂಯುಕ್ತ ಅಸಭ್ಯವಾಗಿ ವರ್ತನೆ ಮಾಡಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಶುಕ್ರವಾರ ಸಾರ್ವಜನಿಕರು ವಾಕಿಂಗ್ ಮಾಡುವ ಪಾರ್ಕ್ನಲ್ಲಿ ಸಂಯುಕ್ತ ಹೆಗ್ಡೆ ಹಾಗೂ ಸ್ನೇಹಿತರು ತುಂಡು ಹುಲಾ ಹೂಪ್ ಡ್ಯಾನ್ಸ್ ಮಾಡಿದ್ದಾರೆ. ಅದಕ್ಕೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅದೇ ಸಂದರ್ಭದಲ್ಲಿ ಅಲ್ಲಿಗೆ ಬಂದ ಕಾಂಗ್ರೆಸ್ ವಕ್ತಾರೆ ಕವಿತಾ ರೆಡ್ಡಿ ಕೂಡ ಸಂಯುಕ್ತಾ ಹೆಗ್ಡೆ ಹಾಗೂ ಸಂಗಡಿಗರ ಧರಿಸಿರುವ ಬಟ್ಟೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವೇಳೆ ಕವಿತಾ ರೆಡ್ಡಿ ಹಾಗೂ ಸಂಯುಕ್ತ ಹೆಗ್ಡೆ ನಡುವೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ. ಸಾರ್ವಜನಿರು ಕವಿತಾ ರೆಡ್ಡಿಗೆ ಬೆಂಬಲ ನೀಡಿದ್ದಾರೆ ಎನ್ನಲಾಗಿದೆ.
ಸಂಯುಕ್ತ ಹೆಗ್ಡೆ ಸ್ಥಳದಲ್ಲೇ ಇನ್ಸ್ಟಾಗ್ರಾಮ್ ಲೈವ್ ಬಂದಿದ್ದಾರೆ. ತಮ್ಮ ಮೇಲೆ ಸುಖಾ ಸುಮ್ಮನೆ ಆರೋಪ ಮಾಡ್ತಿದ್ದಾರೆ ಅಂತ ಗರಂ ಆಗಿದ್ದಾರೆ.
‘ಕಿರಿಕ್ ಪಾರ್ಟಿ’ ಖ್ಯಾತಿಯ ಸಂಯುಕ್ತ ಹೆಗ್ಡೆ ಅವರು ತಮ್ಮ ಸ್ನೇಹಿತರೊಂದಿಗೆ ಉದ್ಯಾನವನದಲ್ಲಿ ಹೂಲಾ ಹೋಪ್ ಅಭ್ಯಾಸ ಮಾಡುತ್ತಿದ್ದಾಗ ಕ್ರೀಡಾ ಉಡುಪನ್ನು ಧರಿಸಿದ್ದರು. ಈ ಸಮಯದಲ್ಲಿ ಹಲವು ಜನರಿದ್ದ ಗ್ಂಪೊಂದು ಸಂಯುಕ್ತ ಅವರ ಉಡುಗೆ ಸರಿಯಿಲ್ಲ, ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ದಂಧೆ ನಡೆಯುತ್ತಿದೆ, ಇದರ ಕುರಿತಂತೆ ಸಂಯುಕ್ತ ಅವರನ್ನೂ ಹೋಲಿಸಿ ನಿಂದಿಸಿದ್ದಾರೆ. . ಉದ್ಯಾನವನದಲ್ಲಿ ಸಂಯುಕ್ತ ಅವರ ವರ್ತನೆ ಇನ್ನೊಬ್ಬರನ್ನು ಕೆರಳಿಸುವಂತಿದೆ ಎಂದು ಅವರು ಆರೋಪಿಸಿದರು. ಕವಿತಾ ರೆಡ್ಡಿ ಸಂಯುಕ್ತ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಸಂಯುಕ್ತ ವಿಡಿಯೋದಲ್ಲಿ ಆರೋಪಿಸಿದ್ದಾರೆ. ಸಂಯುಕ್ತ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು, ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.
ಇನ್ನು ಕವಿತಾ ರೆಡ್ಡಿ ಸಂಯುಕ್ತಾ ಸ್ನೇಹಿತೆ ಮೇಲೆ ಹಲ್ಲೆ ಮಾಡಿದ್ದಾರೆಂಬ ಆರೋಪ ಕೂಡ ಕೇಳಿಬಂದಿದ್ದು, ಈ ಬಗ್ಗೆ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. “ನಟಿ ಸಂಯುಕ್ತ ಹೆಗ್ಡೆ ಅವರನ್ನೊಳಗೊಂಡ ಈ ಘಟನೆ ನಡೆದಿರುವುದು ದುರದೃಷ್ಟಕರ. ನಮ್ಮ ಸಮಾಜದಲ್ಲಿ ಇಂತಹ ನೈತಿಕ ಪೋಲಿಸ್ ಗಿರಿಗೆ ಯಾವುದೇ ರೀತಿಯ ಅವಕಾಶವಿಲ್ಲ” ಎಂದು ಹೇಳಿದರು . ಸಂಯುಕ್ತ ಮತ್ತು ಆಕೆಯ ಸ್ನೇಹಿತರ ಮೇಲೆ ನಿಂದನೆ ಮತ್ತು ಹಲ್ಲೆ ನಡೆಸಿದ ಕವಿತಾ ರೆಡ್ಡಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ .
ಘಟನೆ ನಡೆದ ಸ್ಥಳದಲ್ಲಿದ್ದ ವೈದ್ಯರೊಬ್ಬರು ವಿಡಿಯೋದಲ್ಲಿ ನಟಿ ಮತ್ತು ಅವರ ಸ್ನೇಹಿತರನ್ನು ಬೆಂಬಲಿಸುತ್ತಿದ್ದಾರೆ ಮತ್ತು ಅವರು ಯಾವುದೇ ಅಸಭ್ಯ ವರ್ತನೆ ತೋರಿಲ್ಲ ಮತ್ತು ಕೇವಲ ವ್ಯಾಯಾಮ ಮಾಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ .