ಪೊಲೀಸರನ್ನು ಬಿಟ್ಟು ಸುವರ್ಣ ನ್ಯೂಸ್ ಜಯಪ್ರಕಾಶ್ ಶೆಟ್ಟಿ ಮೊರೆ ಹೋದ ಕಳ್ಳ..! ಶೆಟ್ರ ವಿಳಾಸಕ್ಕೆ ಆತ ಕಳುಹಿಸಿದ ಕವರ್ ನಲ್ಲಿ ಏನಿದೆ?
ಜಯಪ್ರಕಾಶ್ ಶೆಟ್ಟಿ … ಕನ್ನಡ ದೃಶ್ಯ ಮಾಧ್ಯಮ ಕ್ಷೇತ್ರದ ಫೈರ್ ಬ್ರ್ಯಾಂಡ್ ಜರ್ನಲಿಸ್ಟ್ … ಖಡಕ್ ಮಾತಿನ ಜನಮೆಚ್ಚಿದ ನಿರೂಪಕ..! ಬಿಗ್ 3 ಕಾರ್ಯಕ್ರಮದ ಮೂಲಕ ಅನೇಕ ಅಧಿಕಾರಿಗಳು, ರಾಜಕಾರಣಿಗಳ ಧಿಮಾಕನ್ನು ಹುಟ್ಟಡಗಿಸಿದವರು. ಲೆಕ್ಕವಿಲ್ಲದಷ್ಟು ನೊಂದವರ ಕಣ್ಣೀರು ಒರೆಸಿದವರು. ಅದೆಷ್ಟೋ ಮಂದಿಯ ಧ್ವನಿಯಾದವರು.
ಇದು ಒಬ್ಬ ನಿಜವಾದ ಪತ್ರಕರ್ತನ ಕೆಲಸ ಕೂಡ ಹೌದು. ಅತಿರಥಮಹಾರಥರ ಸಂಪರ್ಕ, ಅವರ ಹೊಗಳಿಕೆಯೇ ತನ್ನ ಜನಪ್ರಿಯತೆ ಎಂಬ ಭ್ರಮೆಯಲ್ಲಿರುವ ಅನೇಕರ ನಡುವೆ ಜಯಪ್ರಕಾಶ್ ಶೆಟ್ಟಿ ಮತ್ತು ಅವರಂಥವರು ಸಮಾಜದ ಕಟ್ಟಕಡೆಯ ವ್ಯಕ್ತಿಯ ನಂಬಿಕೆ, ಪ್ರೀತಿ, ವಿಶ್ವಾಸ, ಮೆಚ್ಚುಗೆಯನ್ನು ಪಡೆದು ಮಾದರಿಯಾಗಿ ನಿಲ್ಲುತ್ತಾರೆ.
ಈಗಿಲ್ಲಿ ಜಯಪ್ರಕಾಶ್ ಶೆಟ್ಟಿ ಅವರ ಬಗ್ಗೆ ಬರೆಯುವುದಕ್ಕೆ ಕಾರಣರಾದವ ಒಬ್ಬ ಕಳ್ಳ .. ಆ ಒಬ್ಬನೇ ಒಬ್ಬ ಸರಗಳ್ಳ …! ಪೊಲೀಸರನ್ನು ಬಿಟ್ಟು ಸುವರ್ಣ ನ್ಯೂಸ್ ಜಯಪ್ರಕಾಶ್ ಶೆಟ್ಟಿ ಮೊರೆ ಹೋದ ಆ ಕಳ್ಳ..!
ಹೌದು, ಕಳ್ಳನೊಬ್ಬ ತನ್ನ ತಪ್ಪಿನ ಅರಿವಾಗಿ. ಆ ತಪ್ಪನ್ನು ತಿದ್ದಿಕೊಳ್ಳಲು ಸುವರ್ಣ ನ್ಯೂಸ್ 24*7 ನ್ಯೂಸ್ ಚಾನಲ್ ಮತ್ತು ಅದರ ಪ್ರಸಕ್ತ ವಿದ್ಯಮಾನಗಳ ಸಂಪಾದಕರು, ಜನಪ್ರಿಯ ನಿರೂಪಕರಾಗಿರುವ ಜಯಪ್ರಕಾಶ್ ಶೆಟ್ಟಿಯವರ ಮೊರೆ ಹೋಗಿದ್ದಾನೆ. ತಾನು ಮಾಡಿದ ತಪ್ಪಿಗೆ ಈ ಮೂಲಕ ಪಶ್ಚಾತ್ತಾಪ ಪಟ್ಟಿದ್ದಾನೆ ... ಎಂದೂ ಎಂದೆಂದೂ ಇಂಥಾ ತಪ್ಪು ಮಾಡಲಾರೆ ಎಂದು ಬದಲಾಗುವ ಮನಸ್ಸು ಮಾಡಿದ್ದಾನೆ ..ಮಾತುಕೊಟ್ಟಿದ್ದಾನೆ ..ಆತ ನಿಜಕ್ಕೂ ಬದಲಾಗಿದ್ದಾನೆ ..ಬದಲಾಗಿಯೇ ಆಗುತ್ತಾನೆ ..!
ಏನಿದು ರೋಚಕ ಕಹಾನಿ? : ಇದು ಯಾವ ಸಿನಿಮಾ ಸ್ಟೋರಿಯಲ್ಲ.. ಅಂತೆಕಂತೆಯ ಪುಕ್ಕಟೆ ಸುದ್ದಿಯೂ ಅಲ್ಲ.
ಆತ ಒಬ್ಬ ಪ್ರಾಮಾಣಿಕ ವ್ಯಕ್ತಿ. ತಾನಾಯ್ತು, ತನ್ನ ಕೆಲಸ ಆಯ್ತು ಅಂತಿದ್ದ. ಆದರೆ, ಕೊರೋನಾ , ಕೊರೋನಾ ಲಾಕ್ ಡೌನ್ ದೆಸಯಿಂದ ಕೆಲಸ ಕಳೆದುಕೊಂಡ! ಇದ್ದೊಂದು ಕೆಲಸ ಇಲ್ಲದ ಮೇಲೆ ಬದುಕು ಕಷ್ಟವಾಯ್ತು.. ದಿಕ್ಕು ತೋಚದಾಯ್ತು…! ಆಗ ಆತ ಕಂಡುಕೊಂಡಿದ್ದೇ ‘ಕಳ್ಳ’ ಮಾರ್ಗವನ್ನು ..!
ಸೆಪ್ಟೆಂಬರ್ 10 ರಂದು ಮಹಿಳೆಯೊಬ್ಬರ ಮಾಂಗಲ್ಯಸರವನ್ನು ಆತ ಕದ್ದಿದ್ದಾನೆ. ಸರ ಕದಿಯುವಲ್ಲಿ ಸಫಲತೆ ಕಂಡರೂ ..ಕೂಡಲೇ ಅವನ ಮನಸ್ಸು ತಿವಿದಿದೆ …ನೀನು ಮಹಾ ದೊಡ್ಡ ತಪ್ಪು ಮಾಡಿದ್ದೀಯ ಎಂದು ಎಚ್ಚರಿಸಿದೆ..! ತನ್ನ ತಪ್ಪಿನ ಅರಿವಾಗಿ , ಆತ್ಮಸಾಕ್ಷಿ ಒಪ್ಪದ ಕೆಲಸ ಮಾಡಿದ್ದೀನಲ್ಲಾ ಸಂತ ಮರುಗಿದ್ದಾನೆ.
ತಾನು ತಪ್ಪು ಮಾಡಿ ಆಗಿದೆ. ತಿದ್ದಿಕೊಳ್ಳುವುದೊಂದೇ ದಾರಿ. ಕದ್ದ ಮಾಂಗಲ್ಯ ಸೂತ್ರ ಮತ್ತು ಸರವನ್ನು ಹಿಂತಿರುಗಿಸ ಬೇಕೆಂಬ ನಿರ್ಧಾರಕ್ಕೆ ಬರುತ್ತಾನೆ. ಆ ತಾಯಿಗೆ ನೇರವಾಗಿ ಸರ ತಲುಪಿಸೋಣ ಎಂದರೆ ಸರಿಯಾದ ವಿಳಾಸ ಗೊತ್ತಿಲ್ಲ..! ಪೊಲೀಸರಿಗೆ ಕೊಟ್ಟರೆ ಜೈಲಿಗೆ ಹೋಗುವ ಭಯ. ಹೀಗಾಗಿ ಆತ ಆಯ್ಕೆ ಮಾಡಿಕೊಂಡಿದ್ದು ಸುವರ್ಣ ನ್ಯೂಸ್ ಚಾನಲ್ ಮತ್ತು ಆ ಚಾನಲ್ ನ ಜಯಪ್ರಕಾಶ್ ಶೆಟ್ಟಿ ಅವರನ್ನು ..!
ಜೆ .ಪಿಯವರ ಹೆಸರಿಗೆ, ಸುವರ್ಣ ವಿಳಾಸಕ್ಕೆ :
ಜಯಪ್ರಕಾಶ್ ಶೆಟ್ಟಿ ಅವರ ಹೆಸರಿಗೆ ಸುವರ್ಣ ಕಚೇರಿ ವಿಳಾಸಕ್ಕೆ ಅನಾಮಧೇಯ ಕವರ್ ತಲುಪಿದೆ. ಆ ಕವರ್ ನಲ್ಲಿ ಕದ್ದ ಮಾಂಗಲ್ಯ ಸೂತ್ರವನ್ನು ಇಟ್ಟಿದ್ದಾನೆ. ಪೊಲೀಸರಿಗೆ ಮತ್ತು ಜಯಪ್ರಕಾಶ್ ಶೆಟ್ಟಿಯವರಿಗೆ ಪತ್ರಬರೆದು ತಪ್ಪೊಪ್ಪಿಕೊಂಡಿದ್ದಾನೆ.
ನಾನು ಜೀವನದಲ್ಲಿ ಯಾವತ್ತೂ ತಪ್ಪು ಮಾಡಿಲ್ಲ, ಒಮ್ಮೆ ಕೆಟ್ಟ ಕೆಲಸ ಮಾಡಿದ್ದೇನೆ. ತಪ್ಪು ತಿದ್ದಿಕೊಂಡು ಬದುಕಲು ಅವಕಾಶ ಕೊಡಿ.ನನ್ನ ತಾಯಿ, ಮಕ್ಕಳು ಬೀದಿ ಪಾಲಾಗುವಂತೆ ಮಾಡಬೇಡಿ. ತಪ್ಪಾಯ್ತು ಎಂದು ಪೊಲೀಸರಿಗೆ ಬರೆದ ಪತ್ರದಲ್ಲಿ ಹೇಳಿದ್ದಾನೆ ಹೇಳಿಕೊಂಡಿದ್ದಾನೆ.
ಅಪರಾಧವೆಸಗಿದ್ದೇನೆ. ಆದರೆ, ಅದಕ್ಕೊಂದು ಕಾರಣವಿತ್ತು. ನಿಮಗೆ, ನಿಮ್ಮವರಿಗೆ ನೋಯಿಸಿದ್ದಕ್ಕೆ ಇರಲಿ ಕ್ಷಮೆ ಎಂದು ಸರ ಕಳೆದುಕೊಂಡಿದ್ದ ಮಹಿಳೆಯ ಕ್ಷಮೆಯಾಚಿಸಿದ್ದಾನೆ.
ನಾನು ಒಂದು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆ. ಬಂದ ಸಂಬಳದಲ್ಲಿ ಜೀವನ ನಡೆಯುತ್ತಿತ್ತು. ಆದರೆ, ಕೊರೊನಾ ಬಂದ ನಂತರ ನನ್ನ ಕೆಲಸ ಕಳೆದುಕೊಂಡೆ. ಎರಡ್ಮೂರು ತಿಂಗಳು ಹೇಗೋ ಇದ್ದ ಹಣದಲ್ಲಿ ನನ್ನ ತಾಯಿಯನ್ನು ನೋಡಿಕೊಂಡು, ನನ್ನ ಮೂವರು ಹೆಣ್ಣು ಮಕ್ಕಳನ್ನು ನೋಡೊಕೊಂಡು ಜೀವನ ಸಾಗಿಸುತ್ತಿದ್ದೆ.
ಆದರೆ, 3 ತಿಂಗಳು ಕಳೆದ ನಂತರ ಕಷ್ಟದ ಮೇಲೆ ಕಷ್ಟ, ಒತ್ತಡದ ಮೇಲೆ ಒತ್ತಡ, ಬರೆಯ ಮೇಲೆ ಬರೆ. ಏನು ಮಾಡೋದೆಂದು ದಿಕ್ಕು ತೋಚದೇ ಕಳ್ಳತನ ಮಾಡಿದೆ. ಆದರೆ, ತಪ್ಪಿಗೆ ಪಶ್ಚತ್ತಾಪ ಪಡುತ್ತಿದ್ದೇನೆ” ಎಂದು ಪತ್ರದಲ್ಲಿ ತಿಳಿಸಿದ್ದಾನೆ.
ಸುವರ್ಣ ನ್ಯೂಸ್ ಸ್ಟೂಡಿಯೋಕ್ಕೆ ಮಹಿಳೆ ಮತ್ತು ಅವರ ಪತಿಯನ್ನು ಕರೆಸಿ, ಪ್ರಧಾನ ಸಂಪಾದಕ ಅಜಿತ್ ಹನುಮಕ್ಕನವರ್ ಮತ್ತು ಜಯಪ್ರಕಾಶ್ ಶೆಟ್ಟಿ ಆ ಸರವನ್ನು ಅವರಿಗೆ ಹಸ್ತಾಂತರಿಸಿದ್ದಾರೆ.
ಈ ಘಟನೆ ಜಯಪ್ರಕಾಶ್ ಶೆಟ್ಟಿಯವರು ಮತ್ತು ಸುವರ್ಣ ನ್ಯೂಸ್ ಚಾನಲ್ ನ ಜನಪ್ರಿಯತೆ , ಅವರ ಕೆಲಸ ಹಾಗೂ ಜನರಿಟ್ಟಿರುವ ನಂಬಿಕೆ ಪುಟ್ಟದೊಂದು ಉದಾಹರಣೆ ಮಾತ್ರ.
ಮಾಧ್ಯಮಗಳು ಮತ್ತು ಪತ್ರಕರ್ತರಿಗೆ ಸಿಗುವ ನಿಜವಾದ ಗೌರವವೆಂದರೆ ಇದುವೇ ..!
https://www.facebook.com/110861872278207/posts/3648900778474281/