ಶಾರ್ಜಾ : ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ರಾಜಸ್ಥಾನ ರಾಯಲ್ಸ್ ದಾಖಲೆ ಗೆಲುವು ಸಾಧಿಸಿದೆ. 223 ರನ್ ಗಳ ಗುರಿಯನ್ನು ಬೆನ್ನಟ್ಟಿ IPL ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಈ ಹಿಂದೆ ರಾಜಸ್ಥಾನ ಡೆಕ್ಕನ್ ಚಾರ್ಜರ್ಸ್ ವಿರುದ್ಧ 218 ರನ್ ಚೇಸ್ ಮಾಡಿದ್ದು, ಇದುವರಿನ ದಾಖಲೆ ಯಾಗಿತ್ತು. ಈಗ ಅದೇ ರಾಜಸ್ಥಾನ ರಾಯಲ್ಸ್ ಅದಕ್ಕೂ ದೊಡ್ಡ ಮಟ್ಟಿನ ರನ್ ಚೇಸ್ ಮಾಡಿ ಇತಿಹಾಸ ಸೃಷ್ಟಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಗೆ ನಾಯಕ , ಕನ್ನಡಿಗ ಕೆ.ಎಲ್ ರಾಹುಲ್ ಮತ್ತು ಕನ್ನಡಿಗರೇ ಆದ ಮಯಾಂಕ್ ಅಗರ್ ವಾಲ್ 183 ರನ್ ಗಳ ಬೃಹತ್ ಮೊತ್ತದ ಆರಂಭಿಕ ಜೊತೆಯಾಟವಾಡಿದರು.
ಮಾಯಂಕ್ ಅಗರ್ ವಾಲ್ ಭರ್ಜರಿ ಶತಕ ( 50 ಬಾಲ್ ಗಳಲ್ಲಿ 106 ) ಹಾಗೂ ರಾಹುಲ್ ಅರ್ಧಶತಕ ( 54 ಬಾಲ್ ಗಳಲ್ಲಿ 69 ) ಬಾರಿಸಿ ಮಿಂಚಿದರು.
ತಂಡದ ಮೊತ್ತ 183 ಆಗಿದ್ದಾಗ ಶತಕ ವೀರ ಮಯಾಂಕ್ ಅಗರ್ ವಾಲ್ ಟಾಮ್ ಕರನ್ ಬೌಲಿಂಗ್ ನಲ್ಲಿ ಸ್ಯಾಮ್ಸನ್ ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. ಮತ್ತೆ ತಂಡಕ್ಕೆ 11 ರನ್ ಸೇರುವಷ್ಟರಲ್ಲಿ ಅಂದರೆ ತಂಡದ ಮೊತ್ತ 194 ಆಗಿದ್ದಾಗ ರಾಹುಲ್ ರಜಪೂತ್ ಬೌಲಿಂಗ್ ನಲ್ಲಿ ಶ್ರೇಯಸ್ ಗೋಪಾಲ್ ಗೆ ಕ್ಯಾಚ್ ನೀಡಿದರು. ರಾಹುಲ್ ಔಟಾಗುವಷ್ಟರಲ್ಲಿ 18 ಓವರ್ ಮುಕ್ತಾಯವಾಗಿತ್ತು. ಉಳಿದ ಎರಡು ಓವರ್ ಗಳಲ್ಲಿ ಮ್ಯಾಕ್ಸ್ ವೆಲ್ ( 13) ಮತ್ತು ಪೂರನ್ ( 25) 29ರನ್ ಬಾರಿಸಿದರು.
ಅಂತಿಮವಾಗಿ ಪಂಜಾಬ್ ಕೇವಲ 2 ವಿಕೆಟ್ ಕಳೆದುಕೊಂಡು 223 ರನ್ ಬಾರಿಸಿತ್ತು.
ಗುರಿ ಬೆನ್ನತ್ತಿದ ರಾಜಸ್ಥಾನ ರಾಯಲ್ಸ್ ಆರಂಭದಲ್ಲಿ ಬಟ್ಲರ್ ವಿಕೆಟ್ ಕಳೆದುಕೊಂಡಿತು. ಆದರೆ ಯುವ ಆಟಗಾರ ಸಂಜು ಸಾಮ್ಸನ್ ಮತ್ತು ನಾಯಕ ಸ್ಟೀವ್ ಸ್ಮಿತ್ ತಂಡಕ್ಕೆ ಉತ್ತಮ ಬುನಾದಿ ಹಾಕಿದರು. ಸ್ಯಾಮ್ಸನ್ 85 ಹಾಗೂ ಸ್ಮಿತ್ 50 ರನ್ ಬಾರಿಸಿದರು. ಈ ಜೋಡಿ 81 ರನ್ ಗಳ ಜೊತೆಯಾಟ ಆಡಿತು.
ಸ್ಮಿತ್ ಮತ್ತು ಸ್ಯಾಮ್ಸನ್ ಬಳಿಕ ಒಂದು ಹಂತದಲ್ಲಿ ನಿಧಾನಗತಿಯಲ್ಲಿ ರಾಜಸ್ಥಾನ ರನ್ ರೇಟ್ ಸಾಗಿತು. ಆರಂಭದಲ್ಲಿ ನಿಧಾನಗತಿಯಲ್ಲಿ ಬ್ಯಾಟ್ ಬೀಸಿದ ರಾಹುಲ್ ತಿವಾಟಿಯ ( 31 ಬಾಲ್ ಗಳಲ್್ಲಿ್ 53) ಕೊನೇ ಹಂತದಲ್ಲಿ ಸಿಕ್ಸರ್ ಸುರಿಮಳೆಗೈದರು. 17 ನೇ ಓವರ್ ನಲ್ಲಿ ಕಟ್ರೆಲ್ ಗೆ ಸತತ 4 ಸಿಕ್ಸರ್ ಸೇರಿದಂತೆ 5 ಸಿಕ್ಸರ್ ಬಾರಿಸಿ, ಪಂದ್ಯದ ದಿಕ್ಕನ್ನೇ ಬದಲಾಯಿಸಿದರು. ಫೀಲ್ಡಿಗಿಳಿದ. ಜೋಫ್ರಾ ಆರ್ಚರ್ ಸತತ 2 ಸಿಕ್ಸರ್ ಸಿಡಿಸಿದರು.
ಅಂತಿಮವಾಗಿ ಇನ್ನೂ ಮೂರು ಬಾಲ್ ಗಳು ಬಾಕಿ ಇರುವಂತೆಯೇ 6 ವಿಕೆಟ್ ಗೆ ಆರ್ ಆರ್ ಗುರಿ ದಾಟಿತು.
2020ರ ಜಗಮೆಚ್ಚಿದ ನಾಯಕರು ಇವರೇ ನೋಡಿ..!
ಎಸ್.ಪಿ ಬಾಲಸುಬ್ರಹ್ಮಣ್ಯಂ ಇನ್ನಿಲ್ಲ
ಇಂದಿನಿಂದ ‘ಪ್ರತಿಕ್ಷಣ ನಿಮ್ಮೊಂದಿಗೆ’ ನ್ಯೂಸ್ ಫಸ್ಟ್ ..!
IPL 2020 : ಉದ್ಘಾಟನಾ ಪಂದ್ಯದಲ್ಲಿ ಗೆದ್ದು ಬೀಗಿದ ಧೋನಿ ಪಡೆ ..!
ಧೋನಿ ಪಡೆಗೆ 163 ರನ್ ಗುರಿ ನೀಡಿದ ರೋಹಿತ್ ಪಡೆ..!
ಎಲ್ಲಿದ್ದೀಯಪ್ಪಾ ಮೋದಿ ಎಂದ ಸಿದ್ದರಾಮಯ್ಯ..!
ಅವಳಿಗಾಗಿಯೇ…! ಕೇವಲ 26 ವರ್ಷಕ್ಕೆ ಇಹಲೋಕ ತ್ಯಜಿಸಿದ ಪ್ರೇಮಿ ಕಥೆ..!
ಸಂಜೆ ಧೂಮಕೇತು ನೋಡೋದನ್ನು ಮಿಸ್ ಮಾಡ್ಕೋ ಬೇಡಿ – 6800 ವರ್ಷಗಳೊರೆಗೆ ಹಿಂತಿರುಗಲ್ಲ,…!
ನಿತ್ಯ ಭವಿಷ್ಯ : ಈ ದಿನ ಯಾರಿಗೆ ಸುದಿನ …? ಇಲ್ಲಿದೆ ದ್ವಾದಶ ರಾಶಿಗಳ ಫಲಾಫಲಗಳು…
ತನ್ನ ತಟ್ಟೆಯಲ್ಲಿ ಬೀದಿ ನಾಯಿಗಳಿಗೆ ಊಟ ನೀಡಿದ ಭಿಕ್ಷುಕ …ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ …
ಬ್ರಾಹ್ಮಣರಿಗೆ ಜಾತಿ ಪ್ರಮಾಣ ಪತ್ರ ನೀಡಲು ಸರ್ಕಾರ ಆದೇಶ
ಧ್ರುವಾ ಸರ್ಜಾ ದಂಪತಿಗೆ ಕೊರೋನಾ …!
ಅಂದು ಸೈಕಲ್ ನಲ್ಲಿ ಮನೆಗೆ ಹಾಲು ಹಾಕ್ತಿದ್ದವರು ಇಂದು…?
ಸರ್ಕಾರಿ ಕೆಲಸಬಿಟ್ಟು ರೈತನಾದ ಇಂಜಿನಿಯರ್ ಸ್ಟೋರಿ ..!
ನಿತ್ಯ ಭವಿಷ್ಯ : ಈ ರಾಶಿಯವರಿಗೆ ಮಾತೇ ಸಮಸ್ಯೆ ತಂದೊಡ್ಡುತ್ತದೆ ..!
ಹುಡುಗರು ಹೆಚ್ಚು ಆಕರ್ಷಿತರಾಗೋದು ಚಂದದ ಹುಡ್ಗೀರಿಲ್ಲ..! ಮತ್ತೆ?
ದ್ವಿತೀಯ ಪಿಯುಸಿ ಫಲಿತಾಂಶ : ಈ ಸಲವೂ ವಿದ್ಯಾರ್ಥಿನಿಯರೇ ಮೇಲುಗೈ..! ಯಾವ ಜಿಲ್ಲೆ ಫಸ್ಟ್? ಯಾವ್ದು ಲಾಸ್ಟ್?
ಯಾರ್ ಬೇಕಿದ್ರು ಕೃಷಿ ಭೂಮಿ ಖರೀಸಬಹುದೆಂಬ ಸುಗ್ರಿವಾಜ್ಞೆಗೆ ರಾಜ್ಯಪಾಲರಿಂದ ಗ್ರೀನ್ ಸಿಗ್ನಲ್ ..!
ಕೊರೋನಾ ದೆಸೆಯಿಂದ ಸೆಕ್ಯುರಿಟಿ ಗಾರ್ಡ್ ಆದ ಸ್ಯಾಂಡಲ್ ವುಡ್ ಜನಪ್ರಿಯ ನಟ ..!
ನಿತ್ಯಭವಿಷ್ಯ : ಈ ಶುಭ ಮಂಗಳವಾರದ ರಾಶಿ ಭವಿಷ್ಯ
ಇಲ್ಲಿದೆ ಸರ್ಕಾರ ಹೊರಡಿಸಿದ ಲಾಕ್ ಡೌನ್ ಮಾರ್ಗಸೂಚಿ ..! ಏನಿರುತ್ತೆ ? ಏನಿರಲ್ಲ?