ದುಬೈ : 13 ನೇ ಆವೃತ್ತಿ ಇಂದಿನ ಮೊದಲ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ ರಾಯಲ್ಸ್ ಮುಖಾಮುಖಿಯಾಗುತ್ತಿವೆ. ಟಾಸ್ ಗೆದ್ದ ಎಸ್ ಆರ್ ಹೆಚ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
SRH : : ಡೇವಿಡ್ ವಾರ್ನರ್ (ನಾಯಕ), ಜಾನಿ ಬೈರ್‌ಸ್ಟೋವ್ (ವಿಕೆಟ್‌ಕೀಪರ್), ಮನೀಶ್ ಪಾಂಡೆ, ಕೇನ್ ವಿಲಿಯಮ್ಸನ್, ವಿಜಯ್ ಶಂಕರ್, ಪ್ರಿಯಮ್ ಗಾರ್ಗ್, ಅಭಿಷೇಕ್ ಶರ್ಮಾ, ರಶೀದ್ ಖಾನ್, ಸಂದೀಪ್ ಶರ್ಮಾ, ಖಲೀಲ್ ಅಹ್ಮದ್, ಟಿ ನಟರಾಜನ್.
RR : ಜೋಸ್ ಬಟ್ಲರ್ (ವಿಕೆಟ್‌ಕೀಪರ್), ರಾಬಿನ್ ಉತ್ತಪ್ಪ, ಸಂಜು ಸ್ಯಾಮ್ಸನ್, ಸ್ಟೀವನ್ ಸ್ಮಿತ್ (ನಾಯಕ), ಬೆನ್ ಸ್ಟೋಕ್ಸ್, ರಿಯಾನ್ ಪರಾಗ್, ರಾಹುಲ್ ತೆವಾಟಿಯಾ, ಜೋಫ್ರ ಆರ್ಚರ್, ಶ್ರೇಯಾಸ್ ಗೋಪಾಲ್, ಕಾರ್ತಿಕ್ ತ್ಯಾಗಿ, ವರುಣ್ ಆರೊನ್.
ಉದ್ಯೋಗಾಕಾಂಕ್ಷಿಗಳಿಗೆ ಬೇಕಾದ ಮಾಹಿತಿ..!
ಆಗ್ನೇಯ ಮಧ್ಯ ರೈಲ್ವೆಯು ಕೋವಿಡ್-19 ಸಂದಿಗ್ಧ ಪರಿಸ್ಥಿತಿಯಲ್ಲಿ ವೈದ್ಯಕೀಯ ಅಗತ್ಯತೆಯನ್ನು ನಿಭಾಯಿಸುವ ಸಲುವಾಗಿ 40 ಮೆಡಿಕಲ್ ಪ್ರ್ಯಾಕ್ಟೀಷನರ್‌ಗಳನ್ನು ನೇಮಕಾತಿ ಮಾಡಿಕೊಳ್ಳಲಿದೆ. ಇದಕ್ಕೆ ಅಧಿಸೂಚನೆ ಹೊರಡಿಸಿದೆ. ಈ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ 3 ತಿಂಗಳ ಅವಧಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
ಹುದ್ದೆಯ ಹೆಸರು : ಜೆನೆರಲ್ ಡೆಪ್ಯೂಟಿ ಮೆಡಿಕಲ್ ಆಫೀಸರ್
ಹುದ್ದೆಗಳ ಸಂಖ್ಯೆ : 40ಹುದ್ದೆಗಳು
ಸ್ಥಳ : ಸೆಂಟ್ರಲ್ ಹಾಸ್ಟಿಟಲ್ ಎಸ್‌ಇಸಿಆರ್, ಬಿಲಾಸ್‌ಪುರ್
ವಿದ್ಯಾರ್ಹತೆ : CMP/ GDMO ಡೆಪ್ಯೂಟಿ ಮೆಡಿಕಲ್ ಆಫೀಸರ್ ಹುದ್ದೆಗಳಿಗೆ ಎಂಬಿಬಿಎಸ್ ಅನ್ನು ಎಂಸಿಐ ನಿಂದ ಅಂಗೀಕೃತಗೊಂಡ ಸಂಸ್ಥೆಗಳಿಂದ ಪಡೆದಿರಬೇಕು. ಸ್ಪೆಷಲಿಸ್ಟ್ ಹುದ್ದೆಗಳಿಗೆ ಮೆಡಿಷನ್, ಚೆಸ್ಟ್ ಫಿಸೀಷಿಯನ್, ಕ್ರಿಟಿಕಲ್ ಕೇರ್ ಸ್ಪೆಷಲಿಸ್ಟ್, ಪ್ಯಾಥೋಲಜಿಸ್ಟ್, ಮೈಕ್ರೋಬಯೋಲಾಜಿಸ್ಟ್ ನಲ್ಲಿ ಎಂಡಿ ಓದಿರಬೇಕು.
ವೇತನ : ಮಾಸಿಕವಾಗಿ ಸೆಷಲಿಸ್ಟ್ ಹುದ್ದೆಗಳಿಗೆ ರೂ.95000, ಜೆನೆರಲ್ ಡ್ಯೂಟಿ ಡಾಕ್ಟರ್ ಹುದ್ದೆಗಳಿಗೆ ರೂ.75000 ವೇತನ ನೀಡಲಾಗುತ್ತದೆ.
ವಿದ್ಯಾರ್ಹತೆ ಮತ್ತು ಕಾರ್ಯಾನುಭವಕ್ಕೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ, ಅರ್ಜಿಯ ಸಾಫ್ಟ್ ಕಾಪಿಯನ್ನು ಇ-ಮೇಲ್ ವಿಳಾಸ spohrd.secr@gmail.com ಕ್ಕೆ ಕಳುಹಿಸಿ.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ- 27-09-2020 ಆಗಿದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುತ್ತದೆ. ಇತರೆ ಹೆಚ್ಚಿನ ಮಾಹಿತಿಗಳನ್ನು ಸೌಥ್ ಈಸ್ಟ್ ಸೆಂಟ್ರಲ್ ರೈಲ್ವೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪಡೆಯಿರಿ.
ಹಳೆಯ 5, 10 ರೂ ಕಾಯಿನ್ಸ್ ಇದ್ರೆ ನೀವು ಮಿಲೇನಿಯರ್ ಆಗ್ಬಹುದು..!?
500 – 1000 ರೂ ನೋಟುಗಳನ್ನು ಅಮಾನ್ಯ ಮಾಡಿದ ಬಳಿಕ ಅಂದರೆ ಡಿ ಮಾನಿಟೈಸೇಷನ್ ನಂತರ ನಗದು ವ್ಯವಹಾರ ಕಡಿಮೆಯಾಗಿದೆ. ಆನ್ ಲೈನ್ ಬ್ಯಾಂಕಿಂಗ್ ವ್ಯವಹಾರ ಹೆಚ್ಚಿದೆ. ನಿಧಾನ ಕಾಯಿನ್ ಬಳಕೆ ಬಹಳ ಕಡಿಮೆಯಾಗಿದೆ.
ಆದರೆ ಕೆಲವು ಆಯ್ದ ನಾಣ್ಯಗಳಿಗೆ ಬೇಡಿಕೆ ಹೆಚ್ಚಾಗಿದೆ. ನಿಮ್ಮಲ್ಲಿ ಇಂಥಾ ನಾಣ್ಯಗಳಿದ್ದರೆ ನೀವು ಕೋಟ್ಯಾಧೀಶರಾಗಬಹುದು. ನಿಮ್ಮಲ್ಲಿ ಮಾತಾ ವೈಷ್ಣೋದೇವಿ ಚಿತ್ರ ಇರುವ 5 ಅಥವಾ 10 ರೂ ಕಾಯಿನ್ ಇದ್ದರೆ ಅದನ್ನು ಹರಾಜು ಮಾಡಬಹುದು..!
ಕೊರೋನಾ ದೆಸೆಯಿಂದ ನಿರುದ್ಯೋಗ ಹೆಚ್ಚಾಗಿದೆ . ಅನೇಕರು ಉದ್ಯೋಗ ಕಳೆದುಕೊಂಡಿದ್ದಾರೆ. ಅನೇಕರ ವೇತನ ಕಡಿಮೆಯಾಗಿದೆ . ಜನ ಹಣಕ್ಕಾಗಿ ನಾನಾ ಐಡಿಯಾಗಳನ್ನು ಮಾಡುತ್ತಿದ್ದಾರೆ. ಅದರಲ್ಲಿ ಈ ನಾಣ್ಯ ಹರಾಜು ಐಡಿಯಾ ಕೂಡ ಒಂದು.
ಮಾತಾ ವೈಷ್ಣೋ ದೇವಿ ಚಿತ್ರವಿರುವ 5 ಅಥವಾ 10 ರೂ ನಾಣ್ಯಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇದೆ.
2002 ರಲ್ಲಿ ಈ ನಾಣ್ಯಗಳನ್ನು ಮುದ್ರಿಸಿ ಬಿಡುಗಡೆ ಮಾಡಲಾಗಿತ್ತು. ಆಗ ಹೆಚ್ಚಿನ ಬೇಡಿಕೆ ಇತ್ತು. ಮಾತಾ ವೈಷ್ಣೋ ದೇವಿ ಹಿಂದೂಗಳ ಆರಾಧ್ಯ ದೇವರಾಗಿದ್ದು ಬಹಳಷ್ಟು ಜನ ಲಕ್ಷ ಲಕ್ಷ ಕೊಟ್ಟು ಈ ಕಾಯಿನ್ ಗಳನ್ನು ಪಡೆಯುತ್ತಿದ್ದಾರೆ.
ಇದೇ ರೀತಿ ಮುಸ್ಲೀಂ ಸಮುದಾಯದಲ್ಲಿ 786 ಸೀರಿಸ್ ಇರುವ ನೋಟುಗಳನ್ನು ವಿಶೇಷವಾಗಿ ಪರಿಗಣಿಸಲಾಗುತ್ತಿದ್ದು. ಇದು ಕೂಡ ವೈರಲ್ ಆಗಿದೆ.