ಜನಪ್ರಿಯ ಸಂಗೀತ ನಿರ್ದೇಶಕ ರಾಜನ್ ಇನ್ನಿಲ್ಲ

Date:

ಜನಪ್ರಿಯ ಸಂಗೀತ ನಿರ್ದೇಶಕ ರಾಜನ್ ಇನ್ನಿಲ್ಲ
ಬೆಂಗಳೂರು : ಭಾರತೀಯ ಚಿತ್ರರಂಗದ ಜನಪ್ರಿಯ ಸಂಗೀತ ನಿರ್ದೇಶಕ ರಾಜನ್ ಭಾನುವಾರ (ಅ.11) ರಾತ್ರಿ 10.30ಕ್ಕೆ ವಿಧಿವಶರಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ, ಅವರು ಮನೆಯಲ್ಲಿಯೇ ಹೃದಯಾಘಾತದಿಂದ ನಿಧನರಾದರು. ಪುತ್ರ ಮತ್ತು ಪುತ್ರಿಯನ್ನು ಅವರು‌ ಅಗಲಿದ್ದಾರೆ. ಇಂದು ಅವರ ಅಂತ್ಯಕ್ರಿಯೆಯನ್ನು ಹೆಬ್ಬಾಳದ ಸ್ಮಶಾನದಲ್ಲಿ ನೆರವೇರಿಸಲಾಗುತ್ತದೆ.

ಮೂಲತಃ ಮೈಸೂರಿನವರಾದ ರಾಜನ್, ತಮ್ಮ ಸಹೋದರ ನಾಗೇಂದ್ರಪ್ಪ ಅವರೊಂದಿಗೆ ಸೇರಿಕೊಂಡು ‘ರಾಜನ್‌-ನಾಗೇಂದ್ರ’ ಹೆಸರಿನಲ್ಲಿ ಜಂಟಿಯಾಗಿ ಸಂಗೀತ ನಿರ್ದೇಶನ ಮಾಡುತ್ತಿದ್ದರು. 1952ರಲ್ಲಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಈ ಜೋಡಿ, ಸುಮಾರು 5 ದಶಕಗಳ ಕಾಲ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದರು. 1952ರಿಂದ 1999ರವರೆಗೆ 375ಕ್ಕೂ ಅಧಿಕ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ.
ಕನ್ನಡದ 200ಕ್ಕೂ ಅಧಿಕ ಸಿನಿಮಾಗಳಿವೆ. ಕನ್ನಡದ ಜೊತೆ ತೆಲುಗಿನಲ್ಲಿಯೂ ಈ ಜೋಡಿ ದೊಡ್ಡ ಯಶಸ್ಸು ಕಂಡಿತ್ತು. ತಮಿಳು, ಹಿಂದಿ, ಮಲಯಾಳಂ, ಶ್ರೀಲಂಕಾದ ಸಿಂಹಳ ಭಾಷೆಯ ಸಿನಿಮಾಗಳಿಗೂ ಸಂಗೀತ ಸಂಯೋಜಿಸಿದ್ದಾರೆ. ರಾಜನ್‌ ಅವರ ಸಹೋದರ ನಾಗೇಂದ್ರ ಅವರು 2000ರಲ್ಲಿ ಅನಾರೋಗ್ಯದಿಂದ ನಿಧನರಾಗಿದ್ದರು.

ಆಕಾಶವೇ ಬೀಳಲಿ ಮೇಲೆ, ಆಕಾಶ ದೀಪವು ನೀನು, ಆಕಾಶದಿಂದ ಧರೆಗಿಳಿದ ರಂಭೆ , ಆಸೆಯ ಭಾವ ಒಲವಿನ ಜೀವಾ, ದುಂಡು ಮಲ್ಲಿಗೆ ಮಾತಾಡೆಯಾ, ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ, ಇಂದೂ ಎನಗೆ ಗೋವಿಂದಾ, ಕಂಗಳು ವಂದನೆ ಹೇಳಿವೆ, ನಾವಾಡುವ ನುಡಿಯೇ‌ ಕನ್ನಡ ನುಡಿ, ನೀರ ಬಿಟ್ಟು ನೆಲದ ಮೇಲೆ, ಯುಗ ಯುಗಗಳೇ ಸಾಗಲಿ ಮೊದಲಾದವರು ಜನಪ್ರಿಯ ಗೀತೆಗಳು.

 

————————————————–

ಆರ್ ಆರ್ ಗೆ ರೋಚಕ ಗೆಲುವು

ದುಬೈ : ರಾಹುಲ್ ತೆವಾಟಿಯಾ ಹಾಗೂ ರಿಯಾನ ಪರಾಗ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ರಾಜಸ್ಥಾನ ರಾಯಲ್ಸ್ 5 ವಿಕೆಟ್ ಗೆಲುವು‌ ಪಡೆದಿದೆ . ಈ ಗೆಲುವಿನೊಂದಿಗೆ ರಾಜಸ್ಥಾನ 6ನೇ ಸ್ಥಾನ ಅಲಂಕರಿಸಿದೆ.
159 ರನ್ ಟಾರ್ಗೆಟ್ ಪಡೆದ ರಾಜಸ್ಥಾನ ರಾಯಲ್ಸ್ ತಂಡ ನಿರೀಕ್ಷಿತ ಆರಂಭವನ್ನು ಪಡೆದಿರಲಿಲ್ಲ . ಬೆನ್ ಸ್ಟೋಕ್ಸ್ ಕೇವಲ 5 ರನ್ ಮಾಡಿ ಪೆವಿಲಿಯನ್ ಸೇರಿದರು. ಕ್ಯಾಪ್ಟನ್ ಸ್ಟೀವನ್ ಸ್ಮಿತ್ ಸಂಪಾದನೆ ಕೂಡ ಕೇವಲ 5 ರನ್ . ಜೋಸ್ ಬಟ್ಲರ್ ಆಟ 16 ರನ್‌ ಮಾಡಲಷ್ಟೇ ಶಕ್ತರಾದರು.
ಸಂಜು ಸಾಮ್ಸನ್ ಹಾಗೂ ರಾಬಿನ್ ಉತ್ತಪ್ಪ ಕೊಂಚ ಹೋರಾಟ ನೀಡಿದರು. ಉತ್ತಪ್ಪ 18 ರನ್ ಮಾಡಿ ಔಟಾದರೆ, ಸಂಜು ಸಾಮ್ಸನ್ 26 ರನ್ ಗಳಿಸಿ ಪೆವಿಲಿಯನ್ ಸೇರಿದರು. ಸೋಲಿನ ಸುಳಿಯಲ್ಲಿದ್ದ ತಂಡಕ್ಕೆ ರಿಯಾನ್ ಪರಾಗ್ ಹಾಗೂ ರಾಹುಲ್ ತೆವಾಟಿಯಾ ಆಸರೆಯಾಗಿ ನಿಂತರು. ಈ ಜೋಡಿ ಎಸ್ ಆರ್ ಹೆಚ್ ನಿಂದ ಗೆಲುವನ್ನು ಕಸಿದುಕೊಂಡಿತು.
19.5 ಓವರ್ ಗಳಲ್ಲಿ ರಾಜಸ್ಥಾನ 5. ವಿಕೆಟ್ ಗಳ ಗೆಲುವಿನ ನಗೆ ಬೀರಿತು.

ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟಿಂಗ್ ಆಯ್ಕೆ ; ಕೊನೆಗೂ ಅಜಿಂಕ್ಯಾ ರಹಾನೆಗೆ ಸಿಕ್ತು ಚಾನ್ಸ್..!

ಅಬುಧಾಬಿ : 13 ನೇ ಆವೃತ್ತಿ IPL ನ ಈ ದಿನದ ಎರಡನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಿವೆ.‌ ಡೆಲ್ಲಿ ಈ‌ ಪಂದ್ಯಕ್ಕೆ ಅಜಿಂಕ್ಯಾ ರಹಾನೆಗೆ ಮಣೆ ಹಾಕಿದೆ. ರಿಷಭ್ ಪಂತ್ ಅವರಿಗೆ ವಿಶ್ರಾಂತಿ ನೀಡಲಾಗಿದ್ದು , ಅಲೆಕ್ಸ್ ಕ್ಯಾರಿ ಡೆಲ್ಲಿ ಕೀಪಿಂಗ್ ಹೊಣೆ ಹೊತ್ತಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ : : ಪೃಥ್ವಿ ಶಾ, ಶಿಖರ್ ಧವನ್, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್ (ನಾಯಕ), ಅಲೆಕ್ಸ್ ಕ್ಯಾರಿ (ವಿಕೆಟ್‌ಕೀಪರ್), ಮಾರ್ಕಸ್ ಸ್ಟೊಯ್ನಿಸ್, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಆರ್‌. ಅಶ್ವಿನ್, ಕಗಿಸೊ ರಬಾಡಾ, ಎನ್ರಿಚ್‌ ನಾರ್ಟ್ಜ್.

ಮುಂಬೈ ಇಂಡಿಯನ್ಸ್ : ಕ್ವಿಂಟನ್ ಡಿ’ಕಾಕ್ (ವಿಕೆಟ್‌ಕೀಪರ್‌), ರೋಹಿತ್ ಶರ್ಮಾ (ನಾಯಕ), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಕೈರೊನ್ ಪೊಲಾರ್ಡ್, ಕ್ರುಣಾಲ್ ಪಾಂಡ್ಯ, ಜೇಮ್ಸ್ ಪ್ಯಾಟಿನ್ಸನ್, ರಾಹುಲ್ ಚಹರ್, ಟ್ರೆಂಟ್ ಬೌಲ್ಟ್, ಜಸ್‌ಪ್ರೀತ್ ಬುಮ್ರಾ.

———-

ದುಬೈ : 13 ನೇ ಆವೃತ್ತಿ ಇಂದಿನ ಮೊದಲ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ ರಾಯಲ್ಸ್ ಮುಖಾಮುಖಿಯಾಗುತ್ತಿವೆ.‌ ಟಾಸ್ ಗೆದ್ದ ಎಸ್ ಆರ್ ಹೆಚ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
SRH : : ಡೇವಿಡ್ ವಾರ್ನರ್ (ನಾಯಕ), ಜಾನಿ ಬೈರ್‌ಸ್ಟೋವ್ (ವಿಕೆಟ್‌ಕೀಪರ್‌), ಮನೀಶ್ ಪಾಂಡೆ, ಕೇನ್ ವಿಲಿಯಮ್ಸನ್, ವಿಜಯ್ ಶಂಕರ್, ಪ್ರಿಯಮ್ ಗಾರ್ಗ್, ಅಭಿಷೇಕ್ ಶರ್ಮಾ, ರಶೀದ್ ಖಾನ್, ಸಂದೀಪ್ ಶರ್ಮಾ, ಖಲೀಲ್ ಅಹ್ಮದ್, ಟಿ ನಟರಾಜನ್.

RR : ಜೋಸ್ ಬಟ್ಲರ್ (ವಿಕೆಟ್‌ಕೀಪರ್‌), ರಾಬಿನ್ ಉತ್ತಪ್ಪ, ಸಂಜು ಸ್ಯಾಮ್ಸನ್, ಸ್ಟೀವನ್ ಸ್ಮಿತ್ (ನಾಯಕ), ಬೆನ್ ಸ್ಟೋಕ್ಸ್, ರಿಯಾನ್ ಪರಾಗ್, ರಾಹುಲ್ ತೆವಾಟಿಯಾ, ಜೋಫ್ರ ಆರ್ಚರ್, ಶ್ರೇಯಾಸ್ ಗೋಪಾಲ್, ಕಾರ್ತಿಕ್ ತ್ಯಾಗಿ, ವರುಣ್ ಆರೊನ್.

ಉದ್ಯೋಗಾಕಾಂಕ್ಷಿಗಳಿಗೆ ಬೇಕಾದ ಮಾಹಿತಿ..!

ಆಗ್ನೇಯ ಮಧ್ಯ ರೈಲ್ವೆಯು ಕೋವಿಡ್‌-19 ಸಂದಿಗ್ಧ ಪರಿಸ್ಥಿತಿಯಲ್ಲಿ ವೈದ್ಯಕೀಯ ಅಗತ್ಯತೆಯನ್ನು ನಿಭಾಯಿಸುವ ಸಲುವಾಗಿ 40 ಮೆಡಿಕಲ್ ಪ್ರ್ಯಾಕ್ಟೀಷನರ್‌ಗಳನ್ನು ನೇಮಕಾತಿ ಮಾಡಿಕೊಳ್ಳಲಿದೆ. ಇದಕ್ಕೆ ಅಧಿಸೂಚನೆ ಹೊರಡಿಸಿದೆ. ಈ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ 3 ತಿಂಗಳ ಅವಧಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.

ಹುದ್ದೆಯ ಹೆಸರು : ಜೆನೆರಲ್ ಡೆಪ್ಯೂಟಿ ಮೆಡಿಕಲ್ ಆಫೀಸರ್

ಹುದ್ದೆಗಳ ಸಂಖ್ಯೆ : 40ಹುದ್ದೆಗಳು

ಸ್ಥಳ : ಸೆಂಟ್ರಲ್ ಹಾಸ್ಟಿಟಲ್ ಎಸ್‌ಇಸಿಆರ್, ಬಿಲಾಸ್‌ಪುರ್‌

ವಿದ್ಯಾರ್ಹತೆ : CMP/ GDMO ಡೆಪ್ಯೂಟಿ ಮೆಡಿಕಲ್ ಆಫೀಸರ್ ಹುದ್ದೆಗಳಿಗೆ ಎಂಬಿಬಿಎಸ್‌ ಅನ್ನು ಎಂಸಿಐ ನಿಂದ ಅಂಗೀಕೃತಗೊಂಡ ಸಂಸ್ಥೆಗಳಿಂದ ಪಡೆದಿರಬೇಕು. ಸ್ಪೆಷಲಿಸ್ಟ್‌ ಹುದ್ದೆಗಳಿಗೆ ಮೆಡಿಷನ್, ಚೆಸ್ಟ್‌ ಫಿಸೀಷಿಯನ್, ಕ್ರಿಟಿಕಲ್ ಕೇರ್ ಸ್ಪೆಷಲಿಸ್ಟ್‌, ಪ್ಯಾಥೋಲಜಿಸ್ಟ್‌, ಮೈಕ್ರೋಬಯೋಲಾಜಿಸ್ಟ್‌ ನಲ್ಲಿ ಎಂಡಿ ಓದಿರಬೇಕು.

ವೇತನ : ಮಾಸಿಕವಾಗಿ ಸೆಷಲಿಸ್ಟ್‌ ಹುದ್ದೆಗಳಿಗೆ ರೂ.95000, ಜೆನೆರಲ್ ಡ್ಯೂಟಿ ಡಾಕ್ಟರ್ ಹುದ್ದೆಗಳಿಗೆ ರೂ.75000 ವೇತನ ನೀಡಲಾಗುತ್ತದೆ.

ವಿದ್ಯಾರ್ಹತೆ ಮತ್ತು ಕಾರ್ಯಾನುಭವಕ್ಕೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ಸ್ಕ್ಯಾನ್‌ ಮಾಡಿ, ಅರ್ಜಿಯ ಸಾಫ್ಟ್‌ ಕಾಪಿಯನ್ನು ಇ-ಮೇಲ್‌ ವಿಳಾಸ spohrd.secr@gmail.com ಕ್ಕೆ ಕಳುಹಿಸಿ.

ಅರ್ಜಿ ಸಲ್ಲಿಸಲು ಕೊನೆ ದಿನಾಂಕ- 27-09-2020 ಆಗಿದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುತ್ತದೆ. ಇತರೆ ಹೆಚ್ಚಿನ ಮಾಹಿತಿಗಳನ್ನು ಸೌಥ್‌ ಈಸ್ಟ್‌ ಸೆಂಟ್ರಲ್‌ ರೈಲ್ವೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪಡೆಯಿರಿ.

ಹಳೆಯ 5, 10 ರೂ ಕಾಯಿನ್ಸ್ ಇದ್ರೆ ನೀವು ಮಿಲೇನಿಯರ್ ಆಗ್ಬಹುದು..!?

500 – 1000 ರೂ ನೋಟುಗಳನ್ನು ಅಮಾನ್ಯ ಮಾಡಿದ ಬಳಿಕ ಅಂದರೆ ಡಿ ಮಾನಿಟೈಸೇಷನ್ ನಂತರ ನಗದು ವ್ಯವಹಾರ ಕಡಿಮೆಯಾಗಿದೆ. ಆನ್ ಲೈನ್ ಬ್ಯಾಂಕಿಂಗ್ ವ್ಯವಹಾರ ಹೆಚ್ಚಿದೆ. ನಿಧಾನ ಕಾಯಿನ್ ಬಳಕೆ ಬಹಳ ಕಡಿಮೆಯಾಗಿದೆ.

ಆದರೆ ಕೆಲವು ಆಯ್ದ ನಾಣ್ಯಗಳಿಗೆ ಬೇಡಿಕೆ ಹೆಚ್ಚಾಗಿದೆ. ನಿಮ್ಮಲ್ಲಿ ಇಂಥಾ ನಾಣ್ಯಗಳಿದ್ದರೆ ನೀವು ಕೋಟ್ಯಾಧೀಶರಾಗಬಹುದು. ನಿಮ್ಮಲ್ಲಿ ಮಾತಾ ವೈಷ್ಣೋದೇವಿ ಚಿತ್ರ ಇರುವ 5 ಅಥವಾ 10 ರೂ ಕಾಯಿನ್ ಇದ್ದರೆ ಅದನ್ನು ಹರಾಜು ಮಾಡಬಹುದು..!

ಕೊರೋನಾ ದೆಸೆಯಿಂದ ನಿರುದ್ಯೋಗ ಹೆಚ್ಚಾಗಿದೆ‌ . ಅನೇಕರು ಉದ್ಯೋಗ ಕಳೆದುಕೊಂಡಿದ್ದಾರೆ. ಅನೇಕರ ವೇತ‌‌ನ ಕಡಿಮೆಯಾಗಿದೆ‌ . ಜನ ಹಣಕ್ಕಾಗಿ ನಾನಾ ಐಡಿಯಾಗಳನ್ನು ಮಾಡುತ್ತಿದ್ದಾರೆ. ಅದರಲ್ಲಿ ಈ ನಾಣ್ಯ ಹರಾಜು ಐಡಿಯಾ ಕೂಡ ಒಂದು.
ಮಾತಾ ವೈಷ್ಣೋ ದೇವಿ ಚಿತ್ರವಿರುವ 5 ಅಥವಾ 10 ರೂ ನಾಣ್ಯಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇದೆ.
2002 ರಲ್ಲಿ ಈ ನಾಣ್ಯಗಳನ್ನು ಮುದ್ರಿಸಿ ಬಿಡುಗಡೆ ಮಾಡಲಾಗಿತ್ತು. ಆಗ ಹೆಚ್ಚಿನ ಬೇಡಿಕೆ ಇತ್ತು.‌ ಮಾತಾ ವೈಷ್ಣೋ ದೇವಿ ಹಿಂದೂಗಳ ಆರಾಧ್ಯ ದೇವರಾಗಿದ್ದು ಬಹಳಷ್ಟು ಜನ ಲಕ್ಷ ಲಕ್ಷ ಕೊಟ್ಟು ಈ ಕಾಯಿನ್ ಗಳನ್ನು ಪಡೆಯುತ್ತಿದ್ದಾರೆ.
ಇದೇ ರೀತಿ ಮುಸ್ಲೀಂ ಸಮುದಾಯದಲ್ಲಿ 786 ಸೀರಿಸ್ ಇರುವ ನೋಟುಗಳನ್ನು ವಿಶೇಷವಾಗಿ ಪರಿಗಣಿಸಲಾಗುತ್ತಿದ್ದು. ಇದು ಕೂಡ ವೈರಲ್ ಆಗಿದೆ.

 

Share post:

Subscribe

spot_imgspot_img

Popular

More like this
Related

ಕಲ್ಯಾಣ ಕರ್ನಾಟಕದ ಬಗ್ಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ: ಸಿಸಿ ಪಾಟೀಲ್ ಬೇಸರ

ಕಲ್ಯಾಣ ಕರ್ನಾಟಕದ ಬಗ್ಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ: ಸಿಸಿ ಪಾಟೀಲ್ ಬೇಸರ ಬೆಂಗಳೂರು:-ಕಲ್ಯಾಣ...

ಅಕ್ರಮ ಆಸ್ತಿ ಕೇಸ್: ಶೃಂಗೇರಿ ಶಾಸಕ ರಾಜೇಗೌಡ್ರಿಗೆ ಲೋಕಾಯುಕ್ತ ಶಾಕ್

ಅಕ್ರಮ ಆಸ್ತಿ ಕೇಸ್: ಶೃಂಗೇರಿ ಶಾಸಕ ರಾಜೇಗೌಡ್ರಿಗೆ ಲೋಕಾಯುಕ್ತ ಶಾಕ್ ಚಿಕ್ಕಮಗಳೂರು: ಶೃಂಗೇರಿ...

ನವರಾತ್ರಿ ಒಂಬತ್ತನೇ ದಿನದ ಪೂಜೆ – ಸಿದ್ಧಿದಾತ್ರಿಯ ಆರಾಧನೆ !

ನವರಾತ್ರಿ ಒಂಬತ್ತನೇ ದಿನದ ಪೂಜೆ – ಸಿದ್ಧಿದಾತ್ರಿಯ ಆರಾಧನೆ ! ಒಂಬತ್ತನೇ ದಿನ...

ಹಿರಿಯ ನಟ, ನಿರ್ದೇಶಕ,ರಂಗಭೂಮಿ ಕಲಾವಿದ ಯಶವಂತ ಸರದೇಶಪಾಂಡೆ ನಿಧನ!

ಹಿರಿಯ ನಟ, ನಿರ್ದೇಶಕ,ರಂಗಭೂಮಿ ಕಲಾವಿದ ಯಶವಂತ ಸರದೇಶಪಾಂಡೆ ನಿಧನ! ಹೃದಯಾಘಾತದಿಂದ ಹಿರಿಯ ರಂಗಭೂಮಿ...