ಸ್ಟಾರ್ ಆ್ಯಂಕರ್ ರಮಾಕಾಂತ್ ಇನ್ನು CEO..! ದೃಶ್ಯ ಮಾಧ್ಯಮ ಕ್ಷೇತ್ರದ ಹೊಸ ಭರವಸೆ TV6 ..!
ರಮಾಕಾಂತ್ ಆರ್ಯನ್ …ಕನ್ನಡ ಮಾಧ್ಯಮ ಲೋಕದ ಕೆಲವೇ ಕೆಲವು ಮಂದಿ ಸ್ಟಾರ್ ಪತ್ರಕರ್ತರಲ್ಲಿ ಮುಂಚೂಣಿ ಸಾಲಲ್ಲಿ ನಿಲ್ಲುವವರು. ನಿರರ್ಗಳ ನಿರೂಪಣೆ , ಅದ್ಭುತ ವಾಕ್ಚಾತುರ್ಯ ಮತ್ತು ಅಗಾಧ ಜ್ಞಾನ ರಮಾಕಾಂತ್ ಅವರನ್ನು ಸ್ಟಾರ್ ನಿರೂಪಕರ ಸಾಲಲ್ಲಿ ನಿಲ್ಲಿಸಿದೆ.
ಮೂಲತಃ ಕನಕಪುರದವರಾದ ರಮಾಕಾಂತ್ ಬೆಳೆದಿದ್ದು, ಬದುಕು ಕಟ್ಟಿಕೊಂಡಿದ್ದು ಬೆಂಗಳೂರಲ್ಲಿ.
ಸ್ನಾತಕೋತ್ತರ ಪದವಿ ವೇಳೆ ಕನ್ನಡ ಪ್ರಭ ದಿನಪತ್ರಿಕೆಯಲ್ಲಿ ಇಂಟರ್ನ್ಶಿಪ್ ಮುಗಿಸಿದ್ರು. ಆ ವೇಳೆ ವೆಂಕಟನಾರಯಣ್ ಅವ್ರು ಕನ್ನಡಪ್ರಭ ಸಂಪಾದಕರಾಗಿದ್ದರು. ಈಗಿನ ಪಬ್ಲಿಕ್ ಟಿವಿಯ ಮುಖ್ಯಸ್ಥರಾಗಿರುವ ಎಚ್.ಆರ್ ರಂಗನಾಥ್ ಅವರು ಮುಖ್ಯವರದಿಗಾರರಾಗಿದ್ದರು. ಅವರಿಂದ ವರದಿಗಾರಿಕೆ, ಪತ್ರಿಕೋದ್ಯಮದ ಪಾಠ ಕಲಿತ ರಮಾಕಾಂತ್ ಅವರಿಗೆ ಸ್ನಾತಕೋತ್ತರ ಪದವಿ ಬಳಿಕ ಉಷಾಕಿರಣ ಮತ್ತು ಈ ಟಿವಿ ಎರಡಲ್ಲೂ ಉದ್ಯೋಗವಕಾಶ ಸಿಕ್ತು. ಈ ಟಿವಿಯಲ್ಲಿ ಕೆಲಸ ಮಾಡೋದಾದ್ರೆ ಹೈದರಾಬಾದ್‍ಗೆ ಹೋಗಬೇಕಿತ್ತು. ಆದ್ದರಿಂದ ಮನೆಯವರ ಮಾತಿನಂತೆ ಉಷಾಕಿರಣ ಪತ್ರಿಕೆ ಮೂಲಕ ಪತ್ರಕರ್ತರಾಗಿ ವೃತ್ತಿ ಜೀವನ ಆರಂಭಿಸಿದ್ರು. ಅದು 2004ನೇ ಇಸವಿ.
ನಂತರ 2006ರಲ್ಲಿ ಟಿವಿ9 ಕಡೆ ಇವರ ಪಯಣ ಸಾಗಿತು. ಟಿವಿ9ನ 7ನೇ ಎಂಪ್ಲಾಯ್ ಇವರು…! ಟಿವಿ9 ಸುದ್ದಿವಾಹಿನಿ ಆರಂಭವಾದಾಗ ಮೊಟ್ಟ ಮೊದಲು ನ್ಯೂಸ್ ಓದಿದ್ದು ಇವರು ಹಾಗೂ ಸುಕನ್ಯಾರವರು. ಅಷ್ಟೇಅಲ್ಲ, ಟಿವಿ9ನ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದಾದ ‘ಬೌಂಡರಿ ಲೈನ್’ನ ಮೊದಲ ನಿರೂಪಕರು ಸಹ ರಮಾಕಾಂತ್.
ಬಳಿಕ ಕಸ್ತೂರಿ, ಈ ಟಿವಿಯಲ್ಲಿ ಕೆಲಸ ಮಾಡಿದ್ರು. ಬಳಿಕ ಸುವರ್ಣ ನ್ಯೂಸ್ ಸೇರಿದ್ರು.
ಇದೀಗ ಸುವರ್ಣ ನ್ಯೂಸ್ ಬಿಟ್ಟಿರುವ ರಮಾಕಾಂತ್ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಅದುವೇ TV6..!
ಹೌದು, ರಮಾಕಾಂತ್ ಮತ್ತು ಅವರ ಗೆಳೆಯ ಮಂಜು ಬಾಣಗೆರೆ ನೇತೃತ್ವದಲ್ಲಿ TV 6 ಎಂಬ ಹೊಸ ಸುದ್ದಿವಾಹಿನಿ ಕನ್ನಡ ಮಾಧ್ಯಮ ಲೋಕಕ್ಕೆ ಎಂಟ್ರಿ ಕೊಡ್ತಿದೆ. ರಮಾಕಾಂತ್ ಅವರು ಸಿ ಇ ಒ ಆಗಿ, ಮಂಜು ಬಾಣಗೆರೆ ಪ್ರಧಾನ ಸಂಪಾದಕರಾಗಿ TV 6 ಅನ್ನು ಮುನ್ನಡೆಸಲಿದ್ದಾರೆ.
ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ TV 6 ಸಖತ್ ಸದ್ದು ಮಾಡ್ತಿದ್ದು, ಸದ್ಯದಲ್ಲೇ 24*7 ನ್ಯೂಸ್ ಚಾನಲ್ ಆಗಿ ಎಲ್ಲರ ಮನೆ ಮನ ತಲುಪಲಿದೆ. ಇಡೀ TV 6 ಬಳಗಕ್ಕೆ ದಿ ನ್ಯೂ ಇಂಡಿಯನ್ ಟೈಮ್ಸ್ ನಿಂದ ಪ್ರೀತಿಯ ಶುಭ ಹಾರೈಕೆ…
ಸೋಶಿಯಲ್ ಮೀಡಿಯಾದಲ್ಲಿ ‘ಬಾಗಲಕೋಟೆ ಪೋರಿ’..!
ಸೋಶಿಯಲ್ ಮೀಡಿಯಾ ಹೊಸ ಹೊಸ ಪ್ರತಿಭೆಗಳ ಅನಾವರಣಕ್ಕೆ ಒಂದೊಳ್ಳೆ ವೇದಿಕೆಯಾಗಿದೆ. ಹೊಸಬರು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದ್ದಾರೆ. ಹಾಗೆಯೇ ಈಗ ಸೋಶಿಯಲ್ ಮೀಡಿಯಾದಲ್ಲಿ ‘ಬಾಗಲಕೋಟೆ ಪೋರಿ’ಯ ಸದ್ದು ಜೋರಾಗಿದೆ.
ಹೌದು, ಮುತ್ತು ಮುಷ್ಠಿಗಿಮಠ ರಚಿಸಿರುವ ಬಾಗಲಕೋಟೆ ಪೋರಿ ಹಾಡು ಸಖತ್ ಸದ್ದು ಮಾಡ್ತಿದೆ. ಅಶ್ವಿನಿ ಭರಟ್ಟಿ, ಬಾಲ ಕಲಾವಿದರಾದ ಆಯುಷ್ ಇಂಗಳಗಿ, ಮನೋಜ ಕೋಟಿಕಲ್, ರಾಜೇಶ್ವರಿ ನಾಗರಾಳ, ವೈಭವ ಚವ್ಹಾಣ್ ಈ ಆಲ್ಬಂ ಹಾಡಿನಲ್ಲಿ ನಟಿಸಿದ್ದಾರೆ. ಪುನಿತ ಸಾಯಿನಾಥ ಅವರು ವಿಡಿಯೋ ಚಿತ್ರಿಕರಣ ಹಾಗೂ ಸಂಕಲನ ಮಾಡಿದ್ದಾರೆ.
ದಿ ನ್ಯೂ ಇಂಡಿಯನ್ ಟೈಮ್ಸ್ ಸೋಶಿಯಲ್ ಮೀಡಿಯಾ ಪಾರ್ಟನರ್ ಆಗಿ ಹಾಡಿಗೆ ಸಾಥ್ ನೀಡಿದೆ.
ಬಾಗಲಕೋಟೆಯ ನಟರಾಜ್ ನೃತ್ಯ ಶಾಲೆಯಲ್ಲಿ ಆಲ್ಬಮ್ ಸಾಂಗ್ ಬಿಡುಗಡೆ ಮಾಡಲಾಯಿತು.
ಫ್ರೊ. ರೇವಣ್ಣ ಬೆಣ್ಣೂರ , ನಟರಾಜ ಇಂಗಳಗಿ, ಅಶ್ವಿನ ಎನ್.ಎಸ್, ಜಯಶ್ರೀ ಲಾಗಲೋಟಿ, ಡಿ.ಎಚ್. ಪಾಟೀಲ, ಅಶ್ವಿನಿ ಭರಡ್ಡಿ, ಪ್ರಕಾಶ ಎಚ್. ಮುಂತಾದವರು ಉಪಸ್ಥಿತರಿದ್ದರು. ಪ್ರೊ.ಶ್ರಿಕಾಂತ ಸರಡಗಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಬರೋಬ್ಬರಿ 400 ಕಂಪನಿ ಒಡೆಯನ ಸ್ಟೋರಿ..!
ಫ್ರ್ಯಾನ್ಸ್ ದೇಶದ ಜೀನ್ ಮಾರ್ಕ್ ಬೊರೆಲ್ಲೋ ಅಂತಾ. ಇವರ ವಯಸ್ಸು ಈಗ 60 ದಾಟಿದೆ. ಸೋಶಿಯಲ್ ಸಾಲಿಡಾರಿಟಿ ಎಕಾನಮಿ ಗ್ರೂಪ್ – ಎಸ್ ಓ ಎಸ್ ಅನ್ನೋ ಕಂಪನಿಯ ಸಂಸ್ಥಾಪಕರು ಹೌದು. ಗ್ರೂಪ್ ಎಸ್ ಓ ಎಸ್ ವಿಶ್ವದಲ್ಲೇ ಅತಿ ಹೆಚ್ಚು ಸೋಶಿಯಲ್ ಎಂಟರ್ಪ್ರೈಸಸ್ ಉದ್ಯಮವನ್ನು ಹೊಂದಿದೆ.
ಜೀನ್, ಎಸ್ ಓ ಎಸ್ ಎಂಬ ಈ ಒಂದೇ ಕಂಪನಿಯ ಒಡೆತನ ಹೊಂದಿಲ್ಲ. ಜಿನ್ ಮತ್ತವರ ತಂಡ ಈಗ ಸರಿಸುಮಾರು 400ಕ್ಕೂ ಹೆಚ್ಚು ಕಂಪನಿಗಳನ್ನು ಹೊಂದಿದೆ. ಅಚ್ಚರಿ ಅದರೆ, ಗ್ರೂಪ್ ಎಸ್ ಓ ಎಸ್ ಅಧೀನದಲ್ಲಿ ಬರುವ ಎಲ್ಲಾ ಕಂಪನಿಗಳು ಸ್ವತಂತ್ರ ಹಣಕಾಸು ವ್ಯವಸ್ಥೆಯನ್ನು ಕೂಡ ಹೊಂದಿವೆ.
ಇನ್ನು, ಗ್ರೂಪ್ ಎಸ್ ಓ ಎಸ್ ಆರಂಭವಾಗಿದ್ದು 1984ರಲ್ಲಿ. ಕಳೆದ 35 ವರ್ಷಗಳಲ್ಲಿ ಗ್ರೂಪ್ ಎಸ್ ಓ ಎಸ್ 35 ದೇಶಗಳಿಗೆ ವಿಸ್ತರಿಸಿದೆ.ಸದ್ಯಕ್ಕೆ ಸುಮಾರು 15 ಸಾವಿರಕ್ಕಿಂತಲೂ ಅಧಿಕ ಜನರಿಗೆ ಉದ್ಯೋಗ ಒದಗಿಸಿಕೊಟ್ಟಿದೆ. ಶಿಕ್ಷಣ, ಆರೋಗ್ಯ, ಹೌಸಿಂಗ್, ಎಂಪ್ಲಾಯಿಮೆಂಟ್ ಸೇರಿದಂತೆ ಹಲವು ಸಾಮಾಜಿಕ ವಿಭಾಗಗಳಲ್ಲೂ ಸೇವೆ ಸಲ್ಲಿಸುತ್ತಿದೆ. ಹೀಗಾಗಿ ಗ್ರೂಪ್ ಎಸ್ ಓ ಎಸ್ ಯುರೋಪ್ ದೇಶಗಳಲ್ಲೇ ಅತ್ಯುತ್ತಮ ಪ್ರಸಿದ್ಧ ಕಂಪನಿಯೆಂದು ಹೆಸರು ಮಾಡಿದೆ.
ಅಂದಹಾಗೇ, ಜೀನ್ ಮಾರ್ಕ್ ಬೊರೆಲ್ಲೋರನ್ನು ಸೋಶಿಯಲ್ ಸೆಕ್ಟರ್ನ ‘ ಬಿಲ್ ಗೇಟ್ಸ್ ’ ಅಂತನೂ ಕರೆಯುತ್ತಾರಂತೆ ಯುರೋಪ್ ರಾಷ್ಟ್ರಗಳ ಜನ. ಏಕೆಂದರೆ, ಜೀನ್ ಗಳಿಕೆಯಲ್ಲೂ ಸಾಕಷ್ಟು ಮುಂದಿದ್ದಾರೆ. ಫ್ರಾನ್ಸ್ ಸೈನ್ಯದಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಸಾಮಾನ್ಯ ಸೈನಿಕನ ಮಗನಾಗಿ ಹುಟ್ಟಿದ್ದ ಜೀನ್ ಸಾಕಷ್ಟು ಕಷ್ಟಪಟ್ಟು ಮೇಲೆ ಬಂದು ಈಗ ಉದ್ಯಮ ಕ್ಷೇತ್ರದಲ್ಲಿ ಮಹಾನ್ ಸಾಧನೆ ಮಾಡಿದ್ದಾರೆ.
ಇನ್ನು,1984ರಲ್ಲಿ ಜೀನ್, ಗ್ರೂಪ್ ಎಸ್ ಓ ಎಸ್ ಹುಟ್ಟು ಹಾಕಿದ್ರು. ಆಗ ಅದು ಕೇವಲ ಒಂದೇ ಒಂದು ಸಂಸ್ಥೆಯಾಗಿತ್ತು. ಫ್ರಾನ್ಸ್ನಲ್ಲಿದ್ದ ಡ್ರಗ್ ಮಾಫಿಯಾ ವಿರುದ್ಧ ಹೋರಾಟ ಮಾಡುತ್ತಾ ಡಗ್ಸ್ನಿಂದ ತೊಂದರೆಗೀಡಾದವರ ನೆರವಿಗೆ ನಿಂತ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆ ಗ್ರೂಪ್ ಎಸ್ ಓ ಎಸ್ ಪಾತ್ರವಾಗಿದೆ.
ಸಮಾಜಮುಖಿ ಜೀನ್, ಡ್ರಗ್ಸ್ನ ದಾಸರಾಗಿದ್ದ ನೂರಾರು ಜನ ಮನ ಪರಿವರ್ತಿಸುವ ಕಾರ್ಯ ಮಾಡುತ್ತಿದ್ದಾರೆ. ಹೆಚ್ಐವಿ ಮತ್ತು ಇತರೆ ಕಾಯಿಲೆಗಳಿಂದ ಬಳಲುತ್ತಿದ್ದವರಿಗಾಗಿ ರಕ್ತ ಪರೀಕ್ಷಾ ಕೇಂದ್ರವನ್ನು ಸಹ ಆರಂಭಿಸಿದ್ದಾರೆ. ಹೆಲ್ತ್ ಕೇರ್ ಉದ್ಯಮಕ್ಕೆ ಕಾಲಿಟ್ಟು ಆಸ್ಪತ್ರೆಗಳನ್ನು ಕಟ್ಟಿಸಿದ್ದರಲ್ಲದೆ, ನಿವೃತ್ತರಿಗಾಗಿ ಮನೆಗಳನ್ನು ಕೂಡ ನಿರ್ಮಿಸಿಕೊಟ್ಟು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದಾರೆ.
ಸಾಮಾನ್ಯ ಸೈನಿಕ ಮಗ ಜೀನ್, ಜೀವನದಲ್ಲಿ ಒಂದೊಂದೇ ಹೆಜ್ಜೆಗಳನ್ನು ಇಟ್ಟು ಇಂದು ಯಶಸ್ಸಿನ ಶಿಖರ ಏರಿದ್ದಾರೆ. ಚಿಕ್ಕ ಚಿಕ್ಕ ಹೆಜ್ಜೆಗಳು ಜೀನ್ ಅವರನ್ನು ವಿಶ್ವದ ಪ್ರಸಿದ್ಧ ವ್ಯಕ್ತಿಯನ್ನಾಗಿಸಿದೆ. ಇಂದು ಗ್ರೂಪ್ ಎಸ್ ಓ ಎಸ್ ವಿಶ್ವದ ಮೂಲೆ ಮೂಲೆಯನ್ನು ತಲುಪಿದೆ. ಸದ್ಯಕ್ಕೆ ಗ್ರೂಪ್ ಎಸ್ ಓ ಎಸ್ 600 ಮಿಲಿಯನ್ ಯುರೋ ವಹಿವಾಟು ನಡೆಸುತ್ತಿದೆ. ಈ ವಹಿವಾಟನ್ನು 1 ಬಿಲಿಯನ್ ಯೂರೋಗೆ ಹೆಚ್ಚಿಸಿ ಗ್ರೂಪ್ ಎಸ್ ಓ ಎಸ್ ನಿಂದ ನಿವೃತ್ತರಾಗುವ ಕನಸು ಜೀನ್ ಮಾರ್ಕ್ ಬೊರೆಲ್ಲೋ ಅವರದ್ದು.
ಏನೇ ಹೇಳಿ, ಫ್ರಾನ್ಸ್ ದೇಶದ ಉದ್ಯಮಿಯ ಈ ಸಾಧನೆ ವಿಶ್ವದ ಎಲ್ಲಾ ಉದ್ಯಮಿಗಳಿಗೂ ಮಾದರಿ ಅನ್ನುವುದರಲ್ಲಿ ಎರಡು ಮಾತಿಲ್ಲ.