ಆ್ಯಕ್ಸಿಡೆಂಟ್ ನಲ್ಲಿ ಕಾಲು ಕಳೆದುಕೊಂಡ ಆಕೆ ಮ್ಯಾರಥಾನ್ ನಲ್ಲಿ ಭಾಗವಹಿಸಿದ್ಹೇಗೆ?

Date:

ಆ್ಯಕ್ಸಿಡೆಂಟ್ ನಲ್ಲಿ ಕಾಲು ಕಳೆದುಕೊಂಡ ಆಕೆ ಮ್ಯಾರಥಾನ್ ನಲ್ಲಿ ಭಾಗವಹಿಸಿದ್ಹೇಗೆ?

ಆಕೆಯ ಹೆಸರು ಮೇಧ ಸಾಹ…ಅವರ ಸಾಧನೆ ಅವರ ಮಾತುಗಳಲ್ಲೇ ಇಲ್ಲಿದೆ..ಓದಿ…

ನಾನು ಕೊಲ್ಕತ್ತದಲ್ಲಿ ಜನಿಸಿದ್ದು, ನನಗೆ 18 ವರ್ಷ ವಯಸ್ಸಾಗಿತ್ತು. ತಂದೆ ದೊಡ್ಡ ಉದ್ಯಮಿ ಮತ್ತು ತಾಯಿ ಗೃಹಿಣಿ. ನಾನು ಎಲ್ಲರ ಇಷ್ಟದ ಮಗುವಾಗಿದ್ದೆ. ಎಲ್ಲರೊಂದಿಗೆ ಸಂತೋಷದಿಂದ ಕಾಲಕಳೆಯುತ್ತಿದ್ದೆ. ಶಾಲೆಯ ನಂತರ ನಾನು ಕೊಲ್ಕತದಲ್ಲಿ ಇಂಜಿನಿಯರಿಂಗ್ ಮಾಡಲು ನಿರ್ಧರಿಸಿದೆ. ಕಾಲೇಜಿನ ಮೊದಲನೆ ದಿನ 21 ಆಗಸ್ಟ್ 2017 ರಂದು ಸಂತೋಷದಿಂದ ಹೊರಟೆ. ಬಸ್ಸುಗಳು ಬಹಳ ಕಡಿಮೆ ಇದ್ದಿದ್ದರಿಂದ ತುಂಬ ತಡವಾಗುತ್ತಿತ್ತು.

ಕಾಲೇಜಿನ ಮೊದಲನೆ ದಿನವೆ ತಡವಾಗಿ ಹೋಗುವುದು ಸರಿಯಲ್ಲ ಎಂದು ನಿರ್ಧರಿಸಿದೆ, ಅದೆ ಸಮಯದಲ್ಲಿ ಡೈರೆಕ್ಟ್ ಬಸ್ ಬಂತು. ಒಂದೆ ಡೈರೆಕ್ಟ್ ಬಸ್ ಇದ್ದಿದ್ದರಿಂದ ಎಲ್ಲ ವಿದ್ಯಾರ್ಥಿಗಳು ಅದಕ್ಕೆ ಕಾಯುತ್ತಿದ್ದರು. ಒಬ್ಬೊಬ್ಬರಾಗಿ ಬಸ್ಸನ್ನು ಹತ್ತಿದ್ದರು ನಾನು ಕೊನೆಯಲ್ಲಿದ್ದೆ. ಇನ್ನೇನು ಹತ್ತಬೇಕೆನ್ನುವ ಸಮಯದಲ್ಲಿ ಯಾರೊಬ್ಬರು ನನ್ನನ್ನು ನೂಕಿದಂತಾಯಿತು. ತಿರುಗಿ ನೊಡಿದಾಗ ಕೆಳಗೆ ಬಿದ್ದಿದ್ದೆ. ಬಟ್ಟೆಯಲ್ಲ ರಕ್ತವಾಗಿತ್ತು ಮತ್ತು ನನ್ನ ಎಡಕಾಲಿನ ಮೇಲೆ ಬಸ್‍ಹರಿದು ಸಂಪೂರ್ಣವಾಗಿ ಜಜ್ಜಿಹೋಗಿತ್ತು. ಆ ನೋವಿನಿಂದಲು ನನ್ನ ಫೋನ್ ತೆಗೆದು ಅಮ್ಮನಿಗೆ ಕಾಲ್ ಮಾಡಿದೆ. ಅಮ್ಮ ಮತ್ತು ಚಿಕ್ಕಮ್ಮ ಬಂದು ನನ್ನನ್ನು ಆಸ್ಪತ್ರೆಗೆ ಕರೆದೊಯ್ದರು. ಇದರ ಮಧ್ಯ ನಾನು ತುಂಬ ರಕ್ತಕಳೆದುಕೊಂಡಿದ್ದರಿಂದ ಬದುಕುವ ಭರವಸೆ ಕಳೆದುಕೊಂಡಿದ್ದೆ.


ನಂತರ ಚಿಕ್ಕಪ್ಪ ಬಂದರು ಆಗ ಸ್ವಲ್ಪ ಧೈರ್ಯ ತಂದುಕೊಂಡೆ ಆಗಾಗಲೆ ನನ್ನ ಸ್ನೇಹಿತರು ಬಂದರು. ಅಮ್ಮ ಮತ್ತು ಚಿಕ್ಕಮ್ಮ ಎಮರ್ಜೆನ್ಸಿ ವಾರ್ಡ್‍ಗೆ ಹೋದರು ಅಲ್ಲಿ ವೈದ್ಯರು ಕೊಲಂಬಿಯಗೆ ಹೋಗಲು ಹೆಳಿದರು. ನಾನು ನೋವಿನಿಂದ ಚೀರಾಡುತ್ತಿದ್ದೆ.
ಸುಮಾರು 7:30ಗೆ ಡಾಕ್ಟರ್ ಚಿಕಿತ್ಸೆ ಪ್ರಾರಂಬಿಸಿದರು. ಡಾಕ್ಟರ್ ನನ್ನ ಕಾಲನ್ನು ಉಳಿಸಲು ತುಂಬ ಪ್ರಯತ್ನ ಮಾಡಿದರು ಆದರೆ ನನ್ನ ಕಾಲು ಪೂರ್ಣವಾಗಿ ಜಜ್ಜಿ ಹೋಗಿದ್ದರಿಂದ ಉಳಿಸಲಾಗಲಿಲ್ಲ. ಅದರೆ ಬದುಕಿ ಉಳಿದ್ದಿದ್ದು ನನಗೆ ಖುಷಿ ತಂದಿತ್ತು. ನಾನು ನನ್ನ ಕುಟುಂಬ ಮತ್ತು ಸ್ನೇಹಿತರನ್ನು ನೋಡಿ ನಗೆ ಬೀರಿದೆ.
ಸ್ವಲ್ಪ ದಿನಗಳ ಕಾಲ ಆಸ್ಪತ್ರೆಯಲ್ಲಿ ಇರಬೇಕಾಯಿತು. ಕೆಲ ದಿನಗಳ ನಂತರ ಕಾಲೇಜು ಸೇರಿಕೊಂಡೆ. ಆದರೆ ನಾನು ವೀಲ್ಚೇರ್‍ಗೆ ಅಂಟಿಕೊಳ್ಳಬೇಕಾಯಿತು ಮತ್ತು ನಡೆಯುದಕ್ಕೆ ನಾನು ಸ್ನೇಹಿತರನ್ನು ಅವಲಂಬಿಸಿದೆ. ಅವರು ನನಗೆ ಬೆಂಬಲವಾಗಿ ನಿಂತರು.
ಕೆಲವು ತಿಂಗಳುಗಳ ನಂತರ ನನಗೆ ಕೃತಕ ಕಾಲನ್ನು ಅಳವಡಿಸಿದರು. ಇದರಿಂದಾಗಿ ನಾನು ಸುಲಭವಾಗಿ ನಡೆಯಲು ಪ್ರಾರಂಭಿಸಿದೆ ಮತ್ತು ವಿಶ್ವಾಶವನ್ನು ಪಡೆದುಕೊಂಡೆ.
ಡಿಸಂಬರ್ 17 ರಂದು ನಾನು ಟಾಟಾ ಸ್ಟೀಲ್ ಮ್ಯಾರಥಾನ್‍ನಲ್ಲಿ ಭಾಗವಹಿಸಿ ಯಶಸ್ವಿಯಾಗಿದ್ದೆ. ನಾನು ಒಳ್ಳೆ ಎಂಜಿನಿಯರ್ ಆಗಲು ಬಯಸುತ್ತೇನೆ ಮತ್ತು ವಿಶ್ವದಾದ್ಯಂತ ಪ್ರಯಾಣಿಸುತ್ತೇನೆ.
ಪ್ರತಿಯೊಬ್ಬರು ತಮ್ಮ ನೋವಿನ ಹಿಂದಿನ ಅನುಭವಗಳಿಂದ ಬಲಿಪಶು ಅಥವಾ ವಿಜಯಶಾಲಿಯಾಗಲು ಆಯ್ಕೆ ಹೊಂದಿರುತ್ತಾರೆ ಅದರಲ್ಲಿ ನಾನು ವಿಜಯಶಾಲಿಯಾಗಿ ಹೊರಹೊಮ್ಮಲು ಆಯ್ಕೆ ಮಾಡಿದ್ದೇನೆ.

Share post:

Subscribe

spot_imgspot_img

Popular

More like this
Related

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ ಬೆಳಗಾವಿ: ಪ್ರತಿವರ್ಷದಂತೆ...

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...