ಕ್ಯಾನ್ಸರ್ ಅಂತ ಗೊತ್ತಾದ್ಮೇಲೆ ಮಿಲೇನಿಯರ್ ಮಾಡಿದ್ದೇನು?

Date:

ಕ್ಯಾನ್ಸರ್ ಅಂತ ಗೊತ್ತಾದ್ಮೇಲೆ ಮಿಲೇನಿಯರ್ ಮಾಡಿದ್ದೇನು?

ಅಲಿ ಬನಾತ್.. ಈ ಹೆಸರು ಕೇಳದವರು ಬಹಳ ವಿರಳ. ಆಸ್ಟ್ರೇಲಿಯಾದ ಪ್ರಜೆಯಾದ ಅಲಿ ಬನಾತ್ ಎಂಬ ಯುವಕ ಹುಟ್ಟಿನಿಂದಲೇ ಅಗರ್ಭ ಶ್ರೀಮಂತ. ಧರ್ಮ ನಿಷ್ಠೆಯಿಂದ ಎಲ್ಲರೊಂದಿಗೂ ಸಂತೋಷಮಯವಾಗಿ ನಗುನಗುತ್ತಾ ಜೀವನ ಸಾಗಿಸುತ್ತಾ ಇದ್ದರು
ಅಲಿ ಬನಾತ್ ಪಾಲಿಗೆ 2015ರಲ್ಲಿ ಒಂದು ಅಘಾತಕಾರಿ ಸುದ್ಧಿ ಕಿವಿಗೆ ಅಪ್ಪಳಿಸುತ್ತದೆ. ಅದುವೇ ತನ್ನನ್ನು ಮರಣದ ಕೂಪಕ್ಕೆ ಕೊಂಡೊಯ್ಯುತ್ತಿರುವ ಕ್ಯಾನ್ಸರ್ ಎಂಬ ಮಾರಕ ರೋಗ ತನ್ನನ್ನು ಆವರಿಸಿರುವ ಸುದ್ಧಿ. ತಾನಿನ್ನು ಕೆಲವೇ ವರ್ಷ ಮಾತ್ರ ಬದುಕಿ ಉಳಿಯಲಿದ್ದೇನೆ ಎಂಬ ವಾಸ್ತವಾಂಶವನ್ನು ಆಸ್ಪತ್ರೆಯ ವೈದ್ಯರು ತನ್ನ ಮುಂದೆ ಬಿಚ್ಚಿಟ್ಟಾಗ ಅಲಿ ಬನಾತ್ ದೃತಿಗೆಡಲಿಲ್ಲ. ಎಲ್ಲವೂ ದೇವರ ಇಚ್ಚೆಯಾಗಿದೆ ಎಂದು ಹೇಳಿ ನಿರಾಳರಾದರು.


ತನಗೆ ಹೆಚ್ಚು ದಿನ ಬದುಕಲು ಸಾಧ್ಯವಿಲ್ಲ ಎಂದರಿತ ಅಲಿ ಬನಾತ್ , ಅಂದಿನಿಂದ ಒಂದು ನಿರ್ಧಾರಕ್ಕೆ ಬಂದರು. ಇನ್ನುಮುಂದೆ ತನ್ನಲ್ಲಿರುವ ಹಣವನ್ನು ಬಡವರ ಏಳಿಗೆಗಾಗಿ ವಿನಿಯೋಗಿಸುವುದು ಎಂದು ನಿರ್ಧರಿಸಿದ ಅಲಿ ಬನಾತ್ ‘ಮುಸ್ಲಿಂ ಅರೌಂಡ್ ದಿ ವರ್ಲ್ಡ್’ ಎಂಬ ಚಾರಿಟಿ ಸಂಸ್ಥೆಯೊಂದನ್ನು ಸ್ಥಾಪಿಸಿದರು.
ಆಫ್ರಿಕಾ ಖಂಡದಲ್ಲಿರುವ ಟೋಗೊ ಎಂಬ ಪ್ರದೇಶದಲ್ಲಿ ವಾಸಿಸುತ್ತಿರುವ ಜನರು ಹಸಿವೆಯಿಂದ ಸಾವನ್ನಪ್ಪುತ್ತಿರುವುದು ಹಾಗೂ ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣಗಳಿಂದ ವಂಚಿತರಾಗುತ್ತಿರುವುದನ್ನು ಅರಿತ ಅಲಿ ಬನಾತ್, ತಾನೇ ಸ್ವತಹ ಅಲ್ಲಿಗೆ ತೆರಲಿ ಅವರ ಸೇವೆಯಲ್ಲಿ ನಿರತರಾದರು. ಈ ಮೂಲಕ ಏಷ್ಯಾ. ಆಫ್ರಿಕಾ ಆಸ್ಟ್ರೇಲಿಯಾ ಸೇರಿದಂತೆ ವಿಶ್ವದ ಮೂಲೆ ಮೂಲೆಯಲ್ಲಿರುವ ಬಡವರ ಕಷ್ಟಗಳನ್ನು ಪರಿಹರಿಸಲು ಪ್ರಯತ್ನಿಸಿದರು.


ಆಫ್ರಿಕಾದಲ್ಲೇ ಆಲಿ ಬನಾತ್ ಕಟ್ಟಿಸಿದ ಶಾಲೆ, ಮಸೀದಿ ಹಾಗೂ ಮದರಸಗಳಿಗೆ ಲೆಕ್ಕವೇ ಇಲ್ಲ. ನೀರಿಗಾಗಿ ಕೊರೆಸಿದ ಬೋರ್ ವೆಲ್ ಗಳು ಅದೆಷ್ಟೋ. ಬಡವರ ಹಸಿವು ನೀಗಿಸಲು ನೀಡಿದ ಆಹಾರ ಪಾನೀಯಗಳು ನಮ್ಮ ಊಹೆಗೆ ನಿಲುಕದಷ್ಟು. ಈ ಕಾರಣದಿಂದಲೇ ಈ ಪ್ರದೇಶದ ಜನರ ಮನಸ್ಸಿನಲ್ಲಿ ಸದಾ ಅಚ್ಚಲಿಯದೇ ಉಳಿದಿದ್ದಾರೆ ಅಲಿ ಬನಾತ್.
ತನಗೆ ಬಾಧಿಸಿರುವ ಕ್ಯಾನ್ಸರ್ ರೋಗವು ನೀಡುತ್ತಿರುವ ಸಹಿಸಲಾಗದ ನೋವಿನ ನಡುವೆಯೂ ಬಡ ಮಕ್ಕಳೊಂದಿಗೆ ನಗುಮುಖದೊಂದಿಗೆ ಸಂತೋಷವನ್ನು. ಹಂಚಿಕೊಳ್ಳುತ್ತಿದ್ದ ಅಲಿ ಬನಾತ್ ಈಗ ನೆನಪು ಮಾತ್ರ. ತನ್ನ ಸಂಪತ್ತನ್ನು ಬಡವರಿಗಾಗಿ ದಾರೆ ಎರೆದಿದ್ದ ಆಸ್ಟ್ರೇಲಿಯಾದ ಮಲ್ಟಿ ಮಿಲಿಯನರ್ ಅಲಿ ಬನಾತ್ ಅವರು ಆಸ್ಟ್ರೇಲಿಯಾ ಸಮಯ ಮಗ್ರಿಬ್ನ ಸ್ವಲ್ಪ ಮುಂಚೆ ನಿಧನರಾದರು.
ತನ್ನ ಮರಣಕ್ಕಿಂತ ಕೆಲವೇ ಸಮಯದ ಹಿಂದೆ ತನ್ನ ಆರೋಗ್ಯಕ್ಕಾಗಿ ಪ್ರಾರ್ಥಿಸುವಂತೆ ಲೋಕದ ಜನರಲ್ಲಿ ವಿನಂಸಿಕೊಂಡಿದ್ದ ಅಲಿ ಬನಾತ್ ಈಗ ಕೇವಲ ನೆನಪು ಮಾತ್ರ. ನನಗೆ ಬಂದಿರುವ ಕ್ಯಾನ್ಸರ್ ರೋಗವು ದೇವರು ಕಡೆಯಿಂದ ನನಗೆ ಬಂದ ಉಡುಗೊರೆಯಾಗಿದೆ. ಒಂದು ವೇಳೆ ಈ ರೋಗ ನನ್ನನ್ನು ಕಾಡದೇ ಇರುತ್ತಿದ್ದರೇ ಬಡವರಸೇವೆ ಮಾಡಲು ನನ್ನಿಂದ ಸಾಧ್ಯವಾಗುತ್ತಿರಲಿಲ್ಲ ಎಂದ ಹಸನ್ಮುಖಿಯಾಗಿಯೇಈ ಭೂಮಿಯಿಂದ ವಿರಮಿಸಿದ ಅಲಿ ಬನಾತ್ ಎಂಬ ಚೇತನವನ್ನು ಮರೆಯಲು ಈ ಮನುಕುಲಕ್ಕೆ ಎಂದೆಂದಿಗೂ ಸಾಧ್ಯವಿಲ್ಲ ಅಲ್ಲವೇ?

Share post:

Subscribe

spot_imgspot_img

Popular

More like this
Related

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...