ಬೇಡದ ದಾಖಲೆ ಬರೆದ ಕಿಂಗ್ ಕೊಹ್ಲಿ..!

Date:

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ರನ್ ಮಷಿನ್ ಎಂಬ ಬಿರುದಿದೆ. ಕ್ರಿಕೆಟ್‌ ಕ್ಷೇತ್ರದಲ್ಲಿ ಕೊಹ್ಲಿ ಅನೇಕ (ಸಕಾರಾತ್ಮಕ) ದಾಖಲೆಗಳನ್ನು ನಿರ್ಮಿಸಿದ್ದಾರೆ, ನಿರ್ಮಿಸುತ್ತಿದ್ದಾರೆ. ಇದೇ ಕಾರಣಕ್ಕೆ ದಂತಕತೆ ಸಚಿನ್ ದಾಖಲೆಗಳನ್ನು ಮೀರಿಸಬಲ್ಲ ಒಬ್ಬ ಬ್ಯಾಟ್ಸ್‌ಮನ್‌ ಇದ್ದರೆ ಅದು ಕೊಹ್ಲಿ ಎಂಬ ಮಾತು ಕ್ರಿಕೆಟ್ ಜಗತ್ತಿನಲ್ಲಿ ಕೇಳಿಬರುತ್ತಿರುತ್ತದೆ. ಕೊಹ್ಲಿ ನಿರ್ಮಿಸುತ್ತಿರುವ ದಾಖಲೆಗಳ ಸಾಲಿನಲ್ಲಿ ಒಂದಿಷ್ಟು ಬೇಡದ ದಾಖಲೆಗಳೂ ಇವೆ.
ಇತ್ತೀಚೆಗೆ ಮುಕ್ತಾಯಗೊಂಡ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ ಸರಣಿಯ ಆರಂಭಿಕ ಪಂದ್ಯದಲ್ಲೂ ಕೊಹ್ಲಿ ಹೆಸರಿಗೆ ಬೇಡದ ದಾಖಲೆಯೊಂದು ಸೇರ್ಪಡೆಯಾಗಿದೆ. ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್‌ನಲ್ಲಿ 9 ವಿಕೆಟ್ ಹೀನಾಯ ಸೋಲು ಕಾಣುತ್ತಲೇ ಕೊಹ್ಲಿಯ ಹೆಸರಿಗೂ ಕೆಟ್ಟ ದಾಖಲೆ ಸೇರಿಕೊಂಡಿದೆ.
2008ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟಿ20ಐನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದಾಗಿನಿಂದ ಹಿಡಿದು ಕೊಹ್ಲಿ ಪ್ರತೀ ವರ್ಷವೂ ಕನಿಷ್ಠ ಒಂದೆರಡು ಶತಕ ಆದರೂ ಬಾರಿಸುತ್ತಿದ್ದರು. ಆದರೆ ಕೊಹ್ಲಿ ಹೆಸರಿನಲ್ಲಿ ಶತಕವೇ ದಾಖಲಾಗದ ವರ್ಷವಿದ್ದರೆ ಅದು 2020. ಇನ್ನು ದ್ವಿತೀಯ ಪಂದ್ಯ ಡಿಸೆಂಬರ್ 26ರಿಂದ ಆರಂಭಗೊಳ್ಳಲಿದೆಯಾದರೂ ಮುಂದಿನ ಯಾವುದೇ ಪಂದ್ಯಗಳಲ್ಲಿ ಕೊಹ್ಲಿ ಆಡುತ್ತಿಲ್ಲ.
2020ರ ಇಸವಿಯನ್ನು ಕೊಹ್ಲಿ ಒಂದೇ ಒಂದು ಶತಕ ಬಾರಿಸದೆ ಮುಗಿಸಿದಂತಾಗಿದೆ. ಜನವರಿಯಲ್ಲಿ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಮಗುವಿಗೆ ಜನ್ಮ ನೀಡುವ ನಿರೀಕ್ಷೆಯಿರುವುದರಿಂದ ಕೊಹ್ಲಿ ಈಗಾಗಲೇ ಬಿಸಿಸಿಐನಿಂದ ಪಿತೃತ್ವ ರಜೆ ಮಂಜೂರು ಮಾಡಿಕೊಂಡಿದ್ದಾರೆ. ಅಂದರೆ ಮೊದಲ ಟೆಸ್ಟ್‌ ಬಳಿಕ ಕೊಹ್ಲಿ ಉಳಿದ ಪಂದ್ಯಗಳಲ್ಲಿ ಆಡುತ್ತಿಲ್ಲ. ಕೊರೊನಾ ಕಾಟದಿಂದ ಈ ವರ್ಷ ಕ್ರಿಕೆಟ್‌ ಪಂದ್ಯಗಳು ನಡೆದಿದ್ದೇ ಕಡಿಮೆ. ನಡೆದ ಪಂದ್ಯಗಳಲ್ಲಿ ಕೊಹ್ಲಿ ಶತಕ ಬಾರಿಸುವ ಪ್ರದರ್ಶನ ತೋರಿಸಲೂಯಿಲ್ಲ. ಕೊಹ್ಲಿ ಟೆಸ್ಟ್‌ನಲ್ಲಿ 27 ಶತಕ, 7 ದ್ವಿಶತಕ, ಏಕದಿನದಲ್ಲಿ 43 ಶತಕಗಳನ್ನು ಬಾರಿಸಿದ್ದಾರೆ.
ಮೊದಲ ಟೆಸ್ಟ್‌ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡಿದ್ದ ಭಾರತ, ಮೊದಲ ಇನ್ನಿಂಗ್ಸ್‌ನಲ್ಲಿ 93.1 ಓವರ್‌ಗೆ 244 ಪೇರಿಸಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ 74, ಚೇತೇಶ್ವರ ಪೂಜಾರ 43, ಅಜಿಂಕ್ಯ ರಹಾನೆ 42 ರನ್ ಬಾರಿಸಿದ್ದೇ ಹೆಚ್ಚು. ಆಸ್ಟ್ರೇಲಿಯಾ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 72.1 ಓವರ್‌ಗೆ 191 ರನ್ ಗಳಿಸಿ 53 ರನ್ ಹಿನ್ನಡೆ ಅನುಭವಿಸಿತ್ತು. ಆದರೆ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭಾರತ ಕೆಟ್ಟ ಬ್ಯಾಟಿಂಗ್ ಪ್ರದರ್ಶಿಸಿತ್ತು. 21.2 ಓವರ್‌ಗೆ 9 ವಿಕೆಟ್ ಕಳೆದು 36 ರನ್ ಬಾರಿಸಿ ಡಿಕ್ಲೇರ್ ಘೋಷಿಸಿತು. ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ದ್ವಿತೀಯ ಇನ್ನಿಂಗ್ಸ್‌ನಲ್ಲಿ 21 ಓವರ್‌ಗೆ 2 ವಿಕೆಟ್ ಕಳೆದು 93 ರನ್ ಬಾರಿಸಿತು.

ರಾಜ್ಯದಲ್ಲಿ ಏರಿದ ಕೊರೋನಾ ಸಾವಿನ ಸಂಖ್ಯೆ..!

ರಾಜ್ಯದಲ್ಲಿ ಕೊರೋನಾ ಅಬ್ಬರ ಕಡಿಮೆಯಾಗುತ್ತಿದ್ದು, ಶುಕ್ರವಾರ 1,152 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 9,08,275ಕ್ಕೆ ಏರಿಕೆಯಾಗಿದೆ.
ಇನ್ನು ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ ಕೊರೋನಾ ಸೋಂಕಿನಿಂದ 15 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ ಸೋಂಕಿನಿಂದ 12,004 ಮಂದಿ ಬಲಿಯಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ರಾಜ್ಯದಲ್ಲಿ ಇಂದು 2,174 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 8,81,882ಕ್ಕೆ ಏರಿಕೆಯಾಗಿದೆ. ಇನ್ನು 14,370 ಸಕ್ರೀಯ ಪ್ರಕರಣಗಳಿದ್ದು, ಈ ಪೈಕಿ 223 ಮಂದಿ ಕೋವಿಡ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರಿನಲ್ಲಿ ಇಂದು 586 ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 3,82,209ಕ್ಕೆ ಏರಿಕೆಯಾಗಿದೆ. ಇನ್ನು ಸೋಂಕಿಗೆ 10 ಮಂದಿ ಬಲಿಯಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಡ್ರಗ್ಸ್ ಮಾಫಿಯಾ ಬಗ್ಗೆ ಇಂದ್ರಜಿತ್ ಮತ್ತೊಂದಿಷ್ಟು ಪ್ರಶ್ನೆಗಳು..!

ಬಾರಿಯ ಗ್ರ್ಯಾಂಡ್‌ಸ್ಲ್ಯಾಮ್‌ ಚಾಂಪಿಯನ್, ರಷ್ಯಾದ ಮರಿಯಾ ಶರಪೋವಾ ಜಂಟಿ ಜೀವನದತ್ತ ಮುಖಮಾಡಿದ್ದಾರೆ. ಬ್ರಿಟಿಷ್ ಬ್ಯುಸಿನೆಸ್‌ಮ್ಯಾನ್ ಅಲೆಕ್ಸಾಂಡರ್ ಗಿಲ್ಕೆಸ್ ಜೊತೆ ಶರಪೋವಾ ಗುರುವಾರ (ಡಿಸೆಂಬರ್ 17) ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
6.2 ಅಡಿ ಎತ್ತರದ ಚೆಲುವೆ ಮರಿಯಾ ಶರಪೋವಾಗೀಗ 33ರ ಹರೆಯ. ಇದೇ ವರ್ಷ ಫೆಬ್ರವರಿಯಲ್ಲಿ ಶರಪೋವಾ ಅಂತಾರಾಷ್ಟ್ರೀಯ ಟೆನಿಸ್ ವೃತ್ತಿ ಬದುಕಿಗೆ ನಿವೃತ್ತಿ ಘೋಷಿಸಿದ್ದರು. ತಾನು ಲೆಕ್ಸಾಂಡರ್ ಗಿಲ್ಕೆಸ್ ಜೊತೆ ಎಂಗೇಜ್‌ ಆಗಿರುವ ಸಂಗತಿಯನ್ನು ಮರಿಯಾ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಅಲೆಕ್ಸಾಂಡರ್ ಜೊತೆಗಿರುವ ಒಂದಿಷ್ಟು ಫೋಟೋಗಳನ್ನು ಮರಿಯಾ ಹಂಚಿಕೊಂಡಿದ್ದಾರೆ. ‘ನಾವು ಮೊದಲು ಭೇಟಿಯಾದ ದಿನವೇ ನಾನು ಆತನಿಗೆ ಯೆಸ್ ಅಂದೆ. ಇದು ನಮ್ಮ ಸಣ್ಣ ರಹಸ್ಯವಾಗಿತ್ತು, ಅಲ್ಲವೇ?,’ ಎಂದು ಶರಪೋವಾ ಇನ್‌ಸ್ಟಾ ಪೋಸ್ಟ್‌ ಜೊತೆ ಬರೆದುಕೊಂಡಿದ್ದಾರೆ.
ಅಲೆಕ್ಸಾಂಡರ್ ಅವರು ಪ್ಯಾಡಲ್‌8 ಎನ್ನುವ ಹರಾಜು ಸಂಸ್ಥೆಯ ಸ್ಥಾಪಕಾಧ್ಯಕ್ಷರಾಗಿದ್ದಾರೆ. ಆ ಸಂಸ್ಥೆಯೀಗ ಬಹಳ ಯಶಸ್ಸು ಕಾಣುತ್ತಿದೆ. 2018ರಲ್ಲಿ ಅಲೆಕ್ಸಾಂಡರ್ ಮತ್ತು ಶರಪೋವಾ ಸಾರ್ವಜನಿಕವಾಗಿಯೇ ರೊಮಾನ್ಸ್ ಮಾಡಿ ತಮ್ಮ ನಡುವಿನ ಸಂಬಂಧವನ್ನು ಸಾರಿ ಹೇಳಿದ್ದರು.

ಗಿಲ್ಕೆಸ್ ಜೊತೆ ಮರಿಯಾ ಎಂಗೇಜ್..!

ನಂಗೆ ಕೋತಿ ಕಚ್ಚಿಲ್ಲ ಅಂದಿದ್ಹೇಕೆ ರೇಣುಕಾಚಾರ್ಯ?

ನನಗೆ ಕೋತಿ ಕಚ್ಚಿಲ್ಲ, ಭಯದಿಂದ ಅದನ್ನು ಸೆರೆಹಿಡಿದು ಬೇರೆ ಕಡೆ ಸ್ಥಳಾಂತರಿಸಿಲ್ಲ ಎಂದು ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ ಸ್ಪಷ್ಟಪಡಿಸಿದ್ದಾರೆ. ವಿಧಾನಸೌಧದಲ್ಲಿ ಶುಕ್ರವಾರ ಮಾತನಾಡಿದ ಅವರು ಕೋತಿ ಕಚ್ಚಿದೆ ಎಂಬ ಸುದ್ದಿ ಸತ್ಯಕ್ಕೆ ದೂರವಾಗಿದ್ದು ಎಂದರು.
ಹೊನ್ನಾಳಿ ಪಟ್ಟಣದ ಸರಕಾರಿ ಆಸ್ಪತ್ರೆ ಆವರಣದಲ್ಲಿ ಶಾಸಕ ಎಂಪಿ.ರೇಣುಕಾಚಾರ್ಯ ಇದ್ದ ಗುಂಪಿನ ಮೇಲೆ ಮುಷ್ಯವೊಂದು ದಾಳಿ ನಡೆಸಿತ್ತು. ಈ ವೇಳೆ ಶಾಸಕರು ತಪ್ಪಿಸಿಕೊಂಡರೂ ಪೌರ ಕಾರ್ಮಿಕರಿಗೆ ಕೋತಿ ದಾಳಿಯಿಂದ ಗಾಯಗಳಾಗಿದೆ.
ಈ ಹಿಂದೆ ಹೋರಿಯಿಂದ ಗುದ್ದಿಸಿಕೊಂಡಿದ್ದ ರೇಣುಕಾಚಾರ್ಯ ಇದೀಗ ಕೋತಿ ಕಾಟದಿಂದ ಸುದ್ದಿಯಲ್ಲಿದ್ದರು. ಆದರೆ ಇದಕ್ಕೆ ಸ್ಪಷ್ಟೀಕರಣ ನೀಡಿದ ರೇಣುಕಾಚಾರ್ಯ, ಎರಡು ಮುಷ್ಯಗಳು ಎರಡು ತಿಂಗಳಿಂದ ತೊಂದರೆ ಕೊಡುತ್ತಿತ್ತು. ನೂರಾರು ಜನರಿಗೆ ಕಚ್ಚಿವೆ. ಈ ಪೈಕಿ ಒಂದನ್ನು ಸೆರೆಹಿಡಿಸಿದ್ದೆವು. ಆದರೆ ಒಂದು ಅಲ್ಲಿಂದ ತಪ್ಪಿಸಿಕೊಂಡಿದೆ.
ಮೊನ್ನೆ ಪಟ್ಟಣ ಪಂಚಾಯತ್ ನೌಕರರೊಂದಿಗೆ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಅಲ್ಲಿ ನಾನೂ ಹೋಗಿದ್ದೆ. ಅಲ್ಲಿ ಪಟ್ಟಣ ಪಂಚಾಯತ್‌ ಮೂರು ನೌಕರರ ಮೇಲೆ ದಾಳಿ ನಡೆಸಿತ್ತು. ಈ ಹಿಂದೆ ಈ ನೌಕರರು ಕೋತಿ ಮೇಲೆ ಹಲ್ಲೆ ನಡೆಸಿದ್ದರು. ಅದಕ್ಕಾಗಿ ಅವರನ್ನೇ ಹುಡುಕಿ ಕೋತಿ ದಾಳಿ ನಡೆಸಿದೆ.
ಆದರೆ ಮುಂಜಾಗರೂಕತಾ ಕ್ರಮವಾಗಿ ನಾನು ಆಸ್ಪತ್ರೆಯೊಳಗೆ ಉಳಿದುಕೊಂಡೆ ಅಷ್ಟೇ. ಬದಲಾಗಿ ನನ್ನ ಮೇಲೆ ಕೋತಿ ದಾಳಿ ನಡೆಲಿಲ್ಲ ಎಂದು ತಿಳಿಸಿದರು. ಒಟ್ಟಿನಲ್ಲಿ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಹೋರಿ, ಕೋತಿ ಕಾಟದಿಂದ ಪದೇ ಪದೇ ಸುದ್ದಿಯಾಗುತ್ತಿದ್ದಾರೆ.

Share post:

Subscribe

spot_imgspot_img

Popular

More like this
Related

ಹಬ್ಬದ ಹೂವಿನ ಮರುಬಳಕೆ: ಎಸೆಯುವ ಬದಲು ಹೇಗೆಲ್ಲಾ ಮರು ಬಳಸಬಹುದು ಗೊತ್ತಾ..?

ಹಬ್ಬದ ಹೂವಿನ ಮರುಬಳಕೆ: ಎಸೆಯುವ ಬದಲು ಹೇಗೆಲ್ಲಾ ಮರು ಬಳಸಬಹುದು ಗೊತ್ತಾ..? ದಸರಾ,...

ನವರಾತ್ರಿ ಎಂಟನೇ ದಿನ – ಮಹಾಗೌರಿ !

ನವರಾತ್ರಿ ಎಂಟನೇ ದಿನ – ಮಹಾಗೌರಿ ! ದೇವಿಯ ಹಿನ್ನಲೆ ನವರಾತ್ರಿಯ ಎಂಟನೇ ದಿನ...

ಅಗತ್ಯ ಸೌಕರ್ಯ ತಕ್ಷಣವೇ ಒದಗಿಸಿ: ರಾಜ್ಯ ಸರ್ಕಾರಕೆ ಹೆಚ್.ಡಿ. ಕುಮಾರಸ್ವಾಮಿ ಸಲಹೆ

ಅಗತ್ಯ ಸೌಕರ್ಯ ತಕ್ಷಣವೇ ಒದಗಿಸಿ: ರಾಜ್ಯ ಸರ್ಕಾರಕೆ ಹೆಚ್.ಡಿ. ಕುಮಾರಸ್ವಾಮಿ ಸಲಹೆ ನವದೆಹಲಿ:ಕಲ್ಯಾಣ...