ಯಶ್ ಹುಟ್ಟುಹಬ್ಬದ ಸಲುವಾಗಿ ಬಹುನಿರೀಕ್ಷಿತ ಕೆಜಿಎಫ್ ಚಾಪ್ಟರ್ 2 ಚಿತ್ರದ ಟೀಸರ್ ಅನ್ನು ನಾಳೆ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಣೆ ಮಾಡಿತ್ತು. ನಾಳೆ ಹೊಂಬಾಳೆ ಫಿಲಂಸ್ ಯುಟ್ಯೂಬ್ ಚಾನೆಲ್ ನಲ್ಲಿ ಟೀಸರ್ ಬಿಡುಗಡೆ ಮಾಡುವ ಯೋಜನೆ ಇತ್ತು.
ಆದರೆ ಯಾರೋ ಕಿಡಿಗೇಡಿಗಳು ಇಂದೇ ಕೆಜಿಎಫ್ ಚಾಪ್ಟರ್ 2 ಚಿತ್ರದ ಟೀಸರ್ ಅನ್ನು ಲೀಕ್ ಮಾಡಿದ್ದಾರೆ. ಇನ್ನೂ ಕೆಜಿಎಫ್ 2 ನ ಟೀಸರ್ ಇದೀಗ ವಾಟ್ಸಾಪಲ್ಲಿ ಹರಿದಾಡುತ್ತಿದೆ. ನಾಳೆ ಬಿಡುಗಡೆಯಾಗಬೇಕಿದ್ದ ಟೀಸರ್ ಇದೀಗ ಮೊಬೈಲ್ ನಲ್ಲಿ ಹರಿದಾಡುತ್ತಿದೆ..