ರಿಯ ಚಕ್ರವರ್ತಿ ಹಲವಾರು ತಿಂಗಳುಗಳಿಂದ ಚರ್ಚೆಯಲ್ಲಿರುವ ನಟಿ. ಡಾ ಸುಶಾಂತ್ ಸಿಂಗ್ ಅವರ ನಿಧನದ ನಂತರ ಡ್ರ’ಗ್ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದ ನಟಿ ರಿಯಾ ಚಕ್ರವರ್ತಿ ಜೈಲಿಂದ ಬಿಡುಗಡೆಯಾಗಿದ್ದಾರೆ. ಇತ್ತೀಚಿಗಷ್ಟೇ ಜೈಲಿನಿಂದ ಹೊರಬಂದ ರಿಯ ಚಕವರ್ತಿಯವರು ಎಲ್ಲಿಯೂ ಹೆಚ್ಚಾಗಿ ಕಾಣಿಸಿಕೊಂಡಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ಆಚೆ ಕಾಣಿಸಿಕೊಂಡಿರುವ ರಿಯ ಚಕ್ರವರ್ತಿ ಅವರ ಮುಖದಲ್ಲಿ ಮಂದಹಾಸ ಇತ್ತು.
ರಿಯಾ ಚಕ್ರವರ್ತಿ ಅವರ ಕಷ್ಟದ ದಿನಗಳಲ್ಲಿ ಜೊತೆಗಿದ್ದ ಗೆಳೆಯ ಎಂಟಿಬಿ ರೋಡೀಸ್ ಖ್ಯಾತಿಯ ರಾಜೀವ್ ಲಕ್ಷ್ಮಣ್ ಅವರನ್ನು ಭೇಟಿಯಾಗಿದ್ದಾರೆ. ಇನ್ನು ಈ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತುಂಬಾ ದಿನಗಳ ನಂತರ ರಿಯಾ ಚಕ್ರವರ್ತಿಯವರು ಖುಷಿಯಿಂದ ಈ ಫೋಟೋಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಇನ್ನು ರಾಜೀವ್ ಲಕ್ಷ್ಮಣ್ ಅವರು ಈ ಫೋಟೋಗಳನ್ನು “ಮೈ ಗರ್ಲ್” ಎಂದು ಪೋಸ್ಟ್ ಮಾಡಿದರು. ತದನಂತರ ಆ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ.. ಅಷ್ಟೇ ಅಲ್ಲದೆ ನಾನು ಆ ರೀತಿ ಪೋಸ್ಟ್ ಮಾಡಬಾರದಿತ್ತು ಇದರಿಂದ ಆಕೆಗೆ ಇಲ್ಲಸಲ್ಲದ ಮಾತುಗಳು ಕೇಳಿಬರುತ್ತವೆ ಹೀಗಾಗಿ ನಾನು ಆ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದೇನೆ, ನಾನು ಮತ್ತು ರಿಯಾ ಇಬ್ಬರೂ ಒಳ್ಳೆಯ ಸ್ನೇಹಿತರು ಅಷ್ಟೇ ಎಂದು ಹೊಸ ಪೋಸ್ಟ್ ಒಂದನ್ನು ಹಾಕಿದ್ದಾರೆ..