ಗಾಂಧಿನಗರ: ನಾಲ್ಕು ಬಾರಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮಾಧವ್ ಸಿಂಗ್ ಸೋಲಂಕಿಯವರು ಇಂದು ತಮ್ಮ ಗಾಂಧಿನಗರದ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಹಿರಿಯ ಕಾಂಗ್ರೆಸ್ ನಾಯಕ (93) ಮಾಧವ್ ಸಿಂಗ್ ಸೋಲಂಕಿ ಮಾಜಿ ಪ್ರಧಾನಿ ಪಿ.ವಿ ನರಸಿಂಹ ರಾವ್ ಅವರ ಆಡಳಿತಾವಧಿಯಲ್ಲಿ ವಿದೇಶಾಂಗ ವ್ಯವಹಾರ ಸಚಿವರಾಗಿದ್ದರು.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಮಾಧವ್ ಸಿಂಗ್ ಸೋಲಂಕಿ ಅವರು ಅಸಾಧಾರಣ ನಾಯಕರಾಗಿದ್ದರು. ಗುಜರಾತ್ ರಾಜಕೀಯದಲ್ಲಿ ದಶಕಗಳ ಕಾಲ ಪ್ರಮುಖ ಪಾತ್ರ ವಹಿಸಿದ್ದರು. ರಾಜ್ಯಕ್ಕೆ ಅವರು ನೀಡಿದ್ದ ಕೊಡುಗೆ ಮತ್ತು ಅಭಿವೃದ್ಧಿ ಸೇವೆಗಳು ಅಪಾರ. ಇಂದು ಅವರ ನಿಧನ ಬಹಳ ದುಃಖ ತಂದಿದೆ. ಓಂ ಸಾಂತಿ ಎಂದು ಹೇಳುವ ಮೂಲಕ ಸಂತಾಪ ಸೂಚಿಸಿದ್ದಾರೆ.
ಮಾಧವ್ ಸಿಂಗ್ ಸೋಲಂಕಿಯವರ ನಿಧನ ವಿಷಯ ಕೇಳಿ ಬೇಸರವಾಗಿದೆ. ಕಾಂಗ್ರೆಸ್ ಸಿದ್ಧಾಂತವನ್ನು ಬಲಪಡಿಸುವಲ್ಲಿ ಮತ್ತು ಸಾಮಾಜಿಕ ನ್ಯಾಯವನ್ನು ಉತ್ತೇಜಿಸುವಲ್ಲಿ ಅವರು ನೀಡಿದ ಕೊಡುಗೆಗಳು ಅಪಾರ. ಅವರ ಕುಟುಂಬ ಮತ್ತು ಸ್ನೇಹಿತರಿಗೆ ಸೋಲಂಕಿಯವರ ಸಾವನ್ನು ಸಹಿಸಿಕೊಳ್ಳಲು ಶಕ್ತಿ ದೇವರು ನೀಡಲಿ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಗುಜರಾತ್ ಮಾಜಿ ಮುಖ್ಯಮಂತ್ರಿ, ದೇಶದ ಮಾಜಿ ವಿದೇಶಾಂಗ ಸಚಿವ ಮತ್ತು ಕಾಂಗ್ರೆಸ್ ಹಿರಿಯ ಮುಖಂಡ ಮಾಧವ್ ಸಿಂಗ್ ಸೋಲಂಕಿ ಅವರ ಸಾವು ದುರಂತ. ದೇವರು ಅವರ ಪವಿತ್ರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಜೀವಿತಾವಧಿಯಲ್ಲಿ ಸ್ವಭಾವ ಮತ್ತು ಕಾರ್ಯಗಳು ಜನರ ಹೃದಯದಲ್ಲಿ ಸ್ಥಾನ ಪಡೆದಿದ್ದು, ಅವರು ಎಂದಿಗೂ ಮರೆಯಾಗುವುದಿಲ್ಲ ಎಂದು ಗುಜರಾತ್ ಕಾಂಗ್ರೆಸ್ ಮುಖ್ಯಸ್ಥ ಅಮಿತ್ ಚಾವ್ಡಾ ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ.
ದಿವಂಗತ ರಾಜಕಾರಣಿಯ ಮಗ ಭಾರತ್ ಸೋಲಂಕಿ ಗುಜರಾತ್‍ನ ಮಾಜಿ ಕಾಂಗ್ರೆಸ್ ಮುಖ್ಯಸ್ಥ ಹಾಗೂ ಕೇಂದ್ರ ಸಚಿವರಾಗಿದ್ದರು. ಮಾಧವ್ ಸಿಂಗ್ ಸೋಲಂಕಿ 1976 ಮತ್ತು 1990ರ ನಡುವೆ ನಾಲ್ಕು ಬಾರಿ ಗುಜರಾತ್ ಸಿಎಂ ಆಗಿದ್ದರು.
ಭಾರತದ ಯುವ ಬ್ಯಾಟ್ಸ್‌ಮನ್ ಕಮ್ ವಿಕೆಟ್ ಕೀಪರ್ ರಿಷಭ್ ಪಂತ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆಯುತ್ತಿರುವ ಭಾರತ vs ಆಸ್ಟ್ರೇಲಿಯಾ ತೃತೀಯ ಪಂದ್ಯದಲ್ಲಿ ಗಾಯಕ್ಕೀಡಾಗಿರುವ ಪಂತ್ ಅವರನ್ನು ಸ್ಕ್ಯಾನಿಂಗ್‌ಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಭಾರತದ ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಪಂತ್, ಪ್ಯಾಟ್ ಕಮಿನ್ಸ್ ಓವರ್‌ನಲ್ಲಿ ಶಾರ್ಟ್ ಬಾಲ್ ಅನ್ನು ಮಿಸ್ ಮಾಡಿದರು. ಚೆಂಡು ಪಂತ್ ಅವರ ಎಡಗೈಗೆ ಬಡಿಯಿತು. ಚೆಂಡು ಜೋರಾಗಿ ಬಡಿದಿದ್ದರಿಂದ ಪಂತ್ ಗಾಯಕ್ಕೀಡಾಗಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ಪಂತ್ 36 ರನ್‌ಗೆ ಜೋಶ್ ಹ್ಯಾಝಲ್ವುಡ್‌ಗೆ ವಿಕೆಟ್ ನೀಡಿದ್ದರು.
ಟೀಮ್ ಇಂಡಿಯಾದ ಯುವ ಬ್ಯಾಟ್ಸ್‌ಮನ್ ಶುಭ್ಮನ್ ಗಿಲ್ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್‌ನಲ್ಲಿ ಅರ್ಧ ಶತಕವನ್ನು ಬಾರಿಸಿ ಮಿಂಚಿದ್ದಾರೆ. ಇದು ಶುಭ್ಮನ್ ಗಿಲ್ ಅವರ ಎರಡನೇ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯವಾಗಿದೆ. ರೋಹಿತ್ ಶರ್ಮಾ ಜೊತೆಗೆ ಇನ್ನಿಂಗ್ಸ್ ಆರಂಭಿಸಿದ ಗಿಲ್ ಮೊದಲ ವಿಕೆಟ್‌ಗೆ 70 ರನ್‌ಗಳ ಜೊತೆಯಾಟವನ್ನು ನೀಡಿದರು.
ಶುಭ್ಮನ್ ಗಿಲ್ 101 ಎಸೆತಗಳನ್ನು ಎದುರಿಸಿ 50 ರನ್ ಗಳಿಸಿದರು. ಬಳಿಕ ಪ್ಯಾಟ್ ಕಮ್ಮಿನ್ಸ್ ಎಸೆತದಲ್ಲಿ ಕ್ಯಾಮರೂನ್ ಗ್ರೀನ್‌ಗೆ ವಿಕೆಟ್ ಒಪ್ಪಿಸಿ ಹೊರನಡೆದರು. 49.50 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಗಿಲ್ ಇನ್ನಿಂಗ್ಸ್‌ನಲ್ಲಿ 8 ಬೌಂಡರಿಗಳು ಒಳಗೊಂಡಿದ್ದವು. ಈ ಮೂಲಕ ಏಷ್ಯಾದಿಂದ ಹೊರಗೆ ಅರ್ಧ ಶತಕ ಸಿಡಿಸಿದ ನಾಲ್ಕನೆ ಕಿರಿಯ ಆರಂಭಿಕ ಆಟಗಾರ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾದರು
ಶುಭ್ಮನ್ ಗಿಲ್ ಮೆಲ್ಬರ್ನ್‌ನಲ್ಲಿ ನಡೆದ ಪಂದ್ಯದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆಯನ್ನು ಮಾಡಿದ್ದರು. ಅಲ್ಲಿಯೂ ಆತ್ಮವಿಶ್ವಾಸದ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಗಿಲ್ ಮೊದಲ ಇನ್ನಿಂಗ್ಸ್‌ನಲ್ಲಿ 45 ರನ್ ಗಳಿಸಿದ್ದರು. ಎರಡನೇ ಇನ್ನಿಂಗ್ಸ್‌ನಲ್ಲೂ 35 ರನ್ ಸಿಡಿಸಿ ಅಜೇಯವಾಗುಳಿದಿದ್ದರು. ತಮ್ಮ ಎರಡನೇ ಟೆಸ್ಟ್ ಪಂದ್ಯದಲ್ಲಿ ಚೊಚ್ಚಲ ಅರ್ಧ ಶತಕವನ್ನು ಬಾರಿಸುವಲ್ಲಿ ಗಿಲ್ ಯಶಸ್ವಿಯಾಗಿದ್ದಾರೆ.
ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಶುಭ್ಮನ್ ಗಿಲ್ ಆಸ್ಟ್ರೇಲಿಯಾದ ಬೌಲರ್‌ಗಳ ದಾಳಿಯನ್ನು ಆತ್ಮವಿಶ್ವಾಸದಿಂದಲೇ ಎದುರಿಸಿದರು. ಮತ್ತೊಂದೆಡೆ ಸುದೀರ್ಘ ಕಾಲದ ಬಳಿಕ ಟೆಸ್ಟ್ ಕ್ರಿಕೆಟ್‌ಗೆ ಮರಳಿರುವ ರೋಹಿತ್ ಶರ್ಮಾ ಉತ್ತಮ ಲಯದಲ್ಲಿರುವಂತೆ ತೋರಿದರಾದರೂ ಅವರ ಆಟ 26 ರನ್‌ಗಳಿಗೆ ಅಂತ್ಯವಾಗಿದೆ. 77 ಎಸೆತವನ್ನು ಎದುರಿಸಿದ ರೋಹಿತ್ ಶರ್ಮಾ 3 ಬೌಂಡರಿ ಹಾಗೂ 1 ಸಿಕ್ಸ್ ಸಿಡಿಸಿದರು.
ರೋಹಿತ್ ಶರ್ಮಾ ಜೋಶ್ ಹ್ಯಾಸಲ್‌ವುಡ್ ಎಸೆತದಲ್ಲಿ ಅವರಿಗೆ ಕ್ಯಾಚ್ ನೀಡುವ ಮೂಲಕ ನಿರ್ಗಮಿಸಿದರು. ಬಳಿಕ ಚೇತೇಶ್ವರ್ ಪೂಜಾರ ಹಾಗೂ ಅಜಿಂಕ್ಯ ರಹಾನೆ ಬ್ಯಾಟಿಂಗ್‌ಗೆ ಇಳಿಸಿದ್ದು ನಿಧಾನಗತಿಯನ್ನು ಬ್ಯಾಟಿಂಗ್ ಮುಂದುವರಿಸಿದರು. ಎರಡನೇ ದಿನದಾಟ ಅಂತ್ಯದ ವೇಳೆಗೆ ಭಾರತ 96 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದು 242 ರನ್‌ಗಳ ಹಿನ್ನೆಡೆಯಲ್ಲಿದೆ.