ಉಡುಪಿಯ ಪುಣ್ಯ ಸ್ಥಳ ಅಂದ್ರೆ ಅದು ಶ್ರೀ ಕೃಷ್ಣ ಮಠ ಶ್ರೀ ಕೃಷ್ಣನ ಸಾನಿಧ್ಯ ಹಾಗು ಮಠ ಇರುವ ಉಡುಪಿಯಲ್ಲಿ ಅನ್ನದಾನ ಸೇವೆ ಭಕ್ತದಿಗಳಿಗೆ ನಿತ್ಯ ನೆಡೆಯುತ್ತಿತ್ತು ಆದರೆ ಕೆಲವು ತಿಂಗಳಿಂದ ಕೋವಿಡ್ ನಿಯಮದ ಕಾರಣಕ್ಕೆ ಅನ್ನದಾನ ನಿಲ್ಲಿಸಲಾಗಿತ್ತು ಇದೀಗ ಉಡುಪಿಯ ಶ್ರೀ ಕೃಷ್ಣಮಠದಲ್ಲಿ ಕೋವಿಡ್ ಲಾಕ್ ಡೌನ್ ಬಳಿಕ ಯಾತ್ರಾರ್ಥಿಗಳಿಗೆ ಶ್ರೀಕೃಷ್ಣ ಪ್ರಸಾದ ರೂಪದಲ್ಲಿ ನಡೆಯುತಿದ್ದ.
ಭೋಜನದ ವ್ಯವಸ್ಥೆಯನ್ನು ನಿಲ್ಲಿಸಲಾಗಿತ್ತು. ನಿನ್ನೆ ಭೋಜನಶಾಲೆಯಲ್ಲಿ ಪರ್ಯಾಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಅನ್ನ ಪ್ರಸಾದವನ್ನು ಬಡಿಸುವುದರ ಮೂಲಕ ಯಾತ್ರಾರ್ಥಿಗಳ ಭೋಜನಕ್ಕೆ ಚಾಲನೆ ನೀಡಿದರು.ಇನ್ನು ಮುಂದೆ ಮಠದಲ್ಲಿ ಯತ್ರಿಗಳಿಗೆ ಭೋಜನ ವೆವಸ್ಥೆ ಇರುತ್ತದೆ ಎಂದು ಹೇಳಲಾಯಿತು.