ನಾಯಕತ್ವ ಬದಲಾವಣೆ ಮಾಡಲು ಹೋದವರಿಗೆ, ಬ್ಲಾಕ್ಮೇಲ್ ಮಾಡಿದವರಿಗೆ ಮಂತ್ರಿಗಿರಿ ನೀಡಲಾಗಿದೆ ಎಂದು ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ಆರೋಪಿಸಿದ್ದಾರೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಯಾವುದೇ ನಾಯಕರ ಭೇಟಿಗೆ ಸಮಯ ಕೇಳಿಲ್ಲ. ಸಿಕ್ಕ ನಾಯಕರನ್ನು ಭೇಟಿ ಮಾಡಿ ಮಾತನಾಡಿಕೊಂಡು ಬರುತ್ತೇನೆ. ನನಗೆ ಸಚಿವ ಸ್ಥಾನ ಬೇಕೆಂದು ಹೇಳಿಲ್ಲ ಎಂದು ತಿಳಿಸಿದ್ದಾರೆ.
ಸೋತವರಿಗೆ ಬ್ಲ್ಯಾಕ್ ಮೇಲ್ ಮಾಡಿದವರಿಗೆ ಸಚಿವ ಸ್ಥಾನ ನೀಡಿರುವುದರಿಂದ ಪಕ್ಷದ ವರಿಷ್ಠರ ಜೊತೆ ಮತ್ತೆ ಕೂಲಂಕುಷವಾಗಿ ಚಚಿ೯ಸುತ್ತೇನೆ.ಜಾತಿ ರಾಜಕೀಯ ಮಾಡಿ ನನಗೆ ಅಭ್ಯಾಸವಿಲ್ಲ. ಸೋತವರಿಗೆ ಸಚಿವ ಸ್ಥಾನ ನೀಡಿ ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನ ಸವ೯ ಜನಾಂಗದ ಮತದಾರರಿಗೆ ಮಾಡಿದ ಅಪಮಾನ.
ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನ ಅಭಿವೃದ್ಧಿಯೆ ನನ್ನ ಧ್ಯೇಯ ಎಂದು ತಮ್ಮ ಫೇಸ್ಬುಕ್ ಖಾತೆ ಯಲ್ಲಿ ರೇಣುಕಾಚಾರ್ಯ ಬರೆದುಕೊಂಡಿದ್ದಾರೆ.
ಯಡಿಯೂರಪ್ಪ, ಮೋದಿಯವರ ಮುಖ ನೋಡಿ ಜನ ಬೆಂಬಲ ನೀಡಲಾಗಿದೆ. ಯೋಗೀಶ್ವರ್ ಮುಖ ನೋಡಿ ಮುಖ ನೋಡಿ ಬೆಂಬಲ ನೀಡಿಲ್ಲ. ಪಕ್ಷಕ್ಕೆ, ಸರ್ಕಾರಕ್ಕೆ ಯೋಗೇಶ್ವರ್ ಕೊಡುಗೆ ಏನು? ಎಂದು ರೇಣುಕಾಚಾರ್ಯ ಪ್ರಶಿಸಿದ್ದಾರೆ.