ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಗುರುವಾರ ಥಾಯ್ಲೆಂಡ್ ಓಪನ್ ಮಹಿಳೆಯರ ಸಿಂಗಲ್ಸ್‌ನ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ವಿಶ್ವದ 12ನೇ ಕ್ರಮಾಂಕದ ಥಾಯ್ಲೆಂಡ್‌ನ ಬುಸಾನನ್ ಒಂಗ್ಬಾಮ್ರಂಗ್‌ಫಾನ್ ವಿರುದ್ಧ ಸೋಲು ಅನುಭವಿಸಿದ್ದಾರೆ.
ಸೈನಾ ತನ್ನ ಎದುರಾಳಿಗಿಂತ ಹೆಚ್ಚು ಬಲಶಾಲಿಯಾಗಿ ಆಟವನ್ನು ಪ್ರಾರಂಭಿಸಿದ್ದರು. ಮೊದಲ ಸೆಟ್‌ನ್ನು 23-21ಅಂತರದಿಂದ ಮೇಲುಗೈ ಸಾಧಿಸಿದ್ದರು. ಮಹಿಳೆಯರ ಸಿಂಗಲ್ಸ್‌ನ 2ನೇ ಸುತ್ತಿನಲ್ಲಿ ಸೈನಾ ನೆಹ್ವಾಲ್, ಸ್ಥಳೀಯ ಆಟಗಾರ್ತಿ ಬುಸನಾನ್ ವಿರುದ್ಧ 23-21, 14-21, 16-21 ಗೇಮ್‌ಗಳಲ್ಲಿ ಸೋಲುಂಡರು. ವಿಶ್ವ ನಂ.12 ಬುಸಾನನ್ ವಿರುದ್ಧ ಸೈನಾಗಿದು ಸತತ 4ನೇ ಸೋಲು ಕಂಡುಬದಿದೆ ಮುಂದಿನ ವಾರ ನಡೆಯಲಿರುವ ಟೊಯೋಟಾ ಥಾಯ್ಲೆಂಡ್ ಓಪನ್ ಸೂಪರ್ 1000 ಈವೆಂಟ್‌ನಲ್ಲಿ ಭಾರತೀಯ ಶಟ್ಲರ್‌ಗಳು ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆ ಇದೆ.