No menu items!
15.2 C
Munich
Wednesday, April 29, 2026

ವಾಟ್ಸ್ ಆ್ಯಪ್ ಗೆ ಸರಕಾರ ಖಡಕ್ ಎಚ್ಚರಿಕೆ..! ಏನಿದು?

Must read

ಹೊಸದಿಲ್ಲಿ: ವಿವಾದಿತ ಪ್ರೈವಸಿ ಪಾಲಿಸಿ ಅಪ್ಡೇಟ್‌ನ್ನು ಹಿಂಪಡೆಯುವಂತೆ ವಾಟ್ಸಾಪ್‌ಗೆ ಸರಕಾರ ಸೂಚಿಸಿದೆ. ಭಾರತೀಯ ಬಳಕೆದಾರರ ಮಾಹಿತಿಯ ಗೌಪ್ಯತೆ ಮತ್ತು ದತ್ತಾಂಶ ಸುರಕ್ಷತೆಯನ್ನು ಕಾಪಾಡುವಂತೆ ಸರಕಾರ ಹೇಳಿದೆ.

ಈ ನೀತಿಯನ್ನು ಫೇಸ್‌ಬುಕ್ ಒಡೆತನದ ವಾಟ್ಸಾಪ್‌ ಅನಾವರಣಗೊಳಿಸಿದ ಬಗ್ಗೆ ಸರಕಾರ ಅಸಮಾಧಾನ ವ್ಯಕ್ತಪಡಿಸಿದೆ. ಈ ವಿಷಯದ ಬಗ್ಗೆ ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕಂಪನಿಗೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.

ಈ ಕುರಿತು ವಾಟ್ಸಾಪ್‌ ಸಿಇಒ ವಿಲ್‌ ಕ್ಯಾಥ್‌ಕಾರ್ಟ್‌ಗೆ ಪತ್ರ ಬರೆಯಲಾಗಿದೆ. ಅಪ್ಡೇಟ್‌ ಮತ್ತು ಫೇಸ್‌ಬುಕ್‌ನೊಂದಿಗಿನ ಡೇಟಾ-ಹಂಚಿಕೆ ಭಾರತೀಯ ಬಳಕೆದಾರರನ್ನು ಹೆಚ್ಚಿನ ಭದ್ರತಾ ಅಪಾಯಗಳು ಮತ್ತು ದೋಷಗಳಿಗೆ ಒಡ್ಡುತ್ತದೆ ಎಂದು ಪತ್ರದಲ್ಲಿ ಹೇಳಲಾಗಿದೆ.

ಇದರ ಜತೆಗೆ, ‘ಒಂದೋ ನೀತಿಯನ್ನು ಒಪ್ಪಿಕೊಳ್ಳಿ, ಇಲ್ಲವೇ ವಾಟ್ಸಾಪ್‌ನ್ನು ತೊರೆಯಿರಿ’ ಎಂಬ ಕಂಪನಿಯ ಹಠಮಾರಿ ಧೋರಣೆಯ ಬಗ್ಗೆಯೂ ಸರಕಾರ ಅಸಮಧಾನ ವ್ಯಕ್ತಪಡಿಸಿದೆ.

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article