ಸಿನಿಮಾ.. ಒಂದು ಸಿನಿಮಾ ಬಂದಮೇಲೆ ಚಿತ್ರ ಚೆನ್ನಾಗಿರಲಿ ಅಥವಾ ಚೆನ್ನಾಗಿ ಇಲ್ಲದೆಯೇ ಇರಲಿ, ಒಂದು ಚಿತ್ರದ ಬಗ್ಗೆ ಎಲ್ಲಾ ಪ್ರೇಕ್ಷಕರಲ್ಲಿಯೂ ಒಂದೇ ರೀತಿಯಾದ ನಿಲುವು ಇರುವುದಿಲ್ಲ. ಅವರು ಸಿನಿಮಾ ಎಷ್ಟೇ ಚೆನ್ನಾಗಿರಲಿ, ಅತಿ ದೊಡ್ಡ ಯಶಸ್ಸನ್ನು ಕಂಡಿರಲಿ ಆ ಸಿನಿಮಾ ಇಷ್ಟವಾಗದ ಪ್ರೇಕ್ಷಕ ಕೂಡ ಇರುತ್ತಾನೆ.. ಹೌದು ಅತ್ಯದ್ಭುತ ಚಿತ್ರಗಳು ಇಷ್ಟವಾಗದ ಇರುವ ಪ್ರೇಕ್ಷಕರು ಸಹ ಇದ್ದಾರೆ.. ಅದು ಅವರ ಅಭಿವೃದ್ಧಿಗೆ ಬಿಟ್ಟದ್ದು..
ಇನ್ನು ಅತಿ ಕಳಪೆಯ ಚಿತ್ರವನ್ನು ನಾಲ್ಕೈದು ಬಾರಿ ನೋಡುವ ಪ್ರೇಕ್ಷಕರು ಸಹ ಇದ್ದಾರೆ. ಇದೇನು ಸಿನಿಮಾ ಗುರು, ಬೋರ್ ಹೊಡೆಯುತ್ತೆ.. ಅಂತ ಜನ ತಳ್ಳಿಹಾಕಿದ ಸಿನಿಮಾವನ್ನು ಸೂಪರ್ ಗುರು ಎಂದು ನೋಡುವ ಪ್ರೇಕ್ಷಕರು ಸಹ ನಮ್ಮ ನಡುವೆ ಇದ್ದಾರೆ. ಪ್ರೇಕ್ಷಕರ ಈ ಒಂದು ಅಭಿರುಚಿಯನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಸಹ ಇಲ್ಲ.. ಹೌದು ದುಡ್ಡುಕೊಟ್ಟು ನೋಡುವ ಪ್ರೇಕ್ಷಕನಿಗೆ ಸಿನಿಮಾವನ್ನು ವಿಮರ್ಶಿಸುವ ಹಕ್ಕು ಇದೆ.
ಆತನಿಗೆ ಆ ಚಿತ್ರ ಇಷ್ಟವಾಯಿತಾ ಅಥವಾ ಇಷ್ಟವಾಗಲಿಲ್ಲವ ಎಂದು ಮುಕ್ತವಾಗಿ ಹೇಳುವ ಹಕ್ಕು ಆ ಪ್ರೇಕ್ಷಕನಿಗೆ ಇರುತ್ತದೆ.. ಸಿನಿಮಾದ ನಿರ್ಮಾಪಕ ಮತ್ತು ನಿರ್ದೇಶಕರು ಪ್ರೇಕ್ಷಕನ ವಿಮರ್ಶೆಗೆ ತಲೆಬಾಗಿ ತಪ್ಪುಗಳಿದ್ದರೆ ತಿದ್ದಿಕೊಂಡು ಇನ್ನೂ ಚೆನ್ನಾಗಿ ಸಿನಿಮಾ ಮಾಡುವ ಕಡೆ ಗಮನ ಕೊಡಬೇಕೇ ಹೊರತು, ಕೆಟ್ಟ ವಿಮರ್ಶೆ ಕೊಡುವವರಿಗೆ ಹೊಡೆಯಬೇಕು ಎನ್ನಬಾರದು..
ಈ ಹಿಂದೆ ಅದ್ದೂರಿ ಎಂಬ ಹಿಟ್ ಚಿತ್ರ ನೀಡಿದ ಎ ಪಿ ಅರ್ಜುನ್ ಅವರು ನಿಮಗೆ ತಿಳಿದಿರಬಹುದು. ಇವರು ಇತ್ತೀಚಿಗಷ್ಟೇ ಒಂದು ಸಂದರ್ಶನದಲ್ಲಿ ಕೆಟ್ಟ ವಿಮರ್ಶೆ ನೀಡುವ ಜನರಿಗೆ ಬಾರಿಸಬೇಕು ಎಂದು ಹೇಳಿದ್ದಾರೆ.. ದುಡ್ಡುಕೊಟ್ಟು ನೋಡುವ ಪ್ರೇಕ್ಷಕನಿಗೆ ಸಿನಿಮಾವನ್ನ ಬಯ್ಯುವ ಹಕ್ಕು ಇದೆ ಗುರು, ಅಂಥವರನ್ನ ಬಾರಿಸಲು ನೀನ್ಯಾರು? ನಿನಗ್ಯಾವ ಹಕ್ಕಿದೆ? ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರೇಕ್ಷಕರು ಎಪಿ ಅರ್ಜುನ್ ಅವರ ವಿರುದ್ಧ ದನಿ ಎತ್ತಿದ್ದಾರೆ.
ನೀಟಾಗಿ ಸಿನಿಮಾ ಮಾಡಿದರೆ ಯಾರೂ ಸಹ ಕೆಟ್ಟ ವಿಮರ್ಶೆ ನೀಡುವುದಿಲ್ಲ, ನಿಮಗೆ ಕೆಟ್ಟ ವಿಮರ್ಶೆ ಬರುತ್ತಿದೆ ಎಂದರೆ ನಿಮ್ಮ ಸಿನಿಮಾ ಕೆಟ್ಟದಾಗಿದೆ ಅಂತ ಅರ್ಥ, ಈ ರೀತಿ ಹೇಳಿಕೆಗಳನ್ನು ನೀಡುವ ಮೊದಲು ಒಳ್ಳೆಯ ಸಿನಿಮಾ ಮಾಡಿ ಒಳ್ಳೆಯ ವಿಮರ್ಶೆ ಬರುತ್ತದೆ ಎಂದು ಎಪಿ ಅರ್ಜುನ್ ಅವರ ಹೇಳಿಕೆಗೆ ನೆಟ್ಟಿಗರು ಟಾಂಗ್ ನೀಡಿದ್ದಾರೆ.
ಟ್ರೋಲ್ ಪೇಜ್ ಗಳು ಸಹ ಎಪಿ ಅರ್ಜುನ್ ಅವರ ಹೇಳಿಕೆಯನ್ನು ಖಂಡಿಸುತ್ತಿದ್ದು ಟ್ರೊಲ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಎಪಿ ಅರ್ಜುನ್ ಅವರ ನಿರ್ದೇಶನದ ಅದ್ದೂರಿ ಮತ್ತು ಕಿಸ್ ಚಿತ್ರಗಳು ಕೊರಿಯನ್ ಸಿನಿಮಾಗಳ ಕಾಪಿ.. ಈ ರೀತಿ ಸಿನಿಮಾ ಕದ್ದು ಮತ್ತೊಂದು ಸಿನಿಮಾ ಮಾಡುವ ಬದಲು ನಿಮ್ಮದೇ ಸ್ವಂತ ಕತೆ ಮಾಡಿ ತದನಂತರ ಪ್ರೇಕ್ಷಕರಿಗೆ ಹೊಡೆಯುವ ಧೈರ್ಯಮಾಡಿ ಎಂದು ಎಪಿ ಅರ್ಜುನ್ ಅವರ ಕಾಲನ್ನು ನೆಟ್ಟಿಗರು ಎಳೆದಿದ್ದಾರೆ..
ಏನೇ ಹೇಳಿ ಅಣ್ಣಾವ್ರು ಹೇಳಿದಂತೆ ಅಭಿಮಾನಿಗಳು ಬರಿ ಅಭಿಮಾನಿಗಳಲ್ಲ ಅವರು ದೇವರುಗಳು.. ಆ ಅಭಿಮಾನಿ ದೇವರುಗಳು ಪವರ್ಫುಲ್ ಗಾಡ್ಸ್.. ಅಭಿಮಾನಿ ದೇವರುಗಳನ್ನು ಕೆಣಕಬಾರದು ಬದಲಾಗಿ ಅವರಿಗೆ ಇಷ್ಟವಾಗುವಂತಹ ಚಿತ್ರವನ್ನ ಮಾಡಿ ಮೆಚ್ಚುಗೆ ಪಾತ್ರವಾಗಬೇಕು..