ನವದೆಹಲಿ: ಸಿನಿಮಾ ಪ್ರಿಯರಿಗೆ ಭರ್ಜರಿ ಗುಡ್‍ನ್ಯೂಸ್ ಸಿಕ್ಕಿದ್ದು ಶೇ.100ರಷ್ಟು ಪ್ರೇಕ್ಷಕರ ಪ್ರವೇಶಕ್ಕೆ ಸಮ್ಮತಿ ಸಿಕ್ಕಿದೆ. ಕೇಂದ್ರ ಸರ್ಕಾರದಿಂದ ಹೊಸ ಮಾರ್ಗಸೂಚಿ ಪ್ರಕಟವಾಗಿದ್ದು 10 ತಿಂಗಳ ಬಳಿಕ ಪೂರ್ಣ ಪ್ರಮಾಣದಲ್ಲಿ ಥಿಯೇಟರ್ ಆಗಲಿದೆ.
ಕಂಟೈನ್ಮೆಂಟ್ ವಲಯದಲ್ಲಿ ಸಿನಿಮಾ ಥಿಯೇಟರ್‌ಗಳ ತೆರೆಯುವಂತಿಲ್ಲ. ಈಗ ನೀಡಿರುವ ಮಾರ್ಗಸೂಚಿ ಹೊರತಾಗಿ ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳು ಮತ್ತಷ್ಟು ಸುರಕ್ಷತಾ ಕ್ರಮಗಳನ್ನು ಆಡವಡಿಸಿಕೊಳ್ಳಬಹುದು ಎಂದು ಹೇಳಿದೆ.
ಮಾರ್ಗಸೂಚಿಯಲ್ಲಿ ಏನಿದೆ?
– ಆನ್‍ಲೈನ್ ಟಿಕೆಟ್ ಮಾಡಬೇಕು
– ಸಭಾಂಗಣದಲ್ಲಿ 6 ಅಡಿ ಅಂತರ ಕಾಯ್ದುಕೊಳ್ಳಬೇಕು
– ಫೇಸ್ ಮಾಸ್ಕ್, ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸ್ ಕಡ್ಡಾಯ
– ಪ್ರೇಕ್ಷಕರ ಫೋನ್ ನಂಬರ್ ಕೊಡುವುದು ಕಡ್ಡಾಯ
– ಬ್ರೇಕ್ ಟೈಂ, ಸಿನಿಮಾ ಮುಗಿದ ಬಳಿಕವೂ ಹೆಚ್ಚು ಸಮಯ ನೀಡಬೇಕು
– ಏರ್ ಕಂಡಿಷನ್‌ಗಳು 24-30 ಡಿಗ್ರಿ ಸೆಲ್ಸಿಯಸ್‌ನಲ್ಲಿ ಇರಬೇಕು
– ಪಾರ್ಕಿಂಗ್, ಪ್ರವೇಶ, ನಿರ್ಗಮದ ವೇಳೆ ಗುಂಪುಗೂಡದಂತೆ ನೋಡಿಕೊಳ್ಳಬೇಕು
ಜ್ಯೂನಿಯರ್ ಶಾ ಏಷ್ಯನ್ ಕೌನ್ಸಿಲ್ ನೂತನ ಅಧ್ಯಕ್ಷ
ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಿದ ತನ್ನ ವಾರ್ಷಿಕ ಮಹಾಸಭೆಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಅವರನ್ನು ತನ್ನ ನೂತನ ಅಧ್ಯಕ್ಷರನ್ನಾಗಿ ಶನಿವಾರ ನೇಮಕ ಮಾಡಿದೆ.
“ಈ ಗೌರವವನ್ನು ಸ್ವೀಕರಿಸುತ್ತೇನೆ. ಬಿಸಿಸಿಐನಲ್ಲಿನ ನನ್ನ ಸಹೋದ್ಯೋಗಿಗಳು ನನ್ನ ಮೇಲೆ ಭರವಸೆ ಇಟ್ಟು ಈ ಕೆಲಸಕ್ಕೆ ಆಯ್ಕೆ ಮಾಡಿರುವುದಕ್ಕೆ ಧನ್ಯವಾದಗಳು. ಕೆಲ ಸಂಸ್ಥೆಗಳೊಂದಿಗೆ ಕೈ ಜೋಡಿಸಿ ಈ ವಿಭಾಗದಲ್ಲಿ ಕ್ರೀಡೆಯ ಅಭಿವೃದ್ಧಿ ಮತ್ತು ಪ್ರಚಾರದ ಕಡೆಗೆ ಕೆಲಸ ಮಾಡಲಿದ್ದೇನೆ,” ಎಂದು ಜಯ್ ಶಾ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಎದೆ ನೋವಿನ ಕಾರಣ ಕೋಲ್ಕತಾದ ಖಾಸಗಿ ಆಸ್ಪತ್ರೆಯೊಂದರಲ್ಲಿ ಎರಡನೇ ಬಾರಿ ಶಸ್ತ್ರಚಿಕಿತ್ಸೆಗೆ ಒಳಪಟ್ಟಿರುವ ಬಿಸಿಸಿಐನ ಹಾಲಿ ಅಧ್ಯಕ್ಷ ಸೌರವ್ ಗಂಗೂಲಿ ಕೂಡ ಜಯ್ ಶಾ ಅವರಿಗೆ ಶುಭಾಶಯ ತಿಳಿಸಿದ್ದಾರೆ.
“ನಾವು ಬಹಳಾ ಹತ್ತಿರದಲ್ಲಿ ಕೆಲಸ ಮಾಡಿದ್ದೇವೆ. ಕ್ರಿಕೆಟ್ ಆಟದ ಅಭಿವೃದ್ಧಿ ಕಡೆಗೆ ಅವರು ಹೊಂದಿರುವ ಯೋಜನೆ ಬಗ್ಗೆ ನನಗೆ ಸ್ಪಷ್ಟತೆ ಇದೆ. ಚಂಡೀಗಢ, ಉತ್ತರಾಖಂಡ್ ಮತ್ತು ನಾರ್ತ್-ಈಸ್ಟ್ ರಾಜ್ಯಗಳಲ್ಲಿ ಕ್ರಿಕೆಟ್ ಆಟದ ಅಭಿವೃದ್ಧಿ ಕಡೆಗೆ ಜಯ್ ಅವರು ಕೈಗೊಂಡ ಯೋಜನೆಗಳು ತಂದುಕೊಟ್ಟ ಯಶಸ್ಸನ್ನು ನಾನು ಕಂಡಿದ್ದೇನೆ. ಅಲ್ಲಿ ಕ್ರಿಕೆಟ್‌ಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಅವರು ಅಭಿವೃದ್ಧಿ ಪಡಿಸಿದ್ದರು. ಈಗ ಮುಂದಿನ ಪಯಣ ನಿಜಕ್ಕೂ ಸವಾಲಿನದ್ದು. ಕೊರೊನಾ ವೈರಸ್ ತಂದೊಡ್ಡಿರುವ ಸಂಕಷ್ಟದ ಸಮಯದಲ್ಲೂ ಅವರು ಸವಾಲುಗಳನ್ನು ಮೆಟ್ಟಿನಿಲ್ಲುತ್ತಾರೆಂಬ ವಿಶ್ವಾಸ ನನಗಿದೆ. ಏಷ್ಯಾ ಭಾಗದಲ್ಲಿ ಕ್ರಿಕೆಟ್‌ನ ಅಭಿವೃದ್ಧಿ ಕಡೆಗೆ ಕೆಲಸ ಮಾಡುವ ಮಹತ್ವದ ಕೆಲಸಕ್ಕೆ ಜಯ್ ಶಾ ಅವರಿಗೆ ಬಿಸಿಸಿಐ ಸಂಪೂರ್ಣ ಬೆಂಬಲ ನೀಡಲಿದೆ,” ಎಂದು ಸೌರವ್ ಹೇಳಿದ್ದಾರೆ.
ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರಾಗಿ ಆಯ್ಕೆಯಾದ ಭಾರತದ 7ನೇ ಆಡಳಿತಾಧಿಕಾರಿ ಆಗಿರುವ ಜಯ್ ಶಾ, ಎಸಿಸಿಐ 28ನೇ ಅಧ್ಯಕ್ಷರಾಗಿ ಕೆಲಸ ಮಾಡಲಿದ್ದಾರೆ. ಇದಕ್ಕೂ ಮುನ್ನ ಎನ್‌ಕೆಪಿ ಸಾಳ್ವೆ (1983-85), ಮಾಧವ್‌ರಾವ್ ಸಿಂಧಿಯಾ (1993), ಐಎಸ್ ಬಿಂದ್ರಾ (1993-97), ಜಗಮೋಹನ್ ದಾಲ್ಮಿಯಾ (2004-05), ಶರದ್ ಪವಾರ್ (2006) ಮತ್ತು ಎನ್ ಶ್ರೀನಿವಾಸನ್ (2012-14) ಎಸಿಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಇನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಒಬ್ಬರು ಎಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಇದೇ ಮೊದಲು. ಸಾಮಾನ್ಯವಾಗಿ ಬಿಸಿಸಿಐನ ಅಧ್ಯಕ್ಷ ಸ್ಥಾನದಲ್ಲಿ ಇರುವವರೇ ಎಸಿಸಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸುತ್ತಿದ್ದರು.