ಕನ್ನಡದ ಕೆಲ ನಟರ ಚಿತ್ರಗಳನ್ನು ಹಾಳು ಮಾಡಲು ನಿಂತಿದೆ ಆ ತಂಡ!

Date:

ಕನ್ನಡ ಚಿತ್ರರಂಗ.. ಅಣ್ಣಾವ್ರ ಕಾಲದಲ್ಲಿ ಕನ್ನಡ ಚಿತ್ರರಂಗವನ್ನ ಕೆಣಕುವವರು ಇರಲಿಲ್ಲ. ಕನ್ನಡ ಚಿತ್ರರಂಗ ಆ ಕಾಲಕ್ಕೆ ದೊಡ್ಡ ಶಕ್ತಿಯಾಗಿ ನೆಲೆಸಿತ್ತು. ಆದರೆ ಈಗ ಮೇಲ್ನೋಟಕ್ಕೆ ಸ್ಯಾಂಡಲ್ ವುಡ್ ಬಲಿಷ್ಠವಾಗಿ ಕಂಡರೂ ಸಹ ಕಾಣದ ಕೈಗಳು ಕೆಲ ನಟರ ಚಿತ್ರಗಳನ್ನು ಹಾಳು ಮಾಡುವುದಕ್ಕಾಗಿ ತಂಡವನ್ನ ಕಟ್ಟಿಕೊಂಡು ನಿಂತಿವೆ..!

 

 

ಹೌದು ಇತ್ತೀಚಿನ ಕೆಲ ಬೆಳವಣಿಗೆಗಳನ್ನು ಗಮನಿಸಿದರೆ ನಿಮಗೂ ಸಹ ಇಂತಹದ್ದೊಂದು ಅನುಮಾನ ಕಾಡದೆ ಇರಲಾರದು. ಕೆಜಿಎಫ್ ಚಾಪ್ಟರ್ 2ಚಿತ್ರದ ಟೀಸರ್ ಬಿಡುಗಡೆಗೂ ಮುನ್ನವೇ ಲೀಕ್ ಆಗುತ್ತದೆ. ಬಹುದೊಡ್ಡ ಚಿತ್ರದ ಬಹುದೊಡ್ಡ ಟೀಸರನ್ನು ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಬೇಕು ಎಂದು ಕನಸು ಕಂಡಿದ್ದ ಚಿತ್ರ ತಂಡದ ಆಸೆಗೆ ತಣ್ಣೀರನ್ನು ಯಾರೋ ಕಿಡಿಗೇಡಿಗಳು ಎರಚಿದರು.

 

ಬಿಡುಗಡೆಗೂ ಮುನ್ನವೇ ಕಿಡಿಗೇಡಿಗಳು ಟೀಸರ್ ಅನ್ನು ಲೀಕ್ ಮಾಡಿದ್ದರು ಇದನ್ನು ಉದ್ದೇಶಿಸಿ ನಿರ್ಮಾಪಕ ಕಾರ್ತಿಕ್ ಗೌಡ ಅವರು ನೀವು ಹ್ಯಾಕ್ ಮಾಡಬಹುದು ,ಲೀಕ್ ಮಾಡಬಹುದು ಆದರೆ ನಾವು ಯಶಸ್ಸನ್ನು ಗಳಿಸುತ್ತೇವೆ ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್ ನ ಅರ್ಥವೂ ಕೂಡ ಅದೇ ರೀತಿ ಇದೆ ಯಾರೋ ಕಿಡಿಗೇಡಿಗಳು ಬೇಕಂತಲೇ ಟಾರ್ಗೆಟ್ ಮಾಡಿ ಕೆಜಿಎಫ್ ಚಾಪ್ಟರ್ 2ಚಿತ್ರದ ಟೀಸರನ್ನು ಲೀಕ್ ಮಾಡಿದ್ದರು.. ಅಷ್ಟೇ ಅಲ್ಲದೆ ಪುನೀತ್ ಅಭಿನಯದ ಯುವರತ್ನ ಚಿತ್ರದ ನೀನಾದೇನಾ ಹಾಡನ್ನು ಸಹ ಬಿಡುಗಡೆಗೂ ಮುನ್ನವೇ ಲೀಕ್ ಮಾಡಲಾಗಿತ್ತು..

 

 

ಇನ್ನು ನಿನ್ನೆಯಷ್ಟೆ ಸಂಪೂರ್ಣ ಚಿತ್ರಮಂದಿರ ತೆರೆಯಲು ಅವಕಾಶ ನೀಡುವುದಿಲ್ಲ ಎಂದು ರಾಜ್ಯ ಸರ್ಕಾರ ಆದೇಶವನ್ನು ನೀಡಿತ್ತು ಇದರ ವಿರುದ್ಧ ಚಿತ್ರರಂಗದ ಹಲವಾರು ಮಂದಿ ಪ್ರತಿಕ್ರಿಯೆ ನೀಡಿದರು. ನಿರ್ಮಾಪಕರು ಮನವಿಯನ್ನು ಮಾಡುತ್ತಾ ಸರ್ಕಾರದ ಮನವೊಲಿಸಲು ಪ್ರಯತ್ನ ನಡೆಸಿದರು ಆದರೆ ಒಂದಷ್ಟು ನಿರ್ಮಾಪಕರು ಮಾತ್ರ ಇದಕ್ಕೆ ತಲೆಯನ್ನೂ ಹಾಕಲಿಲ್ಲ.

 

ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದರೆ ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ ಎಂದು ಅನಿಸದೆ ಇರಲಾರದು. ಕೆಲವೊಂದಿಷ್ಟು ನಟರ ಚಿತ್ರಗಳನ್ನು ‘ಡಿ ಪ್ರಮೋಟ್’ ಮಾಡಲು ಆ ಕಾಣದ ಕೈಗಳ ತಂಡ ದುಡ್ಡನ್ನು ಕೂಡ ಚೆಲ್ಲುತ್ತಿದೆ ಎಂಬ ಹೊಗೆಯೂ ಇದೆ. ಒಟ್ಟಿನಲ್ಲಿ ಖರ್ಚು ಮಾಡಿಯಾದರೂ ಸಹ ಕೆಲವೊಂದಷ್ಟು ನಟರ ಚಿತ್ರಗಳನ್ನು ಸೋಲಿಸಬೇಕು ಎಂದು ಆ ಒಂದು ತಂಡ ಸಜ್ಜಾಗಿ ನಿಂತಿದೆ.

 

ನಮ್ಮವರೇ ನಮಗೆ ಶತ್ರುಗಳು ಎಂಬ ಮಾತು ಈ ಬೆಳವಣಿಗೆಗಳನ್ನು ಗಮನಿಸಿದರೆ ನಿಜ ಎನಿಸುತ್ತದೆ. ಕನ್ನಡ ಚಿತ್ರರಂಗ ಬೆಳೆಯಬೇಕು ಎಂದು ಶ್ರಮಿಸುತ್ತಿರುವ ಹಲವಾರು ಮಂದಿಯ ಶ್ರಮವನ್ನು ತಮ್ಮ ಖುಷಿಗೋಸ್ಕರ ಹಾಳು ಮಾಡುತ್ತಿರುವ ಆ ತಂಡ ನಿಜಕ್ಕೂ ರಾವಣನ ಕ್ರೌರ್ಯಕ್ಕೆ ಹಿಡಿದ ಕನ್ನಡಿಯಾಗಿದೆ..

 

ಆ ಕಿಡಿಗೇಡಿಗಳ ತಂಡ ಮಾಡುತ್ತಿರುವ ಕುತಂತ್ರಗಳೆಲ್ಲ ನೆಲಕಚ್ಚ ಬೇಕಾದರೆ ಪ್ರೇಕ್ಷಕ ಮಹಾಪ್ರಭುಗಳು ಒಳ್ಳೆಯ ಕನ್ನಡ ಚಿತ್ರಗಳನ್ನು ನೋಡಿ ಬೆಳೆಸಬೇಕಷ್ಟೆ. ಚೆನ್ನಾಗಿರುವ ಚಿತ್ರಗಳಿಗೂ ‘ಡಿ ಪ್ರಮೋಟ್’ ಮಾಡುವ ಯತ್ನವನ್ನು ಪ್ರೇಕ್ಷಕ ಮಹಾಪ್ರಭು ಗಳಿಂದ ಮಾತ್ರ ತಡೆಯಲು ಸಾಧ್ಯ. ನೀವು ಚಿತ್ರವನ್ನ ನೋಡಿ ಬೆಳೆಸಿದರೆ ಯಾವ ಕಾಣದ ಕೈಗಳ ಕೈವಾಡವೂ ಸಹ ನಿಲ್ಲುವುದಿಲ್ಲ..

Share post:

Subscribe

spot_imgspot_img

Popular

More like this
Related

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...