ಕೆಜಿಎಫ್ ಚಾಪ್ಟರ್ 2 ಕೆಜಿಎಫ್ ಚಾಪ್ಟರ್ 2ಚಿತ್ರಕ್ಕೆ ವಿಶ್ವದಾದ್ಯಂತ ಅಪಾರವಾದ ಸಿನಿಮಾ ಪ್ರೇಕ್ಷಕರು ಕಾಯುತ್ತಿದ್ದಾರೆ. ಚಿತ್ರಕ್ಕಾಗಿ ವಿಶ್ವದಾದ್ಯಂತ ಅಪಾರವಾದ ಸಿನಿಮಾ ಪ್ರೇಕ್ಷಕರು ಕಾಯುತ್ತಿದ್ದಾರೆ. ಈಗಾಗಲೇ ಟೀಸರ್ ಬಿಡುಗಡೆ ಮಾಡಿ ಕ್ರೇಜ್ ಹೆಚ್ಚುವಂತೆ ಮಾಡಿರುವ ಕೆಜಿಎಫ್ ಚಾಪ್ಟರ್ 2 ಚಿತ್ರ ಜುಲೈ 16 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲು ತಯಾರಾಗಿದೆ.
ಆದರೆ ಇದೀಗ ಕೆಜಿಎಫ್ ಚಾಪ್ಟರ್ 2ಚಿತ್ರತಂಡಕ್ಕೆ ವಿಗ್ರಹವೊಂದು ಎದುರಾಗಿದ್ದು ವಿದೇಶದಲ್ಲಿ ಕೆಜಿಎಫ್ ಚಾಪ್ಟರ್ 2ಚಿತ್ರವನ್ನ ವಿತರಣೆ ಮಾಡಲು ಯಾವ ವಿತರಕರು ಸಹ ಮುಂದೆ ಬರುತ್ತಿಲ್ಲವಂತೆ. ಹೌದು ವಿದೇಶದಲ್ಲಿ ಕೆಜಿಎಫ್ ಚಾಪ್ಟರ್ 2ಚಿತ್ರವನ್ನು ವಿತರಣೆ ಮಾಡಲು ಯಾವೊಬ್ಬ ವಿತರಕರು ಸಹ ಮುಂದೆ ಬರದಿರಲು ಕಾರಣ ಅತಿಯಾದ ಬೆಲೆ..!
ಕೆಜಿಎಫ್ ಚಾಪ್ಟರ್ 2ಚಿತ್ರದ ವಿದೇಶೀ ವಿತರಣೆಯ ಹಕ್ಕನ್ನು ಬರೋಬ್ಬರಿ 80 ಕೋಟಿ ಎಂದು ಹೇಳಲಾಗುತ್ತಿದ್ದು ಈ ಕಾರಣದಿಂದಾಗಿ ಅಷ್ಟು ದೊಡ್ಡ ಮೊತ್ತಕ್ಕೆ ಯಾವೊಬ್ಬ ವಿತರಕನು ಸಹ ಕೆಜಿಎಫ್ ಚಾಪ್ಟರ್ 2ಚಿತ್ರವನ್ನ ಖರೀದಿಸಲು ಮುಂದೆ ಬರುತ್ತಿಲ್ಲವಂತೆ. ಕೆಜಿಎಫ್ ಮೊದಲನೇ ಭಾಗ ವಿದೇಶದಲ್ಲಿ 11 ಕೋಟಿ ಕಲೆಕ್ಷನ್ ಮಾಡಿತ್ತು ಆದರೆ ಇದೀಗ ಎರಡನೇ ಭಾಗದ ವಿತರಣೆ ಹಕ್ಕನ್ನು ಬರೋಬ್ಬರಿ 80 ಕೋಟಿ ಎಂದು ಹೇಳಲಾಗುತ್ತಿರುವ ಕಾರಣದಿಂದಾಗಿ ಯಾರೂ ಸಹ ಈ ಚಿತ್ರವನ್ನ ಖರೀದಿಸಲು ಮುಂದೆ ಬರುತ್ತಿಲ್ಲವಂತೆ..
ಇನ್ನು ಈ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡುತ್ತಿದ್ದು ಚಿತ್ರತಂಡ ಈ ಕುರಿತು ಏನು ಹೇಳುತ್ತದೆ ಎಂಬುದನ್ನು ಕಾದು ನೋಡಬೇಕು.