ಈ ಹಿಂದೆ ಶ್ರೀಶಾಂತ್ ತಮ್ಮ ಮಾರಕ ಬೌಲಿಂಗ್ ದಾಳಿಯಿಂದ ಎದುರಾಳಿ ಕ್ರಿಕೆಟಿಗರನ್ನು ನಡುಗಿಸಿದ್ದನ್ನು ನೀವೆಲ್ಲಾ ನೋಡಿರುತ್ತೀರಿ. ಆದರೆ ವೃತ್ತಿ ಜೀವನದಲ್ಲಿ ತಾವು ಮಾಡಿದ ಒಂದು ತಪ್ಪಿನಿಂದ ಶ್ರೀಶಾಂತ್ ತಮ್ಮ ಕ್ರಿಕೆಟ್ ಜೀವನವನ್ನೇ ಹಾಳು ಮಾಡಿಕೊಂಡರು.
ಇದೀಗ 8ವರ್ಷಗಳ ಬಳಿಕ ಮತ್ತೆ ಐಪಿಎಲ್ ಆಡಲು ಹಂಬಲ ವ್ಯಕ್ತಪಡಿಸಿದ ಶ್ರೀಶಾಂತ್ ಅವರ ಹೆಸರನ್ನು ಐಪಿಎಲ್ ಆಕ್ಷನ್ ಗೆ ತೆಗೆದುಕೊಂಡಿಲ್ಲ. ಶ್ರೀಶಾಂತ್ ಅವರ ಹೆಸರನ್ನು ಐಪಿಎಲ್ ಹರಾಜಿನಿಂದ ಕೈಬಿಡಲಾಗಿದೆ. ಈ ವರ್ಷ ಹೇಗಾದರೂ ಮಾಡಿ ಐಪಿಎಲ್ ನಲ್ಲಿ ಆಡಬೇಕು ಎಂಬ ಕನಸನ್ನು ಹೊತ್ತಿದ್ದ ಶ್ರೀಶಾಂತ್ ಕನಸಿಗೆ ತಣ್ಣೀರನ್ನು ಏರಿಸಲಾಗಿದೆ.
ಇನ್ನು ಈ ವಿಷಯದ ಕುರಿತು ಪ್ರತಿಕ್ರಿಯಿಸಿರುವ ಶ್ರೀಶಾಂತ್ ಇಷ್ಟು ವರ್ಷ ಕಾದಿದ್ದೇನೆ ಇನ್ನೂ ಕಾಯುತ್ತೇನೆ ರಿಟೈರ್ಮೆಂಟ್ ಘೋಷಿಸುವುದಿಲ್ಲ ಐಪಿಎಲ್ನಲ್ಲಿ ಆಡಿಯೇ ತೀರುತ್ತೇನೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.