ಮದ್ವೆ ಆಗಲ್ಲ ಅಂದಿದ್ದಕ್ಕೆ ಸುತ್ತಿಗೆಯಿಂದ ಹೊಡೆದು ಕೊಲೆ

Date:

ಕೋಲ್ಕತ್ತಾ: 17 ವರ್ಷದ ಯುವತಿಯೊಬ್ಬಳು ಮನೆಯಲ್ಲಿ ಕೊಲೆಯಾಗಿರುವ ಘಟನೆ ಶನಿವಾರ ಕೋಲ್ಕತ್ತಾದ ರೋಹಿಣಿಯ ಬೇಗಂಪೂರ್ ಪ್ರದೇಶದಲ್ಲಿ ನಡೆದಿದೆ.

ಯುವತಿಯನ್ನು ಲೈಕ್‍ಖಾನ್(25) ಎಂಬಾತ ಕೊಂದಿದ್ದು, ಕೃತ್ಯವೆಸಗಿದ ನಂತರ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಅಲ್ಲದೆ ತನಿಖೆ ವೇಳೆ ಆರೋಪಿಯನ್ನು ಯುವತಿ ಮದುವೆಯಾಗಲು ನಿರಾಕರಿಸಿದ್ದರಿಂದ ಆಕೆಯನ್ನು ಕೊಲ್ಲಲಾಗಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಪಿಕೆ ಮಿಶ್ರಾ ಹೇಳಿದ್ದಾರೆ.

ತನಿಖೆ ವೇಳೆ, ಮೃತ ಯುವತಿ ತನ್ನ ಕುಟುಂಬದೊಂದಿಗೆ ಬವಾನಾ ಪ್ರದೇಶದಲ್ಲಿ ವಾಸಿಸುತ್ತಿದ್ದಳು. ಹಾಗೆಯೇ ಆಕೆ ತನ್ನ ನೆರೆಮನೆಯವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಳು. ಆದರೆ ಒಂದು ವರ್ಷದ ಬಳಿಕ ಬೇಗಂಪೂರ್ ಪ್ರದೇಶಕ್ಕೆ ಯುವತಿ ಮನೆ ಬದಲಾಯಿಸಲಾಗಿದೆ. ಶುಕ್ರವಾರ ಮೃತ ಯುವತಿಯ ನೂತನ ನಿವಾಸಕ್ಕೆ ಊಟಕ್ಕಾಗಿ ಹಿಂದಿನ ನೆರೆಮನೆಯ ಲೈಕ್‍ಖಾನ್ ಎಂಬಾತ ಬಂದಿದ್ದಾನೆ.

ಈ ವೇಳೆ ಮೃತ ಯುವತಿ ಸಹೋದರ ಮತ್ತು ಸೋದರ ಸಂಬಂಧಿಗಳು ಕೆಲವು ದಿನಸಿ ವಸ್ತುಗಳನ್ನು ಹೊರಗೆ ಹೋಗಿದ್ದರು. ಅವರು ಹಿಂದಿರುಗುತ್ತಿದ್ದ ವೇಳೆ ಲೈಕ್ ಮನೆಗೆ ಬೀಗ ಹಾಕಿ ಹೊರಗೆ ಹೋಗುತ್ತಿರುವುದನ್ನು ನೋಡಿದ್ದಾರೆ. ಬಳಿಕ ನೀತು ಕೂಡ ಆತನೊಂದಿಗೆ ಹೊರಗೆ ಹೋಗಿರಬೇಕೆಂದು ಭಾವಿಸಿ ಮನೆಯ ಹೊರಗೆ ಕಾದು ಕುಳಿತಿದ್ದಾರೆ. ಆದರೆ ನೀತು ತಾಯಿ ಮನೆಗೆ ಬಂದಾಗ ಬೀಗ ಹಾಕಿರುವುದನ್ನು ನೋಡಿ ನೀತುಗೆ ಕರೆ ಮಾಡಿದ್ದಾರೆ. ಮೊಬೈಲ್ ಫೋನ್ ಮನೆಯಲ್ಲಿಯೇ ರಿಂಗ್ ಆದ ಶಬ್ದ ಕೇಳಿ ಬಾಗಿಲನ್ನು ಒಡೆದು ಮನೆ ಒಳಗೆ ಪ್ರವೇಶಿಸಿ ನೋಡಿದಾಗ ನೀತು ರಕ್ತದ ಮಡುವಿನ ಮಧ್ಯೆ ಬಿದ್ದಿರುವುದನ್ನು ನೋಡಿ ಆತಂಕಗೊಂಡಿದ್ದಾರೆ. ಬಳಿಕ ಆಕೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ವೈದ್ಯರು ನೀತು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಘಟನೆ ಸಂಬಂಧಿಸಿದಂತೆ ನೀತು ಸಹೋದರ ಆರೋಪಿ ನೀತು ಒಬ್ಬಳೇ ಇರುವ ವೇಳೆ ಆಕೆಯನ್ನು ಮದುವೆಯಾಗಲು ಪೀಡಿಸಿದ್ದಾನೆ. ಮದುವೆಯಾಗಲು ನೀತು ನಿರಾಕರಿಸಿದ್ದರಿಂದ ಆಕೆಯ ತಲೆಗೆ ಸುತ್ತಿಗೆಯಿಂದ ಹೊಡೆದು ಹತ್ಯೆಗೈಯ್ದಿದ್ದಾನೆ. ನಂತರ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಆರೋಪಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

Share post:

Subscribe

spot_imgspot_img

Popular

More like this
Related

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...