ಮತ್ತೆ ಶ್ರೀಮಂತರ ಪಟ್ಟಿಯಲ್ಲಿ ಮುಕೇಶ್ ಅಂಬಾನಿಗೆ ಮೊದಲ ಸ್ಥಾನ

Date:

ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿಯ ಮುಖ್ಯಸ್ಥ, ಉದ್ಯಮಿ ಮುಕೇಶ್ ಅಂಬಾನಿ ಏಷ್ಯಾದಲ್ಲೇ ಮತ್ತೆ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.

ಈ ಮೊದಲು ಚೀನಾದ ಮದ್ಯ ಕಂಪನಿಯ ಉದ್ಯಮಿ ಝೋಂಗ್ ಶನ್ಶಾನ್ ಮೊದಲ ಸ್ಥಾನ ಪಡೆದಿದ್ದರು. ಕಳೆದ ವಾರದ ಶನ್ಶಾನ್ ಆಸ್ತಿಯಲ್ಲಿ ಶೇ.20ರಷ್ಟು ಇಳಿಕೆಯಾದ ಕಾರಣ ಮುಕೇಶ್ ಅಂಬಾನಿಗೆ ಮೊದಲ ಸ್ಥಾನ ಸಿಕ್ಕಿದೆ.

ಬ್ಲೂಮ್‍ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಮುಕೇಶ್ ಅಂಬಾನಿ ಬಳಿ 80 ಶತಕೋಟಿ ಡಾಲರ್ ಮೌಲ್ಯದ ಸಂಪತ್ತು ಇದ್ದರೆ ಝೋಂಗ್ ಶನ್ಶಾನ್ 76.6 ಶತಕೋಟಿ ಡಾಲರ್ ಮೌಲ್ಯದ ಸಂಪತ್ತು ಹೊಂದಿದ್ದಾರೆ. ಕಳೆದ ವಾರ ಶನ್ಶಾನ್ ಸಂಪತ್ತಿನ ಮೌಲ್ಯ 22 ಶತಕೋಟಿ ಡಾಲರ್ ಇಳಿಕೆಯಾಗಿತ್ತು.

ಅಂಬಾನಿಯವರು ಚೀನಾದ ಅಲಿಬಾಬಾ ಗ್ರೂಪ್ ಹೋಲ್ಡಿಂಗ್ ಲಿಮಿಟೆಡ್ ಕಂಪನಿಯ ಮುಖ್ಯಸ್ಥ ಜಾಕ್ ಮಾ ಅವರನ್ನು ಕಳೆದ ಎರಡು ವರ್ಷಗಳಿಂದ ಹಿಂದಿಕ್ಕುತ್ತಿದ್ದಾರೆ.

ಲೋನ್ ವುಲ್ಫ್ ಸಂಸ್ಥೆಯ ಝೋಂಗ್ ಶನ್ಶಾನ್ ಮತ್ತೊಬ್ಬ ಚೀನಾ ಉದ್ಯಮಿ ಅಲಿಬಾಬಾ ಖ್ಯಾತಿಯ ಜಾಕ್ ಮಾ ಅವರನ್ನು ಹಿಂದಿಕಿದ್ದಾರೆ. ಅತ್ಯಂತ ವೇಗವಾಗಿ ಉನ್ನತ ಸ್ಥಾನಕ್ಕೆ ಏರುತ್ತಿರುವ ಉದ್ಯಮಿ ಎಂಬ ಪಟ್ಟ ಸಿಕ್ಕಿದೆ.

63 ವರ್ಷದ ಅಂಬಾನಿ ಕಳೆದ ವರ್ಷ 4ನೇ ಸ್ಥಾನ ಏರಿ ಬ್ಲೂಮ್‍ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದಲ್ಲಿ 10ನೇ ಸ್ಥಾನ ಪಡೆದಿದ್ದರು. ಕಳೆದ ವರ್ಷಕ್ಕೆ ಹೋಲಿಸಿದರೆ ಅಂಬಾನಿಯ ಸಂಪತ್ತಿನ ಮೌಲ್ಯ ಇಳಿಕೆಯಾಗಿದೆ. ಕಳೆದ ವರ್ಷ ಅಂಬಾನಿ 90 ಶತಕೋಟಿ ಮೌಲ್ಯದ ಸಂಪತ್ತು ಹೊಂದಿದ್ದರು.

ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಅಂಬಾನಿಗೆ 9ನೇ ಸ್ಥಾನ ಸಿಕ್ಕಿದೆ. ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಅಮೆಜಾನ್ ಕಂಪನಿಯ ಸಂಸ್ಥಾಪಕ ಜೆಫ್ ಬಿಜೊಸ್ ಇದ್ದರೆ ಎರಡನೇ ಸ್ಥಾನದಲ್ಲಿ ಟೆಸ್ಲಾ ಕಂಪನಿಯ ಸ್ಥಾಪಕ ಎಲೋನ್ ಮಸ್ಕ್ ಇದ್ದಾರೆ.

 

 

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...