ಕೆಜಿಎಫ್ ಚಾಪ್ಟರ್ 2ಚಿತ್ರದಲ್ಲಿ ಕೆಜಿಎಫ್ ಮೊದಲ ಭಾಗಕ್ಕಿಂತ ಅತಿಭಯಂಕರವಾದ ಸಾಹಸ ದೃಶ್ಯಗಳು ಇರಲಿಲ್ಲ ಎಂಬುದು ಈಗಾಗಲೇ ಎಲ್ಲರಿಗೂ ತಿಳಿದಿರುವ ವಿಷಯ. ಈ ಬಾರಿ ಅಧೀರನಾಗಿ ಸಂಜಯ್ ದತ್ ಅವರು ಕಾಣಿಸಿಕೊಳ್ಳುತ್ತಿದ್ದು ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಯಶ್ ಮತ್ತು ಸಂಜಯ್ ದತ್ ನಡುವೆ ದೊಡ್ಡ ಹೊಡೆದಾಟವೇ ನಡೆಯಲಿದೆ ಇದು ಅತಿ ಭಯಂಕರವಾಗಿರಲಿದೆ ಎಂದು ಪ್ರಶಾಂತ್ ನೀಲ್ ಅವರು ತಿಳಿಸಿದ್ದರು.
ಆದರೆ ಇದೀಗ ಬಂದಿರುವ ಹೊಸ ಸುದ್ದಿಯ ಪ್ರಕಾರ ಚಿತ್ರದಲ್ಲಿ ಅಂಡರ್ ವಾಟರ್ ಆ್ಯಕ್ಷನ್ ದೃಶ್ಯವೊಂದು ಇರಲಿದ್ದು ಇದು ಅತಿ ಡೆಡ್ಲಿಯೆಸ್ಟ್ ಆಗಿ ಇರಲಿದೆ ಎಂದು ಹೇಳಲಾಗುತ್ತಿದೆ. ಕೆಜಿಎಫ್ ಚಿತ್ರ ಅತಿ ರಿಚ್ ಆಗಿ ಮೂಡಿ ಬರಲಿದ್ದು ಅಂಡರ್ ವಾಟರ್ ದೃಶ್ಯವನ್ನು ಇನ್ನೂ ರಿಚ್ ಆಗಿ ಚಿತ್ರೀಕರಣ ಮಾಡಲಿದ್ದಾರೆ ಎಂಬ ನಿರೀಕ್ಷೆ ಎಲ್ಲರಲ್ಲಿಯೂ ಹುಟ್ಟುಕೊಂಡಿದೆ. ಅಲ್ಲದೆ ಇದರ ಜೊತೆ ರವಿ ಬಸ್ರೂರು ಅವರ ಸಂಗೀತ ಇರಲಿದ್ದು ಈ ದೃಶ್ಯವನ್ನು ಚಿತ್ರಮಂದಿರದಲ್ಲಿ ನೋಡುವುದಕ್ಕೆ 2ಕಣ್ಣು ಸಾಲದು..