ಇಂದು ಟಿವಿ ವಾಹಿನಿಯಲ್ಲಿ ಪ್ರಸಾರವಾಗುವ ಡಾನ್ಸ್ ಕರ್ನಾಟಕ ಡಾನ್ಸ್ ಕಾರ್ಯಕ್ರಮಕ್ಕೆ ಪುನೀತ್ ರಾಜ್ ಕುಮಾರ್ ಅವರನ್ನು ಅತಿಥಿಯಾಗಿ ಕರೆಸಲಾಗಿತ್ತು. ಕರ್ನಾಟಕದ ಡಾನ್ಸ್ ಐಕಾನ್ ಆಗಿರುವ ಪುನೀತ್ ರಾಜ್ ಕುಮಾರ್ ಅವರು ಈ ಡಾನ್ಸ್ ಕಾರ್ಯಕ್ರಮಕ್ಕೆ ಬಂದದ್ದು ಮತ್ತಷ್ಟು ಮೆರುಗು ತಂದಿತ್ತು. ಪುನೀತ್ ಅವರು ಈ ಕಾರ್ಯಕ್ರಮಕ್ಕೆ ಬರುತ್ತಾರೆ ಎಂದು ತಿಳಿದ ಕೂಡಲೇ ಅವರ ಅಭಿಮಾನಿಗಳು ಮತ್ತು ಕನ್ನಡ ಸಿನಿ ರಸಿಕರು ಈ ಕಾರ್ಯಕ್ರಮವನ್ನು ನೋಡಲು ಕಾತುರರಾಗಿದ್ದರು.
ಆದರೆ ಕಾರ್ಯಕ್ರಮಕ್ಕೆ ಗ್ರ್ಯಾಂಡ್ ಎಂಟ್ರಿ ನೀಡಿದ ನಂತರ ಪುನೀತ್ ರಾಜ್ ಕುಮಾರ್ ಅವರು ಸ್ಪರ್ಧಿಗಳ ಡಾನ್ಸ್ ನೋಡಿ ನಿಜಕ್ಕೂ ಬೇಸರಕ್ಕೆ ಒಳಗಾದರು. ಸ್ಪರ್ಧಿಗಳು ಸಿಕ್ಕಾಪಟ್ಟೆ ಸಖತ್ ಸ್ಟೆಪ್ ಹಾಕಿ ಪುನೀತ್ ರಾಜ್ ಕುಮಾರ್ ಅವರನ್ನು ಇಂಪ್ರೆಸ್ ಮಾಡಿದ್ರು. ಡಾನ್ಸ್ ಐಕಾನ್ ಅವರನ್ನ ಡಾನ್ಸ್ ಮೂಲಕ ಮೆಚ್ಚಿಸುವುದು ಎಂದರೆ ತೀರಾ ಕಷ್ಟದ ಕೆಲಸ ಆದರೆ ಡಾನ್ಸ್ ಕರ್ನಾಟಕ ಡಾನ್ಸ್ ನ ಸ್ಪರ್ಧಿಗಳು ಮಾತ್ರ ಪುನೀತ್ ಅವರ ಹೃದಯವನ್ನು ಗೆದ್ದುಬಿಟ್ಟರು.
ಎಂಥ ಕಷ್ಟದ ಸ್ಟೆಪ್ ನ್ನಾದರೂ ಮಾಡುವ ಪುನೀತ್ ಅವರು ಇಂದು ಡಾನ್ಸ್ ಕರ್ನಾಟಕ ಡಾನ್ಸ್ ಸ್ಪರ್ಧಿಗಳು ಹಾಕಿದ ಸ್ಟೆಪ್ ಅನ್ನು ನೋಡಿ ಬೇಸರ ಕ್ಕೊಳಗಾದರು. ನೀವೆಲ್ಲ ಮಾಡುತ್ತಿರುವ ಡಾನ್ಸ್ ನೋಡಿದರೆ ನಾನು ಇಪ್ಪತ್ತು ವರ್ಷ ಹಿಂದಕ್ಕೆ ಹೋಗಬೇಕಲ್ಲ ನಾನು ನಿಮ್ಮ ತರಹ ಡಾನ್ಸ್ ಮಾಡಬೇಕಲ್ಲ ಎಂದು ಅನಿಸುತ್ತಿದೆ ಎಂದು ಸಪ್ಪೆ ಮುಖ ಮಾಡಿಕೊಂಡು ಪುನೀತ್ ಅವರು ಹೇಳಿದರು.
.
ಇದು ಪುನೀತ್ ಅವರಲ್ಲಿ ಈಗಲೂ ಸಹ ಆ ಮಕ್ಕಳಂತೆ ಡಾನ್ಸ್ ಮಾಡಲು ಇರುವ ತವಕವನ್ನು ತೋರಿಸುತ್ತದೆ. ಎಷ್ಟೇ ದೊಡ್ಡ ಡಾನ್ಸರ್ ಆಗಿದ್ದರು ಸಹ ಇನ್ನೂ ಕಲಿಯುವ ಹಂಬಲವನ್ನು ವ್ಯಕ್ತಪಡಿಸಿದಾಗ ಪುನೀತ್ ಅವರನ್ನ ನೋಡಿ ವೀಕ್ಷಕರು ಏನು ಈ ಮನುಷ್ಯ ಇಷ್ಟೊಂದು ಸಿಂಪಲ್ ಎಂದು ಬಾಯಿ ಮೇಲೆ ಬೆರಳಿಟ್ಟುಕೊಂಡರು..