ಸೆಂಚುರಿ ಸಿಡಿಸಿದ ಶಾ , ಕರ್ನಾಟಕ ವಿರುದ್ಧ ಸೆಣಸಲು ಮುಂಬೈ ರೆಡಿ

Date:

: ನಾಯಕ ಪೃಥ್ವಿ ಶಾ ಅವರ ಅಜೇಯ ಶತಕದ (185*) ಬಲದಿಂದ ಮಿಂಚಿದ ಮುಂಬೈ ತಂಡ ವಿಜಯ್ ಹಝಾರೆ ಟ್ರೋಫಿ ಏಕದಿನ ಕ್ರಿಕೆಟ್‌ ಟೂರ್ನಿಯ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಸೌರಾಷ್ಟ್ರ ಎದುರು 9 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ.

ಇನ್ನು ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಸೌರಾಷ್ಟ್ರ ತಂಡ ಸಮರ್ಥ್‌ ವ್ಯಾಸ್‌ ಅವರ ಅಜೇಯ 90 ರನ್‌ಗಳ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನದ ಫಲವಾಗಿ 50 ಓವರ್‌ಗಳಲ್ಲಿ 5 ವಿಕೆಟ್‌ಗೆ 284 ರನ್‌ಗಳನ್ನು ದಾಖಲಿಸಿತು.

ಆದರೆ, ಮುಂಬೈ ತಂಡದ ಪರ ಸ್ಟೋಟಕ ಬ್ಯಾಟಿಂಗ್‌ ಪ್ರದರ್ಶನ ನೀಡಿದ ಕ್ಯಾಪ್ಟನ್‌ ಪೃಥ್ವಿ ಶಾ 123 ಎಸೆತಗಳಲ್ಲಿ 21 ಫೋರ್‌ ಮತ್ತು 7 ಸಿಕ್ಸರ್‌ಗಳ ಬಲದಿಂದ ಅಜೇಯ 185 ರನ್‌ಗಳನ್ನು ಬಾರಿಸಿ 41.5 ಓವರ್‌ಗಳಲ್ಲೇ ತಂಡವನ್ನು ಗೆಲುವಿನ ದಡ ಸೇರುವಂತೆ ಮಾಡಿದರು. ಟೂರ್ನಿಯಲ್ಲಿ ಶಾ ಬಾರಿಸಿದ 3ನೇ ಶತಕ ಇದಾಗಿದೆ. ಇದಕ್ಕೂ ಮುಂಚೆ ದಿಲ್ಲಿ ಎದುರು ಅಜೇಯ 105 ಮತ್ತು ಪಾಂಡಿಚೆರಿ ಎದುರು ಅಜೇಯ 227 ರನ್‌ಗಳನ್ನು ಭಾರಿಸಿದ್ದರು.

ಪಂದ್ಯದಲ್ಲಿ ಕೇವಲ 67 ಎಸೆತಗಳಲ್ಲಿ ಶತಕ ಬಾರಿಸಿದ ಶಾ ಅವರಿಗೆ ಯುವ ಓಪನರ್‌ ಯಶಸ್ವಿ ಜೈಸ್ವಾಲ್‌ (104 ಎಸೆತಗಳಲ್ಲಿ 75 ರನ್) ಉತ್ತಮ ಸಾಥ್‌ ನೀಡಿದರು. ಮೊದಲ ವಿಕೆಟ್‌ಗೆ ಶಾ ಮತ್ತು ಜೈಸ್ವಾಲ್‌ ಮೊದಲ ವಿಕೆಟ್‌ಗೆ 228 ರನ್‌ಗಳ ಅದ್ಭುತ ಜೊತೆಯಾಟವಾಡಿದರು. ಜೈಸ್ವಾಲ್‌ 10 ಫೋರ್‌ ಮತ್ತೊಂದು ಸಿಕ್ಸರ್‌ ಕೂಡ ಬಾರಿಸಿದರು. ಜೈಸ್ವಾಲ್‌ ನಿರ್ಗಮನದ ಬಳಿಕ ಕ್ರೀಸ್‌ಗೆ ಬಂದ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಆದಿತ್ಯ ತಾರೆ ಅಜೇಯ 20 ರನ್‌ ಗಳಿಸಿದರು.

ಸೌರಾಷ್ಟ್ರ: 50 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 284 ರನ್‌ (ಸಮರ್ಥ್‌ ವ್ಯಾಸ್ ಅಜೇಯ 90, ಚಿರಾಗ್ ಜಾನಿ ಅಜೇಯ 53; ಶಾಮ್ಸ್‌ ಮುಲಾನಿ 51ಕ್ಕೆ 2, ತನುಶ್ ಕೋಟ್ಯಾನ್ 30ಕ್ಕೆ 1).

ಮುಂಬೈ: 41.5 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 285 ರನ್‌ (ಪೃಥ್ವಿ ಶಾ ಅಜೇಯ 185, ಯಶಸ್ವಿ ಜೈಸ್ವಾಲ್ 75; ಜಯದೇವ್‌ ಉನಾದ್ಕಟ್‌ 52ಕ್ಕೆ 1).

 

 

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...