ಸಿಲಿಕಾನ್ ಸಿಟಿ, ಕೂಲ್ ಸಿಟಿ ಬೆಂಗಳೂರು ಈಗ ನಿಜಕ್ಕೂ ಕೂಲ್ ಆಗಿದೆ. ಯಾಕಂದ್ರೆ ಟ್ರಾಫಿಕ್ ಬಿಸಿಯನ್ನ ನಮ್ಮ ಮೆಟ್ರೋ ಕಡಿಮೆ ಮಾಡಿದೆ. ಹಾಗಾಗೇ ಬೆಂಗಳೂರಿಗರು ಮೆಟ್ರೋ ರೈಡ್ ಅನ್ನ ಭಾರೀ ಎಂಜಾಯ್ ಮಾಡ್ತಿದ್ದಾರೆ. ಸೋ ನಮ್ಮ ಮೆಟ್ರೋಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಬೈಯ್ಯಪ್ಪನಹಳ್ಳಿಯಿಂದ ನಾಯಂಡಳ್ಳಿವರೆಗಿನ ಮಾರ್ಗ ಲೋಕಾರ್ಪಣೆಯಾಗಿ ಇಂದಿಗೆ ತಿಂಗಳು ಕಳೆದಿದ್ದು 35ಲಕ್ಷಕ್ಕೂ ಹೆಚ್ಚಿನ ಪ್ರಯಾಣಿಕರು ಮೆಟ್ರೋ ರೈಡ್ ಎಂಜಾಯ್ ಮಾಡಿದ್ದಾರೆ. ಇಂದಿಗೆ ಪರ್ಪಲ್ ಲೈನ್ ಗೆ ಒಂದು ತಿಂಗಳು.
ಕಳೆದ ತಿಂಗಳಷ್ಟೇ ಬೈಯ್ಯಪ್ಪನಹಳ್ಳಿಯಿಂದ ನಾಯಂಡಳ್ಳಿಗೆ ಸಂಪರ್ಕ ಕಲ್ಪಿಸುವ 18.5 ಕಿ ಮೀ ಮಾರ್ಗ ಲೋಕಾರ್ಪಣೆ ಗೊಂಡಿತು. ಸಾರ್ವಜನಿಕ ಸಂಪರ್ಕಕ್ಕೆ ಈ ಲೈನ್ ಆರಂಭವಾಗಿದ್ದೇ ತಡ ಮೆಟ್ರೋದಲ್ಲಿ ಪ್ರಯಾಣಿಸಲಿಕ್ಕೆ ಜನ ಮುಗಿಬಿದ್ರು. ಅಂತೆಯೇ ಸುರಂಗ ಸಂಚಾರವನ್ನ ಎಂಜಾಯ್ ಮಾಡ್ತಿದ್ದಾರೆ. ಪ್ರತಿದಿನ 90ಸಾವಿರದಿಂದ 1ಲಕ್ಷಕ್ಕೂ ಹೆಚ್ಚು ಮಂದಿ ಮೆಟ್ರೋದಲ್ಲಿ ಪ್ರಯಾಣ ಬೆಳೆಸುತ್ತಿದ್ದು ಇದುವರೆಗೂ 35ಲಕ್ಷಕ್ಕೂ ಹೆಚ್ಚಿನ ಪ್ರಯಾಣಿಕರು ಮೆಟ್ರೋ ಜರ್ನಿಯನ್ನ ಎಂಜಾಯ್ ಮಾಡಿದ್ದಾರೆ.
ತಿಂಗಳು ತುಂಬಿದ ನೆನಪಿಗಾಗಿ ಇಂದಿನಿಂದ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿಯೂ ಕರ್ನಾಟಕ ಸಂಗೀತವನ್ನ ಪ್ಲೇ ಮಾಡಲಾಗ್ತಿದ್ದು ಇದನ್ನ ಜನರು ಸಕ್ಕತ್ತಾಗೇ ಎಂಜಾಯ್ ಮಾಡ್ತಿದ್ದಾರೆ. ಕರ್ನಾಟಕ ಸಂಗೀತ ಹಾಗೂ ಸಂಸ್ಕೃತಿಯನ್ನ ಬೆಳೆಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು ಹೆಚ್ಚಿನ ಪ್ರಯಾಣಿಕರು ಈ ಮ್ಯೂಸಿಕ್ ಗೆ ಫಿದಾ ಆಗಿದ್ದಾರೆ. ಒಂದು ದಿನಕ್ಕೆ ಪರ್ಪಲ್ ಹಾಗೂ ಗ್ರೀನ್ ಲೈನ್ ನಿಂದ 35ರಿಂದ40ಲಕ್ಷ ಆದಾಯ ಬರುತ್ತಿದ್ದು ಕೋಟಿಗೂ ಹೆಚ್ಚಿನ ಆದಾಯವನ್ನ ಬಿಎಂಆರ್ ಸಿಎಲ್ ತನ್ನದಾಗಿಸಿಕೊಂಡಿದೆ.
ಇನ್ನೇನು ಕೆಲವೇ ದಿನಗಳಲ್ಲಿ ಕಾವೇರಿ ಟಿಬಿಎಂ ಹೋರಬರಲಿದ್ದು ಕೃಷ್ಣಕೂಡ ಇನ್ನೆರಡು ತಿಂಗಳಲ್ಲಿ ಹೊರಬರುವ ಮುನ್ಸೂಚನೆ ಇದೆ. ಈ ಎರಡು ಟನಲ್ ಗಳು ಹೊರಬಂದ ಕೆಲವೇ ತಿಂಗಳಲ್ಲಿ ಸಂಪೂರ್ಣವಾಗಿ ಫೇಸ್-1 ಸಾರ್ವಜನಿಕ ಸಂಪರ್ಕಕ್ಕೆ ಅನುವಾಗಲಿದ್ದು ಟ್ರಾಫಿಕ್ ಸಮಸ್ಯೆ ಬಗೆಹರಿಯುವ ಲಕ್ಷಣಗಳು ಕಂಡುಬಂದಿದೆ. ಒಟ್ಟಾರೆ ನಮ್ಮ ಮೆಟ್ರೋ ಗೆ ಸಕ್ಕತ್ ರೆಸ್ಪಾನ್ಸ್ ಸಿಕ್ಕಿದ್ದು ಅಂತೆಯೇ ಆದಾಯವೂ ದಿನೇ ದಿನೇ ಹೆಚ್ಚುತ್ತಿದೆ.
- ಶ್ರೀ
POPULAR STORIES :
ಮತ್ತೆ ಹುಟ್ಟಿಬಂದರು ವಿಷ್ಣುವರ್ಧನ್..! ನಾಗರಹಾವು ಟೀಸರ್ ನೋಡಿದ್ರಾ..!?
ನಾಳೆಯಿಂದ ದುಬಾರಿಯಾಗಲಿದೆ ದುನಿಯಾ..! ನಮೋ.. ಹಗಲು ದರೋಡೆ ಶುರು..!
ಕೋಳಿ ತಿನ್ನಿ, ಗಾಡಿ ಓಡಿಸಿ..!? ಕೋಳಿಯಿಂದ ಡಿಸೇಲ್ ಉತ್ಪಾದಿಸಬಹುದು..!
ಟಿವಿಯಲ್ಲಿ ‘ಪಾರ್ವತಿ’ ಪಾತ್ರ ಮಾಡಿದ್ರೆ, ಬೀಚ್ ಪಾರ್ಟಿಗಳಲ್ಲಿ ಬಿಕಿನಿ ತೊಡಬಾರದಾ?
ಪಾಕ್ ಮಹಿಳೆಯರಿಗೆ ಕೊಹ್ಲಿ ಅಂದ್ರೆ ಸಿಕ್ಕಾಪಟ್ಟೆ ಇಷ್ಟ..! `ಲೈಕ್’ ಮಾಡಲು ಯಾವ ದೇಶವಾದ್ರೇನು..!?
ಈ ದೇಶದ ಪ್ರತಿ ಪ್ರಜೆಗೂ ಸಿಗತ್ತೆ ಪುಕ್ಕಟೆ ಸಂಬಳ…!
ಪ್ರೀತಿಸಿದ ಹುಡುಗಿ ನಡು ನೀರಲ್ಲಿ ಬಿಟ್ಟಾಗ, ಈಜು ಕಲಿಸಿದ ಹುಡುಗಿ ಹೀಗೇಕೆ ಒಂಟಿ ಮಾಡಿ ಹೊರಟಳು?