ಸದ್ಯ ಫಾರ್ಮ್‌ಗಾಗಿ ತಿಣುಕಾಡುತ್ತಿರುವ ಆರಂಭಿಕ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಮಂಗಳವಾರ ಇಂಗ್ಲೆಂಡ್ ವಿರುದ್ಧ ಆರಂಭವಾಗಲಿರುವ ಓಡಿಐ ಸರಣಿಯ ಮೊದಲನೇ ಪಂದ್ಯದ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ಪಡೆಯುವುದು ಬಹುತೇಕ ಅನುಮಾನ. ಲಯ ಕಳೆದುಕೊಂಡಿರುವ ಸಹ ಆಟಗಾರ ರಾಹುಲ್ ಬಗ್ಗೆ ಪ್ರತಿಕ್ರಿಯಿಸುವಾಗ ನಾಯಕ ವಿರಾಟ್ ಕೊಹ್ಲಿ ಹಿಂದಿ ಹಾಡಿನ ಸಾಲುಗಳನ್ನು ಬಳಸಿಕೊಂಡಿದ್ದಾರೆ.
ಇದೀಗ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಮೂರು ಪಂದ್ಯಗಳ ಓಡಿಐ ಸರಣಿಯಲ್ಲಿ ಮುಖಾಮುಖಿಯಾಗಲು ಸಜ್ಜಾಗುತ್ತಿವೆ. ಪುಣೆಯಲ್ಲಿರುವ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಮಂಗಳವಾರ ಮೊದಲನೇ ಪಂದ್ಯದಲ್ಲಿ ಉಭಯ ತಂಡಗಳು ಕಾದಾಟ ನಡೆಸಲಿವೆ.
ಮೊದಲನೇ ಪಂದ್ಯದ ನಿಮಿತ್ತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಕೆ.ಎಲ್ ರಾಹುಲ್ ಅವರ ಪ್ರಸ್ತುತ ಲಯದ ಬಗ್ಗೆ ಮಾತನಾಡಿ, 1972ರ ಹಿಂದಿ ಭಾಷೆಯ ಪ್ರಖ್ಯಾತ ಹಾಡಿನ ಸಾಲುಗಳನ್ನು ಉದಾಹರಣೆ ತೆಗದುಕೊಂಡರು.
“ಫಾರ್ಮ್‌ನಲ್ಲಿ ಇರುವುದು ಅಥವಾ ಇಲ್ಲದೇ ಇರುವ ವಿಷಯಕ್ಕೆ ಸಂಬಂಧಿಸಿದಂತೆ ಬಾಲಿವುಡ್ ಹಾಡಿನ ಸಾಲುಗಳು ನೆನಪಾಗುತ್ತಿವೆ. -‘ಕುಚ್ ಕೆಯೇಂಗೆ, ಲೋಗೋ ಕ ಹೈ ಕೆಹ್ನಾ. ಚೋಡೋ ಬೆಕಾರ್ ಕೀ ಬಾತೂನ್ ಮೇ ಕಹೀನ್ ಬೀತ್ ನಾ ಜಾಹೇ ರೈನಾ’ (ಜನರು ಯಾವುದೋ ಒಂದು ವಿಷಯದ ಬಗ್ಗೆ ಅಥವಾ ಬೇರೆ ಯಾರ ಬಗ್ಗೆಯಾದರೂ ಮಾತನಾಡುತ್ತಲೇ ಇರುತ್ತಾರೆ. ಏನಾದರೂ ಒಂದು ವಿಷಯ ಹೇಳುವುದು ಜನರ ಕೆಲಸ. ಈ ಎಲ್ಲಾ ನಿಷ್ಪ್ರಯೋಜಕ ವಿಷಯಗಳನ್ನು ಮರೆತುಬಿಡಿ, ಇಲ್ಲದಿದ್ದರೆ ನಮ್ಮ ರಾತ್ರಿ ಅವುಗಳ ಸುತ್ತಲೂ ಕೊನೆಗೊಳ್ಳುತ್ತದೆ.) ಎಂದು ಹೇಳಿದರು.
“ಕ್ರಿಕೆಟ್ ಹೊರಗೆ ಸಾಕಷ್ಟು ಅಸಹನೆ ಇದೆ ಹಾಗೂ ಜನರಿಗೆ ಅವರದೇ ಆದ ದೃಷ್ಠಿಕೋನವಿದೆ. ಆಟಗಾರ ಏನು ಯೋಚಿಸುತ್ತಿದ್ದಾರೆ ಎಂಬುದರ ಕುರಿತು ಕೆಲವರು ತಮ್ಮದೇ ಅಭಿಪ್ರಾಯವನ್ನು ರೂಪಿಸುತ್ತಾರೆ ಹಾಗೂ ಅದೇ ಅಂತಿಮವಾಗಿರುತ್ತದೆ. ಒಂದು ವೇಳೆ ಆಟಗಾರ ಫಾರ್ಮ್ ಕಳೆದುಕೊಂಡು ಮಾನಸಿಕವಾಗಿ ಕುಗ್ಗಿದ್ದರೆ, ಅದನ್ನೇ ಕೆಲವರು ಲಾಭವಾಗಿ ಪಡೆದುಕೊಂಡು, ತಮ್ಮದೇ ಮೋಜಿನ ಹೇಳಿಕೆಗಳನ್ನು ನೀಡುತ್ತಾ ಆಟಗಾರನ ಕಾಲನ್ನು ಎಳೆಯುತ್ತಿರುತ್ತಾರೆ,” ಎಂದು ಹೇಳಿದರು.
ಕೆ.ಎಲ್. ರಾಹುಲ್ ಅವರಂತಹ ಆಟಗಾರರಿಗೆ ಸಹಾಯ ಮಾಡಲು ತಂಡವು ವ್ಯವಸ್ಥೆಯನ್ನು ಹೊಂದಿದೆ ಎಂದು ಒತ್ತಿಹೇಳಿದ ವಿರಾಟ್ ಕೊಹ್ಲಿ, ಬಾಹ್ಯ ‘ಶಬ್ದ’ ಅನಾನುಕೂಲವಾಗಬಹುದು ಎಂದು ಹೇಳಿದರು.
“ಟೀಮ್ ಮ್ಯಾನೇಜ್‌ಮೆಂಟ್‌ನ ಒಂದು ಭಾಗವಾಗಿ ಇದನ್ನೂ ಹೇಗೆ ನಿರ್ವಹಿಸಬೇಕೆಂದು ಗೊತ್ತಿಲ್ಲ. ವೈಯಕ್ತಿಕವಾಗಿ ಆಟಗಾರ ಸ್ವಲ್ಪ ಕಠಿಣ ಹಂತದಲ್ಲಿ ಬಳಲುತ್ತಾರೆ. ಇದರ ಅರ್ಥ ಹೇಗೆ ಆಡಬೇಕೆಂಬುದನ್ನು ಅವರು ಮರೆತ್ತಿದ್ದಾರೆಂಬುದಲ್ಲ. ಇದು ಮಾನಸಿಕ ಸ್ಪಷ್ಟತೆಯ ಪ್ರಶ್ನೆಯಾಗುವುದರಿಂದ ಸ್ವಲ್ಪ ನಷ್ಟವನ್ನು ತೆಗೆದುಕೊಳ್ಳುತ್ತದೆ. ಅದೇ ಸಮಯದಲ್ಲಿ, ತನ್ನ ಬಗ್ಗೆ ಹೊರಗೆ ಏನು ಮಾತನಾಡುತ್ತಿದ್ದಾರೆಂದು ಅವರು ತಿಳಿದಾಗ, ಅದು ತನ್ನ ವ್ಯವಸ್ಥೆಯಲ್ಲಿ ಇರುವ ಮತ್ತೊಂದು ಬಾಹ್ಯ ಅಂಶವನ್ನು ಉಂಟು ಮಾಡುತ್ತದೆ, ” ಎಂದು ವಿರಾಟ್ ಕೊಹ್ಲಿ ಹೇಳಿದರು.