ಭಾರತಧ ಶ್ರೇಷ್ಠ ತತ್ವಜ್ಞಾನಿ ಚಾಣಕ್ಯನು ತನ್ನ ಚಾಣಕ್ಯ ನೀತಿಯಲ್ಲಿ ಸಂತೋಷದ ಮತ್ತು ಸುಖಕರ ದಾಂಪತ್ಯ ಜೀವನಕ್ಕೆ ಒಂದಿಷ್ಟು ತತ್ವಗಳನ್ನು ಸೂಚಿಸಿದ್ದಾನೆ. ಆಚಾರ್ಯ ಚಾಣಕ್ಯನ ಪ್ರಕಾರ, ಒಬ್ಬ ವ್ಯಕ್ತಿಯು ಉತ್ತಮ ದಾಂಪತ್ಯ ಜೀವನಕ್ಕೆ ಈ ಕೆಳಗಿನ ಅಂಶಗಳನ್ನು ನೋಡಿಕೊಳ್ಳಬೇಕು. ಚಾಣಕ್ಯನ ಪ್ರಕಾರ ಈ ತತ್ವಗಳು ಸಂತೋಷದ ದಾಂಪತ್ಯ ಜೀವನಕ್ಕೆ ಅತ್ಯಗತ್ಯವಾಗಿರುತ್ತದೆ. ಆ ತತ್ವಗಳು ಯಾವುವು..?
ಚಾಣಕ್ಯ ನೀತಿಯ ಪ್ರಕಾರ, ಭವಿಷ್ಯದಲ್ಲಿ ಪತ್ನಿಯನ್ನಾಗಿ ಪಡೆಯುವ ಹುಡುಗಿಯ ರೂಪದಲ್ಲಿ ಹೆಚ್ಚು ಆಂತರಿಕ ಸೌಂದರ್ಯವನ್ನು ನೋಡಬೇಕು. ಏಕೆಂದರೆ ಓರ್ವ ಪುರುಷನದ್ದಾಗಲಿ ಅಥವಾ ಸ್ತ್ರೀಯದ್ದಾಗಲಿ ಬಾಹ್ಯ ಸೌಂದರ್ಯವು ದಿನಗಳು ಕಳೆದಂತೆ ಬದಲಾಗುತ್ತದೆ ಮತ್ತು ಆಂತರಿಕ ಸೌಂದರ್ಯ ಎಂದರೆ ಅವರ ಗುಣಗಳು ಯಾವಾಗಲೂ ಇರುತ್ತವೆ. ಈ ಗುಣಗಳಿಂದಾಗಿ ವ್ಯಕ್ತಿಯ ಮನೆಯವರು ಸಂತೋಷವಾಗುತ್ತಾರೆ. ಒಂದು ಹುಡುಗಿಯ ರೂಪಕ್ಕೆ ಮರುಳಾಗಿ ಮದುವೆಯಾಗುವಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸಂಪೂರ್ಣ ಬುದ್ಧಿವಂತಿಕೆ ಎಂದು ಪರಿಗಣಿಸಲಾಗುವುದಿಲ್ಲ. ಇದು ನಂತರ ವಿಷಾದಕ್ಕೂ ಕಾರಣವಾಗಬಹುದು.
ಆಚಾರ್ಯ ಚಾಣಕ್ಯನ ಪ್ರಕಾರ, ಮದುವೆಯ ಆಧಾರ ಯಾವಾಗಲೂ ಪರಸ್ಪರ ಒಪ್ಪಿಗೆಯಾಗಿರಬೇಕು ಎಂದು ಹೇಳುತ್ತಾರೆ. ನಿಮ್ಮನ್ನು ಇಷ್ಟಪಡುವ ಮತ್ತು ನಿಮ್ಮನ್ನು ಶುದ್ಧ ಮನಸ್ಸಿನಿಂದ ಮದುವೆಯಾಗಲು ಸಿದ್ಧರಿರುವ ಮಹಿಳೆಯೊಂದಿಗೆ ಮಾತ್ರ ಮದುವೆ ಮಾಡಿಕೊಳ್ಳಬೇಕು. ಬಲವಂತದ ವಿವಾಹವು ಭವಿಷ್ಯದಲ್ಲಿ ವೈವಾಹಿಕ ಜೀವನದಲ್ಲಿ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಮತ್ತು ವೈವಾಹಿಕ ಜೀವನ ಯಶಸ್ಸಿನ ಹಾದಿಯನ್ನು ಹಿಡಿಯುವುದಿಲ್ಲ.
ಧಾರ್ಮಿಕ ಪ್ರವೃತ್ತಿಯ ಮಹಿಳೆಯರಿಗೆ ಉತ್ತಮ ಮೌಲ್ಯಗಳಿವೆ ಎಂದು ಆಚಾರ್ಯ ಹೇಳುತ್ತಾನೆ. ಅವಳು ಧರ್ಮವನ್ನು ನಂಬಿರುತ್ತಾಳೆ. ದೇವರ ಮೇಲಿನ ಅವಳ ನಂಬಿಕೆಯಿಂದಾಗಿ ಅವಳು ಉತ್ತಮ ಹಾದಿಯಲ್ಲಿ ನಡೆಯುತ್ತಾಳೆ. ಗಂಡ ಕೂಡ ಉತ್ತಮ ಹಾದಿಯಲ್ಲಿ ನಡೆಯಲು ಪ್ರೇರೇಪಿಸಲ್ಪಡುತ್ತಾನೆ. ಮಹಿಳೆಯರನ್ನು ಕುಟುಂಬದ ಆಧಾರ ಸ್ಥಂಭವೆಂದು ಪರಿಗಣಿಸಲಾಗುತ್ತದೆ. ಆಕೆಯ ನಿರ್ದೇಶನದ ಮೇರೆಗೆ ಕುಟುಂಬವು ಮತ್ತಷ್ಟು ಅಭಿವೃದ್ಧಿಗೊಳ್ಳುತ್ತದೆ. ಧರ್ಮವನ್ನು ನಂಬುವ ಮಹಿಳೆಯನ್ನು ಯಾವಾಗಲೂ ಮದುವೆಯಾಗಬೇಕು ಎನ್ನುತ್ತಾನೆ ಚಾಣಕ್ಯ.
ಮಹಿಳೆಯರು ಯಾವಾಗಲೂ ತಮ್ಮ ಗಂಡಂದಿರಲ್ಲಿ ತಂದೆಯ ರೂಪವನ್ನು ನೋಡುತ್ತಾರೆ ಎಂದು ಆಚಾರ್ಯ ಚಾಣಕ್ಯ ಹೇಳುತ್ತಾನೆ. ಆದ್ದರಿಂದ ತಂದೆಯಂತೆ ಪ್ರೀತಿಸುವ, ಕಾಳಜಿ ವಹಿಸುವ ಹುಡುಗನನ್ನು ನೋಡಿ ಮದುವೆ ಮಾಡಿಸಿ. ಅಂತಹ ದಂಪತಿಗಳು ರೂಪುಗೊಂಡರೆ ಅವರು ಸಂತೋಷದ ಜೀವನವನ್ನು ನಡೆಸುತ್ತಾರೆ.