ಕೆಮಿಸ್ಟ್ರಿ ಆಫ್ ಕರಿಯಪ್ಪ ಸಿನಿಮಾ ನಿರ್ಮಾಪಕ ಕೊರೊನಾಗೆ ಬಲಿ

Date:

ಕೊರೊನಾ ವೈರಸ್‌ನ ಎರಡನೇ ಅಲೆ ದಿನದಿಂದ ದಿನಕ್ಕೆ ಪರಿಸ್ಥಿತಿಯನ್ನು ಭೀಕರಗೊಳಿಸುತ್ತಿದೆ. ಅದರಲ್ಲೂ ಬೆಂಗಳೂರಿನಲ್ಲಿ ಸ್ಥಿತಿ ಸಿಕ್ಕಾಪಟ್ಟೆ ಗಂಭೀರವಾಗಿದೆ. ಅನೇಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇಂದು (ಏ.18) ನಟ, ನಿರ್ಮಾಪಕ ಡಾ. ಡಿ.ಎಸ್‌. ಮಂಜುನಾಥ್ ಅವರು ಕೂಡ ಕೊರೊನಾದಿಂದ ನಿಧನರಾಗಿದ್ದಾರೆ! ಅವರಿಗೆ 41 ವರ್ಷ ವಯಸ್ಸಾಗಿತ್ತು.

2019ರಲ್ಲಿ ತೆರೆಕಂಡ ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರವನ್ನು ಮಂಜುನಾಥ್ ನಿರ್ಮಾಣ ಮಾಡಿದ್ದರು. ಆ ಸಿನಿಮಾ ದೊಡ್ಡ ಯಶಸ್ಸನ್ನು ತಂದುಕೊಟ್ಟಿತ್ತು. ಕುಮಾರ್ ನಿರ್ದೇಶನ ಮಾಡಿದ್ದ ಆ ಸಿನಿಮಾದಲ್ಲಿ ತಬಲಾ ನಾಣಿ, ಚಂದನ್‌ ಆಚಾರ್, ಸಂಜನಾ ಆನಂದ್ ಮುಂತಾದವರು ನಟಿಸಿದ್ದರು. ‘ಕೆಮಿಸ್ಟ್ರಿ ಆಫ್‌ ಕರಿಯಪ್ಪ’ ಸಿನಿಮಾಕ್ಕೂ ಮೊದಲು ಅವರು ‘ಸಂಯಕ್ತ 2’ ಸಿನಿಮಾಕ್ಕೂ ಬಂಡವಾಳ ಹೂಡಿದ್ದರು ಮಂಜುನಾಥ್‌.

ನಿರ್ಮಾಣ ನಂತರ ನಟನಾಗಬೇಕೆಂಬ ಹಂಬಲ ಮಂಜುನಾಥ್‌ ಅವರಲ್ಲಿತ್ತು. ಹಾಗಾಗಿ, ಅವರು ‘present ಪ್ರಪಂಚ ೦% ಲವ್’ ಎಂಬ ಸಿನಿಮಾ ಮೂಲಕ ಹೀರೋ ಆಗಿದ್ದರು. ಈ ಸಿನಿಮಾದಲ್ಲಿ ಇಂದಿನ ಕಾಲಘಟ್ಟದ ಕಥೆಯಿದ್ದು, ಈಗಿನವರು ಸಮಯದ ಹಿಂದೆ, ಹಣದ ಹಿಂದಷ್ಟೇ ಓಡುತ್ತಿದ್ದಾರೆ. ತಮ್ಮ ಅಮೂಲ್ಯವಾದ ಜೀವನ ಎಲ್ಲಿ ಕಳೆದು ಹೋಗುತ್ತಿದೆ? ಹೇಗೆ ಮಾಯವಾಗುತ್ತಿದೆ ಎಂಬುದನ್ನು ಮರೆಯುತ್ತಿದ್ದಾರೆ. ಅದನ್ನೇ ಮುಖ್ಯವಾಗಿಟ್ಟುಕೊಂಡು ಈ ಸಿನಿಮಾ ಮಾಡಿದ್ದರು ನಿರ್ದೇಶಕ ಅಭಿರಾಮ್‌. ಆದರೆ, ಹೀರೋ ಆಗಿ ನಟಿಸಿದ ಮೊದಲೇ ಸಿನಿಮಾ ತೆರೆಕಾಣುವ ಮೊದಲೇ ಮಂಜುನಾಥ್‌, ಮಹಾಮಾರಿ ಕೊರೊನಾಗೆ ಬಲಿಯಾಗಿರುವುದು ನಿಜಕ್ಕೂ ಬೇಸರದ ಸಂಗತಿ

Share post:

Subscribe

spot_imgspot_img

Popular

More like this
Related

ಕಿತ್ತೂರು ಚನ್ನಮ್ಮ ಕಿರು ಮೃಗಾಲಯದಲ್ಲಿ ಕೃಷ್ಣಮೃಗಗಳ ಸಾವು ಮುಂದುವರಿಕೆ: ಸಂಖ್ಯೆ 29ಕ್ಕೆ ಏರಿಕೆ

ಕಿತ್ತೂರು ಚನ್ನಮ್ಮ ಕಿರು ಮೃಗಾಲಯದಲ್ಲಿ ಕೃಷ್ಣಮೃಗಗಳ ಸಾವು ಮುಂದುವರಿಕೆ: ಸಂಖ್ಯೆ 29ಕ್ಕೆ...

ಡಿಕೆ ಶಿವಕುಮಾರ್ ಸಿಎಂ ಆಗಬೇಕು ಎಂಬ ಅಭಿಪ್ರಾಯವನ್ನು ಹಲವು ಬಾರಿ ಹೇಳಿದ್ದೇನೆ: ಡಿಕೆ ಸುರೇಶ್

ಡಿಕೆ ಶಿವಕುಮಾರ್ ಸಿಎಂ ಆಗಬೇಕು ಎಂಬ ಅಭಿಪ್ರಾಯವನ್ನು ಹಲವು ಬಾರಿ ಹೇಳಿದ್ದೇನೆ:...

ಬ್ಲಾಕ್ ಕಾಫಿ ಕುಡಿಯುವ ಅಭ್ಯಾಸ ನಿಮಗಿದ್ಯಾ..? ಹಾಗಿದ್ರೆ ಈ ಸ್ಟೋರಿ ಓದಿ

ಬ್ಲಾಕ್ ಕಾಫಿ ಕುಡಿಯುವ ಅಭ್ಯಾಸ ನಿಮಗಿದ್ಯಾ..? ಹಾಗಿದ್ರೆ ಈ ಸ್ಟೋರಿ ಓದಿ ಅನೇಕರು...

ಮುಂದಿನ 4–5 ದಿನ ಮಳೆಯ ಅಬ್ಬರ: ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ – IMD ಮುನ್ಸೂಚನೆ

ಮುಂದಿನ 4–5 ದಿನ ಮಳೆಯ ಅಬ್ಬರ: ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ...