ಕೊಹ್ಲಿ ಬಗ್ಗೆ ಗಿಲ್ ಹೀಗಂದ್ರಾ!!!

Date:

ನವದೆಹಲಿ : ಭಾರತ ತಂಡದ ನಾಯಕ ವಿರಾಟ್​​ ಕೊಹ್ಲಿಯವರ ಆಕ್ರಮಣಶೀಲತೆ ಮತ್ತು ನಿರ್ಭೀತ ಕ್ರಿಕೆಟ್ ಆಟವನ್ನು ಒಪ್ಪಿಕೊಂಡಿರುವ ಯುವ ಆಟಗಾರ ಶುಬ್ಮನ್ ಗಿಲ್​, ನಾಯಕ ತಮ್ಮನ್ನು ಕೂಡ ನಿರ್ಭೀತ ಕ್ರಿಕೆಟ್ ಆಡಲು ಪ್ರೋತ್ಸಾಹಿಸುತ್ತಾರೆಂದು ಹೇಳಿದ್ದಾರೆ.

ನಾವು ನಿರ್ಭಯವಾಗಿ, ನಮ್ಮದೇ ಆದ ರೀತಿಯಲ್ಲಿ ಮತ್ತು ನಾವು ಆಡಲು ಬಯಸುವ ರೀತಿಯಲ್ಲಿ ಆಡಬೇಕೆಂದು ಕೊಹ್ಲಿ ಹೇಳುತ್ತಾರೆ. ಅವರು ಯಾವಾಗಲೂ ನಮ್ಮನ್ನು ಪ್ರೇರೇಪಿಸುತ್ತಾರೆ, ಅವರು ಮನಸ್ಥಿತಿಯ ಬಗ್ಗೆ ಮಾತನಾಡುತ್ತಾರೆ” ಎಂದು ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾಗಿರುವ ಗಿಲ್, ಕ್ಯಾಪ್ಟನ್ ಕೊಹ್ಲಿ ಕುರಿತು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ನಾನು ಉತ್ತಮ ಮನಸ್ಸಿನ ಚೌಕಟ್ಟಿನಲ್ಲಿಲ್ಲ ಎಂದು ಭಾವಿಸಿದಾಗಲೆಲ್ಲಾ ಕೊಹ್ಲಿ ಬಳಿ ಹೋಗಿ ಮಾತನಾಡುತ್ತೇನೆ. ಅವರು ನಮ್ಮನ್ನು ಪ್ರೇರಿಸುತ್ತಾರೆ ಮತ್ತು ಅವರು ಯುವಕರಾಗಿದ್ದಾಗ ಆಗಿರುವ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಾರೆ ಎಂದು ಗಿಲ್ ತಿಳಿಸಿದ್ದಾರೆ.

ವಿರಾಟ್​ ಕೊಹ್ಲಿಯ ಆಕ್ರಮಣಕಾರಿ ಮನೋಭಾವನೆ ಬಗ್ಗೆ ಕೆಲವು ಮಾಜಿ ಕ್ರಿಕೆಟರ್​ಗಳಲ್ಲಿ ಹಾಗೂ ಅಭಿಮಾನಿಗಳಲ್ಲಿ ಮಿಶ್ರ ಅಭಿಪ್ರಾಯಗಳಿವೆ. ಆದರೆ, ಕಳೆದ ವಾರ ಮೊಹಮ್ಮದ್ ಶಮಿ “ಕೊಹ್ಲಿಯ ಮನೋಭಾವನೆ ವೇಗದ ಬೌಲರ್​ಗಳಂತಿರುತ್ತದೆ ಎಂದಿದ್ದಾರೆ.

ವೇಗದ ಬೌಲರ್​ಗಳು ಆಕ್ರಮಣಕಾರಿಯಾಗಿರುತ್ತಾರೆ. ಹಿಂದಿನವರಾಗಿರಬಹುದು ಅಥವಾ ಈಗಿನವರಾಗಿರಬಹುದು. ಆದರೆ, ಬೌಲರ್​ಗಳ ಆಕ್ರಮಣಶೀಲತೆಯನ್ನು ಅನುಕರಿಸುವ ಒಬ್ಬನೇ ಆಟಗಾರ ನಮ್ಮ ನಾಯಕ ಎಂದಿದ್ದರು.

 

Share post:

Subscribe

spot_imgspot_img

Popular

More like this
Related

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..!

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..! ಬೆಂಗಳೂರು: ಮಲ್ಟಿಪ್ಲೆಕ್ಸ್...

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು ಮಂಗಳೂರು: ರಾಷ್ಟ್ರೀಯ ಹಿಂದೂ ಜಾಗರಣ...

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ ಬೆಂಗಳೂರು:...

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ!

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ! ದಿನನಿತ್ಯದ ಆಹಾರದಲ್ಲಿ ತರಕಾರಿಗಳ ಬಳಕೆ ಅನಿವಾರ್ಯ....