ಕನ್ನಡದ ‘ಕಿರಿಕ್ ಪಾರ್ಟಿ’ ಸಿನಿಮಾದಿಂದ ನಟನೆ ಆರಂಭಿಸಿದ ನಟಿ ರಶ್ಮಿಕಾ ಮಂದಣ್ಣ ತೆಲುಗಿನಲ್ಲಿ ಮಿಂಚಿ ಈಗ ಬಾಲಿವುಡ್‌ಗೆ ಕಾಲಿಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಈ ನಟಿ ಮಾಧ್ಯಮಗಳಲ್ಲಿಯೂ ಕಾಣಿಸಿಕೊಳ್ಳತ್ತಲೇ ಇರುತ್ತಾರೆ. ಸಂದರ್ಶನಗಳು, ಪಾಪರಾಟ್ಜಿ ಫೊಟೊ ಶೂಟ್‌ಗಳು ಹೀಗೆ ಒಟ್ಟಿನಲ್ಲಿ ಸದಾ ಸುದ್ದಿಯಲ್ಲಿರುವುದು ರಶ್ಮಿಕಾಗೆ ಅಭ್ಯಾಸವಾಗಿದೆ. ಇದರಿಂದ ಕೆಲವು ಬಾರಿ ಸಮಸ್ಯೆಗೂ ಸಿಲುಕಿದ್ದಿದೆ.
ರಶ್ಮಿಕಾರ ಹೆಸರು ಈಗಾಗಲೇ ಕೆಲವು ನಟರೊಂದಿಗೆ ಕೇಳಿಬರುತ್ತಿದೆ. ರಕ್ಷಿತ್ ಶೆಟ್ಟಿ ಜೊತೆಗೆ ಹಸೆಮಣೆ ಏರುತ್ತಾರೆ ಎಂಬುದು ಬಹುತೇಕ ಖಾತ್ರಿಯಾಗಿದ್ದ ಸಮಯದಲ್ಲೇ ಸಂಬಂಧ ಮುರಿದುಕೊಂಡು ತೆಲುಗು ಚಿತ್ರರಂಗಕ್ಕೆ ಅಡಿಯಿಟ್ಟ ಈ ಚೆಲುವೆ. ಇತ್ತೀಚೆಗಿನ ಸಂದರ್ಶನವೊಂದರಲ್ಲಿ ತಾವು ತಮಿಳುನಾಡಿನ ಮನೆಗೆ ಸೊಸೆಯಾಗಿ ಹೋಗಬೇಕು ಎಂದಿದ್ದರು. ಈಗ ಹೊಸ ಮತ್ತೊಂದು ಸಂದರ್ಶನದಲ್ಲಿ ಯಾವ ನಟನೊಂದಿಗೆ ಡೇಟಿಂಗ್‌ಗೆ ಹೋಗಲು ತಮಗೆ ಇಷ್ಟ ಎಂದು ಹೇಳಿಕೊಂಡಿದ್ದಾರೆ.
ರಶ್ಮಿಕಾ ಮಂದಣ್ಣರಿಗೆ ನಟ ಪ್ರಭಾಸ್ ಜೊತೆಗೆ ಡೇಟ್‌ಗೆ ಹೋಗಲು ಹೋಗಲು ಬಹು ಇಷ್ಟವಂತೆ. ಆ ಅವಕಾಶ ಸಿಕ್ಕರೆ ಖಂಡಿತ ಮಿಸ್ ಮಾಡಿಕೊಳ್ಳುವುದಿಲ್ಲ. ‘ಪ್ರಭಾಸ್ ನನ್ನ ನೆಚ್ಚಿನ ನಟ ಅವರೊಟ್ಟಿಗೆ ಡೇಟ್‌ಗೆ ಹೋಗುವುದು ನನಗೆ ಇಷ್ಟ’ ಎಂದಿದ್ದಾರೆ ರಶ್ಮಿಕಾ ಮಂದಣ್ಣ.