ಈ ಖ್ಯಾತ ನಟಿಗೆ ಹೀರೋ ಜೊತೆ ಮಂಚ ಹೇರಲು ಹೇಳಿದ್ದನಂತೆ ಆ ನಿರ್ಮಾಪಕ!

Date:

ಬಾಲಿವುಡ್ ಸೇರಿದಂತೆ ಹಲವು ಚಿತ್ರರಂಗಗಳಲ್ಲಿ ಕಾಸ್ಟಿಂಗ್ ಕೌಚ್ ಇದೆ. ”ಪಾತ್ರಗಳು ಸಿಗಬೇಕು ಅಂದ್ರೆ ಕಾಂಪ್ರೊಮೈಸ್ ಆಗಬೇಕು” ಎಂಬ ಕರಾಳ ಅನುಭವ ಅನೇಕ ನಟಿಮಣಿಯರಿಗಾಗಿದೆ. ಆ ಪೈಕಿ ಹಿಂದಿ ಕಿರುತೆರೆಯ ಖ್ಯಾತ ನಟಿ ಕಿಶ್ವರ್ ಮರ್ಚೆಂಟ್ ಕೂಡ ಒಬ್ಬರು!
‘ಶಕ್ತಿಮಾನ್’, ‘ಕುಟುಂಬ್’, ‘ಕಸೌತಿ ಝಿಂದಗಿ ಕೇ’, ‘ಧಡ್‌ಕನ್’, ‘ಪಿಯಾ ಕಾ ಘರ್’, ‘ಖಯಾಮತ್’, ‘ಕಾವ್ಯಾಂಜಲಿ’, ‘ಗಂಗಾ’ ಮುಂತಾದ ಹಲವು ಧಾರಾವಾಹಿಗಳಲ್ಲಿ ಅಭಿನಯಿಸಿರುವ ಕಿಶ್ವರ್ ಮರ್ಚೆಂಟ್ ತಮ್ಮ ವೃತ್ತಿ ಜೀವನದಲ್ಲಾದ ಕಾಸ್ಟಿಂಗ್ ಕೌಚ್‌ನ ಕೆಟ್ಟ ಅನುಭವದ ಬಗ್ಗೆ ಬಹಿರಂಗ ಪಡಿಸಿದ್ದಾರೆ.
”ಚಿತ್ರವೊಂದರ ಕುರಿತು ಮೀಟಿಂಗ್‌ಗೆ ತೆರಳಿದ್ದಾಗ ಕಾಸ್ಟಿಂಗ್ ಕೌಚ್ ಅನುಭವ ನನಗೂ ಆಯ್ತು. ಅವಕಾಶ ಬೇಕು ಅಂದ್ರೆ ಹೀರೋ ಜೊತೆ ಮಂಚ ಏರಬೇಕು ಅಂತ ನಿರ್ಮಾಪಕರು ಹೇಳಿದರು. ನಾನು ಅವಕಾಶವೇ ಬೇಡ ಎಂದು ತಿರಸ್ಕರಿಸಿ ಬಂದೆ” ಎಂದು ETimesಗೆ ನೀಡಿದ ಸಂದರ್ಶನದಲ್ಲಿ ಕಿರುತೆರೆ ನಟಿ ಕಿಶ್ವರ್ ಮರ್ಚೆಂಟ್ ಹೇಳಿದ್ದಾರೆ. ಜೊತೆಗೆ, ಹಾಗೆ ಹೇಳಿದವರು ಬಾಲಿವುಡ್‌ನ ಪ್ರಸಿದ್ಧ ನಿರ್ಮಾಪಕ ಅಂತಲೂ ಕಿಶ್ವರ್ ಮರ್ಚೆಂಟ್ ತಿಳಿಸಿದ್ದಾರೆ.

ಎರಡು ದಶಕಗಳ ಕಿರುತೆರೆಯ ವೃತ್ತಿ ಜೀವನದಲ್ಲಿ ಕಿಶ್ವರ್ ಮರ್ಚೆಂಟ್ ಇಲ್ಲಿಯವರೆಗೂ ಬಾಲಿವುಡ್‌ನ ಎರಡು ಚಿತ್ರಗಳಲ್ಲಿ ಮಾತ್ರ ಅಭಿನಯಿಸಿದ್ದಾರೆ. ‘ಬೇಜಾ ಫ್ರೈ 2’ ಹಾಗೂ ‘ಹಮ್ ತುಮ್ ಔರ್ ಶಬಾನಾ’ ಚಿತ್ರಗಳಲ್ಲಿ ಕಿಶ್ವರ್ ಮರ್ಚೆಂಟ್ ನಟಿಸಿದ್ದಾರೆ. ಕಾಸ್ಟಿಂಗ್ ಕೌಚ್ ಅನುಭವ ಜೊತೆಗೆ ಟಿವಿ ಸೀರಿಯಲ್‌ಗಳಲ್ಲೇ ಬಿಜಿಯಾಗಿದ್ದ ಕಾರಣ ಕಿಶ್ವರ್ ಮರ್ಚೆಂಟ್ ಸಿನಿಮಾಗಳ ಕಡೆ ಮುಖ ಮಾಡಲಿಲ್ಲವಂತೆ.

‘ಬಿಗ್ ಬಾಸ್ 9’ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ ಕಿಶ್ವರ್ ಮರ್ಚೆಂಟ್ 2016ರಲ್ಲಿ ನಟ ಸುಯ್ಯಶ್ ರೈ ಎಂಬುವರನ್ನು ವಿವಾಹವಾದರು. ಈ ದಂಪತಿ ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

Share post:

Subscribe

spot_imgspot_img

Popular

More like this
Related

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..!

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..! ಬೆಂಗಳೂರು: ಮಲ್ಟಿಪ್ಲೆಕ್ಸ್...

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು ಮಂಗಳೂರು: ರಾಷ್ಟ್ರೀಯ ಹಿಂದೂ ಜಾಗರಣ...

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ ಬೆಂಗಳೂರು:...

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ!

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ! ದಿನನಿತ್ಯದ ಆಹಾರದಲ್ಲಿ ತರಕಾರಿಗಳ ಬಳಕೆ ಅನಿವಾರ್ಯ....