ರವಿಚಂದ್ರನ್ ಅಶ್ವಿನ್ ಪ್ರಸ್ತುತ ಐಪಿಎಲ್ ಟೂರ್ನಿಯ ವೇಳೆ ನಡೆದ ಘಟನೆಗಳನ್ನು ನೆನೆದು ಕ್ರಿಕೆಟ್ ಆಡುವುದರ ಬಗ್ಗೆ ಮನಸ್ಸಿನಲ್ಲಿಯೇ ಎದ್ದಿದ್ದ ಪ್ರಶ್ನೆಯ ಕುರಿತು ಮಾತನಾಡಿದ್ದಾರೆ.
ಕೊರೊನಾವೈರಸ್ ಕಾರಣದಿಂದ ಪ್ರಸ್ತುತ ಐಪಿಎಲ್ ಟೂರ್ನಿ ಮುಂದೂಡಲ್ಪಟ್ಟಿದೆ. ಏಪ್ರಿಲ್ 9ರಂದು ಆರಂಭವಾಗಿದ್ದ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಬಯೋಬಬಲ್ ಒಳಗೆ ಕೊರೊನಾವೈರಸ್ ಪ್ರವೇಶಿಸಿ ವಿವಿಧ ತಂಡಗಳ ಕೆಲ ಆಟಗಾರರಲ್ಲಿ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಟೂರ್ನಿಯನ್ನು ಮಧ್ಯದಲ್ಲಿಯೇ ಮೊಟಕುಗೊಳಿಸಿ ಮುಂದೂಡಲಾಯಿತು.
ಆದರೆ ಕೆಲವೊಂದಿಷ್ಟು ಆಟಗಾರರು ಐಪಿಎಲ್ ಮುಂದೂಡಲ್ಪಡುವ ಮುನ್ನವೇ ವೈಯಕ್ತಿಕ ಕಾರಣಗಳನ್ನು ನೀಡಿ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಿಂದ ಹೊರನಡೆದಿದ್ದರು. ಹೀಗೆ ಹೊರ ನಡೆದ ಆಟಗಾರರ ಪೈಕಿ ರವಿಚಂದ್ರನ್ ಅಶ್ವಿನ್ ಕೂಡ ಒಬ್ಬರು. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ 5 ಪಂದ್ಯಗಳನ್ನಾಡಿದ ಬಳಿಕ ಅಶ್ವಿನ್ ದಿಢೀರನೆ ಐಪಿಎಲ್ ಟೂರ್ನಿಯಿಂದ ಹೊರಗುಳಿಯುವ ನಿರ್ಧಾರವನ್ನು ತೆಗೆದುಕೊಂಡಿದ್ದರು.

ಅಶ್ವಿನ್ ವೈಯಕ್ತಿಕ ಕಾರಣಗಳಿಂದ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿತ್ತು ಆದರೆ ನಿಖರವಾದ ಕಾರಣವನ್ನು ತಿಳಿಸಿರಲಿಲ್ಲ. ಇದೀಗ ಐಪಿಎಲ್ ಟೂರ್ನಿಯಿಂದ ಹೊರಗುಳಿದಿದ್ದ ಹಿಂದಿನ ಕಾರಣವನ್ನು ಈ ಕೆಳಕಂಡಂತೆ ರವಿಚಂದ್ರನ್ ಅಶ್ವಿನ್ ಅವರೇ ಬಿಚ್ಚಿಟ್ಟಿದ್ದಾರೆ.
ರವಿಚಂದ್ರನ್ ಅಶ್ವಿನ್ ಕುಟುಂಬದ ಅನೇಕ ಸದಸ್ಯರು ಹಾಗೂ ತೀರಾ ಹತ್ತಿರದ ಸಂಬಂಧಿಕರು ಕೊರೊನಾ ಸೋಂಕಿಗೆ ಒಳಗಾಗಿದ್ದರು. ಅದರಲ್ಲಿಯೂ ಕುಟುಂಬದ ಅನೇಕ ಸದಸ್ಯರಿಗೆ ಸೋಂಕಿನ ತೀವ್ರತೆ ಹೆಚ್ಚಾಗಿದ್ದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿತ್ತು ಹೀಗಾಗಿಯೇ ಟೂರ್ನಿ ಮಧ್ಯದಲ್ಲಿಯೇ ಹೊರಗುಳಿಯಬೇಕಾಯಿತು ಎಂದು ರವಿಚಂದ್ರನ್ ಅಶ್ವಿನ್ ಹೇಳಿಕೊಂಡಿದ್ದಾರೆ.
ಟೂರ್ನಿಯ ವೇಳೆಯೇ ಮನೆಯ ಸದಸ್ಯರು ತೀವ್ರ ಸೋಂಕಿಗೆ ಒಳಗಾಗಿರುವ ವಿಷಯ ತಿಳಿದ ನಂತರ ಪಂದ್ಯದ ಕಡೆ ಸರಿಯಾಗಿ ಗಮನ ಹರಿಸಲಾಗುತ್ತಿರಲಿಲ್ಲ. ಸುಮಾರು 8-9 ದಿನಗಳ ಕಾಲ ನಿದ್ರೆಯಿಲ್ಲದೆ ಕಳೆದಿದ್ದೆ, ಹೀಗಾಗಿ ಪಂದ್ಯಗಳಲ್ಲಿ ಸರಿಯಾದ ಪ್ರದರ್ಶನವನ್ನೂ ನೀಡಲಾಗುತ್ತಿರಲಿಲ್ಲ ಎಂದು ಅಶ್ವಿನ್ ತಿಳಿಸಿದ್ದಾರೆ.