ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿ ಗಮನ ಸೆಳೆದಿದ್ದ ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ನೂತನ ಶಾಸಕ ಎ.ಕೆ.ಎಂ. ಅಶ್ರಫ್ ಅವರು ವಿಧಾನಸಭೆಯಲ್ಲಿ ರಾಷ್ಟ್ರಕವಿ ಗೋವಿಂದ ಪೈ ಅವರ ಕವನ ವಾಚಿಸುವ ಮೂಲಕ ಮತ್ತೆ ಕನ್ನಡಾಭಿಮಾನ ಮೆರೆದಿದ್ದಾರೆ.
ಕೇರಳ ವಿಧಾನಸಭೆಯಲ್ಲಿಂದು ಮಾತನಾಡಿದ ಅವರು, ‘ಕೇರಳ–ಕರ್ನಾಟಕ ಗಡಿ ಪ್ರದೇಶವಾದ ಮಂಜೇಶ್ವರ ಕ್ಷೇತ್ರದಿಂದ ನಾನು ಆಯ್ಕೆಯಾಗಿ ಇಲ್ಲಿಗೆ ಬಂದಿದ್ದೇನೆ.
ನಮ್ಮದು ವೈವಿಧ್ಯಮಯ ಭಾಷೆ, ಕಲೆ, ಸಂಸ್ಕೃತಿ, ಸಂಸ್ಕಾರದ ನಾಡು. ಕನ್ನಡದ ರಾಷ್ಟ್ರ ಕವಿ ಗೋವಿಂದ ಪೈಯವರಿದ್ದ ನಾಡು ನನ್ನದು. ಗೋವಿಂದ ಪೈಯವರ ಅನೇಕ ಭಾಷೆಗಳಿಗೆ ಅನುವಾದಗೊಂಡಿರುವ ‘ಹೆಬ್ಬೆರಳು’ ಎಂಬ ನಾಟಕದಲ್ಲಿ ಬರುವ ಕವಿತೆಯೊಂದನ್ನು ನಾನಿಲ್ಲಿ ವಾಚಿಸುತ್ತೇನೆ’ ಎಂದು ಅದನ್ನು ವಾಚಿಸಿದ್ದಾರೆ. ಅಲ್ಲದೆ ಆ ಕವಿತೆ ಸಾರಾಂಶವನ್ನು ವಿವರಿಸಿದ್ದಾರೆ.
https://www.facebook.com/110515719288912/posts/1460637424276728/
https://www.facebook.com/110515719288912/posts/1460637424276728/