ಕೊರೊನಾ ಟೆಸ್ಟ್: ಸಿಟಿ ಸ್ಕ್ಯಾನ್ ಮಾಡಿಸುವ ಮುನ್ನ ಒಮ್ಮೆ ಯೋಚಿಸಿ!

Date:

ಸೌಮ್ಯ ತರದ ಕೊರೊನಾ ಸೋಂಕಿನ ಲಕ್ಷಣ ಹೊಂದಿರುವವವರು ಸೋಂಕು ಪತ್ತೆಗೆ ಸಿಟಿ ಸ್ಕ್ಯಾನ್ ಮೊರೆ ಹೋಗುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಕೆಲವು ಮಾಹಿತಿಯನ್ನು ನೀಡಿದ್ದು, ವೈದ್ಯರು ಸೌಮ್ಯ ಕೊರೊನಾ ಸೋಂಕಿನ ಲಕ್ಷಣಗಳನ್ನು ಹೊಂದಿರುವ ಕೊರೊನಾ ಸೋಂಕಿತರಿಗೆ ಸಿಟಿಸ್ಕ್ಯಾನ್ ಮಾಡಿಸಲು ಸಲಹೆ ನೀಡಬೇಡಿ ಎಂದು ಹೇಳಿದೆ.

ಕೊರೊನಾ ಎರಡನೇ ಅಲೆಯಲ್ಲಿ ಸಿಟಿಸ್ಕ್ಯಾನ್ ಮಾಡಿಸುವ ಸಂಖ್ಯೆ ಹೆಚ್ಚಾಗಿದೆ, ಎದೆಯ ಸಿಟಿಸ್ಕ್ಯಾನ್ ಮಾಡುವುದು ಉತ್ತಮವಲ್ಲ. ತೆಲಂಗಾಣದ ಬೋಧನಾ ಆಸ್ಪತ್ರೆಗಳಲ್ಲಿರುವ ಸರ್ಕಾರಿ ವೈದ್ಯರು ಸಿಟಿಸ್ಕ್ಯಾನ್ ಪ್ರಮಾಣವನ್ನು ಕಡಿಮೆ ಮಾಡಿದ್ದಾರೆ, ಆದರೆ ಖಾಸಗಿ ಆಸ್ಪತ್ರೆಗಳು ರೋಗಿಗಳ ಮೇಲಾಗುವ ದುಷ್ಪರಿಣಾಮವನ್ನು ಗಮನಿಸದೆ ಸಿಟಿ ಸ್ಕ್ಯಾನ್ ನಡೆಸುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

 

ಎದೆಯ ಎಚ್‌ಆರ್‌ಸಿಟಿ ಸ್ಕ್ಯಾನ್ ಕೋವಿಡ್ 19 ರೋಗಿಗಳಲ್ಲಿ ಶ್ವಾಸಕೋಶದ ಒಳಗೊಳ್ಳುವಿಕೆಯ ವ್ಯಾಪ್ತಿ ಮತ್ತು ಸ್ವರೂಪವನ್ನು ದೃಶ್ಯೀಕರಿಸುತ್ತದೆ. ತೀವ್ರವಲ್ಲದ ಕೋವಿಡ್ ಪ್ರಕರಣಗಳಲ್ಲಿ ಸಿಟಿ ಸ್ಕ್ಯಾನ್ ಅವಶ್ಯಕತೆ ಇರುವುದಿಲ್ಲ, ಅತಿಯಾದ ಸಿಟಿ ಸ್ಕ್ಯಾನ್ ಬಳಕೆಯಿಂದ ಹಲವು ರೋಗಗಳಿಗೆ ಎಡೆಮಾಡಿಕೊಟ್ಟಂತಾಗುತ್ತದೆ.

ಒಂದು ಸಿಟಿ ಸ್ಕ್ಯಾನ್ ಎದೆಗೆ ಮಾಡಿಸುವ 300 ರಿಂದ 400 ಎಕ್ಸರೇಗಳಿಗೆ ಸಮಾನ ಎಂದು ಅಧ್ಯಯನ ಹೇಳಿದೆ. ಕಡಿಮೆ ವಯಸ್ಸಿನವರು ಪದೇ ಪದೇ ಸಿಟಿ ಸ್ಕ್ಯಾನ್‌ಗೆ ಓಲಗಾಗುವುದರಿಂದ ಮುಂದಿನ ದಿನಗಳಲ್ಲು ಗಂಭೀರತರದ ಕಾಯಿಲೆಗೆ ತುತ್ತಾಗಬಹುದು. ವಿಕರಣಗಳಿಗೆ ಒಡ್ಡಿಕೊಳ್ಳುವುದರಿಂದ ಹಾನಿ ಉಂಟಾಗುತ್ತದೆ. ತೀವ್ರವಲ್ಲದ ಕೋವಿಡ್ ಪ್ರಕರಣಗಳಲ್ಲಿ ದೇಹದಲ್ಲಿ ಆಮ್ಲಜನಕ ಪ್ರಮಾಣ ಸಹಜ ಸ್ಥಿತಿಯಲ್ಲಿದ್ದರೆ ಸಿಟಿ ಸ್ಕ್ಯಾನ್ ಮಾಡಿಸುವುದರಲ್ಲಿ ಅರ್ಥವಿಲ್ಲ. ಅತಿಯಾದ ಆಯಾಸ, ದೇಹದಲ್ಲಿನ ಆಮ್ಲಜನಕ ಪ್ರಮಾಣ ಇಳಿಮುಖವಾಗುವುದು, ಎದೆಯಲ್ಲಿ ನೋವು ಕಾಣಿಸಿಕೊಳ್ಳುವುದುಆಸ್ಪತ್ರೆಯ ಅವಶ್ಯಕತೆಯನ್ನು ಸೂಚಿಸುತ್ತದೆ. ಹೋಂ ಕ್ವಾರಂಟೈನ್‌ನಲ್ಲಿರುವ ರೋಗಿಗಳು ವೈದ್ಯರೊಂದಿಗೆ ಸಂಪರ್ಕದಲ್ಲಿರಬೇಕು ಎಂದು ಸಲಹೆ ನೀಡಲಾಗಿದೆ.

 

 

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...